ಶಾಸಕರು ಬಂದ ಅನುದಾನಗಳನ್ನು ವಿನಯೋಗಿಸದೆ ಅನಗತ್ಯ ಆರೋಪ ಮಾಡುತ್ತಿದ್ದಾರೆ; ರಕ್ಷಿತ್ ಶಿವರಾಂ
ಬೆಳ್ತಂಗಡಿ; ಶಾಸಕ ಹರೀಶ್ ಪೂಂಜ ಅವರು ಸರಕಾರದಿಂದ ತಾಲೂಕಿಗೆ ಬಂದಿರುವ ಅನುದಾನಗಳನ್ನು ಸಮರ್ಪಕವಾಗಿ ವಿನಯೋಗಿಸದೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದರಲ್ಲಿಯೇ ನಿರತರಾಗಿದ್ದಾರೆ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆರೋಪಿಸಿದ್ದಾರೆ.ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ಯಾವುದೇ ಅನುದಾನಗಳಿಗೆ ತಡೆಹಿಡಿದಿಲ್ಲ ಶಾಸಕರೇ ಇಲ್ಲದ ಅನುದಾವಿದೆ ಎಂದು ಹೇಳಿ ಜನರನ್ನು ವಂಚಿಸುತ್ತಿದ್ದಾರೆ. ಕಳೆದ ವರ್ಷದ ಮಳೆಹಾನಿಗೆ ಬಂದಿರುವ ಹತ್ತು ಕೋಟಿ ಅನುದಾನ ಇನ್ನೂ ಬಳಕೆಯಾಗಿಲ್ಲ ಎಂದು ಆರೋಪಿಸಿದ ಅವರು ಜಿಲ್ಲೆಯ ಇತರ ತಾಲೂಕುಗಳಲ್ಲಿ ಈ ಅನುದಾನ ಬಳಕೆಯಾಗಿ ಹೆಚ್ಚುವರಿ ಅನುದಾನಕ್ಕೆ ಶ್ರಮಿಸುತ್ತಿದ್ದಾರೆ, ಇದು ಯಾರ...
ಗರ್ಡಾಡಿ; ಕಥೋಲಿಕ್ ಸಭೆಯ ವತಿಯಿಂದ ವನಮಹೋತ್ಸವ
ಬೆಳ್ತಂಗಡಿ; ಗರ್ಡಾಡಿ ಕಥೋಲಿಕ್ ಸಭೆಯ ವತಿಯಿಂದ ವನಮಹೋತ್ಸವ ಹಾಗೂ ಕೃಷಿ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸಮಾರಂಭದಲ್ಲಿ ಗರ್ಡಾಡಿ ಚರ್ಚ್ ಧರ್ಮಗುರುಗಳಾದ ವಂದನೀಯ ಫಾ. ಸುದೀಪ್ ಸಂತಾನ್ ಗೊನ್ಸಾಲ್ವೀಸ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ತಮ್ಮ ಸಂದೇಶದಲ್ಲಿ ತಿಳಿಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಬಂದಂತಹ ಮಂಗಳೂರಿನ ಕೃಷಿ ಇಲಾಖೆಯ ಜೋ ಪ್ರದೀಪ್ ಡಿಸೋಜರವರು ಅಡಿಕೆಯ ವಿವಿಧ ತಳಿಗಳು, ಅಡಿಕೆ ಬೆಳೆಯನ್ನು ಬೆಳೆಯಲು ಬೇಕಾದ ಬೀಜದ ಆಯ್ಕೆ, ಬೇಕಾದ ಮಣ್ಣು, ಬೆಳೆಯುವ ರೀತಿ, ಅದಕ್ಕೆ ಬೇಕಾಗುವ ಪೋಷಕಾಂಶಗಳು, ಅದಕ್ಕೆ ಬರುವ ವಿವಿಧ...
ಜೈನ ಮಹಿಳಾ ಸಮಾಜ ವತಿಯಿಂದ ವಿದ್ಯಾ ಪ್ರೋತ್ಸಾಹ ಧನವಿತರಣೆ; ನಮ್ಮ ಬದುಕನ್ನು ರೂಪಿಸುವ ಅಡಿಪಾಯವೇ ಶಿಕ್ಷಣ-ಡಾ. ನವೀನ್ ಕುಮಾರ್ ಜೈನ್
ಬೆಳ್ತಂಗಡಿ; "ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ತಮ್ಮ ಬದುಕನ್ನು ಸುಂದರವಾಗಿಸಲು ಹಾಗೂ ಗಟ್ಟಿಗೊಳಿಸಲು ಶಿಕ್ಷಣವು ಬಹಳ ಮುಖ್ಯವಾಗಿ ಬೇಕೇ ಬೇಕು. ಆದ್ದರಿಂದ ಪ್ರತಿಯೊಬ್ಬ ನಮ್ಮ ಸಮಾಜದ ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಅತಿಹೆಚ್ಚಿನ ಗಮನವನ್ನು ನೀಡಿದರೆ ತಮ್ಮ ಬದುಕನ್ನು ಸುಂದರವಾಗಿಸಲು ಸಾಧ್ಯ. ಅಂತಹ ಮೂಲ ಉದ್ದೇಶವನ್ನು ಇಟ್ಟುಕೊಂಡು ಬೆಳ್ತಂಗಡಿಯ ಜೈನ ಮಹಿಳಾ ಸಮಾಜದವರು ಈ ಕಾರ್ಯಕ್ರಮವನ್ನು ಇಟ್ಟುಕೊಂಡಿರುವುದು ನಮ್ಮ ಬೇರೆ ಸಂಸ್ಥೆಯವರಿಗೆ ಮಾದರಿಯಾಗಿದೆ" ಎಂದು ಡಾ| ನವೀನ್ ಕುಮಾರ್ ಜೈನ್ ಹೇಳಿದರು.ಅವರು ಬೆಳ್ತಂಗಡಿಯ ಜೈನ ಮಹಿಳಾ ಸಮಾಜ ವತಿಯಿಂದ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದ...
ಬೆಳ್ತಂಗಡಿ; ಕಾಂಗ್ರೆಸ್ ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕರ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಮಲೋಚನೆ ಸಭೆ
ಬೆಳ್ತಂಗಡಿ; ನಗರದ ಕಾಂಗ್ರೆಸ್ ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕ ನಗರ ಸಮಿತಿ ಹಾಗೂ ಗ್ರಾಮೀಣ ಸಮಿತಿಯ ವತಿಯಿಂದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಮಲೋಚನೆ ಸಭೆ ಜರಗಿತು ಸಭೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ಸಂಘಟನೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು ಅಸಂಘಟಿತ ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸೌಲಭ್ಯವನ್ನು ಎಲ್ಲರಿಗೂ ದೊರಕಿಸುವಂತೆ ಮಾಡುವ ನಿಟ್ಟಿನಲ್ಲಿ ಸಂಘಟನೆ ಪ್ರಯತ್ನಿಸಬೇಕು ಎಂದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಂಘಟಿತ ಕಾರ್ಮಿಕ ಕಾಂಗ್ರೆಸಿನ ಅಧ್ಯಕ್ಷರಾದ ಅಬ್ಬಾಸ್ ಆಲಿ ವಹಿಸಿದರು ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ...
ಉಜಿರೆ ಸೈoಟ್ ಜಾರ್ಜ್ ಚರ್ಚಿನಲ್ಲಿ ಸಂಡೇ ಸ್ಕೂಲ್ ವಾರ್ಷಿಕ ದಿನ ಆಚರಣೆ
ಬೆಳ್ತಂಗಡಿ; ಉಜಿರೆ ಸೇಂಟ್ ಜಾರ್ಜ್ ವಠಾರದಲ್ಲಿ ಸಂಡೇ ಸ್ಕೂಲ್ ವಾರ್ಷಿಕ ದಿನ ಮತ್ತು ಸೇಂಟ್ ಥೋಮಸರ ಹಬ್ಬವನ್ನು ಆಚರಿಸಲಾಯಿತು.ಕಳೆದ ವರ್ಷದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಮಕ್ಕಳ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಟ್ಟರು. ಪುತ್ತೂರು ಮೈನಸ್ ಸೆಮಿನರಿ ರೆಕ್ಟರ್ ಫಾ ರೊಬಿನ್ ಕೇಳoಪರಂಬಿಲ್, ಒ ಸಿ ಡಿ ಕರ್ಮಲಾ ಮಾತ ಆಶ್ರಮದ ಸುಪೀರಿಯರ್ ಫಾ ಜೋಸೆಫ್ ಇಲ್ಲಿಕ್ಕಲ್, ಉಜಿರೆ ಸೈಂಟ್ ಜಾರ್ಜ್ ಚರ್ಚಿನ ಧರ್ಮಗುರುಗಳಾದ ಬಿಜು ಮ್ಯಾಥ್ಯೂಅಂಬಟ್ ಬಲಿಪೂಜೆಯನ್ನು ಅರ್ಪಿಸಿದರು.ಕಾರ್ಯಕ್ರಮದಲ್ಲಿ ಸಂಡೇ ಸ್ಕೂಲ್ ಪಿ ಟಿ...
ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಪರಿಸರ ದಿನ
ಬೆಳ್ತಂಗಡಿ : ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಪರಿಸರ ದಿನವನ್ನು ಜು. 6ರಂದು ಆಚರಿಸಲಾಯಿತು. ಕಥೋಲಿಕ್ ಸಭಾ, ಎಸ್.ಪಿ.ವಿ ಹಾಗೂ ಐಸಿವೈಎಂ ವತಿಯಿಂದ ನಡೆದ ಕಾರಗಯಕ್ರಮದಲ್ಲಿ ಎಲ್ಲರಿಗೂ ಗಿಡಗಳನ್ನು ಹಂಚಲಾಯಿತು. ಪರಿಸರ ಜಾಗ್ರತೆಗಾಗಿ ಮುಖ್ಯ ಗುರುಗಳಾದ ವಂ.ಸ್ಟಾನಿ ಗೋವಿಯಸ್ ಅವರು ಪರಿಸರದ ಉಳಿವಿನ ಅಗತ್ಯತೆ ಬಗ್ಗೆ ತಿಳಿ ಹೇಳಿದರು. ಕಾರ್ಯಕ್ರಮದಲ್ಲಿ ಸಹಾಯಕ ಗುರುಗಳಾದ ರೆ. ಪಾ. ಲ್ಯಾರಿ ಪಿಂಟೋ, ಧರ್ಮಭಗಿನಿಯರು, ಕ್ಯಾಥೋಲಿಕ್ ಸಭಾ ಆಧ್ಯಕ್ಷ ವಿನ್ಸ್ಸೆಂಟ್ ಡಿ ಸೋಜಾ, ಎಸ್.ವಿ.ಪಿ ಅಧ್ಯಕ್ಷ ಸಿರಿಲ್ ಸಿಕ್ವೆರಾ, ಐಸಿವೈಎಂ ಕೋರ್ಡಿನೆಟರ್ ವಿಲಿಯಂ ಸಿಕ್ವೆರ, ಚರ್ಚ್...
ಮಿತ್ತಬಾಗಿಲು; ಅಕ್ರಮ ಗೋ ಮಾಂಸ ಮಾರಟ ಇಬ್ಬರ ಬಂಧನ
ಬೆಳ್ತಂಗಡಿ; ಮಿತ್ತಬಾಗಿಲು ಗ್ರಾಮದ ಕಾಜೂರು ಎಂಬಲ್ಲಿ ಅಕ್ರಮವಾಗಿ ಅಂಗಡಿಯಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಬೆಳ್ತಂಗಡಿ ಪೊಲೀಸರು ಪತ್ತೆಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸ್ಥಳೀಯ ನಿವಾಸಿ ಅಬ್ದುಲ್ ರಜಾಕ್ ಎಂಬಾತನಿಗೆ ಸೇರಿದ ಅಂಗಡಿ ಇದಾಗಿದ್ದು ಸ್ಥಳದಿಂದ 47ಕೆಜಿ ದನದ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಅಂಗಡಿ ಮಾಲಕ ಅಬ್ದುಲ್ ರಜಾಕ್ ಹಾಗೂ ಅಂಗಡಿಯಲ್ಲಿದ್ದ ಅಬ್ದುಲ್ ರವೂಫ್ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆರೋಪಿಗಳು ತಮ್ಮ ಮನೆಯಲ್ಲಿದ್ದ ಜಾನುವಾರನ್ನು ಮಾಂಸಕ್ಕಾಗಿ ವಧೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಪೊಲೀಸರು ಆರೋಪಿಗಳ ವಿರುದ್ದ ಕರ್ನಾಟಕ ಗೋವದೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮದ ಅಡಿಯಲ್ಲಿ ಪ್ರಕರಣ...
ಸುಲ್ಕೇರಿಯ ಯುವಕ ನೇಣುಬಿಗಿದು ಆತ್ಮಹತ್ಯೆ
ಸುಲ್ಕೇರಿ: ಗಾರೆ ಕೆಲಸ ಮಾಡಿಕೊಂಡಿದ್ದ ಯುವಕನೊರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಲ್ಕೇರಿಯಲ್ಲಿ ಜು. 4ರಂದು ನಡೆದಿದೆ. ಮೃತ ಯುವಕನನ್ನು ಸುಲ್ಕೇರಿ ಗ್ರಾಮದ ಮುಡಿಪಿರೆ ನಿವಾಸಿ ಕಿಶೋರ್ (25ವ) ಎಂದು ಗುರುತಿಸಲಾಗಿದೆ. ಕಿಶೋರು ಅವರು ಗಾರೆ ಕೆಲಸ, ಮದ್ದು ಸಿಂಪಡಿಸುವ ಕೆಲಸ ಮಾಡಿಕೊಂಡಿದ್ದರೆನ್ನಲಾಗಿದೆ. ಕಳೆದ ಒಂದು ವಾರದಿಂದ ಮಂಕಾಗಿದ್ದು, ಯಾರಲ್ಲಿಯೂ ಹೆಚ್ಚು ಬೆರೆಯುತ್ತಿರಲಿಲ್ಲ. ನಿನೆ ಮಧ್ಯಾಹ್ನದಿಂದ ಅವರು ನಾಪತ್ತೆಯಾಗಿದ್ದು,ಸಂಜೆಯವರೆಗೆ ಮನೆಗೆ ಬಾರದೆ ಇದ್ದಾಗ ಸ್ಥಳಿಯರು ಸೇರಿ ಹುಡುಕಲು ಪ್ರಾರಂಭುಸಿದರು.ರಾತ್ರಿ ಸುಮಾರು 11 ಗಂಟೆಗೆ ನೇಣು ಬಿಗಿದುಕೊಂಡ ರೀತಿಯಲ್ಲಿ ಕಿಶೋರು ಅವರ ಮೃತದೇಹ ಪತ್ತೆಯಾಗಿದೆ...
ಧರ್ಮಸ್ಥಳ ಶವ ಹೂತುಹಾಕಿರುವ ಬಗ್ಗೆ ದೂರು ನೀಡಿದ ಪ್ರಕರಣ; ಯಾವುದೇ ಕಳೆಬರವನ್ನು ನೀಡಿಲ್ಲ, ಎಸ್.ಪಿ ಸ್ಪಷ್ಟನೆ
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ ವ್ಯಕ್ತಿಯ ಪರವಾಗಿ ಬಂದ ವಕೀಲರುಗಳು ಯಾವುದೇ ಕಳೇಬರವನ್ನು ಇಲಾಖೆಗೆ ಹಸ್ತಾಂತರಿಸಿಲ್ಲ. ಕಳೆಬರಗದ ಫೊಟೋ ಗಳನ್ನು ಮಾತ್ರ ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಸ್ಪಷ್ಟಪಡಿಸಿದ್ದಾರೆ.ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ:39/2025 ಪ್ರಕರಣಕ್ಕೆ ಸಂಬಂಧಿಸಿದಂತೆ, ಸದ್ರಿ ದೂರುದಾರರ ವಕೀಲರು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯನ್ನು ನೋಡಿ, ಹಲವರು ದೂರಿನಲ್ಲಿ ಉಲ್ಲೇಖಿಸಿರುವ ಕಳೆ ಬರಹದ ಕುರಿತು ವಿಚಾರಿಸಿರುವುದಾಗಿ ತಿಳಿಸಿದ ಅವರು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸದ್ರಿ ದೂರಿಗೆ ಸಂಬಂಧಿಸಿದಂತೆ, ಈವರೆಗೆ ಪೊಲೀಸ್ ಠಾಣೆಗೆ ತಲೆಬುರುಡೆ ಹಾಗೂ...
ಕುಪ್ಪೆಟ್ಟಿ -ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಒತ್ತಾಯಿಸಿ ಕಲ್ಲೇರಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ
ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಕಣಿಯೂರು ಲಮಹಾಶಕ್ತಿ ಕೇಂದ್ರ ನೇತೃತ್ವದಲ್ಲಿಉಪ್ಪಿನಂಗಡಿ – ಬೆಳ್ತಂಗಡಿ ರಾಜ್ಯ ಹೆದ್ದರಿಯ ಕುಪ್ಪೆಟ್ಟಿ - ಉಪ್ಪಿನಂಗಡಿ ವರೆಗಿನ ಸಂಚಾರಕ್ಕೆ ಯೋಗ್ಯವಿಲ್ಲದೆ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದು ರಸ್ತೆ ದುರಸ್ತಿಗೆ ಒತ್ತಾಯಿಸಿ ಶನಿವಾರ ಕಲ್ಲೇರಿ ಬಸ್ ನಿಲ್ದಾಣ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯಲ್ಲಿ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೆಳಾಲು, ಕಣಿಯೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಾಲಕೃಷ್ಣ , ಕಾರ್ಯದರ್ಶಿ ಮಹೇಶ್ ಜೇಂತ್ಯಾರ್,ತಣ್ಣೀರುಪಂತ ಕೃಷಿ...















