ವೇಶ್ಯಾವಟಿಕೆ ಶಂಕೆ ಮೇರೆಗೆ ಲಾಡ್ಜ್ ಗಳಿಗೆ ಪೊಲೀಸರಿಂದ ದಾಳಿ; ಉಜಿರೆ ದುರ್ಗಾ ಲಾಡ್ಜ್ ನಲ್ಲಿ ಓರ್ವ ಯುವತಿಯ ರಕ್ಷಣೆ ;ಇಬ್ಬರ ಬಂಧನ

0

ಬೆಳ್ತಂಗಡಿ : ವೇಶ್ಯಾವಟಿಕೆ ಚಟುವಟಿಕೆ ಶಂಕೆ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ ನೇತೃತ್ವದಲ್ಲಿ ಬೆಳ್ತಂಗಡಿ ಮತ್ತು ಉಜಿರೆಯಲ್ಲಿರುವ ಲಾಡ್ಜ್ ಗಳ ಮೇಲೆ ಜೂ‌.14 ರಂದು ರಾತ್ರಿ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಉಜಿರೆಯ ಶ್ರೀ ದುರ್ಗಾ ಲಾಡ್ಜ್ ನಲ್ಲಿ ವೇಶ್ಯಾವಟಿಕೆ ನಡೆಸಲು ಯುವತಿಯನ್ನು ಕರೆತಂದಿದ್ದು ಬಯಲಾಗಿದೆ. ಉಜಿರೆ ಬಸ್ ನಿಲ್ದಾಣದ ಬಳಿ ಇರುವ ಶ್ರೀ ದುರ್ಗಾ ಲಾಡ್ಜ್ ನಲ್ಲಿ ವೇಶ್ಯಾವಟಿಕೆಗೆ ಕರೆಸಿದ್ದ ಓರ್ವ ಯುವತಿಯನ್ನು ಪೊಲೀಸರು ರಕ್ಷಣೆ ಮಾಡಲಾಗಿದ್ದು. ಲಾಡ್ಜ್ ನ ಮ್ಯಾನೇಜರ್ ಬೆಳ್ತಂಗಡಿ ತಾಲೂಕಿನ ಸಾವ್ಯ...

ಬೆಳ್ತಂಗಡಿ; ಭಾನುವಾರ ಭಾರೀ ಮಳೆ ಸುರಿಯುವ ನಿರೀಕ್ಷೆ ರೆಡ್ ಅಲರ್ಟ್ ಘೋಷಣೆ

0

ಮಂಗಳೂರು: ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಭಾನುವಾರವೂ ಭಾರೀ ಮಳೆ ಸುರಿಯುವ ನಿರೀಕ್ಷೆಯಿದ್ದು ರೆಡ್ ಅಲರ್ಟ್ ಘೋಷಣೆಯಾಗಿದೆ.ಶನಿವರಾ ರಾತ್ರಿಯೂ ಭಾರೀ ಮಳೆ ಸುರಿದಿದ್ದು ಭಾನುವಾರವೂ ಇದು ಮುಂದುವರಿದಿರುವುದು ಆತಂಕ ಮೂಡಿಸಿದೆ.ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸಹಿತ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾನುವಾರ (ಜೂ.15) ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಮುಂಡಾಜೆ ಸಿಎ ಬ್ಯಾಂಕ್ ವಿದ್ಯಾನಿಧಿ ವಿತರಣೆ

0

ಬೆಳ್ತಂಗಡಿ; ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸದಸ್ಯರ ಮಕ್ಕಳಿಗೆ ಎನ್.ಎಸ್.ಗೋಖಲೆ ಸಂಸ್ಮರಣ ವಿದ್ಯಾನಿಧಿ ವಿತರಣೆ ಕಾರ್ಯಕ್ರಮ ಶನಿವಾರ ಸಂಘದ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಜರಗಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆನರಾ ಬ್ಯಾಂಕ್ ನ ನಿವೃತ್ತ ಅಧಿಕಾರಿ ವಾಸುದೇವ ಗೋಖಲೆ ಮಾತನಾಡಿ "ನಾವು ಎಲ್ಲೇ ಇದ್ದರೂ ನಮ್ಮ ಊರಿಗೆ ನಮ್ಮಿಂದಾದ ಸೇವೆಯನ್ನು ಪ್ರೀತಿ, ವಿಶ್ವಾಸದಿಂದ ನೀಡಬೇಕು ಎಂದರು. ಸಂಘದ ಅಧ್ಯಕ್ಷ ಪ್ರಕಾಶನಾರಾಯಣ ರಾವ್ ಮಾತನಾಡಿ ಆರ್ಥಿಕ ಸಂಕಷ್ಟದಿಂದ ಯಾರೂ ಕೂಡ ಶಿಕ್ಷಣ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಂಘವು ರಿಯಾಯಿತಿ ಬಡ್ಡಿ ದರದಲ್ಲಿ ಸಂಘದ ಸದಸ್ಯರ...

ಕೊಯ್ಯೂರು: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

0

ಬೆಳ್ತಂಗಡಿ; ಕೊಯ್ಯೂರಿನಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಮೃತ ವ್ಯಕ್ತಿ ಕೊಯ್ಯೂರು ಗ್ರಾಮದ ದೇಲೋಡಿ ಮನೆ ನಿವಾಸಿ ಕಿಶನ್ ಕುಮಾರ್ ಎಂಬಾತನಾಗಿದ್ದಾನೆ.ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಈತನ ಮೃತದೇಹ ಜೂನ್ 12ರಂದು ಪತ್ತೆಯಾಗಿದೆ.ಈತ ವಿಪರೀತ ಸಾಲ ಮಾಡಿಕೊಂಡಿದ್ದ ಎನ್ನಲಾಗಿದ್ದು ಕುಡಿತದ ಚಟವನ್ನೂ ಹೊಂದಿದ್ದ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದ್ದು ಈ ಬಗ್ಗೆ ಸಹೋದರ ಧನಂಜಯ ನೀಡಿರುವ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

ವಿಮಾನ ದುರಂತದಲ್ಲಿ ಮಡಿದವರ ಕುಟುಂಗಳೊಂದಿಗೆ ನಮ್ಮ ಪ್ರಾರ್ಥನೆ ಸದಾ ಇರಲಿದೆ; ಬಿಷಪ್ ಲಾರೆನ್ಸ್ ಮುಕ್ಕುಯಿ

0

ಬೆಳ್ತಂಗಡಿ;  2025 ರ ಜೂನ್ 12 ರ ಮಧ್ಯಾಹ್ನ ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ AI171 ರ  ಅಪಘಾತದ ಬಗ್ಗೆ ಬೆಳ್ತಂಗಡಿ ಧರ್ಮಪ್ರಾಂಥ್ಯವು ತೀವ್ರ ದುಃಖವನ್ನು ವ್ಯಕ್ತಪಡಿಸುತ್ತದೆ. 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಲಂಡನ್‌ಗೆ ಹೊರಟಿದ್ದ ವಿಮಾನದ ದುರಂತದ  ಹೃದಯವಿದ್ರಾವಕ ಘಟನೆಯು ರಾಷ್ಟ್ರವನ್ನು ಶೋಕದಲ್ಲಿ ಮುಳುಗಿಸಿದೆ. "ಈ ವಿನಾಶಕಾರಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಎಲ್ಲರ ಕುಟುಂಬಗಳು ಮತ್ತು ಪ್ರೀತಿಪಾತ್ರರಿಗೆ ನಾವು ನಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಅಪಾರ ದುಃಖ ಮತ್ತು ನಷ್ಟದ ಈ ಸಮಯದಲ್ಲಿ ನಮ್ಮ ಪ್ರಾರ್ಥನೆಗಳು ಅವರೊಂದಿಗೆ ಇವೆ. ಗಾಯಗೊಂಡ...

ಅಹಮದಾಬಾದ್; 242ಪ್ರಯಾಣಿಕರಿದ್ದ ವಿಮಾನ ಪತನ

0

ಅಹಮದಾಬಾದ್:‌ ಗುರುವಾರ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ (ಜೂ.12) ಮಧ್ಯಾಹ್ನ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದೆ. ಅಹಮದಾಬಾದ್‌ನಲ್ಲಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ ಎಂದು ರಾಜ್ಯ ಪೊಲೀಸ್ ನಿಯಂತ್ರಣ ಕೊಠಡಿ ದೃಢಪಡಿಸಿದೆ. ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತೊಯ್ದಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನ ಅಪಘಾತಕ್ಕೀಡಾದ ಸ್ಥಳವು ವಸತಿ ಪ್ರದೇಶ ಎಂದು ವರದಿಯಾಗಿದೆ. ವಿಮಾನ ನಿಲ್ದಾಣದ ಸಮೀಪದಲ್ಲೇ ಈ ಅಪಘಾತ...

ಭಾರೀ ಮಳೆ ಜಿಲ್ಲೆಯಲ್ಲಿ ಜೂನ್ 12ರಂದು ಶಾಲೆಗಳಿಗೆ ರಜೆ

0

ಮಂಗಳೂರು: ಹವಾಮಾನ ಇಲಾಖೆಯು ದ.ಕ. ಜಿಲ್ಲೆಯಲ್ಲಿ ಆರೆಂಜ್ ಅಲೆರ್ಟ್ ಘೋಷಿಸಿದೆ. ಮುಂಜಾಗ್ರತಾ ಕ್ರಮವಾಗಿ ದ.ಕ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಖಾಸಗಿ, ಸರಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜೂನ್ 12ರಂದು ರಜೆ ಘೋಷಿಸಿ ದ.ಕ. ಜಿಲ್ಲಾಧಿಕಾರಿ ಅದೇಶ ಹೊರಡಿಸಿದ್ದಾರೆ.

ಪೂಂಜಾಲಕಟ್ಟೆ ಪಿ.ಎಸ್ ಐ ನಂದಕುಮಾರ್ ಅವರಿಗೆ ಇನ್ಸ್‌ಪೆಕ್ಟರ್ ಆಗಿ ಪದೋನ್ನತಿ

0

ಬೆಳ್ತಂಗಡಿ; ಪೂಂಜಾಲಕಟ್ಟೆ ಠಾಣೆಯ ಪಿ.ಎಸ್.ಐ ಆಗಿ ಕಾರ್ಯನಿ ರ್ವಹಿಸುತ್ತಿದ್ದ ನಂದಕುಮಾರ್. ಎಂ.ಎಸ್ ಅವರಿಗೆ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಪ್ರಮೋಷನ್ ನೀಡಿ ಇಲಾಖೆ ಆದೇಶ ಹೊರಡಿಸಿದೆ.ರಾಜ್ಯದಲ್ಲಿ ಒಟ್ಟು 36 ಮಂದಿಗೆ ಪ್ರಮೋಷನ್ ಲಭಿಸಿದ್ದು ನಂದಕುಮಾರ್ ಅವರಿಗೆ ಬಡ್ತಿ ನೀಡಿ ಡಿ.ಎಸ್.ಬಿ ದ.ಕ ಜಿಲ್ಲೆ ಇಲ್ಲಿಗೆ ಇನ್ಸ್ ಪೆಕ್ಟರ್ ಆಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.

ಬೆಳ್ತಂಗಡಿ; ಮಳೆ ಮುನ್ಸೂಚನೆ ಹಿನ್ನಲೆ ಅಪಾಯಕಾರಿ ಸ್ಥಳಗಳಲ್ಲಿರುವ ಮನೆಗಳಲ್ಲಿರುವವರಿಗೆ ನೋಟೀಸು

0

ಬೆಳ್ತಂಗಡಿ;  ಮಳೆಗಾಲದ ಅವಧಿಯಲ್ಲಿ ಉಂಟಾಗಬಹುದಾದ ವಿಪತ್ತುಗಳ ನಿರ್ವಹಣೆಗಾಗಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಯವರು ಸಭೆ ನಡೆಸಿ ನೀಡಿರುವ ಆದೇಶದಂತೆ ಗುಡ್ಡ ಜರಿತ ಉಂಟಾಗಬಹುದಾದ ಸ್ಥಳದಲ್ಲಿ ಅಥವಾ ಹೊಳೆ/ತೊರೆ ಬದಿಯಲ್ಲಿರುವ ಮನೆಗಳವರಿಗೆ ವಿಪತ್ತು ನಿರ್ವಹಣಾ ಕಾಯ್ದೆ 2005ರಂತೆ ಗ್ರಾಮ ಪಂಚಾಯತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮತ್ತು ಸಿಬ್ಬಂದಿಗಳು ನೋಟೀಸನ್ನು ನೀಡುತ್ತಿದ್ದಾರೆ.ಅಳದಂಗಡಿ, ಬಾರ್ಯ ಬೆಳಾಲು ಧರ್ಮಸ್ಥಳ ಕಳಿಯ ಕಾಶಿಪಟ್ಣ ಕೊಕ್ಕಡ ಕೊಯ್ಯುರು ಮಚ್ಚಿನ ಮಾಲಾಡಿ ಮಲವಂತಿಗೆ ಮರೋಡಿ ಮುಂಡಾಜೆ ನಾರಾವಿ ಪಡಂಗಡಿ ತೆಕ್ಕಾರು ಮಿತ್ತಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈವರೆಗೆ ಸುಮಾರು 190...

ಭಾರೀ ಮಳೆಯ ಮುನ್ಸೂಚನೆ: ದ.ಕ ಜಿಲ್ಲೆಯಲ್ಲಿ ಐದು ದಿನ ರಡ್ ಅಲರ್ಟ್ ಘೋಷಣೆ

0

ಬೆಳ್ತಂಗಡಿ; ಒಂದು ವಾರದಿಂದ ಬಿಡುವು ನೋಡಿದ್ದ ಮಳೆ ಕರಾವಳಿಯಾದ್ಯಂತ ಮತ್ತೆ ಬಿರುಸುಗೊಂಡಿದೆ. ಬೆಳ್ತಂಗಡಿ ತಾಲೂಕಿನಲ್ಲಿಯು ಬುಧವಾರ ಸಂಜೆಯಿಂದ ನಿರಂತರ ಮಳೆ ಆರಂಭಗೊಂಡಿದ್ದು ಜಿಲ್ಲೆಯಲ್ಲಿ ಐದು ದಿನಗಳ ಕಾಲ ರೆಡ್‌ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಜೂ.12ರಿಂದ 16ರವರೆಗೆ ರಾಜ್ಯ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್‌ ಘೋಷಣೆ ನೀಡಿದೆ. ಈ ದಿನಗಳಲ್ಲಿ 200ಮಿ.ಮೀ.ಗೂ ಅಧಿಕ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ....