ಶಿರ್ಲಾಲು ಗ್ರಾಮಸಭೆಯಲ್ಲಿ ಹೊಡೆದಾಟ ಎರಡೂ ಗು‌ಂಪಿನ ವಿರುದ್ದ ಪ್ರಕರಣ ದಾಖಲು

0

ಬೆಳ್ತಂಗಡಿ: ಶಿರ್ಲಾಲು ಗ್ರಾಮಸಭೆಯಲ್ಲಿ ನಡೆದ ಹೊಡೆದಾಟಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ವಿರುದ್ದ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಆನಂದ ಪೂಜಾರಿ ಎಂಬವರು ನೀಡಿರು ದೂರಿನಲ್ಲಿ ಗ್ರಾಮಸಭೆಯಲ್ಲಿ ಕುಶಾಲಪ್ಪ ಗೌಡ ಮತ್ತು ನವೀನ್ ನಡುವೆ ದೇವಸ್ಥಾನದ ಹಣದ ವಿಚಾರವಾಗಿ ಮಾತಿಗೆ ಮಾತು ಬೆಳೆದಿದೆ ಈ ಸಂದರ್ಭದಲ್ಲಿ ಆನಂದ ಪೂಜಾರಿ ಇದನ್ನು ಆಕ್ಷೇಪಿಸಿದಾಗ ಅವರ ಮೇಲೆ ನವೀನ್ ಸಾಲ್ಯಾನ್, ರಾಮ್ ಕುಮಾರ್, ರವೀಂದ್ರ, ದಿನೇಶ್ ಹಾಗೂ ಪುರುಷೋತ್ತಮ ಅವರು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿರುವುದಲ್ಲದೆ ಗಲಾಟೆ ತಡೆಯಲು ಬಂದ ಮಹಿಳೆಯೊಬ್ಬರಿಗೆ ಪುರುಷೋತ್ತಮ ಕೈಯಿಂದ ಹಲ್ಲೆ ನಡೆಸಿದ್ದಾನೆ ಎಂದು...

ಶ್ರೀರಾಮ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ವರ್ಧಂತ್ಯುತ್ಸವ

0

ಕನ್ಯಾಡಿ: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 16ನೇ ವರ್ಷದ ಪಟ್ಟಾಭಿಷೇಕದ ವರ್ಧಂತ್ಯುತ್ಸವ ಸಮಾರಂಭ ಶ್ರೀ ರಾಮ ಕ್ಷೇತ್ರ ಕನ್ಯಾಡಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಯೋಧ್ಯೆ ಕೇಶವದಾಸ ಮಹರಾಜ್‌, ಉಪಸ್ಥಿತರಿದ್ದರು, ಸಚಿವರಾದ ಮಾಂಕಾಳ ವೈದ್ಯ ಉಪಸ್ಥಿತರಿದ್ದು ಶುಭ ಹಾರೈಸಿದರು. ವಿಧಾನ ಪರಿಷತ್‌ ಶಾಸಕರಾದ ಪ್ರತಾಪಸಿಂಹ ನಾಯಕ್, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿರ್ದೇಶಕ ಕುಶಾಲಪ್ಪ ಗೌಡ, ಕಿಯೋನಿಕ್ಸ್‌ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಭಟ್ಕಳ ಕರಿಕಲ್ ಚಾತುರ್ಮಾಸ್ಯ ಸಮಿತಿ ಅದ್ಯಕ್ಷ ಕೃಷ್ಣ ನಾಯ್ಕ ಬೆಳ್ತಂಗಡಿ...

ಕೊಕ್ಕಡ; ಅಂಗಡಿಯ ಜಗಲಿಯಲ್ಲಿ ಸುಸ್ತಾಗಿ ಕುಳಿತ ದಲಿತ ವ್ಯಕ್ತಿಗೆ ಜಾತಿ ನಿಂದನೆ ಮಾಡಿ ಹಲ್ಲೆ

0

ಬೆಳ್ತಂಗಡಿ; ಕೊಕ್ಕಡದಲ್ಲಿ ಅಂಗಡಿಯ ಜಗಲಿಯಲ್ಲಿ ಮಳೆ ಬಂದ ಕಾರಣಕ್ಕೆ‌ ಕುಳಿತ‌ ದಲಿತ ವೃದ್ದನ ಮೇಲೆ ಅಂಗಡಿ ಮಾಲಿಕ ಜಾತಿ ನಿಂದನೆ ಮಾಡಿ ಮರದ ರೀಪಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.ಹಲ್ಲೆಗೆ ಒಳಗಾದ ವ್ಯಕ್ತಿ ಕೊಕ್ಕಡ ಗ್ರಾಮದ ಮಂಚ ಮೊಗೇರ (67) ಎಂಬವರಾಗಿದ್ದಾರೆ.ಕೊಕ್ಕಡ ನಿವಾಸಿಯಾಗಿರುವ ರಾಮಣ್ಣ ಗೌಡ ಎಂಬವರೇ ಹಲ್ಲೆ ನಡೆಸಿದ ಆರೋಪಿಯಾಗಿದ್ದಾರೆ. ಕೊಕ್ಕಡ ಪೇಟೆಗೆ ಹೋಗಿದ್ದ ಮಂಚ ಮೊಗೇರ ಅವರು ಅಲ್ಲಿಂದ ಮನೆಗೆ ಹಿಂತಿರುಗುವ ವೇಳೆ ಮಳೆ‌ ಬಂದಿದೆ ಸುಸ್ತು ಆಗಿದ್ದು ಕೊಕ್ಕಡ ಹಳ್ಳಿಂಗೇರಿಯಲ್ಲಿ ಅಂಗಡಿಯೊಂದರ...

ತಾಲೂಕು ಮಟ್ಟದ ಬಾಲಕಿಯರ ವಾಲಿಬಾಲ್ ಬಂದಾರು ಶಾಲೆಗೆ ಪ್ರಥಮ ಸ್ಥಾನ

0

ಬಂದಾರು :ಶ್ರೀರಾಮ ವಿದ್ಯಾಲಯ ಪಟ್ಟೂರು ಇಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಸ. ಹಿ ಪ್ರಾ. ಬಂದಾರು ಶಾಲೆ ಯು 16 ನೇ ಬಾರಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.ಉತ್ತಮ‌ ಹೊಡೆತಗಾರ್ತಿಯಾಗಿ ಬಂದಾರು ಶಾಲೆಯ ಕು.ಜಶ್ವಿತಾ ಅಯ್ಕೆಯಾಗಿರುತ್ತಾರೆ. ವಿಜೇತ ಕ್ರೀಡಾಪಟುಗಳಿಗೆ ಮತ್ತು ದೈಹಿಕ ಶಿಕ್ಷಕರಿಗೆ, ಶಾಲಾಭಿವೃದ್ಧಿ ಸಮಿತಿ,ಮುಖ್ಯೋಪಾದ್ಯಾಯರು, ಶಿಕ್ಷಕ ವೃಂದ, ಪೋಷಕ ವೃಂದ ಅಭಿನಂದನೆ ಸಲ್ಲಿಸಿದರು.

ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಬೆಳ್ತಂಗಡಿಅಧ್ಯಕ್ಷರಾಗಿ ರೋನಾಲ್ಡ್ ಲೋಬೊ, ಪ್ರಧಾನ ಕಾರ್ಯದರ್ಶಿಯಾಗಿ ಲ್ಯಾನ್ಸಿ ಎ ಪಿರೇರಾ

0

ಬೆಳ್ತಂಗಡಿ: ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‌ ಬೆಳ್ತಂಗಡಿ ಇದರ ವಾರ್ಷಿಕ ಬಹಾಸಭೆ ಸೆ 1ರಂದು ಬೆಳ್ತಂಗಡಿ ಸಿ ವಿ ಸಿ ನಿ ಹಾಲ್ ನಲ್ಲಿ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ರುವರ ಅಧ್ಯಕ್ಷತೆಯಲ್ಲಿ ಜರಗಿತು.ಸಭೆಯಲ್ಲಿ ಮುಂದಿನ 2 ವರ್ಷದ ಅವಧಿಗೆ ನೂತನ ಪಧಾದಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ರೋನಾಲ್ಡ್ ಲೋಬೊ, ಪ್ರಧಾನ ಕಾರ್ಯದರ್ಶಿಯಾಗಿ ಲ್ಯಾನ್ಸಿ ಎ ಪಿರೇರಾ, ಕೋಶಾಧಿಕಾರಿಯಾಗಿ ಸುನೀಲ್‌ ಶೆಣೈ ಉಪಾಧ್ಯಕ್ಷರಾಗಿ ಶಶಿಧರ ಪೈ ಆಯ್ಕೆಯಾದರು. ಹಾಗೂ 30 ಮಂದಿ ಸದಸ್ಯರನ್ನು ಆಡಳಿತ ಮಂಡಳಿಗೆ ಸದಸ್ಯರಾಗಿ ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಸಂಘದ...

ಉಜಿರೆ; ಜಾರಿ ಬಿದ್ದು ಗಾಯಗೊಂಡಿದ್ದ ಶಿಕ್ಷಕಿ ಚಿಕಿತ್ಸೆಗೆ ಸ್ಪಂದಿಸದೆ ಮೃತ್ಯು

0

ಬೆಳ್ತಂಗಡಿ: ಮನೆಯಲ್ಲಿ ಜಾರಿಬಿದ್ದು ಗಂಭೀರ ಗಾಯಗೊಂಡಿದ್ದ ಶಿಕ್ಷಕಿ, ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.ಉಜಿರೆ ರಥಬೀದಿ ಸಮೀಪದ ನಿವಾಸಿ ಸುಪ್ರಭಾ ಪಿ.(40) ಮೃತ ಶಿಕ್ಷಕಿ. ಚಾರ್ಮಾಡಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಶನಿವಾರ ತಮ್ಮ ಮನೆಯಲ್ಲಿ ಜಾರಿಬಿದ್ದು ಗಂಭೀರ ಗಾಯಗೊಂಡಿದ್ದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟರು.ಅವರಿಗೆ ಪತಿ ಹಾಗೂ ಇಬ್ಬರು ಪುತ್ರರಿದ್ದಾರೆ.

ಪಿಲ್ಯ- ಕುದ್ಯಾಡಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ

0

ಬೆಳ್ತಂಗಡಿ: ಗ್ರಾಮೀಣ ಪ್ರದೇಶಗಳ ಜನರ ಜೀವನದ ನೆರಳಾಗಿರುವ ಧರ್ಮಸ್ಥಳ ಯೋಜನೆಯ ಬಗ್ಗೆ ಸದಾಕಾಲ ಕೃತಜ್ಞತಾ ಭಾವನೆಯನ್ನು ಹೊಂದಿರಬೇಕು ಎಂದು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರರ ಶಿವಪ್ರಸಾದ ಅಜಿಲ ಹೇಳಿದರು.ಅವರು ಪಿಲ್ಯ ಸರಕಾರಿ ಉ.ಪ್ರಾ. ಶಾಲೆಯಲ್ಲಿ ಆದಿತ್ಯವಾರ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಿಲ್ಯ- ಕುದ್ಯಾಡಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿದರು.ಯೋಜನೆಯಿಂದಾಗಿ ಇಂದು ಸಾವಿರಾರು ಕುಟುಂಬಗಳು ಸ್ವಾವಲಂಬಿ ಜೀವನ ನಡೆಸುವಂತಾಗಿದೆ. ತಮ್ಮಲ್ಲಿ ಖಾಲಿ ಜಾಗ ಇದ್ದಲ್ಲಿ ಕೃಷಿಯನ್ನು ವಿಸ್ತರಿಸುವ, ಅದರಲ್ಲೂ ಪರಿಪೂರ್ಣಕೃಷಿಯತ್ತ ಎಲ್ಲರೂ ಗಮನಹರಿಸುವ ಅಗತ್ಯತೆಯನ್ನು...

ಮಂಗಳೂರು;ಆಟವಾಡುತ್ತಿದ್ದ ಹೆಣ್ಣು ಮಗುವಿನ ಅಪಹರಣ; ಎರಡೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

0

ಮಂಗಳೂರು: ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ ಘಟನೆ ನಗರದ ಪಡೀಲ್‌ ಬಳಿ ಸಂಭವಿಸಿದ್ದು ಕಂಕನಾಡಿ ನಗರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ದೂರು ಬಂದ ಎರಡು ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಕೇರಳ ಎರ್ನಾಕುಲಂ ಜಿಲ್ಲೆಯ ತಾತಾಪಿಲ್ಲಿ ನಿವಾಸಿ ಅನೀಶ್‌ ಕುಮಾರ್‌(59) ಬಂಧಿತ ಆರೋಪಿ. ಪಡೀಲ್‌ನ ಅರಣ್ಯ ಇಲಾಖೆಯ ಸಸ್ಯಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದು ಅಲ್ಲಿಯೇ ಕಾರ್ಮಿಕರ ಶೆಡ್‌ನ‌ಲ್ಲಿ ವಾಸವಾಗಿದ್ದ ಹಾವೇರಿ ಜಿಲ್ಲೆ ಶಿಗ್ಗಾಂವಿ ಮೂಲದ ಮಹಿಳೆಯ ಎರಡೂವರೆ ವರ್ಷದ ಹೆಣ್ಣು ಮಗು ಮತ್ತು ಮತ್ತೊಬ್ಬ ಕಾರ್ಮಿಕರ ಹೆಣ್ಣುಮಗು ಅಲ್ಲಿಯೇ ಪಕ್ಕದಲ್ಲಿ ಆಟವಾಡುತ್ತಿದ್ದವು. ಸಂಜೆ...

ಉಜಿರೆಯಲ್ಲಿ ಬೃಹತ್ ವಿಶ್ವಹಿಂದೂ ಪರಿಷದ್ ಸಮಾವೇಶ

0

ಉಜಿರೆ: ತ್ಯಾಗ, ಬಲಿದಾನ, ಪ್ರತಿಭಟನೆ ಮೂಲಕ ವಿಶ್ವ ಹಿಂದೂ ಪರಿಷದ್ ವಿಶ್ವದ ಹಿಂದೂಗಳ ಧ್ವನಿ ಹಾಗೂ ಪ್ರತಿನಿಧಿಯಾಗಿದೆ ಎಂದು ಉಜಿರೆಯ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಹೇಳಿದರು.ಅವರು ಭಾನುವಾರ ಉಜಿರೆಯಲ್ಲಿ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಥಬೀದಿಯಲ್ಲಿ ನಡೆದ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದರು.ಹಿರಿಯ ಕಾರ್ಯಕರ್ತರ ಶ್ರಮದ ಫಲದಿಂದ ಸಂಘಟನೆ ಶಕ್ತಿಯುತವಾಗಿ ಬೆಳೆದಿದೆ. ದೇಶದಲ್ಲಿ ಹಿಂದೂಗಳಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟಬೇಕು. ಧರ್ಮ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎಂದು ಅವರು ಹೇಳಿದರು. ದಿಕ್ಸೂಚಿ ಭಾಷಣ ಮಾಡಿದ ಮಂಗಳೂರು ವಿಭಾಗದ...

ಪದ್ಮುಂಜ : ಸಹಕಾರ ಸಂಘದ ಮಹಾಸಭೆ ಸಾಧಕರಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ವಿದ್ಯಾನಿಧಿ ವಿತರಣೆ

0

ಪದ್ಮುಂಜ : ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ನಿಯಮಿತ ಇದರ ವಾರ್ಷಿಕ ಮಹಾಸಭೆ,ಸಾಧಕರಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ಎಸ್, ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ ಸೆ 1ರoದು ಸಂಘದ ಸಭಾಭವನ ದಲ್ಲಿ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಇವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘವು 2023-24 ನೇ ಸಾಲಿನಲ್ಲಿ ರೂ.360.99 ಕೋಟಿ ವ್ಯವಹಾರ, ರೂ.1.81 ಕೋಟಿ ನಿವ್ವಳ ಲಾಭ, ಶೇ.13 ಡಿವಿಡೆಂಡ್ ಘೋಷಿಸಲಾಯಿತು. ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ ಸ್ವಾಗತಿಸಿ, ಸಂಘದ ಮುಖ್ಯಕಾರ್ಯನಿರ್ವಣಾಧಿಕಾರಿ ಅಂಕಿತಾ ವಾರ್ಷಿಕ ವರದಿ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷರಾದ ಅಶೋಕ...