ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ

0

ಬೆಳ್ತಂಗಡಿ; ಧರ್ಮಸ್ಥಳ ಉಜಿರೆ ಹೆದ್ದಾರಿಯಲ್ಲಿ ಮಣ್ಣ ಸಂಕದ ಸಮೀಪ ಕೆ.ಎಸ್ ಆರ್ ಟಿ ಸಿ ಬಸ್ ಹಾಗೂ ಕಾರಿನ ನಡುವೆ ಶುಕ್ರವಾರ ಮಧ್ಯಾಹ್ನ ಭೀಕರ‌ ಅಪಘಾತ ಸಂಭವಿಸಿದ್ದು ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಪಘಾತದ ವೇಳೆ ಕಾರಿನ ಹಿಂದಿನಿಂದ ಬರುತ್ತಿದ್ದ ಓಮ್ನಿ ಕಾರು ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ಈಡಾದ ಕಾರಿನ‌ಹಿಂಬದಿಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಧರ್ಮಸ್ಥಳದ ನಿವಾಸಿ ಅನಂತರಾಮ್ (54) ಗಾಯಗೊಂಡಿರುವುದಾಗಿ ತಿಳಿದು ಬಂದಿದ್ದು ಗಾಯಾಳುವನ್ನು ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆ ಗೆ...

ಪುಂಜಾಲಕಟ್ಟೆ: ಟೆಂಪೊ ಡಿಕ್ಕಿ: ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತ್ಯು

0

ಬೆಳ್ತಂಗಡಿ: ಟೆಂಪೊ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಕುಕ್ಕಳ ನಿವಾಸಿ ಸುನಿಲ್ (25) ಚಿಕಿತ್ಸೆ ಫಲಕಾರಿಯಾಗಿದೆ ಆ.27ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆ.20 ರಂದು ರಾತ್ರಿ ಪುಂಜಾಲಕಟ್ಟೆ ಹೆದ್ದಾರಿಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಟೆಂಪೊ ಡಿಕ್ಕಿ ಹೊಡೆದಿದ್ದು ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಯ ಭಾಗಕ್ಕೆ ಹಾಗೂ ಎದೆಗೆ ತೀವ್ರ ಏಟಾಗಿದ್ದ ಪರಿಣಾಮ 8 ದಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ತಾಯಿ, ಓರ್ವ ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಜಮೀನಿಗೆ ಹೋಗಲು ದಾರಿಯ ಹಕ್ಕಿಗಾಗಿ ತಾಲೂಕು ಕಚೇರಿ ಎದುರು ಧರಣಿ

0

ಬೆಳ್ತಂಗಡಿ: ಜಾಗಕ್ಕೆ ಹೋಗಲು ದಾರಿ ಹಕ್ಕಿಗಾಗಿ ಆಗ್ರಹಿಸಿ ನಿಡ್ಲೆ ಗ್ರಾಮದಹರಿಪ್ರಸಾದ್ ಇರ್ವತ್ರಾಯ ಅವರು ಆ.27ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು. ನಿಡ್ಲೆ ಗ್ರಾಮದಲ್ಲಿ 3 ಎಕರೆ ಜಮೀನಿದ್ದು, 1993 ರಿಂದ ಈ ಜಮೀನಿಗೆ ದಾರಿಯ ಹಕ್ಕು ಊರ್ಜಿತವಾಗಿದೆ ಹೀಗುರುವಾಗಲೇ ಅಕ್ರಮ-ಸಕ್ರಮದಲ್ಲಿ ಜಮೀನು ಮಂಜೂರು ಮಾಡುವಾಗ ಊರ್ಜಿತದಲ್ಲಿದ್ದ ದಾರಿಯನ್ನು ತೋರಿಸದೆ ಭೂ ಮಂಜೂರಾತಿ ಮಾಡಿದ್ದು 1993ರಿಂದಲೂ ಇದ್ದ ರಸ್ತೆಯನ್ನು 2021ರಲ್ಲಿ ಭೂಪರಿವರ್ತನೆ ಮಾಡುವಾಗ ತಹಶೀಲ್ದಾರರು ರದ್ದು ಮಾಡಿದ್ದಾರೆ ಎಂದು ಅವರು ಆರೋಪಿಸಿದರು.ಕಳೆದ ಒಂದು ವರ್ಷದಿಂದ ಜಮೀಮಿಗೆ ಹೋಗುವ ರಸ್ತೆಗಾಗಿ ಕಚೇರಿಗೆ...

ಬೆಳ್ತಂಗಡಿ; ಶಿರ್ಲಾಲು ಗ್ರಾ.ಪಂ ವ್ಯಾಪ್ತಿಯಲ್ಲಿ ಪಡಿತರ ವಿತರಣೆಯಲ್ಲಿ ಅವ್ಯವಸ್ತೆ ಫಲಾನುಭವಿಗಳಿಂದ ಪ್ರತಿಭಟನೆಯ ಎಚ್ಚರಿಕೆ

0

ಬೆಳ್ತಂಗಡಿ;  ಶಿರ್ಲಾಲು ಗ್ರಾಮ ಪಂಚಾಯತ್ ನ ಸುಳ್ಕೇರಿಮೊಗ್ರು ಸಹಕಾರಿ ವ್ಯವಸಾಯಿಕ ಬ್ಯಾಂಕ್ ನಿಯಮಿತ ಶಿರ್ಲಾಲು ಇಲ್ಲಿ ಕಳೆದ ಕೆಲವು ದಿನಗಳಿಂದ ಪಡಿತರ ಸಾಮಾಗ್ರಿಗಳನ್ನು ಪಡೆಯಲು ನೂರಾರು ಜನ ಹತ್ತು ಹದಿನೈದು ದಿನಗಳಿಂದ ಮೂರು ನಾಲ್ಕು ಕಿಲೋಮೀಟರ್ ದೂರದಿಂದ ಬಂದು ಸರ್ವರ್ ಸಮಸ್ಯೆ ಎಂದು ಕಾದು ಕುಳಿತು ಹಿಂತಿರುಗುತ್ತಿದ್ದಾರೆ ಇಲ್ಲಿ ಆಹಾರ ವಿತರಕರು ಸರಕಾರದ ಸಮಯ ಪಾಲನೆಯ ನಿಯಮ ಪಾಲಿಸುವುದಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಸರಕಾರದ ಸಮಯ ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ ಹತ್ತು ಗಂಟೆಯ ತನಕ ಪಡಿತರ ವಿತರಣೆಯ ಮಾಡ ಬೇಕು ಎಂದು...

ಧರ್ಮಸ್ಥಳ: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ; ಆರೋಪಿಯ ಬಂಧನ

0

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿಯಾಗಿಸಿ, ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ 16 ವರ್ಷದ ಬಾಲಕಿಯೊಂದಿಗೆ ಕಳೆದ ವರ್ಷ ಸೆಪ್ಟೆಂಬರ್‌ನಿಂದ ನವೆಂಬರ್‌ ಅವಧಿಯಲ್ಲಿ ಆರೋಪಿ ಶ್ರೀಕಾಂತ್‌ (21) ಎಂಬಾತ ಬಲವಂತವಾಗಿ ಅತ್ಯಾಚಾರ ಮಾಡಿ ಯಾರಿಗೂ ಹೇಳದಂತೆ ಬೆದರಿಕೆ ಒಡ್ಡಿದ್ದ ಬಳಿಕ ಬಾಲಕಿ ಯಾರಿಗೂ ತಿಳಿಸದೆ ಸುಮ್ಮನಿದ್ದಳು ಎನ್ನಲಾಗಿದೆ ಬಳಿಕ ಬಾಲಕಿ ಗರ್ಭಿಣಿಯಾಗಿದ್ದು,ಆ.22 ರಂದು ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆ.23ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ...

ಅಂತರ್ ರಾಜ್ಯ ಕಳ್ಳತನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

0

ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಡ್ನೂರು ಕಾವು ಎಂಬಲ್ಲಿ ಜೂನ್ 19ರಿಂದ 20ರ ನಡುವಿನ ಅವಧಿಯಲ್ಲಿ ನಡೆದ ಓಮ್ನಿ ಕಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ರಾಜ್ಯ ಕಳ್ಳತನ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಅ.ಕ್ರ. 94/2026ರಂತೆ ಬಿಎನ್‌ಎಸ್ ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐಗಳಾದ ಗುಣಪಾಲ ಜೆ. ಹಾಗೂ...

ಮಂಗಳೂರು ತಂಗಿಯ ಕೊಲೆ ಪ್ರಕರಣ‌‌ ಅಣ್ಙನಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

0

ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕಂಬಳಪದವು ಎಂಬಲ್ಲಿ ಸುಮಾರು 7 ವರ್ಷದ ಹಿಂದೆ ಕ್ಷುಲ್ಲಕ ಕಾರಣಕ್ಕಾಗಿ ತನ್ನ ತಂಗಿಯನ್ನು ಕೊಲೆಗೈದ ಆರೋಪ ಎದುರಿಸುತ್ತಿದ್ದ ಸ್ಯಾಟ್ಸನ್ ಪ್ರಾನ್ಸಿಸ್ ಕುಟಿನ್ಹಾ ಎಂಬಾತನಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಸೆ.304 (ಜಿಜಿ) ಐಪಿಸಿ ಅನ್ವಯ 4 ವರ್ಷ ಶಿಕ್ಷೆ ಮತ್ತು 10,000 ರೂ. ದಂಡ ಹಾಗೂ ಕಲಂ 201 ಐಪಿಸಿ ಅನ್ವಯ 1 ವರ್ಷ ಶಿಕ್ಷೆ ಮತ್ತು 1,000 ರೂ.ದಂಡವನ್ನು ವಿಧಿಸಲಾಗಿದೆ. 2019ರ ಅಕ್ಟೋಬರ್ 8ರಂದು ಮಧ್ಯಾಹ್ನ 12ಕ್ಕೆ ತನ್ನ ವಾಸದ...

ಧರ್ಮಸ್ಥಳ: ಸೌಜನ್ಯ ಮನೆಗೆ ಆರ್.ಎಸ್. ಎಸ್. ಮುಖಂಡ ಡಾ.ಪ್ರಭಾಕರ ಭಟ್ ಕಲ್ಕಡ್ಕ‌ಭೇಟಿ

0

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಳಿ ಅತ್ಯಾಚಾರಕ್ಕೀಡಾಗಿ ಹತ್ಯೆಯಾಗಿರುವ ಉಜಿರೆ ಎಸ್‌.ಡಿ.ಎಂ.ಕಾಲೇಜಿನ ವಿದ್ಯಾರ್ಥಿನಿ ಕು.ಸೌಜನ್ಯ ಅವರ ಧರ್ಮಸ್ಥಳ ಗ್ರಾಮದ ಪಾಂಗಳ ಮನೆಗೆ ಆರ್.ಎಸ್.ಎಸ್. ಹಿರಿಯ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಆ.26ರಂದು ಭೇಟಿ ನೀಡಿದರು. ಸೌಜನ್ಯ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಅವರೊಂದಿಗೆ ಡಾ. ಪ್ರಭಾಕರ ಭಟ್ ಮಾತುಕತೆ ನಡೆಸಿ ಕುಟುಂಬಕ್ಕೆ ಧೈರ್ಯ ತುಂಬಿದರು.   ಉದ್ಯಮಿ ಸದಾನಂದ ನಾವರ, ಪುರಂದರ, ಮೋಹನ್‌ ಶೆಟ್ಟಿ ಉಜಿರೆ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ಗೆಜ್ಜೆಗಿರಿ ಮೇಳದ ಐದನೇ ವರ್ಷದ ತಿರುಗಾಟದ ಪ್ರಯುಕ್ತ ಡಿ. ಹರ್ಷೇಂದ್ರ ಕುಮಾರ್ ಧರ್ಮಸ್ಥಳ ಅವರ ಭೇಟಿ

0

ಬೆಳ್ತಂಗಡಿ;  ಶ್ರೀ ಆದಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಗೆಜ್ಜೆಗಿರಿ ವತಿಯಿಂ ನಡೆಯುತ್ತಿರುವ ಶ್ರೀ ಗೆಜ್ಜೆಗಿರಿ ಮೇಳದ ಐದನೇ ವರ್ಷದ ತಿರುಗಾಟದ ಅಂಗವಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ (ಶ್ರೀ ಧರ್ಮಸ್ಥಳ ಮೇಳ)ಯ ಮೇಲ್ವಿಚಾರಕರೂ, ಯಕ್ಷಗಾನದ ವಿವಿಧ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಶ್ರೀ ಡಿ. ಹರ್ಷೇಂದ್ರ ಕುಮಾರ್ ಧರ್ಮಸ್ಥಳ ಅವರನ್ನು ಭೇಟಿ ಮಾಡಿ, ಮೇಳದ ಯಶಸ್ವಿ ತಿರುಗಾಟಕ್ಕಾಗಿ ಅವರ ಮಾರ್ಗದರ್ಶನ, ಅಮೂಲ್ಯ ಸಲಹೆ ಹಾಗೂ ಆಶೀರ್ವಾದವನ್ನು ಕೋರಲಾಯಿತು. ಈ ಸಂದರ್ಭದಲ್ಲಿ ಶ್ರೀ ಡಿ. ಹರ್ಷೇಂದ್ರ...

ಬೆಳ್ತಂಗಡಿ: ನಿಡ್ಲೆಯಲ್ಲಿ ಕಾಡಾನೆ ದಾಳಿ ವ್ಯಾಪಕ ಕೃಷಿ ಹಾನಿ

0

ಬೆಳ್ತಂಗಡಿ; ತಾಲೂಕಿನಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದೆ. ಮಂಗಳವಾರ ರಾತ್ರಿಯ ವೇಳೆ ನಿಡ್ಲೆ ಗ್ರಾಮದ ಬೂಡುಜಾಲು ಸಮೀಪ ಹರಿಕೃಷ್ಣರಾವ್ ಎಂಬವರ‌ ತೋಟಕ್ಕೆ ಕಾಡಾನೆ ನುಗ್ಗಿದ್ದು ವ್ಯಾಪಕವಾಗಿ ಕೃಷಿಗೆ ಹಾನಿಯುಂಟು ಮಾಡಿದೆ. ತೋಟದಲ್ಲಿ ತೆಂಗಿನ ಮರ, ಅಡಿಕೆ ಹಾಗೂ ಬಾಳೆಯನ್ನು ಕಾಡಾನೆಗಳು ನಾಶಪಡಿಸಿದೆ. ನೀರಿನ ಪೈಪ್ ಗಳನ್ನು ಕಿತ್ತು ಹಾಕಿದ್ದು ವ್ಯಾಪಕ ನಷ್ಟ ಸಂಭವಿಸಿದೆ.