ವಿಜಯರಾಘವ ಪಡ್ವೆಟ್ನಾಯ ಸ್ಮಾರಕ ಗೋಪುರ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 15 ಲಕ್ಷ ರೂ. ನೆರವು
ಬೆಳ್ತಂಗಡಿ; ಧರ್ಮಸ್ಥಳದಲ್ಲಿ ಹೆಗ್ಗಡೆಯವರ ಸಹೋದರ ಡಿ. ಹರ್ಷೇಂದ್ರ ಕುಮಾರ್ ರೂ. ೧೫ ಲಕ್ಷದ ಡಿ.ಡಿ. ಯನ್ನು ಹಸ್ತಾಂತರಿಸಿದರು.ಉಜಿರೆ: ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಎದುರು ನಿರ್ಮಾಣಗೊಳ್ಳುತ್ತಿರುವ ಕೀರ್ತಿಶೇಷ ವಿಜಯರಾಘವ ಸ್ಮಾರಕ ಗೋಪುರ ನಿರ್ಮಾಣಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಸಾದರೂಪವಾಗಿ ಮಂಜೂರು ಮಾಡಿದ ೧೫ ಲಕ್ಷ ರೂ. ನ ಡಿ.ಡಿ. ಯನ್ನು ಡಿ. ಹರ್ಷೇಂದ್ರ ಕುಮಾರ್ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮೋಹನ ಕುಮಾರ್, ರವಿ ಚಕ್ಕಿತ್ತಾಯ, ರಾಘವೇಂದ್ರ ಬೈಪಾಡಿತ್ತಾಯ, ರವೀಂದ್ರ ಶೆಟ್ಟಿ,...
ಕಾಶಿಪಟ್ಣ; ಎರಡು ತಂಡಗಳ ನಡುವೆ ಹೊಟೆದಾಟ ಹಲವರಿಗೆ ಗಾಯ; ಪ್ರಕರಣ ದಾಖಲು
ಬೆಳ್ತಂಗಡಿ: ಇನ್ವರ್ಟರ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಶಿಪಟ್ಣದಲ್ಲಿ ಎರಡು ತಂಡಗಳು ಕತ್ತಿಯಿಂದ ಹಾಗೂ ಕಬ್ಬಿಣದ ರಾಡ್ ನಿಂದ ಹೊಡೆದಾಟ ನಡೆದಿದ್ದು ಎರಡೂ ಕಡೆಯವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಎರಡೂ ಗುಂಪಿನ ಏಳು ಮಂದಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ. . ಮರೋಡಿ ಗ್ರಾಮದ ಪೆಂಚಾರ್ ಪಿಜತಕಟ್ಟೆ ನಿವಾಸಿ ಸುಜಿತ್ ವೇಣೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ಕಾಶಿಪಟ್ಟ ಗ್ರಾಮದ ಮಿತ್ತೊಟ್ಟು ಅಭಿಷೇಕ್ ನೊಂದಿಗೆ ಕೆಲಸ ಮಾಡಿಕೊಂಡಿದ್ದು, ಅಭಿಷೇಕ್‌ನ ಮನೆಯಲ್ಲಿ ಇಟ್ಟಿದ್ದ ಇನವರ್ಟನ್ನು ವಾಪಾಸು ಅಂಗಡಿಗೆ ತಂದುಕೊಡುವಂತೆ ಸುಜಿತ್ ಕೇಳಿದಾಗ ಬೇಕಾದಲ್ಲಿ ಮನೆಗೆ ಬಂದು...
ಬೆಳ್ತಂಗಡಿ; ಕಾಂಗ್ರೆಸ್ ಕಚೇರಿಯಲ್ಲಿ ಸಮಾಲೋಚನಾ ಸಭೆ
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ದಿನಾಂಕ : 24:04:2025 ರಂದು ಪಂಚಾಯತ್ ವ್ಯಾಪ್ತಿಯ ಅಧ್ಯಕ್ಷರುಗಳ ಸಭೆ ನಡೆಯಿತು.ಸಭೆಯಲ್ಲಿ ಮಂಗಳೂರಿನಲ್ಲಿ 28:04:2025 ರ ಸೋಮವಾರ ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ಗ್ಯಾಸ್ ಮತ್ತು ಡಿಸೇಲ್ ಬೆಲೆ ಏರಿಕೆ ವಿರುದ್ಧ ನಡೆಯುವ ಪ್ರತಿಭಟನೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಅತೀ ಹೆಚ್ಚು ಕಾರ್ಯಕರ್ತರು ಭಾಗವಹಿಸಲು ತೀರ್ಮಾನಿಸಲಾಯಿತು.ಜಿಲ್ಲಾ ಕೆ.ಎಂ.ಎಫ್ ನಿರ್ದೇಶಕರ ಚುನಾವಣೆಯ ಬಗ್ಗೆ ಚರ್ಚಿಸಲಾಯಿತು.ಹಾಗೂ ಮುಂದಿನ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಈಗಿಂದಲೇ ಕಾರ್ಯಪ್ರವರ್ತ ರಾಗುವಂತೆ ಮತ್ತು ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಸಭೆಯಲ್ಲಿ...
ಬೆಳ್ತಂಗಡಿ ಅಲ್ಲಾಟ ಬೈಲು ನಿವಾಸಿ ವಿನೋದ್ ಬಾವಿಗೆ ಹಾರಿ ಆತ್ಮಹತ್ಯೆ
ಬೆಳ್ತಂಗಡಿ: ನಗರದ ಇಲ್ಲಿಯ ಸಂತೆಕಟ್ಟೆ ಬಳಿ ಖಾಸಗಿ ತೋಟದ ಬಾವಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು (ಎ.24) ರಂದು ನಡೆದಿದೆ. ಮೃತ ವ್ಯಕ್ತಿ ಬೆಳ್ತಂಗಡಿ ಅಲ್ಲಾಟ ಬೈಲು ನಿವಾಸಿ ಪಟ್ಟಣ ಪಂಚಾಯತು ಮಾಜಿ ಅಧ್ಯಕ್ಷೆ ವೀಣಾ ರವರ ಪತಿ ವಿನೋದ್ (48) ರವರು ಎಂದು ತಿಳಿದುಬಂದಿದೆ.ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕಾಶ್ಮೀರ ಭಯೋತ್ಪಾದಕ ದಾಳಿ; ಉಜಿರೆಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರತಿಭಟನಾ ಸಭೆ
ಬೆಳ್ತಂಗಡಿ; ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡದ ವತಿಯಿಂದ ದಿನಾಂಕ 23/04/2025 ರಂದು ಉಜಿರೆ ಪೇಟೆಯಲ್ಲಿ ಶ್ರದ್ಧಾಂಜಲಿ ಸಭೆ ಮತ್ತು ಪ್ರತಿಭಟನೆ ನಡೆಯಿತು…ಈ ಪ್ರತಿಭಟನಾ ಸಭೆಯನ್ನೂದ್ಧೇಶಿಸಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ನಾಯಕ್ ಮತ್ತು ನ್ಯಾಯವಾದಿಯಾದ ಶ್ರೀ ವಸಂತ ಮರಕಡರವರು ಮಾತನಾಡಿದರುಬಜರಂಗದಳ ಪುತ್ತೂರು ಜಿಲ್ಲಾ ಸಹ ಸಂಯೋಜಕರಾದ ದಿನೇಶ್ ಚಾರ್ಮಾಡಿ, ವಿಹಿಂಪ ಬೆಳ್ತಂಗಡಿ ಪ್ರಖಂಡ ಅದ್ಯಕ್ಷರಾದ ವಿಷ್ಣು ಮರಾಠೆ, ವಿಹಿಂಪ ಬೆಳ್ತಂಗಡಿ ಪ್ರಖಂಡ ಕಾರ್ಯದರ್ಶಿ...
ಭಯೋತ್ಪಾದಕ ದಾಳಿ ಖಂಡಿಸಿ ಮತ್ತು ಕೇಂದ್ರ ಸರಕಾರದ ಭದ್ರತೆ, ಗುಪ್ತಚರ ವೈಫಲ್ಯತೆ ವಿರುದ್ಧ ಎಸ್‌ಡಿಪಿಐ ವತಿಯಿಂದ ಬೆಳ್ತಂಗಡಿಯಲ್ಲಿ ಕ್ಯಾಂಡಲ್ ಮಾರ್ಚ್ ಪ್ರತಿಭಟನೆ
ಬೆಳ್ತಂಗಡಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯನ್ನು ಮತ್ತು ಕೇಂದ್ರ ಸರಕಾರದ ಭದ್ರತೆ, ಗುಪ್ತಚರ ವೈಫಲ್ಯತೆ ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಕ್ಯಾಂಡಲ್ ಮಾರ್ಚ್ ಪ್ರತಿಭಟನೆ ಬೆಳ್ತಂಗಡಿ ಮೂರು ಮಾರ್ಗದ ಬಳಿ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ ಕಾಶ್ಮೀರದ ಪಹಲ್ಗಾಮ್ ನಡೆದಿರುವ ಉಗ್ರರ ದಾಳಿ ಪೂರ್ವಯೋಜಿತ ಸಂಚು. ಪ್ರಾಣಹತ್ಯೆ ಮಾಡಿರುವ ಈ ಘಟನೆ ಅತ್ಯಂತ ಖಂಡನೀಯ. ಘಟನೆಯಲ್ಲಿ ಸುಮಾರು 28...
ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆದ ಸ್ಥಳದ ಸ್ವಚ್ಛತೆ
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಗುರುವಾಯನಕೆರೆಯ ಶಕ್ತಿನಗರ ಮೈದಾನದಲ್ಲಿ ಏಪ್ರಿಲ್ 20ರಂದು ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಇವರ ಉಪಸ್ಥಿತಿಯಲ್ಲಿ, ನಡೆದ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆದ. ಮೈದಾನದ ಸ್ವಚ್ಛತೆಯನ್ನು ಬುಧವಾರ ಮಾಡಲಾಯಿತು. ಈ ಸ್ವಚ್ಛತಾ ಕೆಲಸ ಕಾರ್ಯದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲ್ಯಾನ್, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಶೇಖರ್ ಕುಕ್ಕೆಡಿ, ಬ್ಲಾಕ್ ಕಾಂಗ್ರೆಸ್ ನಗರ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ನಾಗೇಶ್ ಕುಮಾರ್...
ಕಾಶ್ಮೀರ ಉಗ್ರಗಾಮಿ ದಾಳಿ: ಶಾಂತಿ ಮತ್ತು ಮಾನವೀಯತೆಗೆ ಎದುರಾದ ಹೊಡೆತ; ಶಾಸಕ ಹರೀಶ್ ಪೂಂಜ
ಬೆಳ್ತಂಗಡಿ; ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಉಗ್ರಗಾಮಿ ದಾಳಿ ಆಘಾತಕಾರಿಯಾಗಿದೆ ಈ ಭಯೋತ್ಪಾದಕ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆಈ ಕೂಡಲೇ ಕೇಂದ್ರಸರ್ಕಾರ ನಾವು "ಬಯಸುವ ನ್ಯಾಯ"ವನ್ನು ಒದಗಿಸುವ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಜಿ ಹಾಗು ಗ್ರಹಸಚಿವರಾದ ಅಮಿತ್ ಷಾ ಕೈಗೊಳ್ಳುತ್ತಾರೆ ಎಂದು ಶಾಸಕ ಹರೀಶ್ ಪೂಂಜ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ನೆನಪಿಡಿ, ಎಲ್ಲಿಯವರೆಗೆ ಮತವೊಂದು ಇತರ ಮತದವರನ್ನು ಕೊಲ್ಲುವುದೇ ತಮ್ಮ ಮತದ ಉಳಿವಿಗೆದಾರಿ ಎಂದು ತನ್ನ ಸಮುದಾಯದವರಿಗೆ ಬೋಧಿಸುತ್ತಿರುತ್ತದೋ, ಅಲ್ಲಿಯವರೆಗೆ ಈ ಎಲ್ಲರಿಗೂ ಆಪತ್ತು ತಪ್ಪಿದ್ದಲ್ಲ.ಎಂದು ಶಾಸಕ ಹರೀಶ್ ಪೂಂಜ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಳ್ತಂಗಡಿ; ಬ್ರಾಹ್ಮಣರ ಮೇಲಿನ ದೌರ್ಜನ್ಯ, ವಿವಿಧ ಬ್ರಾಹ್ಮಣ ಸಂಘಟನೆಗಳಿಂದ ಸರಕಾರಕ್ಕೆ ಮನವಿ
ಬೆಳ್ತಂಗಡಿ; ಬ್ರಾಹ್ಮಣರ ಮೇಲೆ ರಾಜ್ಯದಲ್ಲಿ ಆಗುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕಿನ ವಿವಿಧ ಬ್ರಾಹ್ಮಣ ಸಂಘಟನೆಗಳ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ನೂರಾರು ಸಂಖ್ಯೆಯಲ್ಲಿ ಸೇರಿದ್ದ ತಾಲೂಕಿನ ಬ್ರಾಹ್ಮಣ ಸಮುದಾಯದವರು ತಹಶಿಲ್ದಾರರ ಮೂಲಕ ಮುಖ್ಯಮಂತ್ರಿ ಯವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಇತ್ತೀಚೆಗೆ ನಡೆದ ಸಿ.ಇ.ಟಿ ಪರೀಕ್ಷೆಯಲ್ಲಿ ಸರಕಾರದ ಆದೇಶ ಇಲ್ಲದಿದ್ದರೂ ಪವಿತ್ರವಾದ ಜನಿವಾರವನ್ನು ತುಂಡರಿಸಿ ಅದನ್ನು ಪರಿಕ್ಷಾ ಪ್ರವೇಶಕ್ಕೆ ನಿರ್ಬಂಧವಾಗಿ ಪರಿಗಣಿಸಿ ದೇಹದಿಂದ ತೆಗೆದಿರುವ ಅಧಿಕಾರಿಗಳ ಕ್ರಮವನ್ನು ವಿಪ್ರಸಮಾಜವು ತೀವ್ರವಾಗಿ ಖಾಂಡಿಸುತ್ತದೆ. ಈರೀತಿಯ ವರ್ತನೆಗಳು ಸಮಾಜದಲ್ಲಿ ವಿಘಟನೆಯನ್ನು ಉಂಟುಮಾಡುವ...
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಖಂಡನೀಯ ಬಿಷಪ್ ಲಾರೆನ್ಸ್ ಮುಕ್ಕುಯಿ
ಬೆಳ್ತಂಗಡಿ; ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನುಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪರಮ ಪೂಜ್ಯ ಲಾರೆನ್ಸ್ ಮುಕ್ಕಿಯಿ ಅವರು ತೀವ್ರವಾಗಿ ಖಂಡಿಸಿದಾರೆ."ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯು ಅಮಾನುಷಕ ಕೃತ್ಯವಾಗಿದೆ ಮತ್ತು ನಾನು ಅದನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ದಾಳಿಯಲ್ಲಿ ಕರ್ನಾಟಕದವರು ಪೀಡಿತರಾಗಿದೆ ಎಂಬುದು ನನ್ನ ದುಃಖವನ್ನು ಇಮ್ಮಡಿಗೊಳಿಸಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ಅರ್ಥಹೀನ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡ...















