ಶಿಶಿಲ; ಪ್ರವಾಹದಿಂದ ಹಾನಿ ತಹಶೀಲ್ದಾರ್ ಅವರಿಂದ ಪರಿಶೀಲನೆ
ಶಿಶಿಲ ಗ್ರಾಮಪಂಚಾಯತ್ ವ್ಯಾಪ್ತಿಯ ಶಿಶಿಲೇಶ್ವರ ದೇವಸ್ಥಾನದ ಬಳಿ ಪ್ರವಾಹದಿಂದ ಉಂಟಾದ ಹಾನಿಯನ್ನು ಬೆಳ್ತಂಗಡಿ ತಹಶೀಲ್ದಾರರು ಇಂದು ಪರಿಶೀಲಿಸಿದರುಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ,ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುದೀನ್ ,ಉಪಾಧ್ಯಕ್ಷರಾದ ಯಶೋಧರ ಕೆ.ವಿ.,ಪಂಚಾಯತ್ ಅಬಿವೃದ್ದಿ ಅಧಿಕಾರಿ ದಿನೇಶ್ ಎಂ,ಗ್ರಾಮ ಆಡಳಿತ ಅಧಿಕಾರಿ ಶಿವಕುಮಾರ್ ಎ ಎನ್,ಗ್ರಾಮ ಸಹಾಯಕ ವೀರಪ್ಪ ಗೌಡ ಉಪಸ್ಥಿತರಿದ್ದರು.
ಖಿಲರ್ ಜುಮ್ಮಾ ಮಸೀದಿ – ಹಯಾತುಲ್ ಇಸ್ಲಾಂ ಮದರಸ ಬೆಳ್ತಂಗಡಿ ಜಂಟಿ ಆಶ್ರಯದಲ್ಲಿ ಸಮಸ್ತ ನೂರನೇ ಸಂಸ್ಥಾಪನ ದಿನಾಚರಣೆ
ಬೆಳ್ತಂಗಡಿ (ಜೂ-26) :- ಖಿಲರ್ ಜುಮ್ಮಾ ಮಸೀದಿ ಬೆಳ್ತಂಗಡಿ ಹಾಗೂ ಹಯಾತುಲ್ ಇಸ್ಲಾಂ ಮದರಸ ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಸಮಸ್ತ ನೂರನೇ ಸ್ಥಾಪಕ ದಿನವನ್ನು ಖಿಲರ್ ಜುಮ್ಮಾ ಮಸೀದಿ ಇದರ ಉಪಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಯವರು ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಖಿಲರ್ ಜುಮ್ಮಾ ಮಸೀದಿ ಇದರ ಮುಖ್ಯ ಖತೀಬರಾದ ಹನೀಫ್ ಪೈಝೀ ಯವರು ದುವಾ ನೆರವೇರಿಸಿ ಸಮಸ್ತ ನಡೆದು ಬಂದ ದಾರಿಯನ್ನು ವಿವರಿಸಿದರು. ಅದೇ ರೀತಿ ಈ ಬಾರಿಯ ಸಮಸ್ತದ ನೂರನೇ ಶತಮಾನೋತ್ಸವ ಕಾಸರಗೋಡಿನ ಉದ್ಯಮಿಯಾದ...
ಪ್ರಾಥಮಿಕ ಶಾಲೆಗಳ ಕೊಠಡಿ ನಿರ್ಮಾಣಕ್ಕೆ ಅನುದಾನ ಮತ್ತುತಾಲೂಕಿನ ಮೂರು ಪ್ರಾಥಮಿಕ ಶಾಲೆಗಳನ್ನು ಕೆಪಿಎಸ್ ಶಾಲೆಯಾಗಿ, ( ಕರ್ನಾಟಕ ಪಬ್ಲಿಕ್ ಸ್ಕೂಲ್) ಮೇಲ್ದರ್ಜೆಗೇರಿಸಲು ಶಿಕ್ಷಣ ಸಚಿವರಿಗೆ ಮನವಿ
ಬೆಳ್ತಂಗಡಿ. ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಾದ ಬಳಂಜ, ಬಂಗಾಡಿ, ಕಲ್ಮಂಜ, ಬಯಲು ನೆರಿಯಾ, ಮಲವಂತಿಗೆ ಕಜಕ್ಕೆ ಶಾಲೆಗಳಲ್ಲಿ ಕೊಠಡಿಗಳ ಅತಿ ಅಗತ್ಯತೆ ಇದ್ದು. ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಹಾಗೂ ತಾಲೂಕಿನ ಸರ್ಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಮಚ್ಚಿನ, ಕೊರಂಜ, ವೇಣೂರು, ಶಾಲೆಗಳನ್ನು ಕೆಪಿಎಸ್ ( ಕರ್ನಾಟಕ ಪಬ್ಲಿಕ್ ಸ್ಕೂಲ್ )ಶಾಲೆಯಾಗಿ ಮೇಲ್ದರ್ಜೆಗೇರಿಸುವಂತೆ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪನವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮನವಿಯನ್ನು ಸಲ್ಲಿಸಿದರು. ಮನವಿಗೆ ಸಚಿವರು...
ಬೆಳ್ತಂಗಡಿ; ತಾಲೂಕಿನ ಶಾಲೆಗಳಿಗೆ ಜೂನ್ 26 ಗುರುವಾರ ರಜೆ; ತಹಶಿಲ್ದಾರ್ ಫೋಷಣೆ
ಬೆಳ್ತಂಗಡಿ; ತಾಲೂಕಿನಾಧ್ಯಂತ ಭಾರೀ ಮಳೆ ಮುಂದುವರಿಯುತ್ತಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಎಲ್ಕ ಅಂಗನವಾಡಿಗಳಿಗೆ ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜೂನ್ 26 ಗುರುವಾರದಂದು ರಜೆ ನೀಡಿ ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಂ ಆದೇಶ ಹೊರಡಿಸಿದ್ದಾರೆ.
ಭಾರೀ ಮಳೆ ತುಂಬಿ ಹರಿದ ಕಪಿಲ ನದಿ ಶಿಶಿಲೇಶ್ವರ ದೇವಸ್ಥಾನ ಜಲಾವೃತ
ಬೆಳ್ತಂಗಡಿ: ತಾಲೂಕಿನಲ್ಲಿ ಇಂದು ಬಾರಿ ಮಳೆ ಸುರಿದ ಪರಿಣಾಮ ಬೆಳ್ತಂಗಡಿ ತಾಲೂಕಿನ ಶಶಿಲದ ಕಪಿಲ ನದಿಯಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಮತ್ಸ್ಯ ಕ್ಷೇತ್ರವೆಂದೇ ಪ್ರಸಿದ್ಧವಾಗಿರುವ ಶಿಶಿಲೇಶ್ವರ ದೇವಾಲಯಕ್ಕೆ ನೀರು ನುಗ್ಗಿದ್ದು ದೇವಸ್ಥಾನ ಜಾಲಾವೃತಗೊಂಡಿದೆ. ನದಿನೀರಿನ ಮಟ್ಟ ಏರಿಕೆಯಾದ ಪರಿಣಾಮ ನದಿ ನೋರು ಗರ್ಭಗುಡಿ ಪ್ರವೇಶಿಸಿದೆ. ಪಕ್ಕದಲ್ಲೇ ಇರುವ ಕಿಂಡಿ ಆಣೆಕಟ್ಟು (ದೇವಳದ ಸಂಪರ್ಕ ರಸ್ತೆ) ನೀರಿನಿಂದ ಸಂಪೂರ್ಣ ಮುಳುಗಡೆ ಗೊಂಡಿದ್ದು ಅಲ್ಲಿರುವ ತೂಗು ಸೇತುವೆ ವರೆಗೂ ನೀರು ಹರಿಯುತ್ತಿದೆ.ನೀರು ಪ್ರವಾಹದ ರೀತಿ ಹರಿಯುತ್ತಿರುವುದರಿಂದ ಆ ಭಾಗದ ಜನರಿಗೆ ಸಂಚಾರಕ್ಕೆ ಕಷ್ಟವಾಗಿದೆ . ಮಳೆ...
ಬೆಳ್ತಂಗಡಿ; ದಾರಿ ತಪ್ಪಿ ಬಂದ ಗೇರುಕಟ್ಟೆಗೆ ಬಂದ ಕಾಜೂರಿನ ವೃದ್ದೆಯನ್ನು ಸುರಕ್ಷಿತವಾಗಿ ಮನೆ ಸೇರಿಸಿದ ಅಬ್ದುಲ್ ಕರೀಂ
ಬೆಳ್ತಂಗಡಿ; ತಾಲೂಕಿನ ಕಾಜೂರು ಸಮೀಪದ ನಿವಾಸಿ ಸುಮಾರು 85 ವರ್ಷ ಪ್ರಾಯದ ಅಲಿಮಮ್ಮ ಎಂಬವರು ಸಂಬಂಧಿಕರ ಮನೆ ಬೋಳಿಯಾರಿಗೆಂದು ಒಬ್ಬರೇ ಕಾಜೂರಿನಿಂದ ಹೊರಟವರು ಬೆಳ್ತಂಗಡಿಯಿಂದ ದಿಕ್ಕು ತಪ್ಪಿ ಪುತ್ತೂರುಗೆ ಹೋಗುವ ಸರಕಾರಿ ಎಕ್ಸ್ ಪ್ರೆಸ್ ಬಸ್ಸಿಗೆ ಹತ್ತಿದರು. ವಯೋವೃದ್ದೆಯ ಮಾತು ಕಂಡಕ್ಟರ್ ಗೆ ಅರ್ಥವಾಗದೇ ಗೇರುಕಟ್ಟೆಯಲ್ಲಿ ಇಳಿಸಿಬಿಟ್ಟರು.ಈ ವೃದ್ದೆಗೆ ದಿಕ್ಕು ದೋಚದಾಯಿತು.ಬಸ್ಸಿನಲ್ಲಿ ಪುತ್ತೂರು ಕಡೆ ಪ್ರಯಾಣಿಸುತ್ತಿದ್ದ ಈ ಹಿಂದೆ ಬೆಳ್ತಂಗಡಿ ಠಾಣೆಯಲ್ಲಿ ಫೋಲಿಸ್ ಆಗಿದ್ದ ಸದ್ರಿ ಮಂಗಳೂರಿನ ಸೈಬರ್ ಕ್ರೈಮ್ ನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಸತೀಶ್ ಹಾಗೂ ಸಾಮಾಜಿಕ ಕಾರ್ಯಕರ್ತ ಬೆಳಾಲಿನ...
‘ದಸ್ಕತ್’ ತುಳು ಚಿತ್ರಕ್ಕೆ ಪ್ರಶಸ್ತಿಗಳ ಹಿರಿಮೆ; ಈ ವರ್ಷದ ಉತ್ತಮ ತುಳು ಚಲನಚಿತ್ರ ದಸ್ಕತ್.
ಬೆಳ್ತಂಗಡಿ; ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಸಭಾಭವನದಲ್ಲಿ ನಡೆದ ಕೋಸ್ಟಲ್ ಫಿಲ್ಮ್ ಅವಾರ್ಡ್ಸ್ 2025 ನಲ್ಲಿ ದಸ್ಕತ್ ಸಿನೆಮಾವು ಈ ವರ್ಷದ ಉತ್ತಮ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.ಇದೆ ಸಿನೆಮಾದ ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಉತ್ತಮ ನಿರ್ದೇಶಕ ಪ್ರಶಸ್ತಿ ಮತ್ತು ಉತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ಹಾಗೂ ಸಂತೋಷ್ ಆಚಾರ್ಯ ಗುಂಪಲಾಜೆ ಉತ್ತಮ ಛಾಯಾಗ್ರಾಹಕ, ದೀಕ್ಷಿತ್ ಕೆ ಪೂಜಾರಿ ಉತ್ತಮ ನಟ, ಯಶ್ ಶೆಟ್ಟಿ ಉತ್ತಮ ಖಳ ನಟ, ಸಮರ್ಥನ್ ರಾವ್ ಉತ್ತಮ ಹಿನ್ನೆಲೆ ಸಂಗೀತ, ಉತ್ತಮ ಪೋಷಕ ನಟ ಮೋಹನ್ ಶೆಣೈ...
ಧರ್ಮಸ್ಥಳ ಕನ್ಯಾಡಿ ಯುವಕ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ; ಧರ್ಮಸ್ಥಳ ಕನ್ಯಾಡಿಯ ಮತ್ತಿಲ ನಿವಾಸಿ ಶಿವರಾಜ್ ಮತ್ತಿಲ(33) ತನ್ನ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂನ್ 23ರಂದು ಸಂಭವಿಸಿದೆ.ಈತ ಕೂಲಿ ಕೆಲಸ ಮಾಡಿಕೊಂಡಿದ್ದ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈತ ಈ ಹಿಂದೆಯೂ ಆತ್ಮಹತ್ಯೆಗೆ ವಿಫಲ ಪ್ರಯತ್ನ ನಡೆಸಿದ್ದ ಎನ್ನಲಾಗಿದೆ ಧರ್ಮಸ್ಥಳ ಪೊಲೋಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಜಿರೆ ಪೇಟೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಬೆಳ್ತಂಗಡಿ; ಉಜಿರೆ ಪೇಟೆಯಲ್ಲಿ ಮಂಗಳವಾರ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಂಗಳವಾರ ಉಜಿರೆ ಪೇಟೆಯಲ್ಲಿ ಮೃತದೇಹ ಪತ್ತೆಯಾಗಿದ್ದು ಗ್ರಾಮಪಂಚಾಯತು ಸಿಬ್ಬಂದಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುಮಾರು 45ರಿಂದ 50ವರ್ಷ ಪ್ರಯಾದ ವ್ಯಕ್ತಿಯ ಮೃತದೇಹ ಇದಾಗಿದ್ದು ಎಡ ಕೈಯಲ್ಲಿ G MAHESH ಎಂದೂ ಬಲ ಕೈಯಲ್ಲಿ ABGTK ಎಂದೂ ಬರೆಯಲಾಗಿದೆ.ಮೃತರ ವಾರಿಸುದಾರರು ಯಾರಾದರೂ ಇದ್ದಲ್ಲಿ ಬೆಳ್ತಂಗಡಿ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
ಬೆಳ್ತಂಗಡಿ; ಕೊಯ್ಯೂರು ನಿವಾಸಿ ಮಹಿಳೆ ನಾಪತ್ತೆ
ಬೆಳ್ತಂಗಡಿ: ಕೊಯ್ಯರು ಮಲೆಬೆಟ್ಟು ನಿವಾಸಿಯಾಗಿರುವ ರಝೀನ(24ವ) ಎಂಬವರು ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಿ.ಸಿ.ರೋಡಿನ ಕಾರಿಂಜದ ಮಹಮ್ಮದ್ ಸಲೀಂ ಎಂಬವರ ಪತ್ನಿಯಾದ ರಝೀನರ 2ವರ್ಷದ ಮಗ 40 ದಿನಗಳ ಹಿಂದೆ ಸಾವನ್ನಪ್ಪಿದ್ದರು. ಬಳಿಕ ಅವರು ಕೊಯ್ಯರಿನ ತಾಯಿ ಮನೆಯಲ್ಲಿದ್ದರು. ರಝೀನ 22-06-2025ರಂದು ಸಂಜೆ 4.00ಗಂಟೆಗೆ ಗಂಡನ ಮನೆಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋಗಿದ್ದಳು ಆದರೆ ಆಕೆ ಗಂಡನ ಮನೆಗೆ ಹೋಗದಿರುವುದರಿಂದ ಸಂಬಂಧಿಕರು,ಸ್ನೇಹಿತರ ಮನೆಯಲ್ಲಿ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿಲ್ಲ. ಈ ಹಿನ್ನಲೆಯಲ್ಲಿ ರಝೀನ ಮನೆಯವರು ಬೆಳ್ತಂಗಡಿ ಠಾಣೆಯಲ್ಲಿ ದೂರು...















