ಕನ್ಯಾಡಿ ವಿದ್ಯುತ್ ಆಘಾತಕ್ಕೆ ವ್ಯಕ್ತಿ ಬಲಿ

0

ಬೆಳ್ತಂಗಡಿ: ನಡ ಗ್ರಾಮಪಂಚಾಯತು ವ್ಯಾಪ್ತಿಯ ಕನ್ಯಾಡಿ ಗ್ರಾಮದ ನಿವಾಸಿಯೊಬ್ಬರು ವಿದ್ಯುತ್ ಆಘಾತಕ್ಕೆ ಬಲಿಯಾದ ಘಟನೆ ಭಾನುವಾರ ಮುಂಜಾನೆ ಸಂಭವಿಸಿದೆ.ಮೃತವ್ಯಕ್ತಿ ಕನ್ಯಾಡಿ ಬಯಲು ಕಡ್ತ್ಯಾರು ನಿವಾಸಿ ಶಿವಪ್ರಸಾದ್ ಅಡಪ(48) ಎಂಬವರಾಗಿದ್ದಾರೆ.ಇವರು ಇಂದು ಮುಂಜಾನೆ ತೋಟದ ಪಂಪ್ ಷೆಡ್ ನಲ್ಲಿ ಪಂಪ್ ಸ್ವಿಚ್ ಹಾಕುವ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ಅವರನ್ನು ಕೂಡಲೆ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ.ಮೃತರು ತಾಯಿ ಪತ್ನಿ ಮಕ್ಕಳು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಬೆಳ್ತಂಗಡಿ ರಾಷ್ಟ್ರೀಯ ಮತದಾರರ ದಿನಾಚರಣೆ

0

ಬೆಳ್ತಂಗಡಿ;  ರಾಷ್ಟ್ರೀಯ ಮತದಾರರ ದಿನಾಚರಣೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಚುನಾವಣಾ ಉಪತಹಸೀಲ್ದಾರ್ ರಂಜನ್ ವಹಿಸಿದ್ದರು.ತಾಲೂಕು ಕಚೇರಿಯ ವಿಷಯ ನಿರ್ವಾಹಕರಾದ ಮೃತ್ಯುಂಜಯರವರು ಮತದಾರರ ದಿನಾಚರಣೆಯ ಮಹತ್ವವನ್ನು ವಿವರಿಸಿದರು .ಈ ಸಂದರ್ಭದಲ್ಲಿ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.ಮತದಾರ ದಿನಾಚರಣೆಯ ಪ್ರಯುಕ್ತ ನಡೆಸಲಾದ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದರವರಿಗೆ ಬಹುಮಾನಗಳನ್ನು ವಿತರಿಸಲಾಯಿತು.ತಾಲೂಕು ಮಟ್ಟದ,ಪದವಿ ಪೂರ್ವ ಕಾಲೇಜು ವಿಭಾಗದ, ಪ್ರಬಂಧ ಸ್ಪರ್ಧೆಯಲ್ಲಿ ಕು. ಕೀರ್ತನ, ಪದವಿ ಪೂರ್ವ ಕಾಲೇಜು ಬೆಳ್ತಂಗಡಿ(ಪ್ರಥಮ), ಕು.ರಕ್ಷಿತಾ,ಪದವಿ ಪೂರ್ವ ಕಾಲೇಜು ಉಜಿರೆ (ದ್ವಿ),ಕು.ಶ್ರಾವ್ಯ, ಸ್ರೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜ್,ಮಡಂತ್ಯಾರು(ತೃ) ಹಾಗೂ...

ಮಡಂತ್ಯಾರು ಬೈಕ್ ಗೆ ಕಾರು ಡಿಕ್ಕಿ ವ್ಯಕ್ತಿ ಸ್ಥಳದಲ್ಲಿಯೇ ಸಾವು

0

ಬೆಳ್ತಂಗಡಿ: ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜ. 24ರಂದು ಮಡಂತ್ಯಾರಿನಲ್ಲಿ ನಡೆದಿದೆ. ಕಾವಳಮೂಡೂರು ಕಾರಿಂಜ ಪಡಿ ನಿವಾಸಿ ಪದ್ಮನಾಭ ದೇವಾಡಿಗ(45) ಮೃತಪಟ್ಟ ವ್ಯಕ್ತಿ.ಅವರು ಉಪ್ಪಿನಂಗಡಿ ಹೋಟೆಲ್ ಒಂದರಲ್ಲಿ ಸಪ್ಲಾಯರ್ ಕೆಲಸ ಮಾಡುತ್ತಿದ್ದು, ಕರಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಜ.23ರಂದು ರಾತ್ರಿ ಹೋಟೆಲ್ ನಲ್ಲಿ ಕೆಲಸ ಮುಗಿಸಿ ಸುಮಾರು 11.30ರ ವೇಳೆ ಬರುತ್ತಿದ್ದಾಗ ಮಡಂತ್ಯಾರು ಸಮೀಪ ಮಂಗಳೂರಿನಿಂದ ಬರುತ್ತಿದ್ದ ಕಾರು ಅವರು ಸಂಚರಿಸುತ್ತಿದ್ದ ಬೈಕ್ ಗೆ ಡಿಕ್ಕಿಯಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ...

ಜ 25 ಸಚಿವ ದಿನೇಶ್ ಗುಂಡೂರಾವ್ ಬೆಳ್ತಂಗಡಿಗೆ; ಕುಕ್ಕೇಡಿ ಅಂಬೇಡ್ಕರ್ ಭವನ ಉದ್ಘಾಟನೆ

0

ಬೆಳ್ತಂಗಡಿ; ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಜ25ರಂದು ಆಗಮಿಸಲಿದ್ದಾರೆ.ಬೆಳಿಗ್ಗೆ 10 ಗಂಟೆಗೆಕಾಶಿಪಟ್ನ ಗ್ರಾಮ ಪಂಚಾಯತ್ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನೆರವೇರಿಸಲಿರುವ ಸಚಿವರುಬಳಿಕ 11 ಗಂಟೆಗೆಕುಕ್ಕೆಡಿಯಲ್ಲಿ ನವೀಕೃತ ಡಾ. ಬಿ.ಆರ್ ಅಂಬೇಡ್ಕರ್ ಭವನದ ಉದ್ಘಾಟನೆ ಮತ್ತು ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಮಧ್ಯಾಹ್ನ 12:30ಕನ್ಯಾಡಿ ಗ್ರಾಮದ ಪಡ್ಪು ಎಂಬಲ್ಲಿ ಮೂರು ಕೋಟಿ ವೆಚ್ಚದ ರಸ್ತೆ ಉದ್ಘಾಟನೆ ಮಧ್ಯಾಹ್ನ 1.15ನಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಗಳಾಗಲಿದ್ದುಮಧ್ಯಾಹ್ನ 2 ಗಂಟೆಗೆಕಾಜೂರು...

ಧರ್ಮಸ್ಥಳ: ಜೋಡುಸ್ತಾನ ರಸ್ತೆಗೆ ಪದ್ಮವಿಭೂಷಣ ಡಾ. ಡಿ ವೀರೇಂದ್ರ ಹೆಗಡೆ ರಸ್ತೆ ಎಂದು ನಾಮಕರಣ.

0

ಧರ್ಮಸ್ಥಳ :- ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಜೋಡುಸ್ಥಾನ ರಸ್ತೆಯನ್ನು ಸಾರ್ವಜನಿಕರ ಬೇಡಿಕೆಯಂತೆ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ರಸ್ತೆ ಎಂದು ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಮಲಾ ಇವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಡಿ ಹರ್ಷೇಂದ್ರ ಕುಮಾರ್ ರವರು ನಾಮಫಲಕವನ್ನು ಅನಾವರಣ ಮಾಡಿದರು.ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ್ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಮಲಾ ಪರಮೇಶ್ವರ್, ಉಪಾಧ್ಯಕ್ಷರಾದ ಶ್ರೀ ಪಿ ಶ್ರೀನಿವಾಸ್ ರಾವ್, ಸದಸ್ಯರಾದ ಶ್ರೀ ಮುರಳಿಧರ ದಾಸ್, ಶ್ರೀ ದಿನೇಶ್ ರಾವ್, ಶ್ರೀ ರಾಮಚಂದ್ರರಾವ್, ಶ್ರೀ...

ಇಳಂತಿಲ: ಕಾಂಗ್ರೆಸ್ ಕಾರ್ಯಕರ್ತರ ಸಭೆ ಸರ್ಕಾರದ ಜನಪರ ಯೋಜನೆಗಳನ್ನ ಮನೆ ಮನೆಗೆ ತಲುಪಿಸಿ: ರಕ್ಷಿತ್ ಶಿವರಾಂ

0

ಬೆಳ್ತಂಗಡಿ; ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಗೆ ತಿದ್ದುಪಡಿ ತಂದು ಗ್ರಾಮೀಣ ಜನರಿಗೆ ಮಾಡಿರುವ ಮೋಸದ ವಿರುದ್ಧ ಮುಂಬರುವ ದಿನಗಳಲ್ಲಿ ನಡೆಸಲಾಗುವ ಹೋರಾಟದ ರೂಪರೇಷೆ, ಗ್ರಾಮದಲ್ಲಿ ಆಗಬೇಕಾಗಿದ್ದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಗ್ರ ಚರ್ಚೆ ನಡೆಸುವ ಸಲುವಾಗಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಇತ್ತೀಚೆಗೆಇಳಂತಿಲದ ಏಚ್ ಎಂ ಸಭಾಭವನದಲ್ಲಿ ನಡೆಯಿತು. ಈ ಸಭೆಯಲ್ಲಿ ಎಂ ಎನ್ ಆರ್ ಈ ಜಿ ಬಚಾವ್ ಆಂದೋಲನದ ಬಗ್ಗೆ ಜಾಗೃತಿ ಮೂಡಿಸಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಮ್ ರವರು...

ಎಸ್.ಡಿ.ಎಮ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಿಂದ ಬೆಳ್ತಂಗಡಿ ಖಿಳರ್ ಜುಮ್ಮಾ ಮಸೀದಿ ಭೇಟಿ.

0

ಬೆಳ್ತಂಗಡಿ, ಜ.23:- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ ಇದರ ವ್ಯವಸ್ಥಾಪಕ ನಿರ್ದೇಶಕರಾದ ಡಾ! ಜನಾರ್ದನ್ ರವರು ಬೆಳ್ತಂಗಡಿ ಖಿಳರ್ ಜುಮ್ಮಾ ಮಸೀದಿ ಭೇಟಿ ನೀಡಿ ಅಧ್ಯಕ್ಷರಾದ ಅಕ್ಬರ್ ರವರು ಹಾಗೂ ಸಮಿತಿಯವರೊಂದಿಗೆ ಹೊಸ ವರುಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ವ್ಯವಸ್ಥಾಪಕ ನಿರ್ದೇಶಕರಾದ ಡಾ! ಜನಾರ್ದನ್ ಮಾತನಾಡಿ SDM ಸಂಸ್ಥೆಯಲ್ಲಿ ಮಂಗಳೂರಿನಲ್ಲಿ ಸಿಗುವಂತ ವೈದ್ಯಕೀಯ ಸೌಲಭ್ಯ ಹಾಗೂ ವೈದ್ಯರುಗಳ ಬಗ್ಗೆ ವಿವರವಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಎಮ್ ಆರ್ ಐ ಸ್ಕೇನಿಂಗ್ ಈಗಾಗಲೇ ಉಚಿತ ಡಯಾಲಿಸೀಸ್ ಸೌಲಭ್ಯಗಳು ಒದಗಿಸಲಿದ್ದೇವೆ. ಈಗಾಗಲೇ ಹೃದಯ ಸಂಬಂಧಿ...

ಬಳಂಜ ಪ್ರತ್ಯೇಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಲು ಮನವಿ

0

ಬೆಳ್ತಂಗಡಿ: ಬಳಂಜ ಪ್ರತ್ಯೇಕ ಕೃಷಿ ಪತ್ತಿನ ಸಹಕಾರ ಸಂಘದ ಹೋರಾಟ ಸಮಿತಿ ಬಳಂಜ ನಾಲ್ಕೂರು ತೆಂಕಕಾರಂದುರು ಗ್ರಾಮಗಳ ರೈತ ಸದಸ್ಯರುಗಳು ಬಳಂಜದಲ್ಲಿ ಪ್ರತ್ಯೇಕ ಕೃಷಿ ಪತ್ತಿನ ಸಹಕಾರ ಸಂಘವನ್ನು ರಚಿಸುವುದಾಗಿ ಕಳೆದ ಸಹಕಾರಿ ಚುನಾವಣೆಯಲ್ಲಿ ವಾಗ್ದಾನ ನೀಡಿ ಅಧಿಕಾರಕ್ಕೆ ಬಂದ ನಂತರ ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯು ಇದುವರೆಗೂ ಯಾವುದೇ ಪ್ರಕ್ರಿಯೆಯನ್ನು ಪ್ರಾರಂಭಿಸದೇ ಇರುವುದನ್ನು ವಿರೋಧಿಸಿ ಇಂದು ಬಳಂಜ ನಾಲ್ಕೂರು ತೆಂಕಕಾರಂದುರು ಗ್ರಾಮಗಳ ರೈತರು ಒಟ್ಟು ಸೇರಿ ಒಂದು ತಿಂಗಳ ಒಳಗೆ ನಮಗೆ ಉತ್ತರ ಕೊಡಬೇಕೆಂದು ಅಳದಂಗಡಿ ಕೃಷಿ...

ಹಟ್ಟಿಗೆ ನುಗ್ಗಿ ಕರುವನ್ನು ಕೊಂದ ಚಿರತೆ

0

ಬೆಳ್ತಂಗಡಿ:ಹಟ್ಟಿಗೆ ನುಗ್ಗಿದ ಚಿರತೆ ಕರುವನ್ನು ಕೊಂದು ಹಾಕಿದ ಘಟನೆಮರೋಡಿ ಗ್ರಾಪಂ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. ಪೆರಾಡಿಯ ಬೈಲೋಡಿ ಆನಂದ ಶೆಟ್ಟಿಯವರ ಹಟ್ಟಿಯಲ್ಲಿದ್ದ ಕರುವಿನ ಮೇಲೆ ದಾಳಿ ಮಾಡಿದ ಚಿರತೆ ಕರುವನ್ನು ಎಳೆದೊಯ್ದು ಕೊಂದು ಹಾಕಿದೆ.ಘಟನೆಯ ವಿಚಾರ ತಿಳಿದ ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕರುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಧರ್ಮಸ್ಥಳ ಪ್ರಕರಣ ವಿಚಾರಣೆ ಫೆ.5ಕ್ಕೆ ಮುಂದೂಡಿಕೆ

0

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಜ.23 ರಂದು ವಿಚಾರಣೆ ನಡೆದಿದ್ದು ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮತ್ತೆ ಫೆ.5 ಕ್ಕೆ ಮುಂದೂಡಿದ್ದಾರೆ.ಬಂಟ್ಬಾಳದ ಪ್ರಭಾರ ನ್ಯಾಯಾಧೀಶರಾದ ಬೆಳ್ತಂಗಡಿ ಪ್ರಧಾನ ವ್ಯವಹಾರಿಕ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯಾಗಿರುವ ರಾಜೇಂದ್ರ ಪ್ರಸಾದ್ ಅವರು ಪ್ರಕರಣದ ವಿಚಾರಣೆ ನಡೆಸಿದರು.ಎಸ್.ಐ.ಟಿ ನೀಡಿರುವ ವರದಿಗೆ ಸಂಬಂಧಿಸಿದ ಪ್ರಕರಣದಲ್ಲಿ ತಾವು ಸಂತ್ರಸ್ತರಾಗಿದ್ದು ತಮ್ಮನ್ನೂ ಕಕ್ಷಿದಾರರಾಗಿಸಬೇಕು ಎಂದು ಶ್ರೀ ಕ್ಷೆತ್ರ ಧರ್ಮಸ್ಥಳ ಪರವಾಗಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಯಿತು ಈಅರ್ಜಿಗೆ ಮಹೇಶ್ ಶೆಟ್ಟಿ ಪರ ವಕೀಲರು...