ಬೆಳ್ತಂಗಡಿ : ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಬೆಳ್ತಂಗಡಿ ಕಚೇರಿಗೆ ಆಗಮನ
ಬೆಳ್ತಂಗಡಿ : ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಅ.8 ರಂದು 12:45 ಕ್ಕೆ ಆಗಮಸಿದ್ದಾರೆ. ಎಸ್.ಐ.ಟಿ ಕಚೇರಿಯಲ್ಲಿ ಬರುಡೆ ಪ್ರಕರಣದಲ್ಲಿ ಅಧಿಕಾರಿಗಳು ತನಿಖೆಯ ಮಾಡಿದ ಬಗ್ಗೆ ಸಭೆ ನಡೆಸಲಿದ್ದು. ವರದಿಯ ಮಾಹಿತಿ ಸಂಗ್ರಹಿಸಿದ ಬಳಿಕ ಮುಂದಿನ ತನಿಖೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ಮಗುಚಿ ಬಿದ್ದ ಲಾರಿ ಚಾಲಕನಿಗೆ ಗಾಯ
ಬೆಳ್ತಂಗಡಿ : ಚಾರ್ಮಡಿ ಘಾಟಿಯಲ್ಲಿ ಹಾಸನದಿಂದ ಮಂಗಳೂರಿನತ್ತ ಸಾಗುತ್ತಿದ್ದ ಲಾರಿ ಆರನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮಂಗಳವಾರ ನಡೆದಿದೆ. ಈ ಘಟನೆಯಲ್ಲಿ ಲಾರಿ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು ಲಾರಿಗೆ ಸಂಪೂರ್ಣ ಹಾನಿಯಾಗಿದೆ. ಗಾಯಗೊಂಡ ಚಾಲಕನನ್ನು ತಕ್ಷಣ ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಯಿತು.ಈ ಘಟನೆಯಿಂದ ಘಾಟಿ ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ಥೆಗೊಂಡಿತು , ಬಳಿಕ ಪೋಲಿಸರ ಸಹಕಾರದಿಂದ ಸಂಚಾರ ಸುಗಮ ಗೊಳಿಸಲಾಯಿತು.
ಬೆಳ್ತಂಗಡಿ ನೂತನ ಬಸ್ ನಿಲ್ದಾಣ ಕಾಮಗಾರಿ ನನೆಗುದಿಗೆ; ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿರುವ ಬಸ್ ನಿಲ್ದಾಣ
ಬೆಳ್ತಂಗಡಿ; ತಾಲೂಕು ಕೇಂದ್ರವಾದ ಬೆಳ್ತಂಗಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಬಸ್ ನಿಲ್ದಾಣ ಕಾಮಗಾರಿ ಕಳೆದ ಹಲವು ತಿಂಗಳಿನಿಂದ ನೆನೆಗುದಿಗೆ ಬಿದ್ದಿದ್ದು ಇದೀಗ ಇಲ್ಲಿ ನೀರು ನಿಂತು ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ.2023ರಲ್ಲಿ ಆರಂಭವಾದ 12 ಕೋಟಿ ರೂ. ಅನುದಾನದ ಪ್ರಥಮ ಹಂತದ ಕಾಮಗಾರಿಯಲ್ಲಿ ನೆಲಮಟ್ಟದ ಕೆಲಸಗಳು ನಡೆಯುತ್ತಿದ್ದು ಇದೂ ಅಪೂರ್ಣ ವಾಗಿದೆ. ಇಲ್ಲಿ ಕಾಮಗಾರಿ ನಿಂತು ತಿಂಗಳುಗಳೇ ಕಳೆದಿದ್ದು ಕಾಮಗಾರಿಗಾಗಿ ಮಾಡಿರುವ ಹೊಂಡಗಳಲ್ಲಿ ಕೊಳಚೆ ನೀರು ನಿಂತು ಸಾಂಕ್ರಮಿಕ ರೋಗಗಳಿಗೆ ಕಾರಣವಾಗುತ್ತಿದೆ. ಮಳೆಗಾಲದ ಭಾರಿ ಮಳೆ ಕಾಮಗಾರಿಗೆ ಅಡ್ಡಿ ನೀಡಿದೆ ಎಂದು ಹೇಳಲಾಗುತ್ತಿದ್ದು ಜೂನ್...
ನೆರಿಯ; ಬೆಂಕಿ ಆಕಸ್ಮಿಕದಲ್ಲಿ ಮನೆ ಸುಟ್ಟು ಹೋದ ಹರೀಶ್ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ
ಬೆಳ್ತಂಗಡಿ; ನೆರಿಯ ಗ್ರಾಮದಲ್ಲಿ ಬೆಂಕಿ ಆಕಸ್ಮಿಕದಲ್ಲಿ ಸಂಪೂರ್ಣವಾಗಿ ಸುಟ್ಟು ಹೋದ ಹರೀಶ್ ವಿ. ಅವರ ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಮಂಗಳವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ತಾತ್ಕಾಲಿಕವಾಗಿ ವಾಸ್ತವ್ಯವಿರಲು ಮನೆಯ ವ್ಯವಸ್ಥೆಯನ್ನು ಮತ್ತು ಮುಂದಿನ ಮನೆ ನಿರ್ಮಾಣದ ಕುರಿತು ಸ್ಥಳೀಯ ಕಾರ್ಯಕರ್ತರೊಂದಿಗೆ ಚರ್ಚಿಸಲಾಯಿತು.ಇದೆ ಸಂದರ್ಭದಲ್ಲಿ ಶಾಸಕರು ವೈಯಕ್ತಿಕವಾಗಿ ಹರೀಶ್ ಅವರಿಗೆ ಸಹಾಯ ಧನವನ್ನು ನೀಡಿ ಧೈರ್ಯ ತುಂಬಿದರು ಈ ಸಂದರ್ಭದಲ್ಲಿ ಬಿ.ಜೆ.ಪಿ ಮಹಾಶಕ್ತಿ ಕೇಂದ್ರ ಪ್ರಮುಖರಾದ ಬಾಬು ಗೌಡ ಪರ್ಪಳ, ಶಕ್ತಿ ಕೇಂದ್ರ ಪ್ರಮುಖರರಾದ ವಿಶ್ವನಾಥ ಅಣಿಯೂರು,ಗ್ರಾಮ...
ನಾವರ; ರಸ್ತೆ ಬದಿಯಲ್ಲಿ ಬಲಿಗಾಗಿ ಕಾಯುತ್ತಿರುವ ತೆರದ ಬಾವಿ
ಬೆಳ್ತಂಗಡಿ; ಸುಲ್ಕೇರಿ ಮೊಗ್ರು ಗ್ರಾಮಪಂಚಾಯತಿನ ನಾವರ ಗ್ರಾಮದ ದೇವರ ಗುಡ್ಡೆ ಎಸ್.ಸಿ ಕಾಲೊನಿಯಲ್ಲಿ ರಸ್ತೆ ಬದಿಯಲ್ಲಿ ತೆರೆದ ಬಾವಿಯೊಂದು ಬಲಿಗಾಗಿ ಬಾಯಿತೆರದು ಕಾಯುತ್ತಿದೆ.ರಸ್ತೆಯ ಬದಿಯಲ್ಲಿಯೇ ಇರುವ ಈ ಬಾವಿಗೆ ಯಾವುದೇ ಆವರಣಗೋಡೆ ತಡೆಬೇಲಿಯಿಲ್ಲ. ವಾಹನ ಸವಾರರು ಒಂದಿಷ್ಟು ಎಚ್ಚರ ತಪ್ಪಿದರೂ ಆಪಾಯವಿದೆ. ಕಿರಿದಾದರಸ್ತೆಯಿಂದ ಕೇವಲ ನಾಲ್ಕು ಫೀಟ್ ಅಂತರದಲ್ಲಿ ಈ ಬಾವಿಯಿದೆ. ಪ್ರತಿ ನಿತ್ಯ ಸಾರ್ವಜನಿಕರು ಓಡಾಡು ರಸ್ತೆ ಇದಾಗಿದ್ದು ಶಲಾಮಕ್ಕಳೂ ಇದೇ ದಾರಿಯಲ್ಲಿ ನಡೆದುಕೊಂಡು ಹೋಗುತ್ತಾರೆ. ನೀರು ಹಾಗೂ ತ್ಯಾಜ್ಯ ತುಂಬಿರುವ ಈ ಬಾವಿ ಅಪಾಯಕಾರಿಯಾಗಿ ಬಾಗಿ ತೆರೆದು ರಸ್ತೆಬದಿಯಲ್ಲಿಯೇ ನಿಂತಿದೆ.ಈ...
ಸಮೀಕ್ಷೆ ಹಿನ್ನಲೆ ಸರಕಾರಿ ಶಾಲೆಗಳಿಗೆ ಅ 18ರ ವರೆಗೆ ರಜೆ ಘೋಷಣೆ ಮುಖ್ಯಮಂತ್ರಿ ಆದೇಶ
ಬೆಳ್ತಂಗಡಿ: ರಾಜ್ಯದಲ್ಲಿ ಈಗಾಗಲೇ ನಡೆಯುತ್ತಿರುವ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗಳು ನಡೆಯುತ್ತಿದ್ದು ನಿಗದಿತ ಸಮಯಕ್ಕೆ ಸಮೀಕ್ಷೆ ಮುಗಿಯದ ಹಿನ್ನೆಲೆಯಲ್ಲಿ ಅ.8ರಿಂದ ಅ.18ರವರೆಗೆ ರಾಜ್ಯದ ಎಲ್ಲಾ ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ರಜೆಯನ್ನು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.ಅ.7ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶಿಕ್ಷಣ ಸಚಿವರು ನಡೆಸಿದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಅ.18ನೇ ತಾರೀಕಿನ ಒಳಗೆ ಬಾಕಿ ಇರುವ ಎಲ್ಲಾ ಸಮೀಕ್ಷೆ ಕಾರ್ಯಗಳನ್ನು ಮುಗಿಸಲು ಸೂಚನೆ ನೀಡಲಾಗಿದೆ.
ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಪದಗ್ರಹಣ ಸಮಾರಂಭ
ಬೆಳ್ತಂಗಡಿ; ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮ ಜೆ.ಎಮ್.ಎಫ್ ಸಭಾ ಭವನದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಬಿ.ಶೇಖುಂಞ್ಞ ಯವರು ನೂತನ ಅಧ್ಯಕ್ಷರಾದ ಖಾಲಿದ್ ಪುಲಾಬೆ ಯವರಿಗೆ ಅಧಿಕಾರ ಹಸ್ತಾಂತರಿಸುವ ಮೂಲಕ ನಡೆಯಿತು. ಹಿರಿಯರಾದ ಅಬ್ದುಲ್ ಲತೀಫ್ ಸಾಹೇಬ್ ಜಮೀಯತುಲ್ ಫಲಾಹ್ ನಡೆದು ಬಂದ ದಾರಿ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ನಿಕಟ ಪೂರ್ವ ಕೋಶಾಧಿಕಾರಿ ಅಬ್ಬೋನು ಮದ್ದಡ್ಕ, ನೂತನ ಪ್ರಧಾನ ಕಾರ್ಯದರ್ಶಿಗಳಾದ ಉಮರ್ ಬೆಳ್ತಂಗಡಿ, ಉಪಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಜೊತೆ ಕಾರ್ಯದರ್ಶಿ ಆಲಿಯಬ್ಬಾ ಪುಲಾಬೆ, ಪತ್ರಿಕಾ ಕಾರ್ಯದರ್ಶಿ ಇಲ್ಯಾಸ್ ಕರಾಯ,...
ಬೆಳ್ತಂಗಡಿ : ನೆರಿಯ ಮನೆಗೆ ಬೆಂಕಿ ಬಿದ್ದು ಹಾನಿಯಾದ ಕುಟುಂಬಕ್ಕೆ ಕಿರಣ್ ಚಂದ್ರ ಡಿ ಪುಷ್ಪಗಿರಿ ಸಹಾಯ ಹಸ್ತ
ಬೆಳ್ತಂಗಡಿ : ನೆರಿಯ ನಿವಾಸಿ ಹರೀಶ್ ವಿ. ಮನೆಗೆ ಅ.6 ರಂದು ರಾತ್ರಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಮನೆಗೆ ಸಂಪೂರ್ಣವಾಗಿ ಹಾನಿಯಾಗಿದ್ದು ಮನೆಗೆ ಕಿರಣ್ ಚಂದ್ರ ಡಿ ಪುಷ್ಪಗಿರಿಯವರಟೀಂ ಪುಷ್ಪಗಿರಿ ತಂಡದ ಸದಸ್ಯರು ಘಟನಾ ಸ್ಥಳಕ್ಕೆ ತುರ್ತಾಗಿ ಬೇಟಿ, ಕಿರಣ್ ಚಂದ್ರ ರವರ ಸಲಹೆ ಮೇರೆಗೆ ಮನೆ ಪುನರ್ನಿರ್ಮಾಣ ಕಾರ್ಯಕ್ಕೆ 25 ಸಾವಿರ ರೂಪಾಯಿಗಳ ಧನ ಸಹಾಯ ಮಾಡಿದರು. ಈ ಸಂಧಭದಲ್ಲಿ ಮನೆಯವರ ಜೊತೆ ಕರೆ ಮಾಡಿ ಮಾತನಾಡಿದ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ಮನೆಯ ದುರಸ್ತಿ ಕಾರ್ಯಕ್ಕೆ ಇನ್ನಷ್ಟು ಆರ್ಥಿಕ ಸಹಾಯ ಮಾಡುವುದಾಗಿ...
ನಾರಾವಿ ಮನೆಯ ಬೀಗ ಒಡೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
ಬೆಳ್ತಂಗಡಿ; ನಾರಾವಿ ಗ್ರಾಮಪಂಚಾಯತು ವ್ಯಾಪ್ತಿಯ ಕುತ್ಲೂರು ಗ್ರಾಮದ ಮಂಜುಶ್ರೀನಗರ ಶ್ರೀ ಅನಘ ಎಂಬಲ್ಲಿನ ನಿವಾಸಿ ಅವಿನಾಶ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಒಡೆದು ನುಗ್ಗಿದ ಕಳ್ಳರು 9.5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಘಟನೆ ನಡೆದಿದ್ದು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಮನೆಯವರು ಅ2ರಂದು ಮನೆಗೆ ಬೀಗ ಹಾಕಿ ಹೋಗಿದ್ದು ಅ 6 ರಂದು ಬಂದು ನೋಡಿದಾಗ ಮನೆಯ ಬೀಗ ಒಡೆದಿದ್ದು ಕಳ್ಳತನವಾಗಿರುವುದು ಕಂಡು ಬಂದಿದೆ. ಮನೆಯೊಳಗೆ ಪ್ರವೇಶಿಸಿದ ಕಳ್ಳರು ಬೆಡ್ ರೂಮಿನ ಕಪಾಟಿನ ಬೀಗ ಒಡೆದು...
ಶಿಬಾಜೆ; ಅರಣ್ಯ ಇಲಾಖೆ ಕೃಷಿ ನಾಶಮಾಡಿದ ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ
ಬೆಳ್ತಂಗಡಿ: ಶಿಬಾಜೆ ಗ್ರಾಮದ ಅರಂಪಾದೆ ಎಂಬಲ್ಲಿ ಕಳೆದ ಹಲವು ದಶಕಗಳಿಂದ ವಾಸವಿದ್ದ ಒ. ಪಿ. ಜಾರ್ಜ್ ಅವರ ರಬ್ಬರ್ ಕೃಷಿ ತೋಟವನ್ನು ಅರಣ್ಯ ಇಲಾಖೆಯವರು ಕಡಿದು ನಾಶಪಡಿಸಿರುವ ಹಿನ್ನೆಲೆಯಲ್ಲಿ ಅ.6ರಂದು ಶಾಸಕ ಹರೀಶ್ ಪೂಂಜ ಅವರು ಪ್ರದೇಶಕ್ಕೆ ಭೇಟಿ ನೀಡಿ ಮನೆಯವರೊಂದಿಗೆ ಮಾತುಕತೆ ನಡೆಸಿದರು.ಶಿಬಾಜೆ ಗ್ರಾಮದಲ್ಲಿ 184ಸರ್ವೇ ನಂಬರ್ ನಲ್ಲಿ ಸುಮಾರು 80ಕ್ಕೂ ಹೆಚ್ಚಿನ ಕುಟುಂಬ ವಾಸವಿದ್ದು ಇದರಲ್ಲಿ ಹೆಚ್ಚಿನವರು ಜೀವನಕ್ಕೆ ಇದೇ ಭೂಮಿಯನ್ನು ನಂಬಿಕೊಂಡು ಇಲ್ಲಿ ಕೃಷಿ ಮಾಡಿ ಜೀವನ ಮಾಡುತ್ತಿದ್ದಾರೆ. ಇದೀಗ ಅರಣ್ಯ ಇಲಾಖೆ ಏಕಾಏಕಿ ಒಬ್ಬ ಕೃಷಿಕನ ಜಾಗವನ್ನು...















