ಉಜಿರೆ ಟೈಲರ್ ಅಂಗಡಿಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ:ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಟೈಲರ್ಸ್ ಆಸೋಶಿಯೇಷನ್ ಒತ್ತಾಯ, ಪೊಲೀಸರಿಗೆ ಮನವಿ

0

ಬೆಳ್ತಂಗಡಿ:ಉಜಿರೆಯಲ್ಲಿ ಟೈಲರ್ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಟೈಲರ್ ಮಹಿಳೆಗೆ ಮಾರಣಂತಿಕ ಹಲ್ಲೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು. KSTAಬೆಳ್ತಂಗಡಿ ಟೈಲರ್ ಎಸೋಸಿಯೇಶನ್ ವತಿಯಿಂದ ಜು 01 ಸೋಮವಾರಬೆಳ್ತಂಗಡಿ ಪೊಲೀಸ್ ಠಾಣಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆಜಿಲ್ಲೆಯ ನಿಕಟಪೂರ್ವ ಅಧ್ಯಕ್ಷರಾದ ಜಯಂತ್ ಉರ್ಲಾoಡಿ, ಜಿಲ್ಲಾ ಸಮಿತಿಯ ಸದಸ್ಯರಾದ ಕುಶಾಲಪ್ಪ ಗೌಡ, ವಸಂತ್ ಪೂಜಾರಿ, ಕ್ಷೇತ್ರದ ಅಧ್ಯಕ್ಷರಾದ ವೇದಾವತಿ ಜನಾರ್ಧನ್, ಕಾರ್ಯದರ್ಶಿ ನಾಗೇಶ್ ಕುಮಾರ್, ಖಜಾಂಚಿ ರವೀಂದ್ರ ಗೇರುಕಟ್ಟೆ, ಸದಸ್ಯರಾದ ಜಯಾಚಿದಾನಂದ್,ಉಜಿರೆ ವಲಯದ ಕಾರ್ಯದರ್ಶಿ ಜೀನತ್,, ಬೆಳ್ತಂಗಡಿ ವಲಯದ ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್ ಉಪಸ್ಥಿತರಿದ್ದರು.

ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು: ಬೆಳ್ತಂಗಡಿಯ ನೆರಿಯ ನಿವಾಸಿ ಬಂಧನ

0

ಮಂಗಳೂರು; ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ, ಕಡಬ ತಾಲೂಕು ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಮನೆ ಕಳವು ಪ್ರಕರಣವನ್ನು ಭೇದಿಸಿದ ಪೊಲೀಸರು ಪ್ರಕರಣದ ಆರೋಪಿ ಬೆಳ್ತಂಗಡಿ ನೆರಿಯಾ ನಿವಾಸಿ ಶರತ್ (24) ಎಂಬಾತನನ್ನು ಬಂಧಿಸಿದ್ದಾರೆ.ಬೆಳ್ಳಾರೆಯಲ್ಲಿ ಮನೆಗೆ ನುಗ್ಗಿ ಸುಮಾರು ರೂ 1,48,000 ಮೌಲ್ಯದ ಚಿನ್ನಾಭರಣಗಳು ಮತ್ತು ನಗದು ಹಣ 30,000/- ಸೇರಿ ಒಟ್ಟು ರೂ 1,78,000/- ಮೌಲ್ಯದ ಮನೆಕಳ್ಳತನ ನಡೆದಿತ್ತು.ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ತನಿಖೆ ನಡೆಸಿದ ಪೊಲೀಸರು ಇದೀಗ...

ಹಿರಿಯ ಸಾಹಿತಿ ನಿವೃತ್ತ ಉಪನ್ಯಾಸಕ ಪ್ರೊ.ಎನ್. ಜಿ ಪಟವರ್ಧನ್ ನಿಧನ

0

ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ.ಕಾಲೇಜಿನ ನಿವೃತ್ತ ಉಪನ್ಯಾಸಕ ಹಿರಿಯ ಸಾಹಿತಿ ಪ್ರೊ.ಎನ್.ಜಿ ಪಟವರ್ಧನ್ ಅಲ್ಪಕಾಲದ ಅಸೌಖ್ಯದಿಂದ ಉಜ್ರೆಯ ಖಾಸಗಿ ಆಸ್ಪತ್ರೆಯಲ್ಲಿ ಜು.1ರಂದು ನಿಧನ ಹೊಂದಿದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ. ಮುಂಡಾಜೆ ಗ್ರಾಮದ ಕಡಂಬಳ್ಳಿ ಮೂಲದವರಾದ ಅವರುಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ 32 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಕನ್ನಡ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದರು. ತಮ್ಮ ಹಂಸಧ್ವನಿ ಪ್ರಕಾಶನದ ಮೂಲಕಕನ್ನಡ ವ್ಯಾಕರಣದ ಬಗ್ಗೆ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದ ಅವರ ಹಲವು ಕವನ ಸಂಕಲನಗಳು ಹಾಗೂ ಇತರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ....

ಸರಳಿಕಟ್ಟೆ ಶಾಲೆಯಲ್ಲಿ ಪಾಠದ ನಡುವೆಯೇ ಕೊಠಡಿಯೊಳಗೆ ಪುಡಿಯಾಗಿ ಬಿದ್ದ ಹಂಚು ಮಕ್ಕಳು ಅಪಾಯದಿಂದ ಪಾರು

0

ಬೆಳ್ತಂಗಡಿ; ತರಗತಿಯಲ್ಲಿ ಮಕ್ಕಳು ಪಾಠ ಕೇಳುತ್ತಿದ್ದ‌ ಸಂದರ್ಭದಲ್ಲಿಯೇ ಹಂಚುಗಳು ಉರುಳಿ ಬಿದ್ದ ಘಟನೆ ತೆಕ್ಕಾರು ಗ್ರಾಮದ ಸರಳಿಕಟ್ಟೆ ಸರಕಾರಿ ಶಾಲೆಯಲ್ಲಿ ನಡೆದಿದ್ದು ಅದೃಷ್ಟವಶಾತ್ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.ಸೋಮವಾರ ಮದ್ಯಾಹ್ನದ ವೇಳೆ ತರಗತಿಗಳು ನಡೆಯುತ್ತಿದ್ದಾಗಲೇ ಭಾರೀ ಗಾಳಿ ಬೀಸಿದ್ದು ಈ ವೇಳೆ ಶಿಧಿಲಾವಸ್ತೆಯಲ್ಲಿರುವ ಕಟ್ಟಡದ ಮೇಲ್ಛಾವಣಿಯ ಹಂಚುಗಳು ಉರುಳಿ ಬಿದ್ದಿದೆ.ಸರಳಿಕಟ್ಟೆ ಶಾಲೆಯಲ್ಲಿ ಸುಮಾರು 230ಮಕ್ಕಳು ಶಿಕ್ಷಣ ಪಡೆಯುತ್ತಿದ್ದು ಶಾಲೆಯ ಕಟ್ಟಡ ಅತ್ಯಂತ ಶಿಥಿಲಾವಸ್ಥೆಯಲ್ಲಿದೆ. ಸುಮಾರು 50 ವರ್ಷಕ್ಕೂ ಹಳೆಯ ಕಟ್ಟಡ ಇದಾಗಿದೆ. ತಾತ್ಕಾಲಿಕವಾಗಿ ನೀರು ಸೋರದಂತೆ ವ್ಯವಸ್ಥೆ ಮಾಡಿದ್ದರೂ ಇದೀಗ ಕಟ್ಟಡದ ಹಂಚುಗಳು ಪುಡಿಯಾಗಿ...

ಉಜಿರೆ ಗುರಿಪಳ್ಳ ರಸ್ತೆಯಲ್ಲಿ ಘನ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ

0

ಬೆಳ್ತಂಗಡಿ: ತಾಲೂಕಿನ ಕಲ್ಮಂಜ ಗ್ರಾಮ ನಿಡಿಗಲ್ ಮೂಲಕ ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರಿಪಳ್ಳಕ್ಕೆ ಸಂಪರ್ಕ ಕಲ್ಪಿಸುವ ಉಜಿರೆ-ಇಂದಬೆಟ್ಟು ಜಿಲ್ಲಾ ಮುಖ್ಯ ರಸ್ತೆಯ 1 ಕಿ ಮೀ ದೂರದಲ್ಲಿರುವ ಅಂಬಡಬೆಟ್ಟು ಸೇತುವೆಯು ಶಿಥಿಲಾವಸ್ಥೆಯಲ್ಲಿ ಇದ್ದು ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಈ ಸೇತುವೆಯಲ್ಲಿ ಘನವಾಹನ ಸಂಚಾರವನ್ನು ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಅವರು ಆದೇಶಿಸಿದ್ದಾರೆ. ಉಜಿರೆ - ಇಂದಬೆಟ್ಟು ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಬದಲಿ ರಸ್ತೆಯನ್ನು ಬಳಸಿಕೊಂಡು ಸಂಚರಿಸಬಹುದಾಗಿದೆ. ಉಜಿರೆ ಜನಾರ್ದನ...

ಕೊಯ್ಯೂರು ಉಣ್ಣಾಲು ಸಮೀಪ ರಸ್ತೆಗೆ ಉರುಳಿದ ಹೆಮ್ಮರ ವಾಹನ ಸಂಚಾರ ಅಸ್ತವ್ಯಸ್ತ

0

ಬೆಳ್ತಂಗಡಿ; ಕೊಯ್ಯೂರು ರಸ್ತೆಯಲ್ಲಿ ಭಾರೀ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.ಬೆಳ್ತಂಗಡಿ ಕೊಯ್ಯೂರು ರಸ್ತೆಯ ಉಣ್ಣಾಲು ಸಮೀಪ ಮರ ರಸ್ತೆಗೆ ಉರುಳಿ ಬಿದ್ದಿದೆ. ಮರಬಿದ್ದಾಗ ರಸ್ತೆಯಲ್ಲಿ ಯಾವುದೇ ವಾಹನಗಳು ಇರದಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.ಕೊಯ್ಯೂರು ರಸ್ತೆಯ ಬದಿಯಲ್ಲಿ ಭಾರೀ ಗಾತ್ರದ ಮರಗಳು‌ ಇದ್ದು ಈ ಹದೆಯೂ ಹೆಮ್ಮರವೊಂದು ರಸ್ತೆಗೆ ಉರುಳಿ ಸ್ವಲ್ಪದಲ್ಲಿಯೇ ಅಪಾಯ ತಪ್ಪಿತ್ತು. ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವು ಗೊಳಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದರೂ ಅರಣ್ಯ ಇಲಾಖೆ ಇದಕ್ಕೆ ಮುಂದಾಗುತ್ತಿಲ್ಲ ಎಂದು ಜನರು ತಮಗಮ ಆಕ್ರೋಶ...

ಅಪಾಯಕಾರಿ ದಾರಿಯಲ್ಲಿ ಶಾಲೆಗೆ ಹೋಗುತ್ತಿರುವ ಮಕ್ಕಳ ವೀಡಿಯೋ ವೈರಲ್; ತಹಶೀಲ್ದಾರ್ ಅವರಿಂದ ಸ್ಥಳ ಪರಿಶೀಲನೆ

0

ಬೆಳ್ತಂಗಡಿ; ತಾಲೂಕಿನ ತಣ್ಣೀರುಪಂಥ ಗ್ರಾಮಪಂಚಾಯತು ವ್ಯಾಪ್ತಿಯ ತುರ್ಕಳಿಕೆ ಶಾಲೆಗೆ ಹೋಗುವ ಮಕ್ಕಳು ಅಪಾಯಕಾರಿಯಾದ ಸ್ಥಿತಿಯಲ್ಲಿ ಸಂಚರಿಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗಿದ್ದು ಈ ಹಿನ್ನಲೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ತಾಲೂಕಿನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ತುರ್ಕಳಿಕೆ ಶಾಲೆಗೆ ಹೋಗಿ ಮಕ್ಕಳು ನೀರಿನ ಹರಿವು ಹೆಚ್ಚಾಗಿರುವ ತೋಡಿನ ಬದಿಯಲ್ಲಿ ಅತ್ಯಂತ ಅಪಾಯಕಾರಿಯಾಗಿ ಮನೆಗೆ ಹಿಂತಿರುಗುತ್ತಿದ್ದ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಜಿಲ್ಲಾಧಿಕಾರಿಯವರ ಸೂಚನೆಯಂತೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ...

ಉಜಿರೆ ಎಸ್.ಡಿ‌.ಎಂ ಕಾಲೇಜಿನಲ್ಲಿ ಕನ್ನಡ ಸಂಘ ಉದ್ಘಾಟನೆ: ಕನ್ನಡದಲ್ಲಿವೆ ಉದ್ಯೋಗಾವಕಾಶಗಳು: ಡಾ. ಪ್ರಭಾಕರ ಶಿಶಿಲ

0

ಉಜಿರೆ; ಕನ್ನಡ ಭಾಷೆ ಹಾಗೂಬರವಣಿಗೆಯಲ್ಲಿ ಹಿಡಿತವಿದ್ದರೆ ಸಾಕು ಉದ್ಯೋಗದ ತೊಂದರೆಯಿರುವುದಿಲ್ಲ. ಹಲವಾರು ಅವಕಾಶಗಳು ಕಣ್ಣೆದುರು ಕಾಣುತ್ತವೆ. ಆದರೆ ಅವುಗಳನ್ನು ಬಳಸಿಕೊಳ್ಳುವುದು ಹೇಗೆ ಎಂಬುದು ವಿದ್ಯಾರ್ಥಿಗಳ ಕೈಯಲ್ಲಿದೆ ಎಂದು ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲ ಅಭಿಪ್ರಾಯಪಟ್ಟರು.ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ಜೂ.27ರಂದು ಅವರು ಕನ್ನಡ ಸಂಘವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.ಪ್ರಸ್ತುತ ಉದ್ಯೋಗವೆಂದರೆ ಮನೆಯಿಂದ ಹೊರಗಿದ್ದುಕೊಂಡೇ ಮಾಡುವಂಥದ್ದು ಎಂದೇನಿಲ್ಲ. ಮನೆಯಲ್ಲಿಯೇ ಕುಳಿತು ಸಾವಿರಾರು ರೂಪಾಯಿ ಗಳಿಸಬಹುದು. ಕಥೆ, ಕವನ ವಿಮರ್ಶೆ, ಲೇಖನಗಳ ಬರಹಕ್ಕೆ ಸಾವಿರಾರು ರೂಪಾಯಿಗಳನ್ನು ಬರಹಗಾರ ಗಳಿಸಬಹುದು ಎಂದು ಅವರು ಹೇಳಿದರು.“ಆದರೆ...

ಶ್ರೀ ನಾರಾಯಣ ಗುರುಗಳು ಇಡೀ ಜಗತ್ತೇ ಸ್ವೀಕರಿಸಿದ ಮಹಾಗುರುಗಳು- ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ.

0

ಬೆಳ್ತಂಗಡಿ; ನಾರಾಯಣ ಗುರುಗಳು ಹಿಂದುಳಿದ ಸಮಾಜದ, ಕೆಳವರ್ಗದ ಜನರ ಕಣ್ಣೀರು ಒರೆಸುವ ಕೆಲಸವನ್ನು ಮಾಡುವುದರ ಮೂಲಕ ಅನುಕಂಪದ ಮೂರ್ತಿಯಾಗಿದ್ದರು.ವಿದ್ಯೆ ಮತ್ತು ಸಂಘಟನೆಯ ಶಕ್ತಿಯನ್ನು ಜಗತ್ತಿಗೆ ಸಾರಿ ಹೇಳಿದವರು.ಆ ಮೂಲಕ ಇಡೀ ಜಗತ್ತಿನಿಂದ ಸ್ವೀಕರಿಸಲ್ಪಟ್ಟ ಮಹಾಗುರುಗಳಾಗಿದ್ದರು.ಆದ್ದರಿಂದ ನಾವು ವಿದ್ಯೆ ಮತ್ತು ಸಂಘಟನೆಯ ಶಕ್ತಿಯ ಮೂಲಕ ರಾಜಕೀಯ ಶಕ್ತಿಯನ್ನೂ ಕೂಡ ಪಡೆದು ಸಮಾಜದಲ್ಲಿ ಗುರುತಿಸುವಂತಾಗಬೇಕು ಮತ್ತು ಸಂಕುಚಿತ ಮನೋಭಾವ ಬಿಟ್ಟು ಮುಂದೆ ಬರಬೇಕೆಂದು ಕೇರಳ ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರು ಹೇಳಿದರು.ಅವರು ಯುವ ವಾಹಿನಿ ಸಂಚಲನಾ ಸಮಿತಿ, ಉಜಿರೆ ಮತ್ತು...

ಅಂಗಡಿಗೆ ನುಗ್ಗಿ ಮಹಿಳೆಗೆ ಹಲ್ಲೆ ಆರೋಪಿ ನವೀನ್ ಕನ್ಯಾಡಿ ಬಂಧನ

0

ಬೆಳ್ತಂಗಡಿ; ಉಜಿರೆಯಲ್ಲಿ ಟೈಲರಿಂಗ್ ಅಂಗಡಿಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಸಿಸಿಕ್ಯಾಮೆರಾ ದೃಶ್ಯಗಳು ಎಲ್ಲೆಡೆ ಹರಿದಾಡಲಾರಂಭಿಸಿದ ಬೆನ್ನಲ್ಲಿಯೇ ಹಲ್ಲೆ ನಡೆಸಿದ ಆರೋಪಿ ನವೀನ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಹಲ್ಲೆ ನಡೆಸಿದ ಆರೋಪಿ ನವೀನ್ ಕನ್ಯಾಡಿ ಮತ್ತು ಟೈಲರಿಂಗ್ ಅಂಗಡಿ ನಡೆಸುವ ಮಹಿಳೆಯ ನಡುವೆ ಕಳೆದ ಹಲವು ವರ್ಷಗಳಿಂದ ಪರಿಚಯವಿದೆ ಎನ್ನಲಾಗಿದ್ದು ಇವರ ನಡುವೆ ಹಣಕಾಸಿನ ವ್ಯವಹಾರವೂ ಇತ್ತು ಎನ್ನಲಾಗಿದೆ. ಇದರ ಮುಂದುವರಿದ ಭಾಗವಾಗಿ ಈತ ಅಂಗಡಿಗೆ ನುಗ್ಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ . ಎರಡು ದಿನಗಳ ಹಿಂದೆ...