ಪದ್ಮುಂಜ ಸರಕಾರಿ ಶಾಲೆಯಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಎಸ್.ಎಸ್.ಎಲ್.ಸಿ ಪರೀಕ್ಷೆಯಿಂದ ಹೊರಗಿಟ್ಟ ಶಿಕ್ಷಕರು! ಎಸ್.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆ ಆರೋಪ

0

ಬೆಳ್ತಂಗಡಿ: ತಾಲೂಕಿ ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಿಂದ 2 ಹೆಣ್ಣುಮಕ್ಕಳನ್ನು ಅವಕಾಶ ವಂಚಿಸಿರುವ ಘಟನೆ ವರದಿಯಾಗಿದ್ದು ಈ ಬಗ್ಗೆ ಮಕ್ಕಳು ಸ್ವತಹ ಮಕ್ಕಳ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ ಖಾಸಗಿ ಶಾಲೆಗಳು 100% ಫಲಿತಾಂಶಕ್ಕಾಗಿ ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಒಂಬತ್ತನೇ ತರಗತಿಯಿಂದಲೇ ಬೇರೆ ಶಾಲೆಗೆ ವರ್ಗಾಯಿಸುತ್ತಿರುವ ಬಗ್ಗೆ ದೂರುಗಳು ಸಹಜವಾಗಿಯೇ ಹಲವೆಡೆಯಿಂದ ಕೇಳಿ ಬರುತ್ತಿರುವಾಗ ಇದೀಗ ಸರಕಾರಿ ಶಾಲೆಯು ಪರೀಕ್ಷೆಗೆ ಅವಕಾಶ ನಿರಾಕರಿಸಿರುವ ಘಟನೆ ಬೆಳಕಿಗೆ ಬಂದಿದೆ.ಎಲ್ಲಾ ತರಹದ ಮಕ್ಕಳಿಗೂ ಸಮಾನ ಶಿಕ್ಷಣ ಹಾಗೂ...

ಬೆಳ್ತಂಗಡಿ; ಪತ್ನಿಗೆ ಕಿರುಕುಳ ಆರೋಪ ರಜೆಯಲ್ಲಿ ತೆರಳಿರುವ ಧರ್ಮಸ್ಥಳ ಪಿ.ಎಸ್.ಐ

0

ಬೆಳ್ತಂಗಡಿ; ಬೆಂಗಳೂರಿನ ನಾಗರಬಾವಿ ಟೀಚರ್ಸ್ ಕಾಲೊನಿಯ ಮಾನಸ ನಗರದ ನಿವಾಸಿ ಆರ್.ವರ್ಷಾ ಅವರು ಪತಿ ( ಧರ್ಮಸ್ಥಳ ಪಿಎಸ್‌ಐ ಪಿ.ಕಿಶೋರ್) ಸೇರಿದಂತೆ ನಾಲ್ವರ ವಿರುದ್ಧ ವರದಕ್ಷಿಣೆಗಾಗಿ ಕಿರುಕುಳ ನೀಡಿದ ಕುರಿತು ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ದೂರು ದಾಖಲಾದ ಬೆನ್ನಲ್ಲಿಯೇ ಪಿಎಸ್.ಐ ಕಿಶೋರ್ ಅವರು ರಜೆಯಲ್ಲಿ ತೆರಳಿರುವುದಾಗಿ ತಿಳಿದು ಬಂದಿದೆ.ಈತ ವರದಕ್ಷಿಣೆ ತರುವಂತೆ ಪದೇ ಪದೇ ಹಿಂಸೆ ನೀಡಿ, ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ' ಎಂದು ಅವರ ಪತ್ನಿ ಆರೋಪಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕಿಶೋರ್, ಅವರ...

ಅಂಡಿಂಜೆ; ಪವರ್ ಮ್ಯಾನ್ ನಾರಾವಿ ನಿವಾಸಿ ಸುಧಾಕರ  ಅಸಹಜ ಸಾವು

0

ಬೆಳ್ತಂಗಡಿ: ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ವೇಣೂರು ಶಾಖೆಯ ಪವರ್ ಮ್ಯಾನ್ ನಾರಾವಿ ನಿವಾಸಿ ಕಿಟ್ಟ ಯಾನೆ ಸುಧಾಕರ(50) ಅಸಹಜವಾಗಿ ಸಾವನ್ನಪ್ಪಿದ ಘಟನೆ ಮಾ.26ರಂದು ನಡೆದಿದೆ.ಕರ್ತವ್ಯದಲ್ಲಿದಲ್ಲಿ ಇದ್ದ ಇವರು ಅಂಡಿಜೆಯಲ್ಲಿ ರಸ್ತೆ ಬದಿಯಲ್ಲಿ ವಿದ್ಯುತ್ ಕಂಬದ ಹತ್ತಿರ ಬಿದ್ದುಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಇವರನ್ನು ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದರು. ಈ ವೇಳೆ ಅವರು ಸಾವನ್ನಪ್ಪಿದ್ದಾರುವುದಾಗಿ ಅಲ್ಲಿನ ವೈದ್ಯರು ದೃಢಪಡಿಸಿದರು. ಇವರಮೈಮೇಲೆ ಯಾವುದೇ ಗಾಯದ ಕುರುಹುಗಳು ಕಂಡುಬಂದಿಲ್ಲದಿರುವುದರಿಂದ ಯಾವ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಪೋಸ್ಟ್ ಮಾರ್ಟಂ ಬಳಿಕ...

ಮುಂಡಾಜೆ; ಗಾಳಿ ಮಳೆಗೆ ವಿದ್ಯುತ್ ಟವರ್ ಮೇಲೆ ಬಿದ್ದ ಮರ

0

ಬೆಳ್ತಂಗಡಿ ತಾಲೂಕಿನ ವಿವಿಧ ಕಡೆಗಳಲ್ಲಿ ಬುಧವಾರ ಸಂಜೆ ಗುಡುಗು,ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಮುಂಡಾಜೆ ಗ್ರಾಮದ ಪರಮುಖ ಎಂಬಲ್ಲಿ ಗುರುವಾಯನಕೆರೆಯಿಂದ ಕಕ್ಕಿಂಜೆ ವಿದ್ಯುತ್ ಪೂರೈಸುವ 33 ಕೆವಿ ಟವರ್ ನ ಮೇಲೆ ಮರ ಉರುಳಿ ಬಿದ್ದು ಟವರ್ ಗೆ ಹಾನಿಯಾಗಿದೆ.ಇದರಿಂದ ಕಕ್ಕಿಂಜೆ ವಿದ್ಯುತ್ ಸಬ್ ಸ್ಟೇಷನ್ ವ್ಯಾಪ್ತಿಯ ಚಾರ್ಮಾಡಿ, ನೆರಿಯ, ತೋಟತ್ತಾಡಿ, ಚಿಬಿದ್ರೆ ಮುಂಡಾಜೆ ಕಲ್ಮಂಜ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ ಮೊದಲಾದ ಗ್ರಾಮಗಳ ಸಾವಿರಾರು ಗ್ರಾಹಕರಿಗೆ ವಿದ್ಯುತ್‌ ಪೂರೈಕೆಯಲ್ಲಿ ಅಡಚಣೆಯುಂಟಾಗಿದೆ.

ಬಿಜೆಪಿ ಶಾಸಕ ಬಸವನ ಗೌಡ ಯತ್ನಾಳ್ ಪಕ್ಷದಿಂದ ಉಚ್ಚಾಟನೆ

0

ಬೆಂಗಳೂರು: ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.ಪದೇ ಪದೇ ಶಿಸ್ತು ಉಲ್ಲಂಘಿಸಿದ ಆರೋಪದಲ್ಲಿ ವಿಜಯಪುರದ ಶಾಸಕ ಯತ್ನಾಳ್‌ ಅವರಿಗೆ ಇತ್ತೀಚೆಗೆ ಶೋಕಾಸ್‌ ನೋಟಿಸ್‌ ನೀಡಲಾಗಿತ್ತು.ಶೋಕಾಸ್‌ ನೋಟಿಸ್‌ ಗೆ ಉತ್ತರಿಸಿದ್ದ ಯತ್ನಾಳ್‌, ಶಿಸ್ತು ಉಲ್ಲಂಘಿಸುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಅವರು ಪದೇ ಪದೇ ಶಿಸ್ತು ಉಲ್ಲಂಘಿಸಿದ್ದಾರೆ. ಆದ್ದರಿಂದ ಯತ್ನಾಳ್‌ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ 6 ವರ್ಷಗಳ ಅವಧಿಗೆ ಉಚ್ಚಾಟಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಕೇಂದ್ರ...

ಪಟ್ರಮೆ: ಮಿತ್ತಡ್ಕದಲ್ಲಿ ಆಕಸ್ಮಿಕ ಬೆಂಕಿ ಅವಘಡ  ಸಂಜೀವ ಗೌಡರ ಮನೆ ಭಸ್ಮ, ಅಪಾರ ಆರ್ಥಿಕ ನಷ್ಟ

0

ಬೆಳ್ತಂಗಡಿ; ಪಟ್ರಮೆ ಗ್ರಾಮದ ಮಿತ್ತಡ್ಕದಲ್ಲಿ ಆಕಸ್ಮಿಕ ಬೆಂಕಿ ಅವಘಡದಲ್ಲಿ ಸಂಜೀವ ಗೌಡ ಎಂಬವರ ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾದ ಘಟನೆ ಮಂಗಳವಾರ ಸಂಜೆ ನಡೆದಿದೆ.ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ್ದು, ಬೆಂಕಿ ತೀವ್ರಗತಿಯಲ್ಲಿ ಹಬ್ಬಿಕೊಂಡು ಮನೆ ಸಂಪೂರ್ಣ ಸುಟ್ಟುಹೋಗಿದೆ. ಸ್ಥಳೀಯರು ಕೂಡಲೇ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು, ಬೆಂಕಿ ಅವಘಡದಿಂದಾಗಿ ಮನೆಯ ಪಕ್ಕಾಸು, ಹಂಚು ಸೇರಿದಂತೆ ಎಲ್ಲಾ ಗೃಹೋಪಯೋಗಿ ಸಾಮಾಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಸುಮಾರು ರೂ.2 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.ಘಟನಾ ಸ್ಥಳಕ್ಕೆ ಪಂಚಾಯತಿ ಅಧ್ಯಕ್ಷರು...

ಮದ್ದಡ್ಕ; ಹೆದ್ದಾರಿ ಚರಂಡಿಗೆ ಉರುಳಿದ ಕಾರು

0

ಬೆಳ್ತಂಗಡಿ: ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಮದ್ದಡ್ಕ ಸಮೀಪ ಮಾರುತಿ ಕಾರು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ಮಾ 26 ರಂದು ಮಧ್ಯಾಹ್ನ ನಡೆದಿದೆ. ಉಜಿರೆ ಕಡೆಯಿಂದ ಮಂಗಳೂರು ಕಡೆ ಸಾಗುತ್ತಿದ್ದು ಕಾರು ಹೆದ್ದಾರಿಯ ರಸ್ತೆಯ ಕಾಮಗಾರಿ ನಡೆಯುತ್ತಿದ್ದ ಚರಂಡಿಗೆ ಬಿದ್ದಿದ್ದು ಕಾರು ನಜ್ಜುಗುಜ್ಜಾಗಿದೆ. ಅದೃಷ್ಟವಾತ್ ಯಾವುದೇ ಅಪಾಯ ಸಂಭವಿಸಿಲ್ಲ ಇಬ್ಬರು ಪ್ರಯಾಣಿಕರು ಕಾರಿನಲ್ಲಿ ಇದ್ದರು ಎನ್ನಲಾಗಿದೆ.ಇಲ್ಲಿ ತೆರೆದ ಚರಂಡಿ ಇದ್ದು ಇದನ್ನು ಗುರುತಿಸಲು ಯಾವುದೇ ಸೂಚನಾ ಫಲಕಗಳಿಲ್ಲ.ಕಳೆದ ಎರಡು ಮೂರು ದಿನಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ವಾಹನಗಳು ಚರಂಡಿಗೆ ಬೀಳುತ್ತಿದ್ದು ಇನ್ನದರೂ...

ಪದ್ಮಜ; ಸರಕಾರಿ ಪ್ರೌಢಶಾಲೆಯಲ್ಲಿ ರಂಗಸಿರಿ ಯಕ್ಷಗಾನ ತರಬೇತಿ ಉದ್ಘಾಟನೆ

0

ಪದ್ಮುಂಜ : ಸರಕಾರಿ ಪ್ರೌಢಶಾಲೆ ಪದ್ಮುಂಜ ಇದರ ಸಭಾಭವನದಲ್ಲಿ ರಂಗಸಿರಿ ಯಕ್ಷಗಾನ ತರಬೇತಿ ಕೇಂದ್ರ ಉದ್ಘಾಟನೆ ಮಾಡಲಾಯಿತು. ಈ ಕಾರ್ಯಕ್ರಮವನ್ನು  ನಾರಾಯಣಗೌಡ ಮುಚ್ಚುರು ಉದ್ಘಾಟಿಸಿ,ಮಕ್ಕಳಿಗೆ ಶುಭವನ್ನು ಹಾರೈಸಿದರು. ಅಧ್ಯಕ್ಷತೆಯನ್ನು ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಸೀತಾರಾಮ ಮಡಿವಾಳ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಘವ ಗೇರುಕಟ್ಟೆ, ಯಕ್ಷಗಾನ ಅಕಾಡೆಮಿ ಸದಸ್ಯರು ಹಾಗೂ ಭರತನಾಟ್ಯ ನೃತ್ಯ ಗುರುಗಳಾದ ವಿದುಷಿ  ಡಿಂಪಲ್ ಇವರು ಉಪಸ್ಥಿತರಿದ್ದರು. ಹಾಗೆಯೇ ಕಿರಣ್ ಪುಷ್ಪಗಿರಿ ಇವರು ಕಾರ್ಯಕ್ರಮಕ್ಕೆ ಆಗಮಿಸಿ ಮಕ್ಕಳಿಗೆ ಶುಭ ಹಾರೈಸಿ ಸಿಹಿ ತಿಂಡಿಗಳನ್ನು ಹಂಚಿದರು. ಸಂಧ್ಯಾ ಆನಂದ್ ಇವರು...

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆ

0

ಉಜಿರೆ, ಮಾರ್ಚ್ 25: ಉಜಿರೆಯ ಎಸ್.ಡಿ.ಎಂ ಕಾಲೇಜು ಡಿ.ರತ್ನವರ್ಮ ಹೆಗಡೆ ಸ್ಮರಣಾರ್ಥ 'ಆಧುನಿಕತಂತ್ರಜ್ಞಾನ ಸಾಂಸ್ಕೃತಿಕ ಪರಂಪರೆಗೆ ಪೂರಕ/ಮಾರಕ' ಕುರಿತು ಮಂಗಳವಾರ ಆಯೋಜಿಸಿದ್ದ ಮಂಗಳೂರು ವಿಶ್ವದ್ಯಾನಿಲಯ ಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆಯಲ್ಲಿ ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗೀತಾ ಹಾಗೂ ನವ್ಯಶ್ರೀ ಯು ಪ್ರಥಮ ಸ್ಥಾನ ಗಳಿಸಿದ್ದಾರೆ.ಉಜಿರೆ ಎಸ್ ಡಿ ಎಮ್ ಬಿ.ಎಡ್ ಕಾಲೇಜಿನ ಫಾತಿಮತ್ ರಜಿಯಾ ಹಾಗೂ ಯಶಸ್ ದ್ವಿತೀಯ ಸ್ಥಾನ ಪಡೆದರು. ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಸಂದೀಪ್ ಜೆ ಸಮೈ ಅವರು ಉತ್ತಮ ಚರ್ಚೆಗೆ ವೈಯಕ್ತಿಕ ಬಹುಮಾನ...

ಶ್ರೀ ಕ್ಷೇತ್ರ ಧರ್ಮಸ್ಥಳ, ಹಾಗೂ ಡಾ.ಹೆಗ್ಗಡೆಯವರ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ದ ನ್ಯಾಯಾಲಯದಿಂದ ನಿರ್ಬಂಧ ಆದೇಶ

0

ಬೆಳ್ತಂಗಡಿ;ಬೆಂಗಳೂರು ನಗರ ಸಿವಿಲ್ ನ್ಯಾಯಾಲಯವು ಧರ್ಮಸ್ಥಳ ಕ್ಷೇತ್ರ ಹಾ್ಊ ಡಾ.ಡಿ ವೀರೇಂದ್ರ ಹೆಗ್ಗಡೆಯವರ ವಿರುದ್ದ ಅವಹೇಳನ. ಅಪಪ್ರಚಾರ ಮಾಡುವವರ ವಿರುದ್ದ  OS 2145/2025 ಪ್ರಕರಣದಲ್ಲಿ ಜಾನ್ ಡೋ (ಅಶೋಕಕುಮಾರ್) ಆದೇಶ ನೀಡಿದೆ. ಈ ಆದೇಶದಂತೆ, ಯಾರೇ ಆಗಿದ್ದರೂ ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಅವರ ಕುಟುಂಬದ ಸದಸ್ಯರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಸಂಸ್ಥೆಗಳ ವಿರುದ್ಧ ಅವಹೇಳನಕಾರಿ ಮತ್ತು ಅಪಪ್ರಚಾರ ಮಾಡುವ ಮಾಹಿತಿಯನ್ನು ಪ್ರಕಟಿಸಲು ಅಥವಾ ಹರಡಲು ಆವಕಾಶವಿರುವುದಿಲ್ಲ. ಜಾನ್ ಡೋ (ಅಶೋಕಕುಮಾರ್) ಆದೇಶ ಎಂದರೇನು? -ಜಾನ್ ಡೋ...