ಅಸಮರ್ಪಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವಿರುದ್ಧ ಬೆಳ್ತಂಗಡಿಯಲ್ಲಿ ಹೆದ್ದಾರಿ ತಡೆದು ಎಸ್.ಡಿ.ಪಿ.ಐ ಪ್ರತಿಭಟನೆ.
ಬೆಳ್ತಂಗಡಿ; ಮಂದಗತಿಯಿಂದ ಸಾಗುತ್ತಿರುವ ಪುಂಜಾಲಕಟ್ಟೆ - ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವತಿಯಿಂದ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ನೇತೃತ್ವದಲ್ಲಿ ಗುರುವಾರ ಬೆಳ್ತಂಗಡಿಯ ಮೂರುಮಾರ್ಗದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.ಕ್ಷೇತ್ರ ಸಮಿತಿ ಸದಸ್ಯರಾದ ನವಾಝ್ ಕಟ್ಟೆ ಮಾತನಾಡಿ, ಪುಂಜಾಲಕಟ್ಟೆ - ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಆರಂಭಗೊಂಡು ವರ್ಷಗಳೆ ಕಳೆದರು ಇನ್ನು ಕಾಮಗಾರಿ ಪೂರ್ಣಗೊಳ್ಳದೆ ದಿನ ನಿತ್ಯ ಅಫಘಾತಗಳು ಸಂಭವಿಸುತ್ತಿವೆ. ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು...
ಕೆ.ಎಸ್.ಎಂ.ಸಿ.ಎ ಕೇಂದ್ರೀಯ ಸಮಿತಿಯಿಂದ ವಿವಿಧ ಚರ್ಚ್ ಗಳಿಗೆ ಭೇಟಿ
ಬೆಳ್ತಂಗಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಸಂಘಟನೆಯಾದ ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿಯ ವತಿಯಿಂದ ಧರ್ಮಸ್ಥಳ ಫೊರೋನಾದ ವಿವಿಧ ಚರ್ಚ್ ಗಳಿಗೆ ಭೇಟಿ ನೀಡಿ ಸ್ಥಳೀಯ ಸಮಿತಿಯ ಸದಸ್ಯರುಗಳೊಂದಿಗೆ ಚರ್ಚೆ ನಡೆಸಿ ಸಂಘಟನೆಯ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು.ಕೆ.ಎಸ್ ಎಂ.ಸಿ ಎ.ಕೇಂದ್ರ ಸಮಿತಿಯ ನಿರ್ದೇಶಕರದ ಫಾ ಆದರ್ಶ್ ಪುದೀಯೇಡತ್ ಹಾಗೂ ಸಂಘಟನೆಯ ಅಧ್ಯಕ್ಷರಾದ ಬಿಟ್ಟಿ ನೆಡುನಿಲಂ ಅವರು ನೇತೃತ್ವ ವಹಿಸಿದ್ದರು. ಉಜಿರೆ ಸಂತ ಜಾರ್ಜ್ ಚರ್ಚ್, ಧರ್ಮಸ್ಥಳ ಸೈಂಟ್ ಜೋಸೆಫ್ ಚರ್ಚ್, ಪುದುವೆಟ್ಟು ಸೈಟ್ ಮೇರಿ...
ಬೆಳ್ತಂಗಡಿಗೆ ನ್ಯಾಯಾಲಯ ಕಟ್ಟಡ ಮಂಜೂರು ಗೊಳಿಸುವಂತೆ ವಿಧಾನ ಸಭಾ ಅಧ್ಯಕ್ಷರಿಗೆ ಮನವಿ
ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡ ಮಂಜೂರುಗೊಳಿಸುವ ನಿಟ್ಟಿನಲ್ಲಿ ಈ ದಿನ ಬೆಂಗಳೂರಿನ ವಿಧಾನ ಸಭಾಧ್ಯಕ್ಷರ ಕಚೇರಿಯಲ್ಲಿ ವಿಧಾನ ಸಭಾಧ್ಯಕ್ಷರಾದ ಯು ಟಿ ಖಾದರ್ ರವರನ್ನು ಭೇಟಿ ಮಾಡಿ ಅಗತ್ಯ ಸಹಕಾರ ನೀಡುವಂತೆ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ, ಹೈಕೋರ್ಟ್ ನ್ಯಾಯವಾದಿ ರಕ್ಷಿತ್ ಶಿವರಾಮ್, ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ ಕೆ, ಅಪರ ಸರ್ಕಾರಿ ವಕೀಲ ಮನೋಹರ ಕುಮಾರ್ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ ಕೆ ಶಾಹುಲ್ ಹಮೀದ್ ಜೊತೆಗಿದ್ದರು.
ಬೆಳ್ತಂಗಡಿ, ತಾಲೂಕಿನ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ 54 ಹೋಂಸ್ಟೇಗಳಿಗೆ ಅರಣ್ಯ ಇಲಾಖೆಯಿಂದ ನೋಟೀಸ್
Neetis from Forest Department for 54 homestays in eco-sensitive area of Belthangadi Taluk ಬೆಳ್ತಂಗಡಿ; ತಾಲೂಕಿನಲ್ಲಿ ಕುದುರೇಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಹಾಗೂ ಉದ್ಯಾನವನದ ಬಫರ್ ಝೋನ್ ಎಂದು ಗುರುತಿಸಲಾಗಿರುವ ಪರಿಸರಸೂಕ್ಷ್ಮ ಪ್ರದೇಶದಲ್ಲಿರುವ 54 ಹೋಂ ಸ್ಟೇಗಳಿಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ನೋಟೀಸ್ ನೀಡಿ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದೆ.ಯಾವುದೇ ಪರವಾನಿಗೆಯಿಲ್ಲದೆ ಕುದುರೇ ಮುಖ ರಾಷ್ಟ್ರೀಯ ಉದ್ಯಾನವನದ ಸುತ್ತಲೂ ಅನಧಿಕೃತವಾಗಿ ಹೋಂ ಸ್ಟೇಗಳು ಕಾರ್ಯ ನಿರ್ವಹಿಸುತ್ತಿರುವ ಮಾಹಿತಿ ಹಿನ್ನಲೆಯಲ್ಲಿ ನೋಟೀಸ್ ನೀಡಿ ದಾಖಲೆಗಳನ್ನು ಹಾಜರು ಪಡಿಸುವಂತೆ ಸೂಚಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.2020...
ಬದ್ಯಾರು ಸಮೀಪ ಬೆಳ್ಳಂಬೆಳಗ್ಗೆ ಸ್ಕೂಟರ್ ಗೆ ಅಪರಿಚಿತ ವಾಹನ ಡಿಕ್ಕಿ ಯುವಕನಿಗೆ ಗಂಭೀರ ಗಾಯ
ಬೆಳ್ತಂಗಡಿ; ಬದ್ಯಾರು ಸಮೀಪ ವಿಧ್ವತ್ ಕಾಲೇಜಿನ ಎದುರು ಸ್ಕೂಟರ್ ಗೆ ಅಪರಿಚಿತ ವಾಹನ ಡಿಕ್ಕಿಹೊಡೆದು ಪರಾರಿಯಾದ ಘಟನೆ ಸಂಭವಿಸಿದ್ದು ಗಂಭೀರವಾಗಿ ಗಾಯಗೊಂಡಿರುವ ಸ್ಕೂಟರ್ ಸವಾರನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಗಾಯಾಳು ಪಡಂಗಡಿ ನಿವಾಸಿ ಸುಜಿತ್ ಶೆಟ್ಟಿ (22) ಎಂಬವರಾ ಗಿದ್ದಾರೆ.ಎಂದು ತಿಳಿದು ಬಂದಿದೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಯುವಕ ಬೆಳಗ್ಗೆ 4.30ರ ಸಮಾರಿಗೆ ಮನೆಯಿಂದ ಸ್ಕೂಟರ್ ನಲ್ಲಿ ಹೋಗುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸುಜಿತ್ ಶೆಟ್ಟಿ ಗಂಭೀರವಾಗಿ ಗಾಯಗೊಂಡಿದ್ದಾರೆ ಆದರೆ ಅಪಘಾತ ನಡೆಸಿದ ವಾಹನ ನಿಲ್ಲಿಸದೆ...
ಬೆಳ್ತಂಗಡಿ; ಹುಣ್ಸೆಕಟ್ಟೆಯಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ; ಬೆಳ್ತಂಗಡಿ ನಗರದ ಹುಣ್ಸೆ ಕಟ್ಟೆಯಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.ಮೃತ ವ್ಯಕ್ತಿ ಹುಣ್ಸೆ ಕಟ್ಟೆ ನಿವಾಸಿ ನಾರಾಯಣ ಪೂಜಾರಿ(75) ಎಂಬವರಾಗಿದ್ದಾರೆ.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕೂರತ್ ತಂಙಳ್ ಅವರು ಆಧ್ಯಾತ್ಮಿಕತೆ ಮೈಗೂಡಿ ಜೀವಿಸಿದ್ದರು ; ಕೆ.ಸಿ ರೋಡ್ ಹುಸೈನ್ ಸಅದಿ; ಕಾಜೂರಿನಲ್ಲಿ ಖಾಝಿ ಕೂರತ್ ತಂಙಳ್ ಅನುಸ್ಮರಣೆ, ಮಾಸಿಕ ಸ್ವಲಾತ್
ಬೆಳ್ತಂಗಡಿ; ಕರ್ನಾಟಕ ರಾಜ್ಯದ ಬಹುತೇಕ ಕಡೆಗಳಲ್ಲಿ ಇಸ್ಲಾಂ ನ ಪ್ರಭೆ ಪಸರಿಸಿದ್ದ ಸಯ್ಯಿದ್ ತಾಜುಲ್ ಉಲಮಾ ಉಳ್ಳಾಳ ತಂಙಳ್ ಅವರ ಸುಪುತ್ರರಾಗಿ ಕೂರತ್ ತಂಙಳ್ ಅವರು ಲೌಖಿಕ ಬದುಕಿನಿಂದ ಬಹುದೂರ ಇದ್ದು ಕೇವಲ ಆಧ್ಯಾತ್ಮಿಕತೆಯನ್ನೇ ಮೈಗೂಡಿಸಿಕೊಂಡು ಜೀವಿಸಿದ್ದ ಮಹಾನ್ ಪಂಡಿತರಾಗಿದ್ದರು ಎಂದು ಸಅದಿಯಾ ಕಾಲೇಜಿನ ಪ್ರಾಚಾರ್ಯ ಕೆ.ಸಿ ರೋಡ್ ಹುಸೈನ್ ಸಅದಿ ಹೇಳಿದರು. ಕಾಜೂರು ಆಡಳಿತ ಸಮಿತಿ ವತಿಯಿಂದ ಕಾಜೂರಿನಲ್ಲಿ ನಡೆದ ಸಯ್ಯಿದ್ ಕೂರತ್ ತಂಙಳ್ ಅನುಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಸಯ್ಯುದ್ ಕಾಜೂರು ತಂಙಳ್ ಅವರು ಮಾಸಿಕ ಸ್ವಲಾತ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ವಿಶೇಷ...
ಬೆಳ್ತಂಗಡಿ; ಪರಿಶಿಷ್ಟ ಜಾತಿ ಪಂಗಡಗಳ ಮುಂದಾಳುಗಳ ಸಭೆ: ಅಂಬೇಡ್ಕರ್ ಭವನಗಳ ನಿರ್ವಹಣಾ ಸಮಿತಿ ರಚಿಸಲು ನಿರ್ಧಾರ
ಬೆಳ್ತಂಗಡಿ: ಸರಕಾರ ಪರಿಶಿಷ್ಟ ಜಾತಿ ಪಂಗಡದ ಗುತ್ತಿಗೆ ದಾರರಿಗೆ ಶೇ 25ರಷ್ಟು ಮೀಸಲಾತಿಯನ್ನು ನೀಡಿದ್ದರೂ ಅದು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಪರಿಶೀಲನೆ ನಡೆಸಬೇಕು ಹಾಗೂ ಈ ಸಮುದಾಯಗಳಿಂದಬಂದಿರುವ ಗುತ್ತಿಗೆದಾರರಿಗೆ ನ್ಯಾಯ ಒದಗಿಸಬೇಕು ಎಂದು ಬೆಳ್ತಂಗಡಿ ಮಿನಿ ವಿಧಾನ ಸೌಧದಲ್ಲಿ ನಡೆದ ಪರಿಶಿಷ್ಟ ಜಾತಿ ಪಂಗಡಗಳ ಮುಂದಾಳುಗಳ ಸಭೆಯಲ್ಲಿ ಮುಖಂಡರುಗಳು ಒತ್ತಾಯಿಸಿದರು.ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಯಿತು.ಸಭೆಯಲ್ಲಿ ವಿಚಾರವನ್ನು ಪ್ರಸ್ತಾಪಿಸಿದ ಮಾಜಿ ಜಿ. ಪಂ ಸದಸ್ಯ ಶೇಖರ ಕುಕ್ಕೇಡಿ ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಂತ...
ಧರ್ಮಸ್ಥಳ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಕನ್ಯಾಮರಿಯಮ್ಮನವರ ಜನ್ಮದಿನಾಚರಣೆ
ಬೆಳ್ತಂಗಡಿ; ಧರ್ಮಸ್ಥಳ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಸೆ.8 ಭಾನುವಾರ ಕನ್ಯಾಮರಿಯಮ್ಮನವವರ ಜನ್ಮದಿನಾ ಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಧರ್ಮಗುರುಗಳಾದ ಳಾದ ಫಾ. ರೋಕಿ ಮೇನಾಚೇರಿ ಹಾಗೂ ಸಹಾಯಕ ಧರ್ಮಗುರುಗಳಾದ ಫಾ.ಕ್ರಿಸ್ಟಿನ್ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು,ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾ. ರೋಕಿ ಮೇನಾಚೇರಿ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಧರ್ಮಸ್ಥಳ ಚರ್ಚನ ಏಳು ಮಂದಿ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ಅದೇರೀತಿ ಧರ್ಮಸ್ಥಳ ಚರ್ಚ್ ನಲ್ಲಿ ಸಂಡೆ ಸ್ಕೂಲ್ ಶಿಕ್ಷಕರಾಗಿ ಈ ಹಿಂದೆ ಸೇವೆ ಸಲ್ಲಿಸಿದವರನ್ನು...
ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡಿದ ಬಾಬಾ ಜಲೀಲ್
ಬೆಳ್ತಂಗಡಿ: ಕ್ಯಾನ್ಸರ್ ಪೀಡಿತರಿಗೆ ವಿಗ್ ಮಾಡಲಿಸಲು ಬೆಳ್ತಂಗಡಿಯ ಆಂಬುಲೆನ್ಸ್ ಚಾಲಕ ಅಪದ್ಭಾಂಧವ ಬಾಬಾ ಜಲೀಲ್ ಇವರು 11 ಇಂಚು ಕೇಶ ದಾನ ಮಾಡಿದ್ದಾರೆ. ಬೆಳ್ತಂಗಡಿ ನಗರದ ಕುತ್ಯಾರ್ ದೇವಸ್ಥಾನದ ಬಳಿಯ ಬಿ.ಇಬ್ರಾಹಿಂ ಮತ್ತು ಅತೀಕಾ ದಂಪತಿಗಳ ಪುತ್ರ ಆಪದ್ಭಾಂಧವ ಬಾಬಾ ಜಲೀಲ್(40) ಇವರು ತನ್ನ ಕೂದಲನ್ನು 1 ವರ್ಷ 7 ತಿಂಗಳು ಕತ್ತರಿಸದೆ ಉಳಿಸಿ ಇದೀಗ ಕ್ಯಾನ್ಸರ್ ಪೀಡಿತರಿಗೆ 11 ಇಂಚು ಕೂದಲನ್ನು ದಾನ ಮಾಡಿದ್ದಾರೆ. ಬೆಳ್ತಂಗಡಿ ಸಂತೆಕಟ್ಟೆಯಲ್ಲಿರುವ ಶೃಂಗಾರ್ ಮಾಸ್ಟರ್ ಕಟ್ಸ್ ನಲ್ಲಿ ಸೆ.9 ರಂದು 11 ಇಂಚು ಕೂದಲನ್ನು ಕ್ಯಾನ್ಸರ್ ಪೀಡತರಿಗೆ ವಿಗ್...















