ಬೆಳ್ತಂಗಡಿ; ತಾಲೂಕಿನಲ್ಲಿ ಗಾಳಿ ಮಳೆಯ ಅಬ್ಬರ ಮುಂದುವರಿದಿದೆ. ಶುಕ್ರವಾರ ಬೆಳಗ್ಗೆ ನೆರಿಯ ಪರಿಸರವನ್ನು ಸಂಪೂರ್ಣವಾಗಿ ನಾಮಾವೇಶಷಗೊಳಿಸಿದ ಗಾಳಿ ಶುಕ್ರವಾರ ಸಂಜೆಯ ವೇಳೆ ಮಾಲಡಿ ಸೋಣಂದೂರಿನಲ್ಲಿ ತನ್ನ ಪ್ರತಾಪವನ್ನು ತೋರಿಸಿದ್ದು ವ್ಯಾಪಕ ಹಾನಿಗೆ ಕಾರಣವಾಗಿದೆ.
ಮಾಲಾಡಿಯ ಶಂತಿ ದಾಮ ಆಶ್ರಮಕ್ಕೆ ಸಂಪೂರ್ಣವಾಗಿ ಹಾನಿಯಾಗಿದೆ ಗಾಳಿಯ ಅಬ್ಬರಕ್ಕೆ ಕಟ್ಟಡದ ಮೇಲ್ಛಾವಣಿ ಸಂಪೂರ್ಣವಾಗಿ ನೆಲ ಕಚ್ವಿದೆ. ಅದೃಷ್ಟವಶಾತ್ ಆಶ್ರಮದಲ್ಲಿ ಇದ್ದವರು ಅಪಾಯದಿಂದ ಪಾರಗಿದ್ದಾರೆ.

ಲಭ್ಯ ಮಾಹಿತಿಯಂತೆ ಮಾಲಾಡಿ,ಸೋಣಂದೂರಿನಲ್ಲಿ ಭಾರೀ ಗಾಳಿಗೆ ಸುಮಾರು 11ಮನೆಗಳಿಗೆ ತೀವ್ರತರದ ಹಾನಿಗಳಾಗಿದೆ. ಭಾರೀಗಾತ್ರದ ಮರಗಳು ನೆಲಕ್ಕೆ ಉರುಳಿದೆ. ಈ ಪರಿಸರದಲ್ಲಿ ಕೃಷಿಗೆ ವ್ಯಾಪಕ ಹಾನಿಯಾಗಿದ್ದು ಅಡಿಕೆ ಮರಗಳು ಮುರಿದು ಬಿದ್ದಿದೆ, ಕೃಷಿ ಹಾನಿಯ ಬಗ್ಗೆ ಇನ್ನಷ್ಟೇ ಮಾಹಿತಿಗಳು ತಿಳಿದು ಬರಬೇಕಾಗಿದೆ.
ಒಂದೇ ಗ್ರಾಮಪಂಚಾಯತು ವ್ಯಾಪ್ತಿಯಲ್ಲಿ ಗಾಳಿ ಮಳೆಯ ಅಬ್ಬರಕ್ಕೆ ಕೋಟ್ಯಾಂತರ ರೂ ಹಾನಿ ಸಂಭವಿಸಿದೆ.
ಮಾಲಾಡಿ ಗ್ರಾ.ಪಂ ಅಧ್ಯಕ್ಷ ಪುನೀತ್ ಕುಮಾರ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಹಾನಿಗೀಡಾದ ಪ್ರದೇಶಗಳಲ್ಲಿ ತುರ್ತು ನೆರವು ಕಾರ್ಯಾಚರಣೆ ನಡೆಸಲಾಗಿದ್ದು ಮರಗಳನ್ನು ತೆರವು ಗೊಳಿಸಲಾಗಿದೆ.
ಹಾನಿಗೆ ಈಡಾದ ಪ್ರದೇಶಗಳಿಗೆ ಗ್ರಾ.ಪಂ ಅಧ್ಯಕ್ಷ ಪುನೀತ್ ಕುಮಾರ್,ಮಾಜಿ ಅಧ್ಯಕ್ಷ ಬೇಬಿ ಸುವರ್ಣ, ಅಭಿವೃದ್ಧಿ ಅಧಿಕಾರಿ ರಾಜಶೇಖರ ರೈ, ಕಾರ್ಯದರ್ಶಿ ಗುಣಕರ ಹೆಗ್ಡೆ, ಗ್ರಾ.ಪಂ ಸದಸ್ಯ ಉಮೇಶ್ ಹಾಗೂ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು
.


