2027 ಮಾರ್ಚ್ 19 – 28; ಕಾಜೂರು ಮಖಾಂ ಉರೂಸ್ ಗೌರವಾಧ್ಯಕ್ಷ ಸಯ್ಯಿದ್ ಕುಂಬೋಳ್ ತಂಙಳ್, ಖಾಝಿ ಎ.ಪಿ ಉಸ್ತಾದ ರಿಂದ ದಿನಾಂಕ ಘೋಷಣೆ ಪೋಸ್ಟರ್ ಬಿಡುಗಡೆ
ಬೆಳ್ತಂಗಡಿ; ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಇತಿಹಾಸ ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರವಾದ ಕಾಜೂರು ಮಖಾಂ ಶರೀಫ್ ಉರೂಸ್ ಕಾರ್ಯಕ್ರಮವು 2027 ಮಾರ್ಚ್ 19 ರಿಂದ 28 ರ ವರೆಗೆ ನಡೆಯಲಿದೆ.ಖಾಝಿ ಶೈಖುನಾ ಸುಲ್ತಾನುಲ್ ಉಲಮಾ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್ ಅವರ ನೇತೃತ್ವದಲ್ಲಿ, ಸಯ್ಯಿದ್ ಕಾಜೂರು ತಂಙಳ್ ಮಾರ್ಗದರ್ಶನದೊಂದಿಗೆ ನಡೆಯುವ ಈ ಆಧ್ಯಾತ್ಮಿಕ ಅನುಭೂತಿಯ ಕಾರ್ಯಕ್ರಮಗಳ ಅಧಿಕೃತ ಘೋಷಣೆಯನ್ನು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಗೌರವಾಧ್ಯಕ್ಷರೂ, ಸಮಸ್ತ ಕೇರಳ ಕೇಂದ್ರ ಮುಶಾವರ ಉಪಾಧ್ಯಕ್ಷರೂ ಆದ...
ಧರ್ಮಸ್ಥಳ; ಅಡಿಕೆ ಕೊಯ್ಯುವ ವೇಳೆ ವಿದ್ಯುತ್ ಶಾಕ್: ವ್ಯಕ್ತಿ ಸಾವು
ಬೆಳ್ತಂಗಡಿ: ಮನೆಯ ಬಳಿಯ ಅಡಿಕೆ ಮರದಿಂದ ದೋಟಿ ಮೂಲಕ ಅಡಿಕೆ ಕೊಯ್ಯುತ್ತಿದ್ದ ವೇಳೆ ವಿದ್ಯುತ್ ತಂತಿಗೆ ದೋಟಿ ತಾಗಿ ವ್ಯಕ್ತಿಯೊಬ್ಬರು ವಿದ್ಯುತ್ ಶಾಕ್ಗೆ ಒಳಗಾಗಿ ಮೃತಪಟ್ಟ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಧರ್ಮಸ್ಥಳ ಗ್ರಾಮದ ಅಜಿಕುರಿ ನಿವಾಸಿ ನಝಿರ್(35) ಎಂಬವರೇ ಮೃತವ್ಯಕ್ತಿಯಾಗಿದ್ದಾರೆ. ಅ 04 ಭಾನುವಾರ ಮನೆಯ ಸಮೀಪದ ಅಡಿಕೆ ಮರದಿಂದ ದೋಟಿ ಮೂಲಕ ಅಡಿಕೆ ಕೊಯ್ಯುತ್ತಿದ್ದ ವೇಳೆ, ಸಮೀಪದಲ್ಲೇ ಹಾದುಹೋಗಿದ್ದ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ದೋಟಿ ತಾಗಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡು ಹೋಗಿ ಹೆಚ್ಚಿನ...
ಜಿ.ಪಂ. ತಾ.ಪಂ ಚುನಾವಣೆಗೆ ವೇದಿಕೆ ಸಿದ್ದ ವರ್ಗವಾರು ಮೀಸಲಾತಿ ಪ್ರಕಟ
ಬೆಂಗಳೂರು: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ವೇದಿಕೆ ಸಿದ್ದವಾಗಿದ್ದು ವರ್ಗವಾರು ಮೀಸಲಿರಿಸಿದ ಸ್ಥಾನಗಳ ಅಧಿಸೂಚನೆಯನ್ನು ರಾಜ್ಯ ಸರಕಾರ ಪ್ರಕಟಿಸಿದೆ.ರಾಜ್ಯದ ಒಟ್ಟು 31 ಜಿಲ್ಲೆಗಳ 1129 ಜಿಲ್ಲಾ ಪಂಚಾಯತ್ ಸ್ಥಾನಗಳು ಮತ್ತು 3656 ತಾಲೂಕು ಪಂಚಾಯತ್ ಸ್ಥಾನಗಳಿಗೆ ವರ್ಗವಾರು ಮೀಸಲಿರಿಸಿದ ಸ್ಥಾನಗಳ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಸಾಮಾನ್ಯ ಮತ್ತು ಮಹಿಳಾ ವರ್ಗಗಳಿಗೆ ಸ್ಥಾನಗಳನ್ನು ಮೀಸಲಿರಿಸಲಾಗಿದೆ. 1129 ಜಿಲ್ಲಾ ಪಂಚಾಯತ್ ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ ವರ್ಗಕ್ಕೆ 225, ಪರಿಶಿಷ್ಟ ಪಂಗಡ ವರ್ಗಕ್ಕೆ 102, ಹಿಂದುಳಿದ...
ಚಾರ್ಮಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಅರೆಕ್ಕಲ್ ಮಮ್ಮಿಕುಂಞಿ ನಿಧನ
ಬೆಳ್ತಂಗಡಿ; ಹಿರಿಯ ಕಾಂಗ್ರೆಸ್ ಮುಖಂಡ, ಚಾರ್ಮಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಅರೆಕ್ಕಲ್ ಮಮ್ಮಿಕುಂಞಿ ಬಾವಾಕ(75) ಅವರು ಅಲ್ಪ ಕಾಲದ ಅಸೌಖ್ಯದಿಂದ ಅ.7 ರಂದು ಸ್ವಗೃಹ ಕಕ್ಕಿಂಜೆಯಲ್ಲಿ ನಿಧನರಾಗಿದ್ದಾರೆ.ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಕಕ್ಕಿಂಜೆ ಇದರ ಮಾಜಿ ಅಧ್ಯಕ್ಷರಾಗಿದ್ದು 25 ವರ್ಷಗಳ ಕಾಲ ಚಾರ್ಮಾಡಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದು, ಒಂದು ಅವಧಿಯಲ್ಲಿ ಅಧ್ಯಕ್ಷರಾಗಿದ್ದರು.ಮೃತರು ಪತ್ನಿ ಖತೀಜಮ್ಮ, ಮಕ್ಕಳಾದ ಸಿದ್ದೀಕ್, ಇಕ್ಬಾಲ್, ಶಕೀಲ್, ಸಾದಿಕ್, ಮೈಮುನಾ, ಸಾಯಿರಾ ಬಾನು, ಶಮೀಮಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಬೆಳ್ತಂಗಡಿ ತಾಲೂಕಿನಲ್ಲಿ ಅ 8 ರಂದು ವಿದ್ಯುತ್ ಕಡಿತ
ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಅಡಚಣೆಯಾಗುವ ವಿದ್ಯುತ್ ಕಂಬಗಳ ಸ್ಥಳಾಂತರ ಹಾಗೂ ಬೆಳ್ತಂಗಡಿ 33 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಅ. 8ರಂದು ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ ಸೇರಿದಂತೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಲ್ಯಾಲ ಫೀಡರ್ ಹಾಗೂ ಬೆಳ್ತಂಗಡಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಬಂಗಾಡಿ, ಕೊಲ್ಲಿ, ಕೊಯ್ಯೂರು, ಉಜಿರೆ ಮತ್ತು ಬೆಳಾಲು ಫೀಡರ್ಗಳಲ್ಲಿ ವಿದ್ಯುತ್ ನಿಲುಗಡೆ ಇರಲಿದೆ.ಅದೇ ರೀತಿ ಧರ್ಮಸ್ಥಳ ವಿದ್ಯುತ್ ವಿತರಣಾ...
ಗುರುವಾಯನಕೆರೆ ಗಣೇಶೋತ್ಸವ ಸಮಿತಿ ವತಿಯಿಂದ ಕೃಷಿ ವಿಜ್ಞಾನದಲ್ಲಿ 53ನೇ ರ್ಯಾಂಕ್ ಪಡೆದ ಗುರುವಾಯನಕೆರೆ ಕೊಂಟುಪಲ್ಕೆ ನಿವಾಸಿ ಕು.ನಿಧಿತಾ ಬಂಗೇರ ಅವರಿಗೆ ಸನ್ಮಾನ
ಗುರುವಾಯನಕೆರೆ : (ಅ. 06) ಗುರುವಾಯನಕೆರೆ ಕೊಂಟುಪಲ್ಕೆ ನಿವಾಸಿ ಆನಂದ ಮತ್ತು ಶ್ರೀಮತಿ ಪ್ರತಿಮಾ ದಂಪತಿಗಳ ಮಗಳಾದ ಕುಮಾರಿ ನಿಧಿತ ಬಂಗೇರ ಇವರು ಕೃಷಿ ವಿಜ್ಞಾನ ವಿಭಾಗದಲ್ಲಿ ಸುಮಾರು 5,000. ವಿದ್ಯಾರ್ಥಿಗಳ ಪೈಕಿ 53ನೇ ರಾಂಕ್ ಗಳಿಸಿ ಅಮೋಘ ಸಾಧನೆ ಮಾಡಿದ ಇವರಿಗೆ ಗುರುವಾಯನಕೆರೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಅಕ್ಟೋಬರ್ 06 ರಂದು ಅವರ ನಿವಾಸದಲ್ಲಿ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿಗುರುವಾಯನಕೆರೆ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳಾದ ರಿಜೇಶ್ ಕುಮಾರ್ ಗುರುವಾಯನಕೆರೆ, ಸಮಿತಿ ಅಧ್ಯಕ್ಷರಾದ ಜೀವನ್ ಕುಲಾಲ್, ಗಣೇಶ್ ಕುಲಾಲ್ ಜಿ.ಕೆರೆ,...
ಬೆಳ್ತಂಗಡಿ : ನಾವೂರಿನ ಆರೋಗ್ಯ ಕ್ಲಿನಿಕ್ ಗೆ ಬೆಂಕಿ:ಡಿಸೇಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು?
ಬೆಳ್ತಂಗಡಿ : ನಾವೂರು ಗ್ರಾಮದ ಪೇಟೆಯಲ್ಲಿರುವ ಆರೋಗ್ಯ ಕ್ಲಿನಿಕ್ ಗೆ ಅ.6 ರಂದು ತಡರಾತ್ರಿ ಬೆಂಕಿ ಬಿದ್ದು ಅಪಾರ ವಸ್ತುಗಳು ಸುಟ್ಟು ಕರಕಲಾದ ಘಟನೆ ಅ. 7 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಅನಾಹುತದದ ಹಿಂದೆ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದ್ದು,ಯಾರೋ ಕಿಡಿಗೇಡಿಗಳು ಕ್ಲಿನಿಕ್ ಹಿಂಭಾಗ ಕಿಟಕಿ ಮೂಲಕ ಒಳಗಡೆ ಡಿಸೇಲ್ ಸುರಿದುಬೆಂಕಿ ಹಚ್ಚಿದ್ದಾರೆ ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದ್ದು ಈಹಿನ್ನಲೆಯಲ್ಲಿ ತನಿಖೆ ಮುಂದುವರಿದಿದೆ. ನಾವೂರು ಗ್ರಾಮದ ಶೇಖರ್ ಪೂಜಾರಿ ಎಂಬವರ ಮಾಲೀಕತ್ವದ ಸ್ವಾತಿ ಕಟ್ಟಡದಲ್ಲಿ ಡಾ. ಪ್ರದೀಪ ಎ ಅವರಿಗೆ ಸೇರಿದ...
ಕೆಂಪೇಗೌಡ ಪ್ರಶಸ್ತಿಗೆ ಭಾಜನರಾದ ಸಮಾಜ ಸೇವಕಿ ಲೋಕೇಶ್ವರಿ ವಿನಯಚಂದ್ರ ಸೌತಡ್ಕ ಕ್ಷೇತ್ರದಲ್ಲಿ ಅಭಿನಂದನೆ
ಬೆಳ್ತಂಗಡಿ: ಅಖಿಲ ಭಾರತ ಒಕ್ಕಲಿಗರ ಮಹಾಸಭಾ ಮತ್ತುಒಕ್ಕಲಿಗರ ಪರಿಷತ್ತು ಹಾಗೂ ಕೃಷ್ಣಪ್ಪ ರಂಗಮ್ಮ ಸಮಾಜ ಸೇವಾ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪಡೆದ ಸಮಾಜ ಸೇವಕಿ, ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಸದಸ್ಯೆ ಲೋಕೇಶ್ವರಿ ವಿನಯಚಂದ್ರ ಅವರಿಗೆ ವ್ಯವಸ್ಥಾಪನ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಶಭಾರಯ, ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಪ್ರಧಾನ ಅರ್ಚಕರಾದ ಸತ್ಯಪ್ರಿಯ ಕಲ್ಲುರಾಯ, ಸದಸ್ಯರಾದ ವಿಶ್ವನಾಥ್ ಪೂಜಾರಿ ಕೊಲ್ಲಜೆ, ಪ್ರಮೋದ್ ರೈ ರೆಖ್ಯಾ, ಗಣೇಶ್ ಕಾಶಿ, ಹರಿಶ್ಚಂದ್ರ, ಪ್ರಶಾಂತ್ ಮಚ್ಚಿನ,...
ಕೊರಗ ಹಾಗೂ ಮಲೆಕುಡಿಯರಿಗೆ ಸ್ಥಗಿತಗೊಂಡಿದ್ದ ಪೌಷ್ಟಿಕ ಆಹಾರ ಕಿಟ್ ವಿತರಣೆಗೆ ಸರ್ಕಾರದ ಆದೇಶ: ರಕ್ಷಿತ್ ಶಿವರಾಂ ಮನವಿಗೆ ಸರ್ಕಾರದಿಂದ ಸ್ಪಂದನೆ
ಬೆಳ್ತಂಗಡಿ:ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ (ITDP) ಅಡಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಮೂಲನಿವಾಸಿ (PVTG) ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ಸ್ಥಗಿತಗೊಂಡಿದ್ದ ಪೌಷ್ಟಿಕ ಆಹಾರ ಕಿಟ್ಗಳ ವಿತರಣೆಯನ್ನು ಪುನಾರಂಭಿಸುವಂತೆ KPCC ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಸಲ್ಲಿಸಿದ್ದ ಮನವಿಗೆ ಸರ್ಕಾರ ತಕ್ಷಣವೇ ಸ್ಪಂದಿಸಿದ್ದು, ಆಹಾರ ಕಿಟ್ ಸರಬರಾಜಿಗೆ ಅಧಿಕೃತ ಆದೇಶ ಹೊರಡಿಸಿದೆ ಎಂದು ಪ್ರಕರಣದ ಹಿನ್ನೆಲೆ:ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ವಾಸಿಸುತ್ತಿರುವ ಕೊರಗ, ಮಲೆಕುಡಿಯ, ಜೇನುಕುರುಬ, ಕಾಡುಕುರುಬ ಸೇರಿದಂತೆ ಅಳಿವಿನಂಚಿನಲ್ಲಿರುವ ಮೂಲನಿವಾಸಿ ಸಮುದಾಯಗಳಿಗೆ...
ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸಿ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಬಂಧನ
ಮಂಗಳೂರು: ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 15 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ವಿಟ್ಲ ಪೊಲೀಸರು ದಸ್ತಗಿರಿ ಮಾಡಿದ್ದಾರೆ.ಪುತ್ತೂರು ಬಲ್ಯ ನಿವಾಸಿ ಹಿಬ್ಬಾತುಲ್ಲ (52) ಬಂಧಿತ ಆರೋಪಿ. ಬ್ಯಾಂಕ್ನಲ್ಲಿ ಉದ್ಯೋಗ ಕೊಡಿಸುವುದಾಗಿ ಇಬ್ಬರನ್ನು ನಂಬಿಸಿ ಹಣ ಪಡೆದು, ಉದ್ಯೋಗ ಕೊಡಿಸದೇ ಹಾಗೂ ಹಣವನ್ನು ಹಿಂತಿರುಗಿಸದೇ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ.151/2011, ಕಲಂ 420, 465, 468, 471 ಜೊತೆಗೆ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ...















