ಇಳಂತಿಲ; ಗುಡ್ಡ ಕುಸಿತ ಸಂಚಾರ ಅಸ್ಯವ್ಯಸ್ತ
ಬೆಳ್ತಂಗಡಿ; ಇಳಂತಿಲ ಗ್ರಾಮದ ಬಾರಕೆರೆ ಎಂಬಲ್ಲಿ ಗುಡ್ಡ ಕುಸಿದು ಬಿದ್ದು ರಸ್ತೆ ಸಂಪೂರ್ಣ ಬಂದ್ ಆಗಿದೆ. ಮಣ್ಣು ಕಲ್ಲು ಹಾಗೂ ಮರಗಳು ರಸ್ತೆಗೆ ಬಿದ್ದಿದ್ದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.ಇಳಂತಿಲ ಹಾರೆಕೆರೆ ಕುವೆತಂಡ ಎಂಬಲ್ಲಿ ರಸ್ತೆಗೆ ನೀರು ನುಗ್ಗಿದ್ದು ರಸ್ತೆ ಬ್ಲಾಕ್ ಆಗಿದೆ
ಲಾಯಿಲ; ಭಾರೀ ಮಳೆಗೆ ಗುಡ್ಡ ಕುಸಿತ ರಸ್ತೆ ಬಂದ್
ಬೆಳ್ತಂಗಡಿ: ಲಾಯಿಲ ಗ್ರಾಮದ ಅಂಕಾಜೆ ಸಮೀಪ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿ ರಸ್ತೆಗೆ ಮಣ್ಣು ಕಲ್ಕುಗಳು ಬಿದ್ದಿದ್ದು , ರಸ್ತೆ ಸಂಪೂರ್ಣ ಕಡಿತಗೊಂಡಿದೆ. ತಾಲೂಕಿನಾದ್ಯಂತ ಸುರಿಯುತ್ತಿರುವ ಭೀಕರ ಮಳೆಗೆ ಲಾಯಿಲ ಗ್ರಾಮದ ಅಂಕಾಜೆ ಸಮೀಪ ಲಾಯಿಲ-ನಿನ್ನಿಕಲ್ಲು ಚಂದ್ಕೂರು ರಸ್ತೆಯಲ್ಲಿ ಬಂಡೆಕಲ್ಲು ಸಮೇತ ಗುಡ್ಡ ಕುಸಿದು ರಸ್ತೆಗೆ ಬಿದ್ದಿದ್ದು ಸಂಪರ್ಕ ಕಡಿತಗೊಂಡಿದೆ. ಈ ಬಗ್ಗೆ ಸ್ಥಳೀಯ ಗ್ರಾಮಪಂಚಾಯತಿಗೆ ಮಾಹಿತಿ ನೀಡಲಾಗಿದ್ದು ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಭಾರೀ ಮಳೆ ಹಿನ್ನಲೆ ದ.ಕ ಜಿಲ್ಲೆಯಲ್ಲಿ ಮೇ 31 ಶನಿವಾರ ಶಾಲೆಗಳಿಗೆ ರಜೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ನಾಳೆ (ಮೇ 31 ಶನಿವಾರ) ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿಲ್ಲ. ಜಿಲ್ಲೆಯಲ್ಲಿ ಮಳೆಯಿಂದಾಗಿ ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಿದ್ದು ಸಾರ್ವಜನಿಕರು ಎಚ್ಚರ ವಹಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೇ 30 ರಿಂದ ಜೂನ್ 3ರ ವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಮೇ 31 ರಿಂದ ಜೂನ್ 3ರ ವರೆಗೆ...
ವಿದ್ಯುತ್ ಶಾಕ್ ಹೊಡೆದು ಲೈನ್ ಮಾನ್ ಸಾವು
ಬೆಳ್ತಂಗಡಿ; ಓಡಿಲ್ನಾಳ ಗ್ರಾಮದಲ್ಲಿ ವಿದ್ಯುತ್ ಬದ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಹಾಯಕ ಪವರ್ ಮ್ಯಾನ್ ಒಬ್ಬರು ಮೃತ ಪಟ್ಟ ಘಟನೆ ನಡೆದಿದೆ.ಮೃತ ವ್ಯಕ್ತಿ ರೇಶ್ಮೆ ರೋಡ್ ನಿವಾಸಿ ವಿಜೇಶ್ (32) ಎಂಬವರಾಗಿದ್ದಾರೆ.ಘಟನೆಯ ಬಗ್ಗೆ ಹೆಚ್ವಿನ ಮಾಹಿತಿ ತಿಳಿದು ಬರಬೇಕಾಗಿದೆ
ಬೆಳ್ತಂಗಡಿ : ಡೆಂಗ್ಯೂ ಜ್ವರಕ್ಕೆ ಕಾಲೇಜ್ ವಿದ್ಯಾರ್ಥಿ ಬಲಿ
ಬೆಳ್ತಂಗಡಿ : ಡೆಂಗ್ಯೂ ಜ್ವರದಿಂದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಲೇಜ್ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಮೇ.30 ರಂದು ಮೃತಪಟ್ಟಿದ್ದಾನೆ. ಬೆಳ್ತಂಗಡಿ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬಂಟ್ವಾಳ ತಾಲೂಕಿನ ಕಿನ್ನಿಬೆಟ್ಟು, ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ನಿವಾಸಿ ಗೋಪಾಲ ಗೌಡ ಮತ್ತು ಸುಪ್ರಭಾ ದಂಪತಿಗಳ ಮಗ ಹಿತೇಶ್ (17) ಡೆಂಗ್ಯೂ ಜ್ವರದಿಂದ ಪ್ಲೇಟ್ಲೆಟ್ ಸಂಖ್ಯೆ ಕಡಿಮೆಯಾಗಿ ಚಿಕಿತ್ಸೆ ಫಲಿಸದೆ ಮೇ.30 ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಾಲಕನಾಗಿದ್ದಾನೆ.
ಭಾರೀ ಮಳೆ ಹಿನ್ನಲೆ ದ.ಕ ಜಿಲ್ಲೆಯಲ್ಲಿ ಮೇ 30 ಇಂದು ಶಾಲೆಗಳಿಗೆ ರಜೆ
ಮಂಗಳೂರು: ಭಾರೀ ಮಳೆಯ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು ಮತ್ತು ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು (ಮೇ 30) ರಜೆ ಘೋಷಿಸಿ ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕೋಮು ಗಲಭೆ ನಿಯಂತ್ರಿಸುವಲ್ಲಿ ವಿಫಲತೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ;ಹೊಸ ಅಧಿಕಾರಿಗಳ ನೇಮಕ
ಮಂಗಳೂರು; ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸರಣಿ ಕೊಲೆಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿರುವ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಬದಲಿಸು ನಿಟ್ಟಿನಲ್ಲಿ ರಾಜ್ಯ ಸರಕಾರ ಕೊನೆಗೂ ಮುಂದಾಗಿದ್ದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ ವಾಲ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇದೀಗ ಮಂಗಳೂರಿನ ನೂತನ ಪೊಲೀಸ್ ಆಯುಕ್ತರಾಗಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ತನ್ನ ಸೆವಾ ಬದ್ದತೆಯಿಂದ ಹೆಸರು ಪಡೆದಿರುವ ಉಡುಪಿಯ ಎಸ್ಪಿಯಾಗಿದ್ದ...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರಿಗೆ ರಕ್ಷಿತ್ ಶಿವರಾಂ ಮನವಿ ಸಲ್ಲಿಕೆ
ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಘಟನೆಗಳ ಬಗ್ಗೆ, ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ವಿಧಾನಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್ ರವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ರಕ್ಷಿತ್ ಶಿವರಾಂ ರವರು ಮಾಹಿತಿಯನ್ನು ನೀಡಿದರು. ಜಿಲ್ಲೆಯ ಜನತೆ ಶಾಂತಿ ಸೌಹಾರ್ದತೆಯನ್ನು ಬಯಸುತ್ತಿದ್ದಾರೆ. ಆದರೆ ಕೆಲವು ವಿಘ್ನ ಸಂತೋಷಗಳು ಜಿಲ್ಲೆಯ ಶಾಂತಿಯನ್ನು ಕಾದಡುತ್ತಿದ್ದಾರೆ. ಮುಂದೆ ಇದಕೆಲ್ಲ ಕಡಿವಾಣ ಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ವಸತಿ...
ಬೆಳ್ತಂಗಡಿ; ತಾಲೂಕಿನಲ್ಲಿ ಮುಸ್ಲಿಂ ಮುಖಂಡರಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧಾರ
ಬೆಳ್ತಂಗಡಿ; ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅಮಾಯರ ಕೊಲೆ ಸಮುದಾಯದ ಅವಹೇಳನ ಇದೆಲ್ಲವನ್ನು ಖಂಡಿಸಿ ಹಲವಾರು ಬಾರಿ ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರು ಯಾವುದೇ ಕ್ರಮ ಕೈ ಗೊಲ್ಲದೆ ನಿರ್ಲಕ್ಷ್ಯ ತೋರಿದರಿಂದ ದಿನದಿಂದ ದಿನಕ್ಕೆ ದಕ್ಷಿಣ ಜಿಲ್ಲೆ ಹಾಗೂ ರಾಜ್ಯದ ಕೆಲವು ಭಾಗಗಲ್ಲಿ ಮುಸ್ಲಿಂ ಸಮುದಾಯವು ಹಲವಾರು ಸಂಕಷ್ಟಗಳನ್ನು ಎದುರಿಸುವ ಪರಿಸ್ಥಿತಿ ಬಂದಿದೆ ಮುಸ್ಲಿಂ ಸಮುದಾಯದ 80%ಮತ ಪಡೆದು ಸರಕಾರ ರಚನೆ ಮಾಡಿದ ಸರಕಾರಕ್ಕೆ 10% ಸುರಕ್ಷತೆ ನೀಡಲು ಸಾಧ್ಯವಿಲ್ಲ...
ಮುಸ್ಲಿಂ ಸಮುದಾಯದ ಕುರಿತು ಅವಹೇಳನಕಾರಿ ಸ್ಟೇಟಸ್ ಹಾಕಿದವನ ವಿರುದ್ಧ ಬೆಳ್ತಂಗಡಿ ಠಾಣೆಗೆ ದೂರು
ಬೆಳ್ತಂಗಡಿ : ತಾಲೂಕಿನ ಕಾಜೂರು ನಿವಾಸಿ ಸಂದೀಪ್ ಎಂಬಾತನು ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಿ ದುರುದ್ದೇಶದಿಂದ ಮುಸ್ಲಿಂ ಸಮುದಾಯದ ಹಾಗೂ ಮುಸ್ಲಿಂ ಸಮುದಾಯದ ಮಹಿಳೆಯರ ಬಗ್ಗೆ ಧಾರ್ಮಿಕ ನಿಂಧನೆ ಮಾಡಿದ್ದು ಆತನ ವಾಟ್ಸಪ್ಪ್ ಸ್ಟೇಟಸ್ ನಲ್ಲಿ ಇತ್ತೀಚಿಗೆ ಕೊಳ್ತ ಮಜಲು ನಲ್ಲಿ ನಡೆದ ಹತ್ಯೆಯ ಭಾಗವಗಿ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಸ್ಟೇಟಸ್ ಹಾಕಿರುವುದರ ವಿರುದ್ಧ ಬುಧವಾರ ಎಸ್‌ಡಿಪಿಐ ಕಾಜೂರು ನಾಯಕರ ನಿಯೋಗದಿಂದ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಯಿತು. ಕಾಜೂರಿನ ಪರಿಸರದಲ್ಲಿ ಹಿಂದೂ ಮುಸಲ್ಮಾನ ಭಾಂದವರು ಸುಮಾರು ವರ್ಷಗಳಿಂದ ಸೌರ್ಹಾದತೆಯಿಂದ ಬಾಳುತ್ತಿದ್ದು ಆತನ ಸ್ಟೇಟಸ್...















