ಅಂಡಿಂಜೆ ಬೈಕ್ ಅಪಘಾತ, ಯುವ ಭಾಗವತ ಸ್ಥಳದಲ್ಲೇ ಸಾವು
ಬೆಳ್ತಂಗಡಿ: ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಭಾಗವತರೊಬ್ಬರು ಸಾವನ್ನಪ್ಪಿದ ಘಟನೆ ಅಂಡಿಂಜೆಯಲ್ಲಿ ಸೋಮವಾರ ಮುಂಜಾನೆ ನಡೆದಿದೆ. ಅಂಡಿಂಜೆ ಗ್ರಾಮದ ನಿವಾಸಿ ಮಂಗಳಾದೇವಿ ಯಕ್ಷಗಾನ ಮೇಳದ ಭಾಗವತ ಸತೀಶ್ ಆಚಾರ್ಯ (40)ಸುಳ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮವನ್ನು ಮುಗಿಸಿ , ಹಿಂದಿರುಗುತ್ತಿದ್ದ ವೇಳೆ ಅಂಡಿಂಜೆ ಕಿಲಾರ ಮಾರಿಗುಡಿ ದೇವಸ್ಥಾನದ ಸಮೀಪದ ತಿರುವು ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್ ನಡುವೆ ಅಪಘಾತ ನಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಸತೀಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್‌ನಲ್ಲಿದ್ದವರಿಗೂ ಗಾಯವಾಗಿದೆ. ಮೃತರು ತಾಯಿ, ಸಹೋದರಿ,...
ಧರ್ಮಸ್ಥಳ ನೇರ್ತನೆ ನಿವಾಸಿ ಜೋಸೆಫ್ ನಿಧನ
ಬೆಳ್ತಂಗಡಿ; ಧರ್ಮಸ್ಥಳ ನೇರ್ತನೆ ನಿವಾಸಿ ಉದ್ಯಮಿಯಾಗಿದ್ದ ಜೋಸೆಫ್ ತೆಕ್ಕೆಕುಟ್ಟ್ (52) ಹೃದಯಾಘಾತದಿಂದ ನಿಧನರಾಗಿದ್ದಾರೆ.ಕಳೆದ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಇವರು ಭಾನುವಾರ ನಿಧನರಾಗಿದ್ದಾರೆ. ಮೃತರು ಪತ್ನಿ ನಾಲ್ವರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಧರ್ಮಸ್ಥಳ ಹಾಗೂ ಕಕ್ಕಿಂಜೆಯಲ್ಲಿ ಕೊಬ್ಬರಿ ಹಾಗೂ ಕೊಬ್ಬರಿ ಎಣ್ಣೆ ಉದ್ಯಮವನ್ನು ನಡೆಸುತ್ತಿದ್ದರು.
ಪೇರಲ್ದರಕಟ್ಟೆ ಜುಮಾ ಮಸೀದಿಯಲ್ಲಿ ರಮೇಶ್ ಗಿಂಡಾಡಿ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ
ಬೆಳ್ತಂಗಡಿ; ತಾಲೂಕಿನ ಪೇರಲ್ದರಕಟ್ಟೆಯ ಬದ್ರಿಯಾ ಜುಮ್ಮಾ ಮಸೀದಿ ಪೇರಲ್ದರಕಟ್ಟೆಯಲ್ಲಿ ರಮೇಶ್ ಗಿಂಡಾಡಿ ವತಿಯಿಂದ ಕೋಮುಸೌಹಾರ್ದಯುತವಾದ ತಾಲೂಕಿಗೆ ಮಾದರಿಯಾಗುವಂತಹ ಇಫ್ತಾರ್ ಮೀಟ್ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾದ ನವಾಝ್ ಕಟ್ಟೆ, ಖತಿಬರಾದ ಶಂಸುದ್ದಿನ್ ದಾರಿಮಿ, ಮಸೀದಿ ಗ್ರಾ.ಪಂ ಸದಸ್ಯ ನಿಝಮ್ ಪದಾಧಿಕಾರಿಗಳಾದ ಸಾದಿಕ್ ,ಸಿದ್ದಿಕ್ ,ಸಂಶುದ್ದೀನ್ ,ಹಾಜಿ ಅಬ್ಬುಬಕ್ಕರ್ ಮಂಜೋಟ್ಟಿ , ಸುಲೈಮಾನ್ ಮುಸ್ತಪಾ ,ಕಮರುದ್ದೀನ್ ,ಮೊನಾಕ ಅಲಿಮಾರ್,ಅಝೀಜ್ ಜಿ.ಎ,ಅಬ್ಬು ಗಿಂಡಾಡಿ, ಸಿರಾಜ್ ,ಜಮಾತ್ ಬಾಂದವರು ಇಫ್ತಾರ್ ಕಾರ್ಯಕ್ರಮ ಪಾಲ್ಗೊಂಡರು. ಜಮಾತ್ ಬಾಂದವರಿಂದ ರಮೇಶ್ ಗಿಂಡಾಡಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು
ಬೆಳ್ತಂಗಡಿ; ವಿವಿಧ ಸಂಘಟನೆಗಳ ಸಹರಾದಲ್ಲಿ ಮಾದಕ ವಸ್ತು ತಡೆ ಜಾಗೃತಿಗಾಗಿ ಬೃಹತ್ ಕಾಲ್ನಡಿಗೆ ಜಾಥಾ
ಬೆಳ್ತಂಗಡಿ: ಕಳೆದ ಕೆಲ ವರ್ಷಗಳಲ್ಲಿ ನಗರಗಳಿಗೆ ಸೀಮಿತವಾಗಿದ್ದ ಡ್ರಗ್ಸ್ ಹಾವಳಿ ಇಂದು ಜಿಲ್ಲಾ ಮಟ್ಟ, ತಾಲೂಕು ಮಟ್ಟ, ಗ್ರಾಮ ಮಟ್ಟದವರೆಗೆ ತಲುಪಿರುವುದು ಆತಂಕಕಾರಿ ವಿಷಯವಾಗಿದೆ. ಯುವ ಜನತೆ ದುಶ್ಚಟಗಳ ದಾಸರಾಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಅವರಲ್ಲಿ ಜಾಗೃತಿ ಮೂಡಿಸಿ, ಸ್ವಸ್ಥ್ಯ ಸಮಾಜ ನಿರ್ಮಾಣಕ್ಕೆ ಇಂತಹ ಕಾರ್ಯಕ್ರಮಗಳು ಪ್ರಸ್ತುತವಾಗಿದೆ ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹೇಳಿದರು.ಅವರು ಲಯನ್ಸ್ ಕ್ಲಬ್ ಬೆಳ್ತಂಗಡಿ ಮತ್ತು ಬೆಳ್ತಂಗಡಿ ಪೊಲೀಸರ ನೇತೃತ್ವದಲ್ಲಿ ವಿಜಯ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಗುರುವಾಯನಕೆರೆ, ಬ್ಯಾಂಕ್ ಆಫ್ ಬರೋಡಾ ಬೆಳ್ತಂಗಡಿ, ವೈಭವ್...
ಚಾರ್ಮಾಡಿ ಘಾಟಿಯಲ್ಲಿ ಕಂದಕಕ್ಕೆ ಉರುಳಿದ ಕಾರು
ಮೂಡಿಗೆರೆ:ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ತುಂಬಿದ್ದ ಕಾರಣ ರಸ್ತೆ ಕಾಣದೆ ಮಲೆಯಮಾರುತ ತಿರುವಿನಲ್ಲಿ ಪ್ರವಾಸಿಗರ ಕಾರು ಪಲ್ಟಿಯಾದ ಘಟನೆ ಸಂಭವಿಸಿದೆ.ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಪ್ರವಾಸಿಗರ ಸ್ವಿಫ್ಟ್ ಕಾರು ರಸ್ತೆ ಕಾಣದೆ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ 60 ಅಡಿಗಳ ಪ್ರಪಾತಕ್ಕೆ ಕಾರು ಬಿದ್ದಿದೆ. ಕಾರಿನಲ್ಲಿದ್ದ ಒಂದು ವರ್ಷದ ಮಗು ಸೇರಿದಂತೆ ಐವರು ಗಾಯಗೊಂಡಿದ್ದಾರೆ ಸ್ಥಳೀಯರ ಸಹಕಾರದೊಂದಿಗೆ ಕಾರಿನಲ್ಲಿದ್ದವರನ್ನು ರಕ್ಷಣೆಮಾಡಲಾಗಿದೆ.ಗಾಯಗೊಂಡರನ್ನು ಶಿವಮೊಗ್ಗ ಆಸ್ಪತ್ರೆಗೆ ಕಳುಹಿಸಲಾಗಿದ್ದುಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ಭಾರತದ ಮುಸ್ಲಿಮರು ಮೌನ ಪಾಲಿಸಿದರೆ ಬಾಬರಿ ಮಸೀದಿಯಂತೆ ವಕ್ಫ್ ಆಸ್ತಿಯನ್ನು ಕಳೆದುಕೊಳ್ಳುವ ದಿನ ದೂರವಿಲ್ಲ ಅನ್ವರ್ ಸಾದತ್
ಬೆಳ್ತಂಗಡಿ; ಸಮುದಾಯಕ್ಕಿರುವ ಶಾಸನಬದ್ಧ ಹಕ್ಕುಗಳನ್ನು ನಿರಾಕರಿಸುವಾಗ ನಮ್ಮ ಹಕ್ಕುಗಳಿಗಾಗಿ ಸಂವಿಧಾನಾತ್ಮಕವಾದ ಹೋರಾಟಗಳಿಗೆ ಹೆಜ್ಜೆ ಹಾಕದೆ ಮೌನ ವಹಿಸಿದರೆ ಬಾಬರಿ ಮಸೀದಿಯಂತೆ ನಮ್ಮ ವಕ್ಫ್ ಆಸ್ತಿಗಳನ್ನು ನಾವು ಕಳೆದು ಕೊಳ್ಳುವ ದಿನ ದೂರವಿಲ್ಲ ಎಂದು ಎಸ್.ಡಿ.ಪಿ.ಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಹೇಳಿದರು. ಅವರು ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಲ್ಲಿ ಎಸ್.ಡಿ.ಪಿ.ಐ ವತಿಯಿಂದ ನಡೆದ ಮರ್ಹೂಂ ಹೈದರ್ ನೀರ್ಸಾಲ್ ಸ್ಮರಣಾರ್ಥ ಇಫ್ತಾರ್ ಮತ್ತು ವಕ್ಫ್ ತಿದ್ದುಪಡಿ ಕಾಯ್ದೆಯ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ದೇಶದ ಹಿರಿಮೆ ಮತ್ತು ಘನತೆಯ ಸಂಕೇತವಾಗಿ ಜಗತ್ತಿನ...
ಕೇಂದ್ರದ ‘ಪ್ರಸಾದಂ’ ಯೋಜನೆಯ ಅಡಿಯಲ್ಲಿ ಜಿಲ್ಲೆಯ ದೇವಾಲಯ ಗಳಿಗೆ ಅನುದಾನ ಒದಗಿಸುವಂತೆ ಶಾಸಕ ಹರೀಶ್ ಪೂಂಜ ಅವರಿಂದ ಸಚಿವರಿಗೆ ಮನವಿ
ಬೆಳ್ತಂಗಡಿ; ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಬ್ರಿಜೇಶ್ ಚೌಟ ಅವರೊಂದಿಗೆ ಶಾಸಕ ಹರೀಶ್ ಪೂಂಜ ಅವರು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ “ಪ್ರಸಾದಂ”ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಾದ ಬೆಳ್ತಂಗಡಿ ತಾಲ್ಲೂಕಿನ ಶ್ರೀ ನಂದಿಕೆಶ್ವರ ದೇವಸ್ಥಾನ ನಂದಿಬೆಟ್ಟ ಗರ್ಡಾಡಿ, ಬೆಳ್ತಂಗಡಿ ತಾಲ್ಲೂಕಿನ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬೆಳ್ತಂಗಡಿ ತಾಲ್ಲೂಕಿನ ಶ್ರೀ ಶಿಶಿಲೇಶ್ವರ ದೇವಸ್ಥಾನ ಶಿಶಿಲ, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಉಪ್ಪಿನಂಗಡಿ ಹಾಗೂ ಶ್ರೀ ತೋಡಿಕ್ಕಾನ ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ದಿಗೆ ಪ್ರಸಾದಂ ಯೋಜನೆಯಡಿಯಲ್ಲಿ ಅನುದಾನ ಒದಗಿಸುವಂತೆ ಕೇಂದ್ರ ಪ್ರವಾಸೊಧ್ಯಮ ಸಚಿವರಾದ ಶ್ರೀ...
ಬೆಳಾಲು; ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿ ಪೊಲೀಸ್ ವಶಕ್ಕೆ
ಬೆಳ್ತಂಗಡಿ; ಬೆಳ್ತಂಗಡಿ: ಬೆಳಾಲು ಎಂಬಲ್ಲಿ ಪಿಯುಸಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಶಂಕರ ಗೌಡ ಎಂಬವನ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪೋಕೋ ಪ್ರಕರಣ ದಾಖಲಾಗಿದೆ. ತಂದೆ ತಾಯಿ ತರಗೆಲೆ ತರಲು ಹೋಗಿದ್ದ ಸಂದರ್ಭಮನೆಯಲ್ಲಿ ಯಾರು ಇಲ್ಲದ ವೇಳೆ ನೀರು ಕೇಳುವ ನೆಪದಲ್ಲಿ ಬಂದ ವ್ಯಕ್ತಿ ಪಿಯುಸಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಈ ವೇಳೆ ಆತನ ಕೈಗೆ ಕಚ್ಚಿ ಯುವತಿ ತಪ್ಪಿಸಿಕೊಂಡು ಹತ್ತಿರದ ಚಿಕ್ಕಪ್ಪನ ಮನೆಗೆ ಓಡಿ ಬಂದು ವಿಷಯ ತಿಳಿಸಿದ್ದಾಳೆ ಕೂಡಲೇ ಅಲ್ಲಿಗೆ ಬಂದು ನೋಡಿದಾಗ ಆತ ಪರಾರಿಯಾಗಿದ್ದ ಎಂದು ದೂರಿನಲ್ಲಿ...
ಪದ್ಮುಂಜ ಸರಕಾರಿ ಶಾಲೆಯಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಎಸ್.ಎಸ್.ಎಲ್.ಸಿ ಪರೀಕ್ಷೆಯಿಂದ ಹೊರಗಿಟ್ಟ ಶಿಕ್ಷಕರು! ಎಸ್.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆ ಆರೋಪ
ಬೆಳ್ತಂಗಡಿ: ತಾಲೂಕಿ ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಿಂದ 2 ಹೆಣ್ಣುಮಕ್ಕಳನ್ನು ಅವಕಾಶ ವಂಚಿಸಿರುವ ಘಟನೆ ವರದಿಯಾಗಿದ್ದು ಈ ಬಗ್ಗೆ ಮಕ್ಕಳು ಸ್ವತಹ ಮಕ್ಕಳ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ ಖಾಸಗಿ ಶಾಲೆಗಳು 100% ಫಲಿತಾಂಶಕ್ಕಾಗಿ ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಒಂಬತ್ತನೇ ತರಗತಿಯಿಂದಲೇ ಬೇರೆ ಶಾಲೆಗೆ ವರ್ಗಾಯಿಸುತ್ತಿರುವ ಬಗ್ಗೆ ದೂರುಗಳು ಸಹಜವಾಗಿಯೇ ಹಲವೆಡೆಯಿಂದ ಕೇಳಿ ಬರುತ್ತಿರುವಾಗ ಇದೀಗ ಸರಕಾರಿ ಶಾಲೆಯು ಪರೀಕ್ಷೆಗೆ ಅವಕಾಶ ನಿರಾಕರಿಸಿರುವ ಘಟನೆ ಬೆಳಕಿಗೆ ಬಂದಿದೆ.ಎಲ್ಲಾ ತರಹದ ಮಕ್ಕಳಿಗೂ ಸಮಾನ ಶಿಕ್ಷಣ ಹಾಗೂ...
ಬೆಳ್ತಂಗಡಿ; ಪತ್ನಿಗೆ ಕಿರುಕುಳ ಆರೋಪ ರಜೆಯಲ್ಲಿ ತೆರಳಿರುವ ಧರ್ಮಸ್ಥಳ ಪಿ.ಎಸ್.ಐ
ಬೆಳ್ತಂಗಡಿ; ಬೆಂಗಳೂರಿನ ನಾಗರಬಾವಿ ಟೀಚರ್ಸ್ ಕಾಲೊನಿಯ ಮಾನಸ ನಗರದ ನಿವಾಸಿ ಆರ್.ವರ್ಷಾ ಅವರು ಪತಿ ( ಧರ್ಮಸ್ಥಳ ಪಿಎಸ್‌ಐ ಪಿ.ಕಿಶೋರ್) ಸೇರಿದಂತೆ ನಾಲ್ವರ ವಿರುದ್ಧ ವರದಕ್ಷಿಣೆಗಾಗಿ ಕಿರುಕುಳ ನೀಡಿದ ಕುರಿತು ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ದೂರು ದಾಖಲಾದ ಬೆನ್ನಲ್ಲಿಯೇ ಪಿಎಸ್.ಐ ಕಿಶೋರ್ ಅವರು ರಜೆಯಲ್ಲಿ ತೆರಳಿರುವುದಾಗಿ ತಿಳಿದು ಬಂದಿದೆ.ಈತ ವರದಕ್ಷಿಣೆ ತರುವಂತೆ ಪದೇ ಪದೇ ಹಿಂಸೆ ನೀಡಿ, ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ' ಎಂದು ಅವರ ಪತ್ನಿ ಆರೋಪಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕಿಶೋರ್, ಅವರ...















