ಮುಂಡಾಜೆಯಲ್ಲಿ ಜಯರಾಂ ಕೆ ಅವರಿಗೆ ‘ನುಡಿ’ನಮನ; ಜಯರಾಂ ಅವರು ಬಹುವಿಧ ಕಲಾ ಪ್ರಾಕಾರಗಳಲ್ಲಿ ತೊಡಗಿಸಿಕೊಂಡಿದ್ದರು; ಶ್ರೀಧರ ಜಿ ಭಿಡೆ
ಬೆಳ್ತಂಗಡಿ; ವಿದ್ಯೆ, ಕಲೆ, ಸಾಹಿತ್ಯ ಸಂಸ್ಕೃತಿ, ಜಾನಪದ, ತರಬೇತಿ, ನಾಟಕ, ಕ್ರೀಡೆ ಹೀಗೆ ಬಹುವಿಧ ಪ್ರಾಕಾರಗಳಲ್ಲಿ ಜಯರಾಂ ಕೆ ಅವರು ತೊಡಗಿಸಿಕೊಂಡಿದ್ದರು. ಹಲವರಿಗೆ ಬದುಕುವ ದಾರಿ ತೋರಿದ್ದ ಅವರ ಈ ಎಲ್ಲಾ ಪೌಢಿಮೆ ಅನುಕರಣೀಯವಾದುದು ಎಂದು ಮುಂಡಾಜೆ ಭಿಡೆ ಮನೆಯ ಹಿರಿಯ ಮುತ್ಸದ್ದಿ ಶ್ರೀಧರ ಜಿ ಭಿಡೆ ಹೇಳಿದರು.ಇತ್ತೀಚೆಗೆ ಅಗಲಿದ ಕಲಾರಾಧಕ, ಹವ್ಯಾಸಿ ಶಿಕ್ಷಕ, ತರಬೇತುದಾರ ಜಯರಾಂ ಕೆ ಅವರಿಗೆಮುಂಡಾಜೆ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಭಜನಾ ನಮನ, ಗಾನ ನಮನ, 'ನುಡಿ' ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮನುಷ್ಯನ ಒಳ್ಳೆಯ...
ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡಕ್ಕೆ ಸರ್ಕಾರದಿಂದ 9 ಕೋಟಿ ಅನುದಾನ ಮಂಜೂರು ಸಚಿವರಿಗೆ ಅಭಿನಂದನೆ
ಬೆಳ್ತಂಗಡಿ. ತಾಲೂಕಿನ ಸುಮಾರು 60 ವರ್ಷ ಹಳೆಯದಾದ ಬೆಳ್ತಂಗಡಿಯ ನ್ಯಾಯಾಲಯದ ಕಟ್ಟಡನಾದುರಸ್ತಿಯಲ್ಲಿದ್ದು ಹೊಸ ನ್ಯಾಯಾಲಯದ ಕಟ್ಟಡಕ್ಕೆ ಸರ್ಕಾರ 9 ಕೋಟಿ ಅನುದಾನ ಮಂಜೂರು ಗೊಳಿಸಿದೆ. ಇಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಸಚಿವರಾದ ಎಚ್ ಕೆ ಪಾಟೀಲ್ ರವರನ್ನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ,ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಹಾಗೂ ಅನುದಾನಕ್ಕೆ ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ರಕ್ಷಿತ್ ಶಿವರಾಂ, ಅಪಾರ ಸರ್ಕಾರಿ ವಕೀಲರಾದ ಮನೋಹರ್ ಕುಮಾರ್ ಎ...
ಉಜಿರೆ; ವಿದ್ಯುತ್ ಆಘಾತಕ್ಕೆ ಈಡಾದ ಯುವಕನ ರಕ್ಷಣೆ
ಬೆಳ್ತಂಗಡಿ; ಉಜಿರೆ ಟಿ. ಬಿ ಕ್ರಾಸ್ ನಲ್ಲಿ ವಾಹನ ತೊಳೆಯುತ್ತಿದ್ದ ವೇಳೆ ನೀರು ಹಾಯಿಸುವ ಗನ್ ಮೂಲಕ ವಿದ್ಯುತ್ ಹರಿದು ಶಾಕ್ ಹೊಡೆದು ಅದರಲ್ಲಿಯೇ ಸಿಲುಕಿಕೊಂಡ ವ್ಯಕ್ತಿಯನ್ನು ಸ್ಥಳೀಯರು ಸಾಹಸಿಕವಾಗಿ ರಕ್ಷಿಸದ್ದಾರೆ.ಇಲ್ಲಿನ ನಿವಾಸಿ ಸಾದಿಕ್ ಎಂಬಾತ ವಾಹನ ತೊಳೆಯುತ್ತಿದ್ದ ವೇಳೆ ವಿದ್ಯುತ್ ಗೆ ಆಘಾತಕ್ಕೆ ಈಡಾಗಿದ್ದಾರೆ. ಈ ಸಂದರ್ಭದಲ್ಲಿ ಇದನ್ನು ಗಮನಿಸಿದ ಸ್ಥಳೀಯರಾದ ಉಸ್ಮಾನ್ , ಮನ್ಸೂರ್, ಹಮೀದ್ ಹಾಗೂ ಹಾರಿಸ್ ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ವಿದ್ಯುತ್ ಆಘಾತಕ್ಕಡ ಈಡಾಗಿ ಸಿಲುಕಿಕೊಂಡಿದ್ದ ಯುವಕನನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ. ಇದೀಗ ಆತನನ್ನು ಉಜಿರೆಯ ಖಾಸಗಿ...
ಬೆಳ್ತಂಗಡಿ; ಮಳೆ ಹಾನಿ ವಿಪತ್ತು ನಿರ್ವಹಣೆ ಬಗ್ಗೆ ಸಮಾಲೋಚನಾ ಸಭೆ
ಬೆಳ್ತಂಗಡಿ; ಮಳೆ ಹಾನಿ- ವಿಪತ್ತು ನಿರ್ವಹಣೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಯವರು ನೀಡಿರುವ ಸೂಚನೆಯಂತೆ ಬೆಳ್ತಂಗಡಿ ತಾ. ಪಂ. ಸಭಾಂಗಣದಲ್ಲಿ ತಹಸೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ರವರು ಲೋಕೋಪಯೋಗಿ ಇಲಾಖೆ, ಶಿಕ್ಷಣ ಇಲಾಖೆ, ಮೆಸ್ಕಾಂ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಸಭೆ ನಡೆಸಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರಮ ವಹಿಸಲು...
ಗೇರುಕಟ್ಟೆ: ಸುಣ್ಣಲಡ್ಡದಲ್ಲಿ ತಡರಾತ್ರಿ ಮನೆಗೆ ನುಗ್ಗಿ ನಗದು ಕಳ್ಳತನ.ಇನ್ಸ್ ಪೆಕ್ಟರ್ ಸುಬ್ಬಾಪುರ ಮಠ್ ಬೇಟಿ.ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದ ಪರಿಶೀಲನೆ
ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಸುಣ್ಣ ಲಡ್ಡ ಎಂಬಲ್ಲಿ ಆಸಿಫ್ ಎಂಬವರ ಮನೆಗೆ ದಿನಾಂಕ :09:06:2025 ರಂದು ತಡರಾತ್ರಿ ಯಾರೋ ಕಳ್ಳರು ನುಗ್ಗಿ ಮಲಗಿದ್ದ ಕೋಣೆಯಲ್ಲಿದ್ದ ಗೋದ್ರೆಜ್ ನಲ್ಲಿಟ್ಟಿದ್ದ ದಾಖಲೆ ಪತ್ರ, ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಗೊಳಿಸಿ ನಗದು ಕಳ್ಳತನ ನಡೆಸಿದ್ದಾರೆ. ಗೋದ್ರೇಜ್ ನ ಬಾಗಿಲು ತೆರೆಯುವ ಶಬ್ದ ಕೇಳಿ ಅಲ್ಲೇ ಮಲಗಿದ್ದ ಆಸಿಫ್ ಗೆ ಎಚ್ಚರವಾದಾಗ ಕಳ್ಳನು ಹಿಂದಿನ ಬಾಗಿಲಿನಿಂದ ಓಡಿ ಪರಾರಿಯಾಗಿದ್ದಾನೆ. ತಕ್ಷಣ ಮನೆ ಮಾಲಿಕರು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್ ಮತ್ತು ಅರ್ಶದ್ ರವರಿಗೆ...
ಸತ್ಯಶೋಧಕ ವೇದಿಕೆಯಿಂದ ವಿಶ್ವ ಪರಿಸರ ದಿನಾಚರಣೆ
ಬೆಳ್ತಂಗಡಿ; ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸತ್ಯ ಶೋಧಕ ವೇದಿಕೆಯಿಂದ ಭಾನುವಾರ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಹಚ್ಚಾಡಿ ಅಂಗನವಾಡಿ ಕೇಂದ್ರದ ಪುಟ್ಟ ಮಕ್ಕಳೊಂದಿಗೆ, ಅಂಗನವಾಡಿ ಪರಿಸರದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಸತ್ಯ ಶೋಧಕ ವೇದಿಕೆಯ ಅಧ್ಯಕ್ಷರಾದ ಸುಕೇಶ್ ಮಾಲಾಡಿ ರವರು ಮಾತಾಡಿ, ನಮ್ಮ ಮುಂದಿನ ಬದುಕಿಗಾಗಿ ನಾವು ಪರಿಸರವನ್ನು ಸಂರಕ್ಷಣೆ ಮಾಡಲೇ ಬೇಕಾಗಿದೆ. ಹಸಿರೇ ಉಸಿರು, ಉಸಿರಿಗಾಗಿ ಪರಿಸರ ಎನ್ನುವಂತೆ ಸತ್ಯ ಶೋಧಕದ ಆಶಯಗಳಲ್ಲಿ ಪರಿಸರ ಜಾಗ್ರತಿ ಕಾರ್ಯಕ್ರಮ ಕೂಡ ಒಂದು. ಪರಿಸರದ ಕಾಳಜಿ ಸಣ್ಣ ಮಕ್ಕಳಿಂದಲೇ...
ದಟ್ಟ ಅರಣ್ಯದಲ್ಲಿ ಸಿಲುಕಿದ ಟ್ರಕ್ಕಿಂಗ್ ತಂಡದ ರಕ್ಷಣೆ; ಬಲ್ಲಾಳ ರಾಯನ ದುರ್ಗ ಟ್ರಕ್ಕಿಂಗ್ ಬಂದು ಕಾಡಿನಲ್ಲಿ ಸಿಲುಕಿದ ತಂಡ
ಬೆಳ್ತಂಗಡಿ: ಚಿತ್ರದುಗದಿಂದ ಬಂದುಬೆಳ್ತಂಗಡಿ ಮೂಲಕ ಬಲ್ಲಾಳರಾಯನ ದುರ್ಗಕ್ಕೆ ಚಾರಣಕ್ಕೆ ತೆರಳಿದ್ದ 10 ತಂಡ ಬಲ್ಲಾಳರಾಯನ ದುರ್ಗಾದ ಕಾಡಿನಲ್ಲಿ ಸಿಲುಕಿದ ಘಡನೆ ಸೋಮವಾರ ನಡೆದಿದ್ದು ತಡರಾತ್ರಿಯ ವೇಳೆ ಹತ್ತು ಮಂದಿಯನ್ನು ಪೊಲೀಸರು ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿಸುರಕ್ಷಿತವಾಗಿ ಹೊರತರಲಾಗಿರುವುದಾಗಿ ತಿಳಿದು ಬಂದಿದೆ. ಸೋಮವಾರ ಬೆಳಗ್ಗೆ ಬೆಳ್ತಂಗಡಿ ಗೆ ಬಂದು ಅರಣ್ಯದ ಮೂಲಕ ಟ್ರೆಕ್ಕಿಂಗ್ ಆರಂಭಿಸಿದ ಐವರು ಯುವಕರು ಹಾಗೂ ಐದು ಮಂದಿ ಯುವತಿಯರ ತಂಡ ಚಾರಣಿಗರು ರಾತ್ರಿಯ ವೇಳೆ ದಟ್ಟ ಕಾಡಿನ ನಡುವೆ ಸಿಲುಕಿಕೊಂಡಿದ್ದಾರೆ. ಬಳಿಕ ಚಿಕ್ಕಮಗಳೂರು ಜಿಲ್ಲಾ...
ಬೆಳ್ತಂಗಡಿ : ಚಾರ್ಮಾಡಿಯಲ್ಲಿ ನಿಯಂತ್ರಣ ತಪ್ಪಿ ಬೊಲೆರೋ ವಾಹನ ಪಲ್ಟಿ
ಬೆಳ್ತಂಗಡಿ : ನಾಯಿ ಅಡ್ಡ ಬಂದ ಕಾರಣ ನಿಯಂತ್ರಣ ತಪ್ಪಿದ ಬೊಲೆರೋ ವಾಹನ ಪಲ್ಟಿಯಾಗಿ ಚರಂಡಿಗೆ ಬಿದ್ದು ಸಿಲುಕಿಕೊಂಡ ಘಟನೆ ಚಾರ್ಮಾಡಿ ಗ್ರಾಮದ ಬೀಟಿಗೆಯ ಹೆದ್ದಾರಿಯಲ್ಲಿ ಜೂ.8 ರಂದು ರಾತ್ರಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿಗಳಾದ ಚೇತನ್ ಮತ್ತು ಸುರೇಶ್ ಇಬ್ಬರು ಉಡುಪಿ ಜಿಲ್ಲೆಯ ಕಾರ್ಕಳ ಸಂಬಂಧ ಮನೆಗೆ ಹೋಗಿ ವಾಪಸ್ ಬರುವಾಗ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆ ಹೆದ್ದಾರಿಯಲ್ಲಿ ನಾಯಿ ಅಡ್ಡ ಬಂದ ಕಾರಣದಿಂದ ನಿಯಂತ್ರಣ ತಪ್ಪಿದ ಬೊಲೆರೋ ವಾಹನ ಪಲ್ಟಿಯಾಗಿ ರಸ್ತೆಯ ಬದಿಯ ಕ್ರಾಂಕ್ರಿಟ್ ಚರಂಡಿಗೆ ಬಿದ್ದು ಸಿಲುಕಿಕೊಂಡಿದೆ....
ಸುಹಾಸ್ ಶೆಟ್ಟಿ ಹತ್ಯೆ ನಡೆಸಿದವರನ್ನು ಹೆಡೆಮುರಿ ಕಟ್ಟಲು ತನಿಖೆ ರಾಷ್ಟ್ರೀಯ ತನಿಖಾದಳಕ್ಕೆ- ಹರೀಶ್ ಪೂಂಜ
ಬೆಳ್ತಂಗಡಿ; ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಭೀಕರ ಹತ್ಯೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಕಾ ದಳಕ್ಕೆ ವಹಿಸಿದ್ದು ದಕ್ಷಿಣ ಕನ್ನಡದ ಸಮಸ್ತ ಹಿಂದೂ ಸಮಾಜ ಇದನ್ನು ಮನಪೂರ್ವಕವಾಗಿ ಸ್ವಾಗತಿಸುತ್ತಿದೆ. ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರೆ.ಸುಹಸ್ ಶೆಟ್ಟಿ ಅವರ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಪಿ ಎಫ್ ಐ ಹಾಗೂ ಇನ್ನಿತರ ಜಿಹಾದಿ ಸಂಘಟನೆಗಳ ಬೇರುಗಳನ್ನು ಬುಡ ಸಮೇತ ಕಿತ್ತು ಹಾಕಲು ಮತ್ತು ಈ ಹತ್ಯೆಯ ಹಿಂದಿರುವ ಕಾಣದ ಕೈಗಳನ್ನು ಪತ್ತೆಹಚ್ಚಿ, ಈ ಸಂಚಿಗೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನು ಒದಗಿಸಿದ...
ಬೆಳ್ತಂಗಡಿ : ಉಜಿರೆಯ ಮೂರು ಅಂಗಡಿಗಳಿಗೆ ಕನ್ನ; ಶಟರ್ ಬೀಗ ಮುರಿದು ನಗದು ಕಳ್ಳತನ
ಬೆಳ್ತಂಗಡಿ : ಉಜಿರೆ ಜನಾರ್ದನ ದೇವಸ್ಥಾನದ ದ್ವಾರದ ಬಳಿಯಿರುವ ಮೂರು ಅಂಗಡಿಗಳಿಗೆ ಕಳ್ಳರು ನುಗ್ಗಿ ನಗದು ಹಣ ಕಳ್ಳತನ ಮಾಡಿದ ಘಟನೆ ಜೂ.7 ರಂದು ರಾತ್ರಿಯ ವೆಳೆ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರು ಅಂಗಡಿಯ ಶಟರ್ ಗೆ ಹಾಕಿದ್ದ ಬೀಗಕ್ಕೆ ಸುತ್ತಿಗೆಯಿಂದ ಮುರಿದು ಒಳನುಗ್ಗಿ ಒಟ್ಟು 38 ಸಾವಿರ ರೂಪಾಯಿ ಹಣ ಕಳ್ಳತನ ಮಾಡಲಾಗಿದೆ.ಬಾಲಾಜಿ ಎಂಟರ್ ಪ್ರೈಸ್ ನಿಂದ 30 ಸಾವಿರ ನಗದು, ಮಧುರ ಎಂಟರ್ ಪ್ರೈಸ್ ನಿಂದ 6 ಸಾವಿರ ರೂಪಾಯಿ, ಗಣೇಶ್ ಇಲೆಕ್ಟ್ರಿಕಲ್ ನಿಂದ 2...















