ವೇಣೂರು; ರಿಕ್ಷಾಕ್ಕೆ ಕಾರು ಡಿಕ್ಕಿ ರಿಕ್ಷಾ ಚಾಲಕನಿಗೆ ಗಂಭೀರ ಗಾಯ
ಬೆಳ್ತಂಗಡಿ; ವೇಣೂರು ಗ್ರಾಮದ ಕುಂಭಶ್ರೀ ಶಾಲೆಯ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಅಟೋ ರಿಕ್ಷಾಕ್ಕೆ ಬೈಕ್ ಡಿಕ್ಕಿ ಹೊಡೆದು ಎರಡೂ ವಾಹನಗಳು ಜಖಂಗೊಂಡು ರಿಕ್ಷಾ ಚಾಲಕ ಗಂಭೀರಗಾಗಿ ಗಾಯಗೊಂಡ ಘಟನೆ ಸಂಭಿಸಿದೆ.ಕಾರು ಚಾಲಕ ಅತಿಯಾದ ವೇಗದಲ್ಲಿ ಕಾರನ್ನು ಚಲಾಯಿಸಿ ಲಾರಿಯೊಂದನ್ನು ಓವರ್ ಟೇಕ್ ಮಾಡಿ ಎದುರಿನಿಂದ ಬರುತ್ತಿದ್ದ ಅಟೋ ರಿಕ್ಷಾಗೆ ಡಿಕ್ಕಿ ಹೊಡೆದಿದ್ದು ಕಾರು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ರಿಕ್ಷಾ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು ರಿಕ್ಷಾ ಚಾಲಕ ನೌಶಾದ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಈತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಘಟನೆಯ ಬಗ್ಗೆ ವೇಣೂರು ಠಾಣೆಯಲ್ಲಿ...
ಬೆಳ್ತಂಗಡಿ; ಮರದ ಗೆಲ್ಲು ಕಡಿಯುವ ವೇಳೆ ವಿದ್ಯುತ್ ಶಾಕ್ ವ್ಯಕ್ತಿಸಾವು
ಬೆಳ್ತಂಗಡಿ: ನಗರದ ಹುಣ್ಸೆಕಟ್ಟೆ ಸಮೀಪದ ಪುಂಡಿಕ್ಕು ಎಂಬಲ್ಲಿ ಮರದ ಗೆಲ್ಲು ಕಡಿಯುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಶಾಕ್ ತಗಲಿ ಗೆಲ್ಲು ಕಡಿಯುತ್ತಿದ್ದ ಕಾರ್ಮಿಕ ಮೃತಪಟ್ಟ ದಾರುಣ ಘಟನೆ ಗುರುವಾರ ಬೆಳಿಗ್ಗೆ ಪುಂಡಿಕ್ಕು ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ಪುಂಡಿಕ್ಕು ಎಂಬಲ್ಲಿ ಚನನ ಗೌಡ (69ವ) ಎಂಬವರು ಇಂದು ಬೆಳಿಗ್ಗೆ ಮೆಸ್ಕಾಂ ಇಲಾಖೆಯ ಅನುಮತಿ ಪಡೆಯದೇ, ಖಾಸಗಿ ಜಮೀನಿನಲ್ಲಿ ಇರುವ ಮರದ ಗೆಲ್ಲು ಕಡಿಯುವಾಗ, ಗೆಲ್ಲು ಆಕಸ್ಮಿಕವಾಗಿ, ಅಲ್ಲಿಯೇ ರಸ್ತೆಯಲ್ಲಿ ಹಾದು ಹೋಗಿರುವ 11ಕೆವಿ ಕುವೆಟ್ಟು ಫೀಡರ್‌ನ ಹೆಚ್.ಟಿ...
ಬೆಳ್ತಂಗಡಿ: ಜಿಲ್ಲಾ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಉಮೈರಾ ಬಾನು ರವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ, ಪೋಲಿಸರಿಗೆ ದೂರು.
ಬೆಳ್ತಂಗಡಿ: ಇತ್ತೀಚೆಗೆ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ನ ಪ್ರದಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಪಕ್ಷದ ಸಕ್ರಿಯ ಕಾರ್ಯಕರ್ತೆ ನಡ ಗ್ರಾಮದ ಮಂಚದಪಲ್ಕೆ ನಿವಾಸಿ ಬಶೀರ್ ಅಹಮದ್ ರವರ ಪತ್ನಿ ಶ್ರೀಮತಿ ಉಮೈರಾ ಬಾನು ರವರ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿದ್ದ ಕೆಲವು ಪೋಟೋಗಳನ್ನು ತೆಗೆದು ದುರುಪಯೋಗ ಪಡಿಸಿ ಎಡಿಟ್ ಮಾಡಿ ಅಶ್ಲೀಲವಾಗಿ ಚಿತ್ರಿಸಿ ಬರೆದು ಸಾಮಾಜಿಕ ಜಾಲ ತಾಣದಲ್ಲಿ ಹರಿಯ ಬಿಟ್ಟ ಬಗ್ಗೆ ಬೆಳ್ತಂಗಡಿ ಪೋಲಿಸ್ ಠಾಣೆ ಗೆ ದೂರನ್ನು ನೀಡಲಾಗಿದೆ."ಆರಿಪ್ ಕುಂಟಿನಿ ಎಂಬಾತ ಹಾಗೂ ಇತರರು ನನ್ನನ್ನು ತೇಜೋವಧೆ ಮಾಡುವ ಉದ್ದೇಶದಿಂದ ಸಮಾಜಕ್ಕೆ...
ಬೆಳ್ತಂಗಡಿ : ಬೆಳಾಲು ಹೆಣ್ಣು ಮಗು ಪತ್ತೆ ಪ್ರಕರಣ ಮಗುವಿನ ತಂದೆ ತಾಯಿಯನ್ನು ಪತ್ತೆ ಹಚ್ಚಿದ ಧರ್ಮಸ್ಥಳ ಪೊಲೀಸರು
ಬೆಳ್ತಂಗಡಿ : ಬೆಳಾಲು ಗ್ರಾಮದ ಕೊಡೋಳುಕೆರೆ -ಮುಂಡ್ರೋಟ್ಟು ರಸ್ತೆಯಲ್ಲಿ ಮಾ.22 ರಂದು ಬೆಳಗ್ಗೆ ಒಂದುವರೇ ತಿಂಗಳ ಹೆಣ್ಣು ಮಗುವನ್ನು ಬಿಟ್ಟು ಹೋಗಿರುವ ಪ್ರಕರಣಕ್ಕೆ ರೋಚಕ ತಿರುವು ಲಭಿಸಿದ್ದು ಮಗು ಬೆಳಾಲು ನಿವಾಸಿಯದು ಎಂದು ಬಹಿರಂಗ ಗೊಂಡಿದೆ. ಮಗುವಿನ ತಂದೆ ತಾಯಿಯನ್ನು ಪತ್ತೆ ಹಚ್ಚಿದ ಪೊಲೀಸರು ಇದೀಗ ಮಗುವಿನ ತಂದೆ ಬೆಳಾಲು ನಿವಾಸಿ ರಜತ್ ಗೌಡ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೆಳಾಲಿನ ಕಡಿನಲ್ಲಿ ಪತ್ತೆಯಾದ ಮಗುವನ್ನುಸಾರ್ವಜನಿಕರು ನೋಡಿ ರಕ್ಷಿಸಿ ಆರೈಕೆ ಮಾಡಿ ಧರ್ಮಸ್ಥಳ ಪೊಲೀಸರು ಸಮ್ಮುಖದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ...
ಬೆಳ್ತಂಗಡಿ; ತಾಲೂಕಿನಾಧ್ಯಂತ ಉತ್ತಮ ಮಳೆ
ಬೆಳ್ತಂಗಡಿ: ತಾಲೂಕಿನ ಹಲವು ಪ್ರದೇಶಗಳಲ್ಲಿ ಎ.2ರ ಬುಧವಾರ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಮುಂಡಾಜೆ, ಕಕ್ಕಿಂಜೆ, ಧರ್ಮಸ್ಥಳ, ಉಜಿರೆ, ನಡ, ನಿಡಿಗಲ್, ಪಣಕಜೆ, ಅಳದಂಗಡಿ, ಧರ್ಮಸ್ಥಳ ಸಹಿತ ಬಹುತೇಕ ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದೆ. ಇಂದು ಮಧ್ಯಾಹ್ನದ ವೇಳೆಗೆ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು ಮಳೆ ಆರಂಭಗೊಂಡಿದೆ. ಉತ್ತಮ ಮಳೆಯಿಂದಾಗಿ ವಾತಾವರಣ ತಂಪಾಗಿದೆ.ಆದರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಪರಿಣಾಮ ಕೆಲಸ ಕಾರ್ಯಗಳಿಗೆ ಸಮಸ್ಯೆ ಉಂಟಾಗಿದೆ. ಕಕ್ಕಿಂಜೆಯಲ್ಲಿ ಮಳೆ ತೀವ್ರವಾದ ಪರಿಣಾಮ ರಸ್ತೆಯಲ್ಲೇ ನೀರು ಹರಿದು ಹೋಗುತ್ತಿರುವ ದೃಶ್ಯ ಕಂಡುಬಂತು. ಕಳೆದ ಎರಡು ವಾರಗಳಿಂದ...
ವೆಣೂರು; ರಸ್ತೆ ಅಪಘಾತದಲ್ಲಿ ಮೃತಪಟ್ಟ ಯಕ್ಷಗಾನ ಕಲಾವಿದ ಸತೀಶ್ ಆಚಾರ್ಯ ಮನೆಗೆ ರಕ್ಷಿತ್ ಶಿವರಾಂ ಭೇಟಿ
ವೇಣೂರು; ಇಲ್ಲಿನ ಅಂಡಿಂಜೆ ನಿವಾಸಿ ಮಂಗಳಾದೇವಿ ಮೇಳದ ಯಕ್ಷಗಾನ ಭಾಗವತ ರಾದ ಸತೀಶ್ ಆಚಾರ್ಯ ವೇಣೂರು(ಅಂಡಿಂಜೆ) ಅಂಡಿಂಜೆ ಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ,ದಿವಂಗತರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮನೆಗೆ ಭೇಟಿ ನೀಡಿ ಸತೀಶ್ ಆಚಾರ್ಯ ತಾಯಿಗೆ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದರು,. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಪೂಜಾರಿ,ಪರಮೇಶ್ವರ್ , ಪ್ರಮುಖರಾದ ತೋಮಸ್ ನೊರೊನ್ನ, ರಾಜೇಶ್ ಅಂಡಿಂಜೆ ಉಪಸ್ಥಿತರಿದ್ದರು.
ಬೆಳ್ತಂಗಡಿ; ಏಪ್ರಿಲ್ 20ರಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ, ಡಿ.ಕೆ ಶಿವಕುಮಾರ್ ಬಾಗಿ, ಪೂರ್ವಭಾವಿ ಸಭೆ
ಬೆಳ್ತಂಗಡಿ; ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ದಿನಾಂಕ 20.04.2024ನೇ ಭಾನುವಾರ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ, ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು.ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಇಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ನಡೆಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕರ್ತರ ಸಮಾವೇಶವನ್ನು ಎಲ್ಲರಿಗೂ ಸೇರಿ ಯಶಸ್ವಿಗೊಳಿಸಬೇಕು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಚಿವರು ಹಾಗೂ ಪಕ್ಷದ ರಾಜ್ಯಮಟ್ಟದ ಜಿಲ್ಲಾ ಮಟ್ಟದ ಪ್ರಮುಖರು ಪಾಲ್ಗೊಳ್ಳುತ್ತಾರೆ, ಎಂದರು. ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷಗಳ ಸಾಧನೆಯ ಕೈಪಿಡಿಯನ್ನು ಬಿಡುಗಡೆಗೊಳಿಸಲಾಗುವುದು,...
ಅಖಿಲ ಕರ್ನಾಟಕ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಅವರಿಗೆ ಕರ್ನಾಟಕ ಜ್ಯೋತಿ ಅವಾರ್ಡ್
ಬೆಳ್ತಂಗಡಿ; ಸದಾ ವಿಶಿಷ್ಟ ಶೈಲಿಯಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ನಿರಂತರವಾಗಿ ಮಾಡುತ್ತಿರುವ ಸಕ್ರಿಯವಾಗಿ ಸಮಾಜದೊಂದಿಗೆ ಬೆರೆತು ಸಮಾಜಕ್ಕೆ ಕೊಡುಗೆಗಳನ್ನು ನೀಡಿ. ಆಸರೆ ಮನೆ ವಿದ್ಯಾರ್ಥಿಗಳಿಗಿ ಪ್ರೋತ್ಸಾಹ ಆರೋಗ್ಯಕ್ಕೆ ಧನ ಸಹಾಯ. ಸ್ವಚ್ಛಾಲಯ.ಹಾಗೂ ಹಲವಾರು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ತನ್ನ ಸಂಸ್ಥೆಯನ್ನು ಹುಟ್ಟು ಹಾಕಿ ಬೆಳೆಸಿ ಈಗ ರಾಜ್ಯದಲ್ಲೇ ವಿಸ್ತರಿಸುತ್ತ ಅದೆಷ್ಟೋ ಬಡವರ್ಗದವರಿಗೆ ಬಡ ಕುಟುಂಬಗಳಿಗೆ ಸಹಾಯ ಹಸ್ತವನ್ನು ನೀಡುತ್ತಿರುವ ರಾಜ ಕೇಸರಿ ಸಂಘಟನೆ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಯವರನ್ನು ಗುರುತಿಸಿ ಫ್ಲೋರಿಡಾ ಇಂಗ್ಲಿಷ್ ಶಾಲೆಫ್ಲೋರಿಡಾ ಪ್ರಿ -ಕರ್ನಾಟಕ ಸರಕಾರದಿಂದ ಮಾನ್ಯತ ಪಡೆದ...
ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ವೈದ್ಯರಿಗೆ ಬೀಳ್ಕೊಡುಗೆ
ಬೆಳ್ತಂಗಡಿ; ಸೇವಾ ನಿವೃತ್ತಿ ಪಡೆದ ಡಾ| ಬಾಲಕೃಷ್ಣ ಭಟ್ ಮತ್ತು ಡಾ| ಕಮಲಾ ಭಟ್ ಇವರ ಅತ್ಯುತ್ತಮ ಸೇವೆಯನ್ನು ಗೌರವಿಸಿ, ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಮಾತನಾಡಿ ಜನಸೇವೆಯ ಉದ್ದೇಶದೊಂದಿಗೆ ಪೂಜ್ಯ ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ನಡೆಯುತ್ತಿರುವ ಈ ಆಸ್ಪತ್ರೆಯಲ್ಲಿ ಸಮಯದ ಬಗ್ಗೆ ಚಿಂತಿಸಿದೆ, ರೋಗಿಯ ಆರೈಕೆಯಲ್ಲಿಯೇ ತಮ್ಮ ಬದುಕಿನ ಅತೀ ಹೆಚ್ಚಿನ ಸಮಯವನ್ನು ಕಳೆದವರು ಇವರು. ತಮ್ಮ ಇಳಿವಯಸ್ಸಿನಲ್ಲಿಯೂ ರೋಗಿಗಳ ಹಿತವನ್ನೇ ಭಯಸಿದ ಇವರ ಸೇವೆ ಈ ಆಸ್ಪತ್ರೆಗೆ ಅತ್ಯುತ್ತಮ ಕೊಡುಗೆಯಾಗಿದೆ ಎಂದರು.ನಿವೃತ್ತರಾದ...
32ನೇ ವರ್ಷದ ವೇಣೂರು ಪೆರ್ಮುಡ “ಸೂರ್ಯ – ಚಂದ್ರ” ಜೋಡುಕರೆ ಕಂಬಳ ಕೂಟದ ಫಲಿತಾoಶ
ಬೆಳ್ತಂಗಡಿ; ವೇಣೂರು ಪೆರ್ಮುಡ "ಸೂರ್ಯ - ಚಂದ್ರ" ಜೋಡುಕರೆ ಕಂಬಳ ರಕ್ಷಿತ್ ಶಿವರಾಂ ಅವರ ಗೌರವ ಅಧ್ಯಕ್ಷತೆಯಲ್ಲಿ ನಿತೇಶ್ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಶೇಖರಕುಕ್ಕೇಡಿ ಅವರ ಅಧ್ಯಕ್ಷತೆಯಲ್ಲಿ ಸಾವಿರಾರು ಮಂದಿ ಕಂಬಳ ಪ್ರೇಮಿಗಳ ಭಾಗವಹಿಸುವಿಕೆಯೊಂದಿಗೆ ಸಂಭ್ರಮದಿಂದ ನಡೆಯಿತು.ಕೂಟದಲ್ಲಿಕನೆ ಹಲಗೆ: 04 ಜೊತೆಅಡ್ಡಹಲಗೆ: 04 ಜೊತೆಹಗ್ಗ ಹಿರಿಯ: 12 ಜೊತೆನೇಗಿಲು ಹಿರಿಯ: 24 ಜೊತೆಹಗ್ಗ ಕಿರಿಯ: 12 ಜೊತೆನೇಗಿಲು ಕಿರಿಯ ಹೀಗೆ ಒಟ್ಟು 85 ಜೊತೆಕೋಣಗಳು ಭಾಗವಹಿಸಿದ್ದವುಕನೆ ಹಲಗೆ ವಿಭಾಗದಲ್ಲಿ(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ...















