ಸರ್ವರನ್ನೂ ಹಾಗೂ ಸರ್ವ ಕ್ಷೇತ್ರಗಳನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ ಬಜೆಟ್,: ರಕ್ಷಿತ್ ಶಿವರಾಂ

0

ಬೆಳ್ತಂಗಡಿ; 2025-26ನೇ ಸಾಲಿನ ರಾಜ್ಯ ಬಜೆಟ್ ಮಂಡಿಸು ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ 16ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ ಈ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.ಈ ಬಾರಿಯ ಬಜೆಟ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸುವ ಉದ್ದೇಶ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ನವೀಕರಣಕ್ಕೆ ಒತ್ತು ಹಾಗೂ ಕರಾವಳಿಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.ಅಂಗನವಾಡಿ ಸಹಾಯಕೀಯರ ಮತ್ತು ಆಶಾ ಕಾರ್ಯಕರ್ತರ ಗೌರವಧನ ಹೆಚ್ಚಿಸಲಾಗಿದೆ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.2025-26ನೇ ಸಾಲಿನ ಈ ಆಯವ್ಯಯವು ಕರ್ನಾಟಕದ...

ನಕ್ಸಲರಿಗೆ ಶರಣಾದ ಸರ್ಕಾರ ಅಭಿವೃದ್ಧಿಯ ಕನಸು ಹುಸಿಯಾಗಿಸಿದ ಬಜೆಟ್; ಶಾಸಕ ಹರೀಶ್ ಪೂಂಜ

0

ಬೆಳ್ತಂಗಡಿ : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಇಂದು ಮಂಡಿಸಿದ 2025- 26ರ ಸಾಲಿನ ಮುಂಗಡ ಪತ್ರ ನಕ್ಸಲರಿಗೆ ಶರಣಾಗಿ ಶ್ರೀಸಾಮಾನ್ಯರ ಪಾಲಿಗೆ ಸಂಪೂರ್ಣ ನಿರಾಶದಾಯಕವಾಗಿದೆಯೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬೇಸರ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ಸರ್ಕಾರಕ್ಕೆ ನಕ್ಸಲ್ ಚಟುವಟಿಕೆ ಬಗ್ಗೆ ಪೂರ್ಣ ಅರಿವಿದ್ದಂತೆ ಕೇವಲ ಆರು ಜನರ ನಕ್ಸಲರ ಶರಣಗಾತಿಯಿಂದ ನಕ್ಸಲ್ ನಿಗ್ರಹ ಪಡೆಯನ್ನೇ ವಿಸರ್ಜಿಸಿ 10 ಕೋಟಿ ವಿಶೇಷ ಪ್ಯಾಕೇಜ್ ನೀಡಿದ್ದನ್ನು ಗಮನಿಸಿದರೆ ನಕ್ಸಲರು ಸರ್ಕಾರಕ್ಕೆ ಶರಣಾಗಿದ್ದರೋ ಅಥವಾ ಸರ್ಕಾರವೇ ನಕ್ಸಲರಿಗೆ ಶರಣಾಯಿತೋ ಎಂಬಂತಿದೆ. ಯೋಜನಾಬದ್ಧವಲ್ಲದ ಯೋಚನೆಗಳಿಂದ ಕರ್ನಾಟಕ ರಾಜ್ಯದ ವಿತ್ತೀಯ ಶಿಸ್ತು ಹಳಿತಪ್ಪಿ...

ಬೆಳ್ತಂಗಡಿ ವಕೀಲರ ಸಂಘದಿಂದ ನ್ಯಾಯಾಲಯದ ಕಟ್ಟಡ ಮಂಜೂರುಗೊಳಿಸುವಂತೆ ಬೆಂಗಳೂರಿನಲ್ಲಿ ಸಚಿವರುಗಳಿಗೆ ಮನವಿ

0

ಬೆಳ್ತಂಗಡಿ;  ಇತ್ತೀಚೆಗೆ ಬೆಳ್ತಂಗಡಿಯಲ್ಲಿ ನಡೆದ ಅಪರ ಸರ್ಕಾರಿ ವಕೀಲರ ಕಛೇರಿ ಉದ್ಘಾಟನೆ ಮತ್ತು ವಕೀಲರ ಸಂಘದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಶಾಸಕ ಐವನ್ ಡಿ ಸೋಜಾ ರವರು ಬೆಳ್ತಂಗಡಿಯ 60 ವರ್ಷ ಹಳೆಯದಾದ ನ್ಯಾಯಾಲಯದ ಕಟ್ಟಡವನ್ನು ವೀಕ್ಷಿಸಿ ಸರ್ಕಾರದ ಮಟ್ಟದಲ್ಲಿ ಹೊಸ ನ್ಯಾಯಾಲಯದ ಕಟ್ಟಡ ಮಂಜೂರಾತಿಗೆ ಬಜೆಟ್ ನಲ್ಲಿ ಅನುದಾನ ನೀಡಲು ಒತ್ತಡ ತರುವ ಬಗ್ಗೆ ವಕೀಲರ ನಿಯೋಗವನ್ನು ಸಂಬಂಧಪಟ್ಟ ಸಚಿವರ ಬಳಿ ಕರೆದೊಯ್ಯುವ ಭರವಸೆ ನೀಡಿದ್ದರು.ಅದರಂತೆ ಮಾರ್ಚ್ 06 ರಂದು ಬೆಂಗಳೂರಿನ ಬಜೆಟ್ ಅಧಿವೇಶನದ ಸಂಧರ್ಭ ವಿಧಾನ...

ಮುಂಡಾಜೆ ಪ್ಯಾಕ್ಸ್ಅಧ್ಯಕ್ಷರಾಗಿ ಪ್ರಕಾಶ್ ನಾರಾಯಣ ರಾವ್,ಉಪಾಧ್ಯಕ್ಷರಾಗಿ ರಾಘವ ಗೌಡ ಕುಡುಮಡ್ಕ ಆಯ್ಕೆ

0

ಬೆಳ್ತಂಗಡಿ; ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು 12 ರಲ್ಲಿ 11 ಸ್ಥಾನಗಳನ್ನು ಗಳಿಸಿ ಅಧಿಕಾರವನ್ನು ಪಡೆದುಕೊಂಡಿದ್ದಾರೆ.ಆಡಳಿತ ಮಂಡಳಿಯ ನೂತನ‌ ಅಧ್ಯಕ್ಷರಾಗಿ ಕಳೆದ ಅವಧಿಯ ಉಪಾಧ್ಯಕ್ಷ,ಬೆಳ್ತಂಗಡಿ ರೋಟರಿ ಕ್ಲಬ್ ಪೂರ್ವ ಕಾರ್ಯದರ್ಶಿ,ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಜಿಲ್ಲಾ ಸಂಘಟಕ,ಯುವ ನಾಯಕ ಪ್ರಕಾಶ್ ನಾರಾಯಣ ರಾವ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಕುಡುಮಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ,ಪ್ರಗತಿಪರ ಕೃಷಿಕ ರಾಘವ ಗೌಡ ಕುಡುಮಡ್ಕ ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರುಗಳಾಗಿ ಕಜೆ...

ಗುರುದೇವ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ ನಿಧನ

0

ಬೆಳ್ತಂಗಡಿ: ಕುಕ್ಕಿನಡ್ಡ ಕುಟುಂಬ ಮನೆತನದ ಹಿರಿಯರಾಗಿದ್ದ, ನಿವೃತ್ತ ಡಿಎಫ್ ಓ, ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್ ಪದ್ಮನಾಭಮಾಣಿಂಜ (87) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಮಾ.6ರಂದು ಬೆಳಿಗ್ಗೆ ವಿಧಿವಶರಾದರು. ಮಾಜಿ ಶಾಸಕ ಕೆ.ವಸಂತ ಬಂಗೇರರ ಆತ್ಮೀಯ ಸಲಹೆ ಗಾರರೂ ಮಾರ್ಗದರ್ಶಕರೂ ಆಗಿದ್ದ ಇವರು, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಿದ್ದರು. ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘದ ಪ್ರಗತಿಯ ಹಿಂದೆಮಾಣಿಂಜರವ ದೂರದೃಷ್ಟಿ ಚಿಂತನೆ ಮತ್ತು ಪ್ರಯತ್ನ ಮಹತ್ತರವಾದದು.ಸರಳ,...

ಬಿ.ಸಿ ರೋಡ್; ಕಾರು ಬಸ್ ನಡುವೆ ಭೀಕರ ಅಪಘಾತ

0

ಬಿ.ಸಿ.ರೋಡ್‌: ಖಾಸಗಿ ಬಸ್ ಮತ್ತು ಕಾರೊಂದರ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡಿನ ಸರ್ಕಲ್ ಬಳಿ ಬುಧವಾರ ನಡೆದಿದೆ. ಗಾಯಾಳುವನ್ನು ಕಾರು ಚಾಲಕ ಕೇರಳ ಮೂಲದ ವಿಶ್ವನಾಥ ಶೆಟ್ಟಿ ಎಂದು ಗುರುತಿಸಲಾಗಿದೆ. ಬಿ.ಸಿ.ರೋಡಿನ ಕಡೆಯಿಂದ ಮೆಲ್ಕಾರ್ ನತ್ತ ಹೋಗುತ್ತಿದ್ದ ವಿಶ್ವನಾಥ ಅವರ ಕಾರಿಗೆ ಮೆಲ್ಕಾರ್-ಪಾಣೆಮಂಗಳೂರು ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ. ಘಟನೆಯ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳ್ತಂಗಡಿ; ಮಾ.6 ತಾಲೂಕಿನ ನಾನಾ ಕಡೆ ವಿದ್ಯುತ್ ವ್ಯತ್ಯಯ

0

ಬೆಳ್ತಂಗಡಿ:ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಪ್ರಯುಕ್ತ ವಿದ್ಯುತ್ ಕಂಬಗಳ ಸ್ಥಳಾಂತರ ಮಾಡುವ ಕಾಮಗಾರಿಯನ್ನು ಹಮ್ಮಿಕೊಂಡಿ ಬೆಳ್ತಂಗಡಿ ಪೇಟೆ, ಕುತ್ಯಾರು,ಲಾಯಿ ಲ, ಸಂತೆಕಟ್ಟೆ, ಜ್ಯೂನಿಯರ್ ಕಾಲೇಜು ರಸ್ತೆ, ಕೊಯ್ಯುರು, ಪಡ್ಡಾಡಿ, ಮಂಜೊಟ್ಟಿ, ನಾವೂರು, ಕೇಳ್ತಾಜೆ, ಹಳೆಕೋಟೆ, ಮೇಲಂತಬೆಟ್ಟು, ವಾಣಿ ಶಾಲೆ, ಚರ್ಚ್‌ ರಸ್ತೆ, ಕಲ್ಲಗುಡ್ಡೆ, ಚೌಕದಬೆಟ್ಟು, ಹುಚ್ಛಿಕಟ್ಟೆ, ರೆಂಕೆದಗುತ್ತು, ಶಾಂತಿನಗರ, ಪುದೊಟ್ಟು ಪರಿಸರದಲ್ಲಿ ಮಾ.6ರಂದ ಬೆಳಿಗ್ಗೆ ಗಂಟೆ:9.30ರಿಂದ ಸಂಜೆ 5.30ರವರೆಗೆ,ಬೆಳ್ತಂಗಡಿ ಉಪವಿಭಾಗದ ಕಲ್ಲೇರಿ ಶಾಖಾ ವ್ಯಾಪ್ತಿಯ ಹೊಸ 11ಕೆವಿ ಅಂಡೆತಡ್ಕ ಫೀಡರನ್ನು ಚಾಲನೆಗೊಳಿಸುವ ಸಲುವಾಗಿ ಕರಾಯ 110/33/11ಳಿವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11ಕೆವಿ ಕಲ್ಲೇರಿ ಟೌನ್,...

ನಾರಾವಿ; ಮನೆಯಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ

0

ಬೆಳ್ತಂಗಡಿ;  ಕುತ್ಲೂರು ಗ್ರಾಮದ ಸಮೃದ್ಧಿ ಮನೆ ನಿವಾಸಿ ಟಿ. ಎಸ್. ಸಲೀಂ ಎಂಬವರ ಬೈಕ್ ನ್ನು ಅವರ ಮನೆಯಿಂದ ಕಳ್ಳತನ ಮಾಡಿರುವ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾ.4ರ ಬೆಳಗಿನ ಜಾವ 3ರಿಂದ 3.30ಗಂಟೆ ಮಧ್ಯೆ ಬೈಕ್ ಕಳ್ಳತನವಾಗಿದ್ದು,ಇಬ್ಬರು ವ್ಯಕ್ತಿಗಳು ಕಳ್ಳತನ ಮಾಡುವ ದೃಶ್ಯ ಮನೆಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು ಕಳವಾದ ಬೈಕ್ ಮೌಲ್ಯ 60ಸಾವಿರ ರೂ.ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೆಳ್ತಂಗಡಿ; ಬಿ.ಖಾತಾ ಆಂದೋಲನ; ಜನರ ಕಣ್ಣೊರಸುವ ತಂತ್ರ  ಪಟ್ಟಣ ಪಂಚಾಯತು ಅಧ್ಯಕ್ಷ ಜಯಾನಂದ ಗೌಡ ಟೀಕೆ

0

ಬೆಳ್ತಂಗಡಿ; ನಗರಗಳಲ್ಲಿ ಬಿ ಖಾತಾ ಆಂದೋಲನ - ಜನರ ಕಣ್ಣೊರೆಸುವ ತಂತ್ರ. ಖಜಾನೆ ತುಂಬಿಸುವ ಒಳತಂತ್ರ, ನಗರಗಳಲ್ಲಿ ಎಲ್ಲಾ ನಿವೇಶನಗಳಿಗೆ ಎ ಖಾತಾ ಹಾಗೂ ಬಿ ಖಾತಾ ಎಂದು ವರ್ಗಿಕರಿಸಿ ಸರಕಾರವು ಅಧಿಸೂಚನೆ ಹೊರಡಿಸಿ ತುರಾತುರಿಯಲ್ಲಿ ಬಿ ಖಾತಾ ನೀಡಲು ಆಂದೋಲನ ಕ್ಕೆ ಆದೇಶ ನೀಡಿರುವುದು ಜನಗಳ ಕಣ್ಣೊರೆಸುವ ತಂತ್ರವಷ್ಟೇ ಆಗಿದೆ. ಇದರ ಒಳತಂತ್ರ ಖಾಲಿಯಾಗಿರುವ ಸರಕಾರದ ಖಜಾನೆ ತುಂಬಲು ಇನ್ನೊಂದು ಮಾರ್ಗವಷ್ಟೇ ಆಗಿದೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಟೀಕಿಸಿದ್ದಾರೆ.ಕಳೆದ ಹಲವಾರು ವರ್ಷಗಳಿಂದ ಜನಗಳಿಗೆ ಖಾತ ನೀಡುವ ಸಮಸ್ಯೆ...

ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರ ಬಂಧನ ವಿರುದ್ಧ ಬಿಡುಗಡೆಗೆ ಆಗ್ರಹಿಸಿ ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ಪ್ರತಿಭಟನೆ

0

ಬೆಳ್ತಂಗಡಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾದ ಎಂ. ಕೆ ಫೈಝಿ ಯವರನ್ನು ಕೇಂದ್ರ ಸರ್ಕಾರವು ದೆಹಲಿಯಲ್ಲಿ ಅಕ್ರಮ ಬಂಧನ ಮಾಡಿರುವುದರ ವಿರುದ್ಧ ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಅಕ್ಬರ್ ಬೆಳ್ತಂಗಡಿ ನೇತೃತ್ವದಲ್ಲಿ ಬೆಳ್ತಂಗಡಿ ಮೂರು ಮಾರ್ಗದ ಬಳಿ ಮಂಗಳವಾರ ರಾತ್ರಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ ಮಾತನಾಡಿ, ED, NIA ಗಳು ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿದೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ. ಬಿಜೆಪಿಯ ಕೈಗೊಂಬೆಯಂತೆ ವರ್ತಿಸಿ ತನ್ನ ಮೌಲ್ಯ...