

ಬೆಳ್ತಂಗಡಿ; ಅಶ್ಲೀಲ ಶಬ್ದಗಳನ್ನು ಉಪಯೋಗಿಸಿದ್ದಲ್ಲದೆ “ಕಾನೂನನ್ನು ಕೈಗೆತ್ತಿ ಕೊಳ್ಳುವುದೇ ಉಳಿದರುವ ದಾರಿ” ಎಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದಿದ್ದ ವಿಜಯ ವಿಜಿ ಎಂಬ ಫೇಸ್ ಬುಕ್ ಖಾತೆಯ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಧರ್ಮಸ್ಥಳ ನಿವಾಸಿ ರಮೇಶ್ ದೊಂಡೋಲೆ ಎಂಬವರು ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು ವಿಜಯ ವಿಜಿ ಎಂಬ ಖಾತೆಯಲ್ಲಿ ಅಶ್ಲೀಲ ಪದಗಳನ್ನು ಉಪಯೋಗಿಸಿರುವುದಲ್ಲದೆ “ಇನ್ನು ಉಳಿದಿರೋ ದಾರಿ ಒಂದೇ ಕಾನೂನು ನಮ್ಮ ಕೈಗೆ ತೆಗೊಳೋದು ಜೈ ಅಣ್ಣಪ್ಪ ಜೈ ಮಂಜುನಾಥ” ಎಂದು ಬರೆದಿದ್ದಾರೆ. ಈ ಫೇಸ್ ಬುಕ್ ಬಳಕೆದಾರನ ವಿರುದ್ದ ಕಾನೂನು ಕ್ರಮ ಕೂಗೊಳ್ಳುವಂತೆ ದೂರು ನೀಡಿದ್ದು ಅದರಂತೆ ಧರ್ಮಸ್ಥಳ ಠಾಣೆಯಲ್ಲಿ 296 BNSಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
