ಬಿಜೆಪಿ ಸದಸ್ಯರ ಅಡ್ಡ ಮತದಾನ; ಧರ್ಮಸ್ಥಳ ದಲ್ಲಿ ಶಾಸಕಾಂಗ ಸಭೆ, ಪ್ರಮಾಣವಿಲ್ಲ

0

ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಯಲ್ಲಿನ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲೇ ಪರ ಮತ್ತು ವಿರೋಧಕ್ಕೆ ಕಾರಣವಾಗಿದ್ದ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸುವ ವಿಚಾರಕ್ಕೆ ತೆರೆ ಬಿದ್ದಿದೆ. ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸುವುದಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಮತ್ತು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆ‌ರ್. ಅಶೋಕ್ ನವದೆಹಲಿಯಲ್ಲಿ ಇಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ನವದೆಹಲಿಯಲ್ಲಿ ಇಂದು ಭೇಟಿಯಾದ ಸಂದರ್ಭದಲ್ಲಿ ಕೂಡಾ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸುವುದು ಬೇಡ ಎಂಬ ಸೂಚನೆ ರಾಜ್ಯ...

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಸ್ತ್ರೀ ರೋಗ ತಪಾಸಣಾ ಶಿಬಿರ; ಮನೆಯವರ ಕಾಳಜಿ ವಹಿಸುವ ಮಹಿಳೆ ತನ್ನ ಆರೋಗ್ಯದ ಕಾಳಜಿ ವಹಿಸುವುದು ಮುಖ್ಯ- ಡಿವೈಎಸ್.ಪಿ ಸಿಕೆ ರೋಹಿಣಿ

0

ಬೆಳ್ತಂಗಡಿ; ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜೂ.21 ರಂದು ಉಚಿತ ಸ್ತ್ರೀರೋಗ ತಪಾಸಣಾ ಶಿಬಿರ ನಡೆಯಿತು. ಶಿಬಿರವನ್ನು ಬೆಳ್ತಂಗಡಿ ಪೊಲೀಸ್ ಉಪ ಅಧೀಕ್ಷಕರಾದ ಸಿ. ಕೆ ರೋಹಿಣಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಕುಟುಂಬದಲ್ಲಿ ಅತೀ ಹೆಚ್ಚು ನಿರ್ಲಕ್ಷಕ್ಕೆ ಒಳಗಾಗುವರು ಮಹಿಳೆಯರು. ತನ್ನ ಪರಿವಾರದ ಬಗ್ಗೆ ಕಾಳಜಿ ವಹಿಸುವ ಮಹಿಳೆಯರು ತನ್ನ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಳ್ಳಲು ಸಂಕೋಚ ಪಡುತ್ತಾರೆ. ಅವರ ಆರೋಗ್ಯದ ಬಗ್ಗೆ ಅವರೇ ನಿರ್ಲಕ್ಷ ಮಾಡುತ್ತಾ, ತೀರಾ ಹದಗೆಟ್ಟಾಗ ಮಾತ್ರ ವೈದ್ಯರ ಬಳಿ ಹೋಗ್ತಾರೆ. 40 ರಿಂದ 50...

ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ನಿಧನ; ಬೆಳ್ತಂಗಡಿ ತಾಲೂಕಿನ ಕಾಶೀಪಟ್ಣದಲ್ಲಿ ಅಂತ್ಯಸಂಸ್ಕಾರ

0

ಮಂಗಳೂರು; ದ.ಕ. ಜಿಲ್ಲಾ ಖಾಝಿ, ಹಿರಿಯ ವಿದ್ವಾಂಸ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್(78) ಇಂದು (ಜೂ.23) ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಲವು ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವಿರಾರು ಜನ ಶಿಷ್ಯವೃಂದ‌ಹಾಗೂ ಅವರ ಅಭಿಮಾನಿಗಳ ಪ್ರಾರ್ಥನೆಯ ಹೊರತಾಗಿಯೂ ಅವರು ಮಂಗಳವಾರದಂದು ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಬಂಧುಬಳಗವನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದಮಂಗಳೂರು ಕೇಂದ್ರ ಜುಮಾ ಮಸ್ಜಿದ್‌ ಗೆ ತರೊಅಗಿದ್ದು ಅಲ್ಲಿ ಮೃತದೇಹದ ಸ್ನಾನ ಹಾಗೂ ಇತರ ವಿಧಿಗಳನ್ನು ಪೂರೈಸಿ...

ಬೆಳ್ತಂಗಡಿ; ಹತ್ಯಡ್ಕದಲ್ಲಿ ರಸ್ತಗೆ ಬಿದ್ದ ಹೆಮ್ಮರ ಸಂಚಾರ ಅಸ್ತವ್ಯಸ್ತ

0

ಬೆಳ್ತಂಗಡಿ: ಭಾರೀ ಗಾಳಿ ಮಳೆಯಿಂದಾಗಿ ಅರಸಿನಮಕ್ಕಿ ಕೊಕ್ಕಡ ಮುಖ್ಯ ರಸ್ತೆಯ ಹತ್ಯಡ್ಕ ಗ್ರಾಮದ ಪಲಸ್ತಡ್ಕ ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಜೂ.23 ಮಂಗಳವಾರ ಮಧ್ಯಾಹ್ನ ನಡೆದಿದೆ.ಮರವು ವಿದ್ಯುತ್ ತಂತಿಯ ಮೇಲೆ ಬಿದ್ದ ಕಾರಣ ವಿದ್ಯುತ್ ಕಂಬವೂ ಮುರಿದು ವಿದ್ಯುತ್ ವ್ಯತ್ಯಯ ಉಂಟಾಗಿದೆ.ಘಟನೆಯ ಬಗ್ಗೆ ಮಾಹಿತಿ ತಿಳಿದ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟನಕದ ಶಿಶಿಲ -ಅರಸಿನಮಕ್ಕಿ ನಿರ್ವಹಣಾ ತಂಡದ ಸದಸ್ಯರಾದ ಅವಿನಾಶ್ ಬಿಡೆ, ಆನಂದ ನಾಯ್ಕ, ರಮೇಶ್ಚರ ಕಟ್ಟ,ಉಮೇಶ್ ಶಿಶಿಲ,...

ಬೆಳ್ತಂಗಡಿ: ಗ್ಯಾಸ್ ವಿತರಕನಿಗೆ ಹಲ್ಲೆ ಮಾಡಿ ಬಲವಂತವಾಗಿ ಸಿಲಿಂಡರ್ ಕಿತ್ತುಕೊಂಡ ಆರೋಪ ಪ್ರಕರಣ‌ ದಾಖಲು

0

ಬೆಳ್ತಂಗಡಿ: ಕೆವೈಸಿ ನವೀಕರಣಗೊಂಡಿಲ್ಲ ಎನ್ನುವ ಕಾರಣಕ್ಕೆ ಗ್ಯಾಸ್ಸಿಲಿಂಡ‌ರ್ ನೀಡಲು ನಿರಾಕರಣೆ ಮಾಡಿದ ವಿತರಕನ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿ, ಬಲವಂತವಾಗಿ ಸಿಲಿಂಡರ್‌ ಹೊತ್ತೊಯ್ದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಉರುವಾಲು ಪದವು ಎನ್ನುಲ್ಲಿ ನಡೆದಿದ್ದು ಹಲ್ಲೆಗೆ ಒಳಗಾದ ಗ್ಯಾಸ್ ವಿತರಕ ನೀಡಿರುವ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ‌ದಾಖಲಿಸಲಾಗಿದೆ.ಲಾಯಿಲದ ಶಿವಕುಮಾರ್ ಎಂಬವರ ಮಾಲಕತ್ವದ ಶ್ರೀ ಮಂಜು ಇಂಡೇನ್ ಗ್ಯಾಸ್ ಏಜೆನ್ಸಿಯಲ್ಲಿ ವಿತರಕರಾಗಿ ಕೆಲಸ ಮಾಡುವ ಸಚಿನ್ (21) ಎಂಬಾತನೇ ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದಾನೆ ಉರುವಾಲು ಪದವು ನಿವಾಸಿ ಯಾಕೂಬ್ ಎಂಬಾತನೇ ಹಲ್ಲೆ ನಡೆಸಿ...

ಬೆಳ್ತಂಗಡಿ; ಸರಕಾರಿ ಆಸ್ಪತ್ರೆಖಾಸಗೀಕರಣದ ವಿರುದ್ದ ಸಿಪಿಐಎಂ ಪ್ರತಿಭಟನೆ

0

ಬೆಳ್ತಂಗಡಿ; ಖಾಸಗೀ ಆಸ್ಪತ್ರೆ ನಿಯಂತ್ರಣ ಮಾಡಿ, ಸರಕಾರಿ ಆಸ್ಪತ್ರೆ ಬಲಬಡಿಸಿ ಎನ್ನುವುದೇ ನಮ್ಮ ಹೋರಾಟವಾಗಿದೆ ಸರಕಾರಿ ಆಸ್ಪತ್ರೆಗಳನ್ನು ಖಾಸಗಿಯವರಿಗೆ ನೀಡುವ ಸರಕಾರದ ನೀತಿಯ ಬಗ್ಗೆ ಶಾಸಕರು ಯಾರ ಪರ ಇದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದರು.ಅವರು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವವದಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಎದುರು ಸರಕಾರಿ ಆಸ್ಪತ್ರೆ ಉಳಿಸಿ, ಎಲ್ಲಾ ಸೌಲಭ್ಯ ಒದಗಿಸಿರಿ ಎಂದು ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ದ್ದೇಶಿಸಿ ಅವರು ಮಾತಾಡುತ್ತಿದ್ದರು. ಬೆಳ್ತಂಗಡಿಯ ಶಾಸಕರು...

ಬೆಳ್ತಂಗಡಿ; ಫುಟ್ಪಾತ್ ಮೇಲೇರಿದ ಕೆ.ಎಸ್.ಆರ್.ಟಿಸಿ ಬಸ್

0

ಬೆಳ್ತಂಗಡಿ: ಕೆ ಎಸ್ ಆರ್ ಟಿ ಸಿ ಬಸ್ಸೆಂದು ರಾಷ್ಟ್ರೀಯ ಹೆದ್ದಾರಿ ಬದಿಯ ಪುಟ್ಪಾತ್ ಮೇಲೆ ಹತ್ತಿದ್ದು, ಕಬ್ಬಿಣದ ತಡೆಗೋಡೆ ಪುಡಿ ಪುಡಿಯಾದ ಘಟನೆ ಹಳೇ ಪೇಟೆ ವಾಣಿ ಶಾಲೆ ಬಳಿಯ ಹೆದ್ದಾರಿಯಲ್ಲಿ ಮಧ್ಯಾಹ್ನ ನಡೆದಿದೆ. ಗುರುವಾಯನಕೆರೆಯಿಂದ ಕೆ ಎಸ್ ಆರ್ ಟಿ ಸಿ ಬಸ್ಸೆಂದು ಅತೀ ವೇಗವಾಗಿ ಬಂದು ಚಾಲಕನ ನಿಯಂತ್ರಣ ತಪ್ಪಿ ಪುಟ್ ಪಾತ್ ನ ಕಬ್ಬಿಣದ ತಡರಗೋಡೆ ಸೇರಿದಂತೆ ಬೀದಿ ದೀಪಗಳ ಕಂಬಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಬ್ಬಿಣದ ಗಾರ್ಡ್ ಗಳು ಪುಡಿ ಪುಡಿಯಾಗಿದೆ. ಒಂದು ವೇಳೆ...

ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆ ಬೆಳಾಲು: ವಿದ್ಯಾರ್ಥಿ ಸಂಸತ್ ಉದ್ಘಾಟನೆ

0

ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಗೌರವ ರಾಜ್ಯಪಾಲ, ಶಾಲಾ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಪ್ರಮಾಣ ವಚನ ಬೋಧಿಸಿದರು. ಬಳಿಕ ಅವರು ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ತಿಳಿದುಕೊಳ್ಳಲು ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿ ಸರ್ಕಾರ ಸಹಕಾರಿಯಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿ ನಾಯಕ ಕಾರ್ತಿಕ್ ಎಂ.ಎನ್ ವಾರ್ಷಿಕ ಯೋಜನೆ ಮಂಡಿಸಿದರು. ಶಿಕ್ಷಕ ಕಿರಣ್ ಕಾರ್ಯಕ್ರಮ ಸಂಘಟಿಸಿದರು. ಇತರ ಶಿಕ್ಷಕರು ಉಪಸ್ಥಿತರಿದ್ದರು.ಉಪನಾಯಕ ರಕ್ಷಿತ್ ಸ್ವಾಗತಿಸಿ, ವಿರೋಧ ಪಕ್ಷದ ನಾಯಕಿ ನೇತ್ರಾವತಿ ವಂದಿಸಿದರು‌. ಕಾರ್ಯದರ್ಶಿ ಮಹಮ್ಮದ್ ಹಯನ್ ಕಾರ್ಯಕ್ರಮ ನಿರೂಪಿಸಿದರು.

ಗ್ರಾಮಾಭಿವೃದ್ದಿ ಯೋಜನೆ ಮೊಗ್ರು ಒಕ್ಕೂಟದಿಂದ ನಿವೃತ್ತ ಸೈನಿಕನಿಗೆ ಸನ್ಮಾನ

0

ಬೆಳ್ತಂಗಡಿ :ದೇಶದ ಸೈನ್ಯದಲ್ಲಿ 22 ವರ್ಷಗಳ ಕಾಲ ಅನನ್ಯ ಸೇವೆಗೈದು ನಿವೃತ್ತರಾದ ಮೊಗ್ರು ಗ್ರಾಮದ ಮುಗೇರಡ್ಕ ಬರೆಮೇಲು ನಿವಾಸಿ ಯೋಧ ಎ ಸಿ ಪಿ ಹವಾಲ್ದಾರ್ ದೇವಪ್ರಸಾದ್ ಗೌಡರವರಿಗೆ ಶ್ರೀ. ಕ್ಷೇ. ಧ. ಗ್ರಾ. ಯೋಜನೆ ಬಿ. ಸಿ ಟ್ರಸ್ಟ್ (ರಿ ) ಕಣಿಯೂರು ವಲಯದ ಮೊಗ್ರು ಒಕ್ಕೂಟದ ವತಿಯಿಂದ ಉಂತನಾಜೆ ಶ್ರೀ ಲಕ್ಷ್ಮಿ ನಾರಾಯಣ ಭಜನಾ ಮಂದಿರದ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮೊಗ್ರು ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ಗಂಗಾಧರ ಪೂಜಾರಿ, ಉಪಾಧ್ಯಕ್ಷರಾದ ಕೃಷ್ಣ ಬೆಳ್ಚಡ, ಕಾರ್ಯದರ್ಶಿ ನವೀನ್,...

ಎಸ್.ಡಿ.ಪಿ.ಐ ಪಕ್ಷದ ಸಂಸ್ಥಾಪನಾ ದಿನಾಚರಣೆ ಪಕ್ಷದ ಶಿಸ್ತು, ತತ್ವ ಹಾಗೂ ಕಾರ್ಯವೈಖರಿಯೇ ಪಕ್ಷದ ಬೆಳವಣಿಗೆಗೆ ಕಾರಣ: ಅಲ್ಫೋನ್ಸ್ ಫ್ರಾಂಕೋ

0

ಬೆಳ್ತಂಗಡಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ 18ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕುವೆಟ್ಟು ಬ್ಲಾಕ್ ಸಮಿತಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ, ನೂತನ ಬ್ಲಾಕ್ ಕಚೇರಿ ಉದ್ಘಾಟನೆ, ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಭಾನುವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಟ್ಟು ಬ್ಲಾಕ್ ಅಧ್ಯಕ್ಷ ಹಂಝರಾಲಿ ವಹಿಸಿದ್ದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, “ದಮನಕಾರಿ ಆಡಳಿತ ಹಾಗೂ ಬೆದರಿಕೆಗಳಿಗೆ...