ರಿಕ್ಷಾ-ಪಿಕಪ್ ಡಿಕ್ಕಿ ಇಬ್ಬರಿಗೆ ಗಂಭೀರ ಗಾಯ
ಬೆಳ್ತಂಗಡಿ; ಮುಂಡಾಜೆ- ಕಲ್ಮಂಜ-ಧರ್ಮಸ್ಥಳ ರಸ್ತೆಯ ಮುಂಡಾಜೆಯ ಕೆದಿಹಿತ್ಲು ಎಂಬಲ್ಲಿರುವ ಕಿರು ಸೇತುವೆ ಬಳಿ ಗುರುವಾರ ಸಂಜೆ ರಿಕ್ಷಾ ಮತ್ತು ಪಿಕಪ್ ಮಧ್ಯೆ ಡಿಕ್ಕಿ ಸಂಭವಿಸಿದ್ದು ಇಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.ರಿಕ್ಷಾ ಚಾಲಕ ಮುಂಡಾಜೆ ಗ್ರಾಮದ ಮೂಲಾರು ನಿವಾಸಿ ಕುಶಾಲಪ್ಪ ದೇವಾಂಗ( 42) ಅವರ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಪಿಕಪ್ ನಲ್ಲಿದ್ದ ಕೊಕ್ಕಡದ ಡೀಕಯ್ಯ (43) ಎಂಬವರಿಗೆ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಬೆಳ್ತಂಗಡಿ ಸಂಚಾರಿ ಪೊಲೀಸರು ಪರಿಶೀಲನೆ...
ಶಿಬಾಜೆ; ಜಾತಿನಿಂದನೆ ಮಾಡಿ ಕೊಲೆಬೆದರಿಕೆ, ಆರೋಪಿಗಳಿಬ್ಬರ ಬಂಧನ
ಬೆಳ್ತಂಗಡಿ; ಶಿಬಾಜೆಯಲ್ಲಿ ಯುವಕನಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ ಪ್ರಕರಣದ ಆರೋಪಿಗಳಿಬ್ಬರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಗಳು ಶಿಬಾಜೆ ನಿವಾಸಿಗಳಾಗಿರುವ ಆನಂದ ಗೌಡ ಹಾಗೂ ತಿಮ್ಮಪ್ಪ ಪೂಜಾರಿ ಎಂಬವರಾಗಿದ್ದಾರೆ.ಮೇ 15ರಂದು ಶಿಬಾಜೆಯ ಕುರುಂಜ ಮನೆಯ ಎದುರು ನಿಂತಿದ್ದ ವೆಲೆ ಸ್ಥಳೀಯ ನಿವಾಸಿ ಪ್ರವೀಣ್ ಎಂಬಾತನ ಮೇಲೆ ಆನಂದ ಗೌಡ ಹಾಗೂ ತಿಮ್ಮಪ್ಪ ಪೂಜರಿ ಹಲ್ಲೆಗೆ ಯತ್ನಿಸಿದ್ದಾರೆ. ಆನಂದ ಗೌಡ ಕೈಯಲ್ಲಿ ಕೊಡಲಿಯನ್ನು ಹಿಡಿದುಕೊಂಡು ಹಾಗೂ ತಿಮ್ಮಪ್ಪ ಪೂಜಾರಿ ಕಬ್ಬಿಣದ ಸಲಾಕೆಯನ್ನು ಹಿಡಿದು ಕೊಂಡು ಅವಾಚ್ಯವಾಗಿ ನಿಂದಿಸಿ ಜಾತಿ...
ಬೆಳ್ತಂಗಡಿ; ಶಾಸಕ ಹರೀಶ್ ಪೂಂಜ ವಿರುದ್ದದ ಎಫ್.ಐ.ಆರ್ ಹೈಕೋರ್ಟ್ ನಿಂದ ತಾತ್ಕಾಲಿಕ ತಡೆ
ಬೆಂಗಳೂರು; ಕೋಮು ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮೇಲಿನ ಆದೇಶ ನೀಡಿದೆ. ವಿಚಾರಣೆ ವೇಳೆ ಹರೀಶ್ ಪೂಂಜಾ ಪರ ವಕೀಲರು ವಾದ ಮಂಡಿಸಿ, ಇಡೀ ದೂರನ್ನು ಓದಿದರೆ ದಾಖಲಿಸಿರುವ ಸೆಕ್ಷನ್‌ಗಳು ಅನ್ವಯಿಸುವುದಿಲ್ಲ. ಧರ್ಮಗಳ ನಡುವೆ ದ್ವೇಷ ಹರಡುವಂಥ ಕೆಲಸವನ್ನು ಪೂಂಜಾ ಅವರು ಮಾಡಿಲ್ಲ....
ಬೆಳ್ತಂಗಡಿ : ಚಾರ್ಮಾಡಿಯಲ್ಲಿ ಕಾಡಾನೆ ಜೊತೆ ಸೆಲ್ಫಿ ತೆಗೆಯುವ ಸಾಹಸ ಸೂಕ್ತ ಕಾನೂನು ಕ್ರಮಕ್ಕೆ ಈಶ್ವರ್ ಖಂಡ್ರೆ ಸೂಚನೆ
ಬೆಳ್ತಂಗಡಿ : ರಸ್ತೆಗೆ ಬಂದ ಕಾಡಾನೆ ಜೊತೆ ಸೆಲ್ಫಿ ಫೋಟೋ ತೆಗೆಯುವ ಸಾಹಸಕ್ಕೆ ಕೈ ಹಾಕಿದ ವಾಹನ ಸವಾರರಿಗೆ ಅರಣ್ಯ ಸಚಿವರು ಬಿಸಿ ಮುಟ್ಟಿಸುವ ಕೆಲಸ ಮಾಡಲು ಮುಂದಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ 4 ನೇ ತಿರುವಿನಲ್ಲಿ ಮೇ.22 ರಂದು ಬೆಳಗ್ಗೆ ರಸ್ತೆಗೆ ಬಂದಿದ್ದ ಕಾಡನೆ ಜೊತೆ ವಾಹನ ಸವಾರರು ಇಳಿಸು ಸೆಲ್ಫಿ ಫೋಟೋ ತೆಗೆಯುತ್ತಿದ್ದ ಬಗ್ಗೆ ವಿಡಿಯೋ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ವಾಹನ ನಂಬರ್ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿ...
ಧರ್ಮಸ್ಥಳ ಆಕಾಂಕ್ಷ ನಿಗೂಢ ಸಾವು ಪ್ರಕರಣ; ಸರಕಾರ ಕುಟುಂಬದೊಂದಿಗೆ ನಿಂತು ನ್ಯಾಯ ದೊರಕಿಸಿಕೊಡಬೇಕು :ಅಕ್ಬರ್ ಬೆಳ್ತಂಗಡಿ
ಬೆಳ್ತಂಗಡಿ (ಮೇ-21): ಧರ್ಮಸ್ಥಳದ ಬೊಳಿಯಾರ್ ನಿವಾಸಿ, ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ ಪಂಜಾಬ್ ನ ಜಲಂದರ್ ನಲ್ಲಿರುವ ಕಾಲೇಜಿನಲ್ಲಿ ಮೇ 18ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ರಾಜ್ಯ ಸರಕಾರ ಕುಟುಂಬದೊಂದಿಗೆ ನಿಂತು ನ್ಯಾಯ ದೊರಕಿಸಿಕೊಡಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅಗ್ರಹಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಧರ್ಮಸ್ಥಳದ ಗ್ರಾಮದ ಬೊಳಿಯಾರ್ ನಿವಾಸಿ, ಪ್ರಸ್ತುತ ಬೆಳ್ತಂಗಡಿಯ ಲಾಯಿಲ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿಗಳ ಪುತ್ರಿ...
ಸಿದ್ದರಾಮಯ್ಯ ಸರಕಾರಕ್ಕೆ ಎರಡು ವರ್ಷ; ಬೆಳ್ತಂಗಡಿಯಲ್ಲಿ ಸಂಭ್ರಮಾಚರಣೆ
ಬೆಳ್ತಂಗಡಿ; ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎರಡು ವರ್ಷ ಸಂದ ಸಂದರ್ಭದಲ್ಲಿ ಶಕ್ತಿ ಯೋಜನೆಯ ಯಶಸ್ವಿಗಾಗಿ ಇಂದು ಬೆಳ್ತಂಗಡಿಯಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಸಂಭ್ರಮಾಚರಣೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ರಾಜ್ಯ ಸರ್ಕಾರ ಐದು ಗ್ಯಾರಂಟಿಗಳ ಮೂಲಕ ನುಡಿದಂತೆ ನಡೆದು ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದೆ. ತಾಲ್ಲೂಕಿನಲ್ಲಿ 1.25 ಕೋಟಿ ಮಹಿಳೆಯರು ಶಕ್ತಿ ಯೋಜನೆಯನ್ನು ಉಪಯೋಗಿಸಿದ್ದು , ರಾಜ್ಯ ಸರ್ಕಾರ 65 ಕೋಟಿ ರೂಪಾಯಿಗಳನ್ನು ನಮ್ಮ ತಾಲೂಕಿಗೆ ನೀಡಿದೆ....
ಬೆಳ್ತಂಗಡಿ : ಪಂಜಾಬ್ ನಲ್ಲಿ ಆಕಾಂಕ್ಷ ಆತ್ಮಹತ್ಯೆ ಪ್ರಕರಣ ಆಕಾಂಕ್ಷ ಮೃತದೇಹ ಮನೆಗೆ ಆಗಮನ
ಬೆಳ್ತಂಗಡಿ : ಪಂಜಾಬ್ ನಲ್ಲಿ ಧರ್ಮಸ್ಥಳ ಬೊಳಿಯಾರ್ ನಿವಾಸಿ ಸುರೇಂದ್ರ ನಾಯರ್ ಮತ್ತು ಸಿಂಧೂದೇವಿ ದಂಪತಿಗಳ ಎರಡನೇ ಪುತ್ರಿ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗದಲ್ಲಿದ್ದ ಆಕಾಂಕ್ಷ ಎಸ್ ನಾಯರ್(22) ಪಂಜಾಬ್ ನಲ್ಲಿ ಕಾಲೇಜ್ ಕಟ್ಟಡದಿಂದ ಮೇ.17 ರಂದು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಸಂಬಂಧ ಆಕಾಂಕ್ಷ ಮೃತದೇಹ ಮೇ.21 ರಂದು ಬೆಂಗಳೂರು ವಿಮಾನ ನಿಲ್ದಾಣದಿಂದ ಬೆಳಗ್ಗೆ 9ಗಂಟೆ ಸೂಮಾರಿಗೆ ಆಂಬುಲೆನ್ಸ್ ಮೂಲಕ ಧರ್ಮಸ್ಥಳದ ಬೊಳಿಯರ್ ಗೆ ತೆಗೆದುಕೊಂಡು ಬಂದಿದ್ದಾರೆ.
ಮೇ25 ತಾಲೂಕು ಒಕ್ಕಲಿಗೆ ಗೌಡರ ಸೇವಾ ಟ್ರಸ್ಟ್ ಪದಗ್ರಹಣ ಹಾಗೂ ಆಂಬುಲೆನ್ಸ್ ಲೋಕಾರ್ಪಣೆ
ಬೆಳ್ತಂಗಡಿ: ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಇದರ ಪದಗ್ರಹಣ ಸಮಾರಂಭ, ಹಾಗೂ ಆಂಬುಲೆನ್ಸ್ ಲೋಕಾರ್ಪಣೆ, ಅಶಕ್ತರಿಗೆ ನೆರವು ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮೇ 25 ನೇ ಆದಿತ್ಯವಾರ ಬೆಳ್ತಂಗಡಿಯ ಸಂತೆಕಟ್ಟೆ ಬಳಿಯ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ನಡೆಯಲಿದೆ . ಎಂದು ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ, ಕಲ್ಮಂಜ ತಿಳಿಸಿದರು. ಅವರು ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಸಾಮಾಜಿಕ ಚಿಂತನೆಗಳ ಮೂಲಕ ಸಮಾಜಮುಖಿ ಸೇವಾ ಯೋಜನೆಗಳನ್ನು ಮಾಡುವ ಉದ್ದೇಶದಿಂದ ಒಕ್ಕಲಿಗ ಸೇವಾಟ್ರಸ್ಟ್ ಕಾರ್ಯನಿರ್ವಹಿಸಲಿದೆ ಮೇ...
ಶಿಬಾಜೆ; ಕೊಳೆತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ
ಬೆಳ್ತಂಗಡಿ: ಶಿಬಾಜೆ ಗ್ರಾಮದ ಬರ್ಗುಳದಲ್ಲಿ ಮೇ.20ರಂದು ಶೀನ ಎಂಬವರ ಮನೆ ಸಮೀಪ ನೀರು ಹರಿಯುವ ತೋಡಿನಲ್ಲಿ ಸಂಪೂರ್ಣವಾದ ಕೊಳೆತ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ.ದೇಹದ ಭಾಗಗಳು ಸಂಪೂರ್ಣ ಕೊಳೆತು ಹೋದಂತಿದ್ದು ಯಾವುದೇ ಗುರುತು ಪತ್ತೆಯಾಗಿರಲಿಲ್ಲ.ಧರ್ಮಸ್ಥಳ ಠಾಣೆಯ ಎಸ್.ಐ ಸಮರ್ಥ್ ಆರ್ ಗಾಣಿಗೇರ ಅವರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಸ್ಥಳದಲ್ಲಿ ಸಿಕ್ಕಿದ ಶರ್ಟ್ ಒಂದರ ಆಧಾರದಲ್ಲಿ ಪರಿಶೀಲನೆ ನಡೆಸಿದಾಗ ಶಿಬಾಜೆ ನಿವಾಸಿಯಾಗಿರುವಪ್ರಸಾದ್ (37) ಎಂಬವರು ಎಂದು ಗುರುತಿಸಿದ್ದಾರೆ. ಮೃತನ ತಂದೆ ವೆಂಕಪ್ಪ ಪೂಜಾರಿ ಅವರು ಮೃತನ ಗುರುತನ್ನು ಪತ್ತೆ ಹಚ್ವಿದ್ದಾರೆ ಈತವಿಪರೀತ...
ಎಫ್.ಐ.ಆರ್.ರದ್ದು ಕೋರಿ ಶಾಸಕರ ಅರ್ಜಿ ವಿಚಾರಣೆ; ಹರೀಶ್ ಪೂಂಜಾ ಶಾಸಕ ಸ್ಥಾನಕ್ಕೆ ಅನರ್ಹವಾದ ವ್ಯಕ್ತಿ’ ನ್ಯಾಯಾಲಯದಲ್ಲಿ ಹಿರಿಯ ವಕೀಲ ಎಸ್ ಬಾಲನ್ ವಾದ ಮಂಡನೆ
' ಬೆಂಗಳೂರು : ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ದಾಖಲಾದ ಎಫ್‌ಐಆರ್ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ಇಂದು ವಿಚಾರಣೆಗೆ ಬಂದಿದ್ದು, ದೂರುದಾರ ಎಸ್ ಬಿ ಇಬ್ರಾಹಿಂ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಸ್ ಬಾಲನ್ ಅವರು 'ಹರೀಶ್ ಪೂಂಜಾ ಶಾಸಕ ಸ್ಥಾನಕ್ಕೆ ಅನರ್ಹವಾದ ವ್ಯಕ್ತಿ. ಸಾಂವಿಧಾನಿಕ ಕರ್ತವ್ಯಗಳ ಅರಿವಿಲ್ಲದ ವ್ಯಕ್ತಿ ಶಾಸಕನಾಗಿ ಇರಕೂಡದು' ಎಂದರು. "ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿರುವ ಸಂದರ್ಭದಲ್ಲಿ ಕೋಮುಗಲಭೆ ಹುಟ್ಟುಹಾಕಬೇಕು ಎಂಬ ಕಾರಣಕ್ಕಾಗಿಯೇ ಶಾಸಕ ಹರೀಶ್ ಪೂಂಜಾ ತೆಕ್ಕಾರಿನಲ್ಲಿ ಕೋಮುದ್ವೇಷದ ಭಾಷಣ ಮಾಡಿದ್ದಾರೆ. ಶಾಸಕಾಂಗಕ್ಕೆ...














