ಬೆಳ್ತಂಗಡಿ : ಮಾದಕವಸ್ತು ಮಾರಾಟ ಮತ್ತು ಸೇವನೆ ವಿರುದ್ಧ ಬೆಳ್ತಂಗಡಿ ಪೊಲೀಸರ ಕಾರ್ಯಾಚರಣೆ ಚುರುಕುಗೊಳಿಸಿದ್ದು. ಮತ್ತೊಂದು ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಿ ಜೈಲಿಗಟ್ಟಿ ಮಾದಕವಸ್ತುವನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಆನಂದ.ಎಮ್ ಸೆ.5 ರಂದು ಸಮಯ ಸಂಜೆ ಸುಮಾರು 3:30 ಗಂಟೆಗೆ ಠಾಣೆಯಿಂದ ಇಲಾಖಾ ಜೀಪಿನಲ್ಲಿ ಸಿಬ್ಬಂದಿಗಳ ಜೊತೆಯಲ್ಲಿ ಸಮಯ ಸುಮಾರು 3:45 ಗಂಟೆಗೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕರೆಯ ಸರಕಾರಿ ಪ್ರೌಢ ಶಾಲೆ ಮೈದಾನದ ಬಳಿ ಬಂದು ವಾಹನವನ್ನು ನಿಲ್ಲಿಸಿ ಮೈದಾನದ ಕೆಳಭಾಗದ ಗುಡ್ಡ-ಕಾಡು ಪ್ರದೇಶಕ್ಕೆ ಹೋದಾಗ ಸುಮಾರು 10 ಮೀಟರ್ ದೂರದಲ್ಲಿ ಎರಡು ದ್ವಿಚಕ್ರ ವಾಹನದ ಬಳಿ ನಾಲ್ಕು ಜನ ಮಾತನಾಡುತ್ತಾ ನಿಂತಿದ್ದು ಸಮವಸ್ತ್ರದಲ್ಲಿ ಇರುವುದನ್ನು ಕಂಡು ಓಡಲು ಪ್ರಾರಂಭಿಸಿದ್ದು, ಸಿಬ್ಬಂದಿಗಳು ಅವರನ್ನು ಬೆನ್ನಟ್ಟಿ ಇಬ್ಬರನ್ನು ಹಿಡಿದುಕೊಂಡು ದ್ವಿಚಕ್ರ ವಾಹನದ ಬಳಿ ಕರೆದುಕೊಂಡು ಬಂದಾಗ ಆ ಇಬ್ಬರ ಪೈಕಿ ಈ ಹಿಂದೆ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾದ NDPS ಪ್ರಕರಣದಲ್ಲಿ ಆರೋಪಿಯಾದ ಕುವೆಟ್ಟು ಗ್ರಾಮದ ಸುನ್ನತ್ ಕೆರೆ ನಿವಾಸಿ ತ್ವಲ್ ಹ @ ಅಜ್ಜರ್ @ ಅನ್ಸರ್(21) ಆಗಿದ್ದು ಆತನ ಕೈಯಲ್ಲಿ ಪ್ಲಾಸ್ಟೀಕ್ ಕವರಿನಲ್ಲಿ 5 ಸಾವಿರ ಮೌಲ್ಯದ 1 ಗ್ರಾಂ ಎಮ್.ಡಿ.ಎಮ್.ಎ ಪತ್ತೆಯಾಗಿದೆ. ಹಾಗೂ ಇನ್ನೊಬ್ಬನನ್ನು ವಿಚಾರಿಸಲಾಗಿ ಆತನ ಹೆಸರು ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ನಿವಾಸಿ ಇಬ್ರಾಹಿಂ (29) ಎಂದು ತಿಳಿಸಿದ್ದು ಆತನ ಬಳಿ 3 ಸಾವಿರ ಮೌಲ್ಯದ 29 ಗ್ರಾಂ ಗಾಂಜಾ ಪತ್ತೆಯಾಗಿದೆ. ಹಾಗೂ ಓಡಿ ಹೋದ ಇಬ್ಬರು ಆರೋಪಿ ಹಂಝತ್ ಕರಾರ್ ಹಾಗೂ ನೌಷದ್ ಎಂದು ತಿಳಿಸಿರುತ್ತಾರೆ. ಗಾಂಜಾವನ್ನು 3 ಸಾವಿರ ರೂಪಾಯಿ ಹಣವನ್ನು ಕೊಟ್ಟು ನೌಷದ್ ನಿಂದ ಖರೀದಿಸಿ ಸೇವನೆ ಮಾಡಲು ತಂದಿದ್ದು ಅಲ್ಲೇ ಇದ್ದ ಮೋಟಾರ್ ಸೈಕಲ್ ನಂಬ್ರ KA-19-H-5884 ನೇದಲ್ಲಿ ತಾನು ಬಂದಿದ್ದು ಹಂಝತ್ ಕರಾರ್ ಮತ್ತು ನೌಷದ ರವರು ಅಲ್ಲೇ ಇದ್ದ KA-09-HS-0144 ನೇ ಮೋಟಾರ್ ಸೈಕಲ್ ನಲ್ಲಿ ಬಂದಿರುವುದಾಗಿ ತಿಳಿಸಿರುತ್ತಾರೆ. ಆದ್ದುದರಿಂದ ಆರೋಪಿತರಾದ ಹಂಝತ್ ಕರಾರ್, ನೌಷದ್, ತ್ವಲ್ ಹ ಹಾಗೂ ಇಬ್ರಾಹಿಂರವರು ನಿಷೇದಿತ ಮಾದಕ ವಸ್ತುವಾದ ಗಾಂಜಾ ಹಾಗೂ ಎಮ್.ಡಿ.ಎಮ್.ಎ ಹೆಚ್ಚಿನ ಬೆಲೆಗೆ ಮಾರಾಟ ಹಾಗೂ ಸೇವನೆ ಮಾಡಲು ಲಾಭ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಂಝತ್ ಕರಾರ್(31), ನೌಷದ್, ಅನ್ಸಾರ್(21), ಇಬ್ರಾಹಿಂ(29) ವಿರುದ್ಧ NDPS-1985,(u/s-8(C),20(B),(ii)(A)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಗಾಂಜಾ, ಎಮ್.ಡಿ.ಎಮ್.ಎ ಹಾಗೂ ಎರಡು ಮೋಟರ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳಾದ ಅನ್ಸಾರ್ ಮತ್ತು ಇಬ್ರಾಹಿಂ ನನ್ನು ಸೆ.6 ರಂದು ಮಂಗಳೂರು ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದು. ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಆನಂದ.ಎಮ್ ಮತ್ತು ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ನೇತೃತ್ವದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.




