ಬೆಳ್ತಂಗಡಿ ಬಿಜೆಪಿ ಮುಖಂಡನ ಮೇಲೆ ಹಲ್ಲೆ ಖಂಡಿಸಿ ಮಂಗಳವಾರ ಪ್ರತಿಭಟನೆ
ಬೆಳ್ತಂಗಡಿ; ಕಣಿಯೂರಿನಲ್ಲಿ ಬಿಜೆಪಿ ಮುಖಂಡ ಗ್ರಾಮಪಂಚಾಯತು ಸದಸ್ಯ ಪ್ರವೀಣ್ ಗೌಡ ಅವರ ಮೇಲೆ ನಡೆದ ಹಲ್ಲೆ ಹಾಗೂ ದರೋಡೆಯನ್ನು ಖಂಡಿಸಿ ಬಿಜೆಪಿ ಬೆಳ್ತಂಗಡಿ ಮಂಡಲದ ನೇತೃತ್ವದಲ್ಲಿ ಜು30 ಮಂಗಳವಾರ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ.ಆರೋಪಿಗಳ ವಿರುದ್ದ ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು ಶಾಸಕ ಹರೀಶ್ ಪೂಂಜ ಸೇರಿದಂತೆ ವಿವಿಧ ಮುಖಂಡರು ಗಳು ಭಾಗವಹಿಸಲಿದ್ದಾರೆ.
ಕೆ.ಎಸ್. ಎಂ.ಸಿ ಎ ನೇತೃತ್ವದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಚರ್ಚ್ ಗಳಲ್ಲಿ ಕಾರ್ಗಿಲ್ ವಿಜಯ ದಿನ ಆಚರಣೆ
ಬೆಳ್ತಂಗಡಿ; ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ( ಕೆ.ಎಸ್.ಎಂ.ಸಿ.ಎ) ನೇತೃತ್ವದಲ್ಲಿಕಾರ್ಗಿಲ್ ವಿಜಯ್ ದಿವಸ್ 25 ನೇ ವರ್ಷದ ಆಚರಣೆಯನ್ನು ಜೂಲೈ 28ನೇ ಭಾನುವಾರ ಬೆಳ್ತಂಗಡಿ ಧರ್ಮಪ್ರಾಂತ್ಯದ ಚರ್ಚ್ ಗಳಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು . ಬೆಳ್ತಂಗಡಿ ಧರ್ಮಧ್ಯಕ್ಷರಾದಬಿಷಪ್ ಲೋರೆನ್ಸ್ ಎಂ. ಟಿ ಅವರ ಆಶೀರ್ವಾದದೊಂದಿಗೆ ನಿರ್ದೇಶಕರಾದ ವಂದನೀಯ ಆದರ್ಶ್ ಜೋಸೆಫ್ ಪುತಿಯೇಡತ್ ರವರ ನಿರ್ದೇಶನಗಳೊoದಿಗೆ ಅಧ್ಯಕ್ಷರಾದ ಬೆಟ್ಟಿ ನೆಡುನಿಲಂ ಹಾಗೂ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಆಯಾ ಧರ್ಮ ಕೇಂದ್ರಗಳ ಧರ್ಮಗುರುಗಳ ಸಹಕಾರದಿಂದ, ಸ್ಥಳೀಯ ಸಮಿತಿಗಳ ನೇತೃತ್ವದಲ್ಲಿ ಕೆಎಸ್ಎಂಸಿಎ ವಲಯ ಮಟ್ಟದ ಅಧ್ಯಕ್ಷರು ಹಾಗೂ...
ಮಾಲಾಡಿ ಗ್ರಾ.ಪಂ ಅಧ್ಯಕ್ಷರ ನೇತೃತ್ವದ ತಂಡದಿಂದ ಮಳೆ ಹಾನಿಯಾದ ಪ್ರದೇಶಗಳ ಭೇಟಿ
ಬೆಳ್ತಂಗಡಿ; ಮಾಲಾಡಿ ಗ್ರಮಾಪಂಚಾಯತು ವ್ಯಾಪ್ತಿಯಲ್ಲಿ ಬಿರುಗಾಳಿ ಮಳೆಯಿಂದಾಗಿ ವ್ಯಾಪಕ ಹಾಮಿ ಸಂಭವಿಸಿದ್ದು ಹಾನಿಗೀಡಾದ ಪ್ರದೇಶಗಳಿಗೆ ಮಾಲಾಡಿ ಗ್ರಾಪಂ ಅಧ್ಯಕ್ಷರ ನೇತೃತ್ವದ ತಂಡ ಭೇಟಿ ನೀಡಿ ಸಂಕಷ್ಟಕ್ಕೆ ಈಡಾದ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು.ಗ್ರಾಮಪಂಚಾಯತು ವತಿಯಿಂದ ಹಾಗೂ ಸರಕಾರದಿಂದ ಸಾಧ್ಯವರಿವ ಎಲ್ಲ ರೀತಿಯ ಸಹಕಾರವನ್ನೂ ಒದಗಿಸುವುದಾಗಿ ಸಂತ್ರಸ್ಥರಿಗೆ ಭರವಸೆ ನೀಡಿದರು. ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್ ಕುಮಾರ್, ಸದಸ್ಯರಾದ ಬೇಬಿ ಸುವರ್ಣ, ಉಮೇಶ್, ಬೆನಡಿಕ್ಟಾ ಮಿರಾಂದ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ವಿನ್ಸೆಂಟ್ ಡಿಸೋಜಾ, ಪ್ರಮುಖರಾದ ಮಹಮ್ಮದ್ ಆಲಿ, ಅಲ್ತಾಫ್, ಹೈದರ್ ಆಲಿ ಮುಂತಾದವರು ಇದ್ದರು
ತಾಲೂಕು ಪತ್ರಕರ್ತರ ಸಂಘದಿಂದ ಉಜಿರೆ ಸಹಿಪ್ರಾ ಶಾಲೆ ಹಳೇಪೇಟೆಗೆ ಗ್ರೀನ್ ಬೋರ್ಡ್ ಹಸ್ತಾಂತರ
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಉಜಿರೆ ಹಳೆಪೇಟೆ ಸಹಿಪ್ರಾ ಶಾಲೆಗೆ ಗ್ರೀನ್ ಬೋರ್ಡ್ ಗಳನ್ನು ಸೋಮವಾರ ಹಸ್ತಾಂತರಿಸಲಾಯಿತು.ಗ್ರೀನ್ ಬೋರ್ಡ್ ಹಸ್ತಾಂತರಿಸಿ ಮಾತನಾಡಿದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ "ಉತ್ತಮ ವಾತಾವರಣ ಇರುವ ಶಾಲೆಗಳಲ್ಲಿ ಮಕ್ಕಳ ಕಲಿಕೆಯ ಉತ್ಸಾಹ ಹೆಚ್ಚಿರುತ್ತದೆ.ಇಂದಿನ ದಿನಗಳಲ್ಲಿ ಅಂಕಗಳೇ ಮಾನದಂಡವಲ್ಲ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ತಕ್ಕ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿದೆ" ಎಂದರುಶಾಲೆಯ ಅಭಿವೃದ್ಧಿಗೆ ಮುತುವರ್ಜಿ ವಹಿಸಿದ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ ಕುಮಾರ್ ಮಾತನಾಡಿ "ಸರಕಾರಿ ಶಾಲೆಗಳನ್ನು ಉಳಿಸಿ...
ಬೆಳ್ತಂಗಡಿಯಲ್ಲಿ ಆಟಿಡೊಂಜಿದಿನ ಸಂಗಾತಿ ಮಹಾ ಸಂಗಮ
ಬೆಳ್ತಂಗಡಿ; ತುಳು ನಾಡಿನ ಹುರಿ ಹಗ್ಗ ಎಷ್ಟು ಗಟ್ಟಿಯೋ ತುಳುವರು ಕೂಡಾ ಅಷ್ಟೇ ಗಟ್ಟಿವಂತರು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರು ಹೇಳಿದರುಅವರು ಇಂದು ಬೆಳ್ತಂಗಡಿಯ ಲ್ಯಾಲ ಸಂಗಮ ಹಾಲಲ್ಲಿ ಸಂಗಾತಿ ಗುಂಪು ಯೋಜನೆ (ರಿ) ಬೆಳ್ತಂಗಡಿ ಇದರ ನೇತೃತ್ವದಲ್ಲಿ ನಡೆದ ರೈತ ಕಾರ್ಮಿಕರ ಆಟೊಯಲ್ಲೊಂದು ದಿನ ಸಂಗಾತಿ ಮಹಾಸಂಗಮವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ತುಳು ನಾಡಿನ ಮಣ್ಣಿನ ಮಹತ್ವವನ್ನು ತಿಳಿಸಿದ ಅವರು ನೆಲವನ್ನು ಬಿಡಬೇಡ ಮಗನೇ ಎಂದು ತಾಯಿ ಹೇಳಿರುವುದನ್ನು ನೆನಪಿಸಿದರು. ಮುಂದೆ ಅವರು ಬಬ್ಬರಿಯ ದೈವ್ವವನ್ನು ಪ್ರಸ್ತಾಪಿಸಿ...
ಮುಂಡಾಜೆಯಲ್ಲಿ ಸ್ಕೂಟರಿಗೆ ಬೊಲೆರೋ ಡಿಕ್ಕಿ ಶಾಲಾ ಬಾಲಕಿ ಮೃತ್ಯು
ಬೆಳ್ತಂಗಡಿ: ಮುಂಡಾಜೆ ಸೀಟು ಬಳಿ ಬೈಕ್ ಗೆ ಬೊಲೆರೋ ಡಿಕ್ಕಿಹೊಡೆದು ಸಂಭವಿಸಿದ ಅಪಘಾತದಲ್ಲಿ ನಾಲ್ಕನೇ ತರಗತಿ ಬಾಲಕಿ ಮೇಲೆ ಬೊಲೆರೋ ಹರಿದು ಮೃತಪಟ್ಟ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಮಂಡಾಜೆ ಕಲ್ಮಂಜ ಕುಡೆಂಚಿ ಗುರುಪ್ರಸಾದ್ ಗೋಖಲೆ ಹಾಗೂ ಮಗು ಅನರ್ಘ್ಯ ಉಜಿರೆಯಿಂದ ಮನೆಗೆ ಹೊರಟಿದ್ದರು. ಮಾರ್ಗ ಮಧ್ಯ ಬೊಲೆರೋ ಹಿಂದಿನಿಂದ ಢಿಕ್ಕಿ ಹೊಡೆದಿದೆ ಬಳಿಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿತ್ತು. ಅನರ್ಘ್ಯ (9) ಗಂಭೀರ ಗಾಯಗೊಂಡಿದ್ದಳು ತಂದೆಗೆ ಗಾಯವಾಗಿದೆ. ತಕ್ಷಣ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಬಾಲಕಿ ಜೀವನ್ಮರಣ ಸ್ಥಿತಿಯಲ್ಲಿದ್ದು, ಬಳಿಕ ಮೃಪಟ್ಟಿರುವುದಾಗಿ ತಿಳಿದುಬಂದಿದೆ. ಅನರ್ಘ್ಯ ಉಜಿರೆ...
ಅಣಿಯೂರು ನದಿಯಲ್ಲಿ ಪ್ರವಾಹಕ್ಕೆ ಸಿಲುಕಿದ ಕಾರು; ಪ್ರಯಾಣಿಕರ ರಕ್ಷಣೆ
ಬೆಳ್ತಂಗಡಿ; ನೆರಿಯ ಗ್ರಾಮದ ರಸ್ತೆಯಲ್ಲಿ ಬಾಂದಾಡ್ಕ ಪ್ರದೇಶದಲ್ಲಿ ಅಣಿಯೂರು ನದಿಯಲ್ಲಿ ನಿನ್ನೆ ಒಪ್ಪಿಂದೊಮ್ಮೆಲೆ ನೀರು ಉಕ್ಕಿ ಹರಿದು ರಸ್ತೆಯಲ್ಲಿ ಬರುತ್ತಿದ್ದ ಕಾರೊಂದು ನೀರಿನಲ್ಲಿ ಮುಳುಗಿರುವ ಘಟನೆ ನಡೆದಿದೆ. ಚಾರ್ಮಾಡಿ ಗ್ರಾಮದ ಕಕ್ಕಿಂಜೆ ನಿವಾಸಿ ಸುಭೀಶ್ ಎಂಬವರು ತನ್ನ ಕುಟುಂಬದೊಂದಿಗೆ ಕಾರಿನಲ್ಲಿ ಸಂಬಂಧಿಕರ ಮನೆಗೆ ಹೋಗಿ ವಾಪಸ್ ಬರುವಾಗ ರಾತ್ರಿ 9.30 ಕ್ಕೆ ಬಾಂದಡ್ಕ ಪ್ರದೇಶದಲ್ಲಿ ಅಣಿಯೂರು ಹೊಳೆ ಏಕಾಏಕಿ ಉಕ್ಕಿ ಹರಿದಿದೆ. ನೀರಿನ ಮಟ್ಟ ಏರಿಕೆಯಾಗಿ ಕಾರು ಮುಳುಗಿದೆ. ಕಾರು ಮುಂದಕ್ಕೆ ಚಲಿಸಲಾಗದ ಸ್ಥಿತಿ ಬಂದಿದ್ದು ಪ್ರಚಾಹಕ್ಕೆ ಸಿಲುಕುವ ಭೀತಿ ಎದುರಾಗಿ ಕಾರಿನಲ್ಲಿ ಇದ್ದವರು...
ಬೆಳ್ತಂಗಡಿ ಪಶು ಆಸ್ಪತ್ರೆ ಶೆಡ್ ನಲ್ಲಿ ಕಳಸ ಮೂಲದ ಕಾರ್ಮಿಕನ ಶವ ಪತ್ತೆ
ಬೆಳ್ತಂಗಡಿ : ಪಶು ಆಸ್ಪತ್ರೆ ಶೆಡ್‌ನಲ್ಲಿ ಮಲಗಿದ ರೀತಿಯಲ್ಲಿ ಕಳಸ ಮೂಲದಕೂಲಿ ಕಾರ್ಮಿಕನ ಮೃತದೇಹ ಪತ್ತೆ ಯಾಗಿದೆ ಮೃತ ವ್ಯಕ್ತಿ ಕಳಸ ಸಮೀಪದ ಹಿರೆಬೈಲು ನಿವಾಸಿ ಸುಮಾರು 37 ವರ್ಷ ಪ್ರಾಯದ ರವಿ ಎಂದು ಗುರುತಿಸಲಾಗಿದೆ. ಇವರು ಕಳೆದ ಹಲವು ವರ್ಷಗಳಿಂದ ಬೆಳ್ತಂಗಡಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತಿದ್ದು ಸಂತೆಕಟ್ಟೆ ಸೇರಿದಂತೆ ಪೇಟೆಯಲ್ಲಿ ರಾತ್ರಿ ಹೊತ್ತು ಮಲಗುತಿದ್ದರು. ವಿಪರೀತ ಕುಡಿತದ ಚಟ ಹೊಂದಿದ್ದ ಇವರು ಕಳೆದ ರಾತ್ರಿ ಪಶು ಆಸ್ಪತ್ರೆಯ ಪಶು ಆ್ಯಂಬುಲೆನ್ಸ್ ನಿಲ್ಲಿಸುವ ಶೆಡ್ಡಿನಲ್ಲಿ ಮಲಗಿದ್ದಲ್ಲೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ...
ಮಾಲಾಡಿಯಲ್ಲಿ ಬಿರುಗಾಳಿ ಮನೆ ಕೃಷಿಗೆ ವ್ಯಾಪಕ ಹಾನಿ
ಬೆಳ್ತಂಗಡಿ; ತಾಲೂಕಿನಲ್ಲಿ ಗಾಳಿ ಮಳೆಯ ಅಬ್ಬರ ಮುಂದುವರಿದಿದೆ. ಶುಕ್ರವಾರ ಬೆಳಗ್ಗೆ ನೆರಿಯ ಪರಿಸರವನ್ನು ಸಂಪೂರ್ಣವಾಗಿ ನಾಮಾವೇಶಷಗೊಳಿಸಿದ ಗಾಳಿ ಶುಕ್ರವಾರ ಸಂಜೆಯ ವೇಳೆ ಮಾಲಡಿ ಸೋಣಂದೂರಿನಲ್ಲಿ ತನ್ನ ಪ್ರತಾಪವನ್ನು ತೋರಿಸಿದ್ದು ವ್ಯಾಪಕ ಹಾನಿಗೆ ಕಾರಣವಾಗಿದೆ.ಮಾಲಾಡಿಯ ಶಂತಿ ದಾಮ ಆಶ್ರಮಕ್ಕೆ ಸಂಪೂರ್ಣವಾಗಿ ಹಾನಿಯಾಗಿದೆ ಗಾಳಿಯ ಅಬ್ಬರಕ್ಕೆ ಕಟ್ಟಡದ ಮೇಲ್ಛಾವಣಿ ಸಂಪೂರ್ಣವಾಗಿ ನೆಲ ಕಚ್ವಿದೆ. ಅದೃಷ್ಟವಶಾತ್ ಆಶ್ರಮದಲ್ಲಿ ಇದ್ದವರು ಅಪಾಯದಿಂದ ಪಾರಗಿದ್ದಾರೆ. ಲಭ್ಯ ಮಾಹಿತಿಯಂತೆ ಮಾಲಾಡಿ,ಸೋಣಂದೂರಿನಲ್ಲಿ ಭಾರೀ ಗಾಳಿಗೆ ಸುಮಾರು 11ಮನೆಗಳಿಗೆ ತೀವ್ರತರದ ಹಾನಿಗಳಾಗಿದೆ. ಭಾರೀಗಾತ್ರದ ಮರಗಳು ನೆಲಕ್ಕೆ ಉರುಳಿದೆ. ಈ ಪರಿಸರದಲ್ಲಿ ಕೃಷಿಗೆ ವ್ಯಾಪಕ ಹಾನಿಯಾಗಿದ್ದು ಅಡಿಕೆ...
ಚಾರ್ಮಾಡಿ ಘಾಟಿಯಲ್ಲಿ ಭೂ ಕುಸಿತ; ವಾಹನ ಸಂಚಾರಕ್ಕೆ ಅಡಚಣೆ; ಇದೀಗ ಘಾಟಿ ಸಂಚಾರಕ್ಕೆ ಸುಗಮ
ಬೆಳ್ತಂಗಡಿ; ತಾಲೂಕಿನಲ್ಲಿ ಭಾರೀ ಮಳೆ ಮುಂದುವರಿಯುತ್ತಿದ್ದುಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದು ಟ್ರಾಫಿಕ್ ಜಾಮ್ ಸಂಭವಿಸಿದೆಚಾರ್ಮಾಡಿ ಘಾಟಿಯ ಹತ್ತನೆಯ ತಿರುವಿನಲ್ಲಿ ಗುಡ್ಡ ಕುಸಿತ ವಾಗಿರುವುದಾಗಿ ತಿಳಿದು ಬಂದಿದೆ . ಭೂ ಕುಸಿತದಿಂದಾಗಿ ನೂರಾರು ಸಂಖ್ಯೆಯಲ್ಲಿ ವಾಹನಗಳು ಅಲ್ಲಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿ ಬಂತು.ರಾತ್ರಿಯ ವೇಳೆ ಭೂ ಕುಸಿತವಾಗಿದ್ದು ಸ್ಥಳೀಯರ ಸಹಕಾರದೊಂದಿಗೆ ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. ಭೂ ಕುಸಿತದಿಂದಾಗಿಕೆಲ ಗಂಟೆಗಳ ಕಾಲ ಘಾಟಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಯುಂಟಾಯಿತು. ನೂರಾರು ವಾಹನಗಳು ಘಾಟಿಯಲ್ಲಿ ಹಾಗೂ ಕೊಟ್ಟಿಗೆ ಹಾರದಲ್ಲಿ ಕಾಯಬೇಕಾಗಿ ಬಂತು. ಚಿಕ್ಕಮಗಳೂರು-ದಕ್ಷಿಣಕನ್ನಡ...















