ಬಂದಾರು ; 80ನೇ ಸ್ವಾತಂತ್ರ್ಯೋತ್ಸವ ಮತ್ತು ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮ; ಗ್ರಾಮೀಣ ಸರಕಾರಿ ಶಾಲೆಗಳನ್ನು ಉಳಿಸುವ ಸಂಕಲ್ಪಮಾಡೋಣ; ಮೋಹನ್ ಕುಮಾರ್

0

ಬಂದಾರು : ಮುಂದಿನ ದಿನಗಳಲ್ಲಿ ಒಂದು ವರ್ಷದ ಮಟ್ಟಿಗೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಯುವ ಜನತೆ ಗುರಿಯೊಂದಿಗೆ ಎನ್ ಎಸ್ ಎಸ್ ವಿದ್ಯಾರ್ಥಿಗಳು ಈ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸೇರಿಕೊಂಡು ಶಕ್ತಿ ನೀಡಿ ಬದುಕು ಕಟ್ಟೋಣ ತಂಡದ ಸಮಾಜಮುಖಿ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲುಮತ್ತು ಸರಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಇಂದು ಸಂಕಲ್ಪ ಮಾಡಬೇಕಾಗಿದೆ ಎಂದು "ಬದುಕು ಕಟ್ಟೋಣ ಬನ್ನಿ" ತಂಡದ ಸಂಚಾಲಕ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕಮೋಹನ್ ಕುಮಾರ್ಹೇಳಿದರು.ಅವರು ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ "ಬದುಕು ಕಟ್ಟೋಣ ಬನ್ನಿ"...

ಧರ್ಮಸ್ಥಳ ಕನ್ಯಾಡಿ  ಉನ್ನತೀಕರಿಸಿದ ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ ಸಂಭ್ರಮದ‌ ಸ್ವಾತಂತ್ರ್ಯ ದಿನಾಚರಣೆ

0

ಕನ್ಯಾಡಿ 2 : 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ 2, ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿ ಮತ್ತು ದಾನಿಗಳಾದ ಶ್ರೀ ಮಹೇಶ್ ಆಚಾರ್ಯ ಇವರ ತಂದೆ ದಿವಂಗತ ಪ್ರಭಾಕರ ಆಚಾರ್ಯ ರವರ ಸ್ಮರಣಾರ್ಥ ನೂತನ ದ್ವಜಕಟ್ಟೆಯನ್ನು ನಿರ್ಮಿಸಿ ಕೊಟ್ಟು , ಈ ಶುಭ ದಿನದಂದು ಹಸ್ತಾಂತರ ಮಾಡಿದರು ಮತ್ತು ಉದ್ಘಾಟನೆಯನ್ನು ಅವರ ಮಾತೃಶ್ರೀ ಶ್ರೀಮತಿ ವಿಜಯಲಕ್ಷ್ಮೀ ಮೇಡಂರವರ ದಿವ್ಯ ಹಸ್ತದಿಂದ ನೆರವೇರಿಸಿದರು.ನಮ್ಮಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಯುತ ಅರುಣ್ ಕುಮಾರ್ ಶೆಟ್ಟಿ,...

ಅಖಿಲ ಕರ್ನಾಟಕ ನಿವೃತ್ತ ಸೈನಿಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ

0

ಬೆಳ್ತಂಗಡಿ; ಅಖಿಲ ಕರ್ನಾಟಕ ನಿವೃತ್ತ ಸೈನಿಕರ ಸಂಘದ ಬೆಳ್ತಂಗಡಿ ತಾಲೂಕು ಸಮಿತಿಯ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಉಜಿರೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ ತಂಗಚ್ಚನ್ ಮಾತನಾಡಿ ಸ್ವಾತಂತ್ರ್ಯ ಹೋರಾಟದ ಇತಿಹಾಸ ನೆನಪಿಸಿದರು. ಕಾರ್ಯಕ್ರಮದಲ್ಲಿ ಸಂಅಗಟನೆಯ ಮುಖಂಡರುಗಳಾದ ಜಾನ್, ಫ್ರಾನ್ಸೀಸ್, ಹರೀಶ್ ರೈ, ಅಬ್ರಹಾಂ, ಯೋಗೀಶ್, ರಾಜೇಶ್, ಸುರೇಶ್ ಭಟ್, ಜೋಸೆಪ್, ಜಾನ್ ಕೆ.ಟಿ ಹಾಗೂ ಇತರರು ನಿವೃತ್ತ ಸೈನಿಕರ ಕುಟುಂಬಸ್ಥರು ಇದ್ದರು.

ಬೆಳ್ತಂಗಡಿ: ನಿಯಮ ಉಲ್ಲಂಘಿಸಿ ಅರಣ್ಯದ ನಡುವಿನ ಜಲಪಾತಕ್ಕೆ ಪ್ರವಾಸಿಗರನ್ನು ಕರೆದೊಯ್ದ ಹೋಂ ಸ್ಟೇ‌ ಮಾಲಕನಿಗೆ ದಂಡ‌

0

ಬೆಳ್ತಂಗಡಿ : ತಾಲೂಕಿನ ಜಲಪಾತ ತಾಣಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಿದ್ದ ನಡುವೆಯೂ ಅರಣ್ಯ ಇಲಾಖೆಯ ಕಣ್ಣುತಪ್ಪಿಸಿ ಕರೆದುಕೊಂಡು ಹೋಗಿದ್ದ ದಿಡುಪೆಯ ನವಗ್ರಹ ಹೋಮ್ ಸ್ಟೇ ಮಾಲೀಕ ಸಂತೋಷ್ ಗೆ ಕುದುರೆಮುಖ ವನ್ಯಜೀವಿ ವಿಭಾಗ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಶರ್ಮಿಷ್ಠಾ ದಂಡ ವಿಧಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಜು.20 ರಿಂದ ದಿಡುಪೆ ಫಾಲ್ಸ್ ( ಕಡಮಗುಂಡಿ) ಜಲ ಜಲಪಾತ ವೀಕ್ಷಣೆಗೆ ಪ್ರವಾಸಿಗರ ಸುರಕ್ಷತೆಯ ಸಲುವಾಗಿ ಮುಂದಿನ ಆದೇಶದವರೆಗೆ ಪ್ರವೇಶ ನಿಷೇಧ ಹೇರಲಾಗಿತ್ತು. ಆದರೆ ಇದರ ನಡುವೆ ದಿಡುಪೆಯ ಸಂತೋಷ್...

ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ 80ನೇ ಸ್ವಾತಂತ್ರ್ಯ ಸಂಭ್ರಮ: ಹಿರಿಯ ಕಾಂಗ್ರೆಸ್ ಮುಖಂಡರಿಗೆ ಸನ್ಮಾನ

0

ಬೆಳ್ತಂಗಡಿ:ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಹಾಗೂ ಗ್ರಾಮೀಣ ಸಮಿತಿಗಳ ವತಿಯಿಂದ 80ನೇ ಸ್ವಾತಂತ್ರ್ಯ ಸಂಭ್ರಮವನ್ನು ದೇಶಭಕ್ತಿ ಹಾಗೂ ಸಡಗರದೊಂದಿಗೆ ಬೆಳ್ತಂಗಡಿ ಸಮಾಜ ಮಂದಿರದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಳಿಕ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹನೀಯರನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಿತ್ ಶಿವರಾಂ, ದೇಶದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ದೇಶದ ಏಕತೆ, ಸೌಹಾರ್ದತೆ ಮತ್ತು ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ...

ಚಾಮರಾಜ ನಗರ; ಅರಣ್ಯ ಇಲಾಖೆ ಗುಂಡೇಟಿಗೆ ಮೂವರು ಬಲಿ ಜನರ ಆಕ್ರೋಶ

0

ಬೆಂಗಳೂರು; ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶಾಗ್ಯ ಅರಣ್ಯ ಪ್ರದೇಶದಲ್ಲಿ ಸ್ವಾತಂತ್ರ್ಯೋತ್ಸವದ ಮುಂಜಾನೆಯೇ ಭೀಕರ ಶೂಟೌಟ್‌ ನಡೆದಿದ್ದು, ಒಂದೇ ಗ್ರಾಮದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಳ್ಳಬೇಟೆ ಆರೋಪದಡಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಫೈರಿಂಗ್‌ನಲ್ಲಿ ಈ ಸಾವು ಸಂಭವಿಸಿದ್ದು, ಇಡೀ ಜಿಲ್ಲೆಯಲ್ಲಿ ಆಕ್ರೋಶದ ಜ್ವಾಲೆ ಹೊತ್ತಿ ಉರಿಯುತ್ತಿದೆ. ಮೃತರ ವಿವರಅಂತೋಣಿಸ್ವಾಮಿ (50): ಜಾನ್‌ರೋಸ್ ಪೀಟರ್ (42)ಕುಮಾರ್ (33) ಮೃತ ವ್ಯಕ್ತಿಗಳಾಗಿದ್ದಾರೆ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿರುವ ಜೋಸೆಫ್ ಎಂಬಾತನನ್ನು ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ ದೂರಿನಂತೆ ಪ್ರಕರಣ‌ದಾಖಲು ಅರಣ್ಯಾಧಿಕಾರಿಗಳು ನಡೆಸಿದ ಗುಂಡಿನ ದಾಳಿಗೆ ಮೂವರು ಮೃತಪಟ್ಟಿದ್ದು, ಈ...

ಚಾಮರಾಜ ನಗರದಲ್ಲಿ ಅರಣ್ಯ ಇಲಾಖೆಯವರಿಂದ‌ಮೂವರು ರೈತರ ಹತ್ಯೆ ಖಂಡನೀಯ ಬಿ.ಎಂ ಭಟ್

0

ಚಾಮರಾಜ ನಗರದಲ್ಲಿ ಸ್ವತಂತ್ರ ದೊರೆತ ದಿನವೇ ಅಧಿಕಾರಿಗಳ ಅಕ್ರಮ ನಡೆ ಖಂಡನೀಯಭಾರತ ದೇಶ ಇಂದು 80 ನೇ ಸ್ವಾತಂತ್ರೋತ್ಸವ ಆಚರಣೆಯ ಗುಂಗಿನಲ್ಲಿದ್ದರೆ ಚಾಮರಾಜ ನಗರದಲ್ಲಿ  ಮೂವರು ಬಡ ರೈತರನ್ನು ಅರಣ್ಯ ಅಧಿಕಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿರುವುದು ಅತ್ಯಂತ ವಿಷಾಧನೀಯ ಸಂಗತಿ ಮತ್ತು ಖಂಡನೀಯ ವಿಚಾರ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಹೇಳಿದ್ದಾರೆ.ಚಾಮರಾಜ ನಗರದ ಮರಿಮಂಗಲ ಗ್ರಾಮದಲ್ಲಿ ಕಾಡಿಗೆ ಹಸು ಹುಡುಕಲು ಹೋದ ಮೂವರು ರೈತರನ್ನು ಶೂಟೌಟ್ ಮಾಡಲಾಗಿದೆ ಎಂಬ ವರದಿಯನ್ನು ಕೇಳಿ ಈ ಅಮಾನವೀಯ ಘಟನೆಯನ್ನು ಖಂಡಿಸಿ ಅವರು...

ಬೆಳ್ತಂಗಡಿ ಸಿಪಿಐಎಂ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

0

ಬೆಳ್ತಂಗಡಿ; ಯುವಜನರ ಆಶಯವನ್ನು ಮನಗಂಡು ಪ್ರಜಾಪ್ರಭುತ್ವ ದೇಶವನ್ನು ಮುನ್ನಡೆಸುವುದೇ ಸ್ವತಂತ್ರ ಹೋರಾಟಗಾರರುಗಳ ಆಶಯವಾಗಿತ್ತು ಎಂದು ಡಿ.ವೈ.ಎಫ್.ಐ. ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಅಭಿಷೇಕ್ ಪದ್ಮುಂಜ ಹೇಳಿದರು.ಅವರು ಇಂದು ಸಿಪಿಐಎಂ ಕಚೇರಿ ಇಎಂಎಸ್ ಭವನದಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತಾಡುತ್ತಿದ್ದರು. ಭಗತ್‌ಸಿಂಗ್ ನಂತಹ ಕ್ರಾಂತಿಕಾರಿ ಹೋರಾಟಗಾರರು ಯುವಜನರು ಯುವ ಪೀಳಿಗೆಯು ಆಶಯಗಳ ಈಡೇರಿಕೆಗೆ ಸಮಾನತೆ, ಸ್ವಾಭಿಮಾನ, ಶೋ಼ಷ಼ಣಾರಹಿತ ಸಮಾಜಕ್ಕಾಗಿ ಹಾತೊರೆಯುತ್ತಾ ತ್ಯಾಗಮಯ ಹೋರಾಟ ನಡೆಸಿದವರು. ಅವರು ನಮಗೆ ಆದರ್ಶರಾಗಬೇಕು ಎಂದರು. ಎಲ್ಲಾ ಸ್ವಾತಂತ್ರ ಹೋರಾಟಗಾರರ ಆಶಯಗಳನ್ನು ಈಡೇರಿಸಲು ಕಟಿಬದ್ದರಾಗುವ ಪ್ರತಿಜ್ಞೆಗೈಯುವುದೇ ಸ್ವಾತಾಂತ್ರ್ಯ...

ಕಟ್ಟಡ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಶಾಸಕ‌ ಹರೀಶ್ ಪೂಂಜ ಅವರಿಗೆ ಬಿ.ಎಂ.ಎಸ್  ಮನವಿ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಸಮಸ್ಯೆಗಳು ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿನ ಅವ್ಯವಸ್ಥೆಗಳ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತಿ, ಸರ್ಕಾರದ ಗಮನ ಸೆಳೆದು ಶೀಘ್ರ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ಕಾಮಗಾರಿ ಮಜ್ದೂರ್ ಸಂಘ (ಬಿ.ಎಂ.ಎಸ್.) ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಮಾನ್ಯ ಬೆಳ್ತಂಗಡಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ತಾಲೂಕಿನ ಸಾವಿರಾರು ಕಟ್ಟಡ ಕಾರ್ಮಿಕರು ಮನೆ, ಕಟ್ಟಡ, ರಸ್ತೆ, ಸೇತುವೆ, ಶಾಲೆ, ಆಸ್ಪತ್ರೆ...

ತುಳುನಾಡು ಕೋಳಿ ಸಾಕಾಣಿಕೆ ರೈತರ ಸಂಕಷ್ಟಕ್ಕೆ ಸ್ಪಂದಿಸಿ: ಶಾಸಕ ಹರೀಶ್ ಪೂಂಜಾರವರನ್ನು ಭೇಟಿಯಾದ ‘ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ’

0

ಬೆಳ್ತಂಗಡಿ; ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಳಿ ಸಾಕಾಣಿಕೆ ವಲಯವು ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟ ಹಾಗೂ ರೈತರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ 'ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ (ರಿ.)' ನಿಯೋಗವು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಕರಾವಳಿ ಭಾಗದಲ್ಲಿ ಸಾವಿರಾರು ಕುಟುಂಬಗಳ ಜೀವನೋಪಾಯವಾಗಿರುವ ಕೋಳಿ ಸಾಕಾಣಿಕೆ ಉದ್ಯಮವು ಪ್ರಸ್ತುತ ಉತ್ಪಾದನಾ ವೆಚ್ಚದ ಏರಿಕೆ, ಮಾರುಕಟ್ಟೆ ಅಸ್ಥಿರತೆ, ಪ್ರಕೃತಿ ವಿಕೋಪ ಮತ್ತು ನೊಣದ ಹಾವಳಿಯಿಂದ ತೀವ್ರ ಹಾನಿಗೀಡಾಗಿದೆ. ಈ ವಲಯವನ್ನು ಉಳಿಸಿಕೊಳ್ಳಲು ತುರ್ತು ಕ್ರಮಗಳ ಅಗತ್ಯವಿದೆ ಎಂದು...