Home ಸ್ಥಳೀಯ ಸಮಾಚಾರ ಬೆಳ್ತಂಗಡಿ; ಗುರುನಾರಾಯಣ ಸ್ವಾಮಿ ಸೇವಾ ಸಂಘ ದಿಂದ ಗುರುಜಯಂತಿ

ಬೆಳ್ತಂಗಡಿ; ಗುರುನಾರಾಯಣ ಸ್ವಾಮಿ ಸೇವಾ ಸಂಘ ದಿಂದ ಗುರುಜಯಂತಿ

0
3

ಬೆಳ್ತಂಗಡಿ : ನಾರಾಯಣ ಗುರುಗಳ ಸಂದೇಶಗಳು ಎಂದಿಗೂ ಪ್ರಸ್ತುತವಾಗಿದ್ದು ಅದರ ಆಧಾರದ ಮೇಲೆ ನಾವು ಬೆಳೆಯಬೇಕಾಗಿದೆ.  ಬೆಳ್ತಂಗಡಿ – ಬಂಟ್ವಾಳ ಮಧ್ಯೆ ಸುಮಾರು 7 ಎಕ್ರೆ ಪ್ರದೇಶದಲ್ಲಿ ಶಿವಗಿರಿ ಶಾಖಾ ಮಠ ಸ್ಥಾಪನೆಯಾಗಲಿದೆ’ ಎಂದು ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಅಧ್ಯಕ್ಷ ರಕ್ಷಿತ್ ಶಿವರಾಮ್ ಹೇಳಿದರು.

ಅವರು ಶುಕ್ರವಾರ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ ಹಾಗೂ ಬಿಲ್ಲವ ಮಹಿಳಾ ವೇದಿಕೆ, ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಾರಾಯಣ ಗುರುಗಳ 172ನೇ ಗುರುಜಯಂತಿ, ಸಮಾಜದ ಸಾಧಕರಿಗೆ ಸನ್ಮಾನ, ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘ ನಮ್ಮ ಹಿರಿಯರು ಕೊಟ್ಟ ಕಾಣಿಕೆ, ಶ್ರಮದಿಂದ‌ ದೇಶದಲ್ಲಿ ಶಕ್ತಿಶಾಲಿ ಬಿಲ್ಲವ ಸಂಘ ಬೆಳ್ತಂಗಡಿಯದ್ದಾಗಿದೆ. ದೈರ್ಯ, ತಾಳ್ಮೆ, ಇನ್ನೊಬ್ಬರಿಗೆ ಸಹಕಾರ ಮಾಡುವ ಗುಣ ಬಿಲ್ಲವರದಾಗಿದ್ದು ವಿದ್ಯಾರ್ಥಿ ವೇತನದ ಮೂಲಕ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು. ಜೀವನದಲ್ಲಿ ಎಲ್ಲಿಂದ ಬಂದೆವು ಎಂಬುದನ್ನು ಯೋಚಿಸದೆ ಎಲ್ಲಿ ಹೋಗುತ್ತಿದ್ದೇವೆ ಎಂಬ ಎಚ್ಚರಿಕೆ ಇರಬೇಕು’ ಎಂದರು.

ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ ಸಂಘದ ವತಿಯಿಂದ ₹ 13 ಲಕ್ಷಕ್ಕೂ ಅಧಿಕ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಸಂಘವನ್ನು ಸಮಾಜದ ಸದೃಢ ಶಕ್ತಿಯಾಗಿಸುವುದು ನಮ್ಮ ಉದ್ದೇಶವಾಗಿದೆ. ಕುವೆಟ್ಟು ಗ್ರಾಮದಲ್ಲಿ ಸಂಘಕ್ಕೆ 3 ಎಕ್ರೆ ಜಾಗ ಖರೀದಿ ಪ್ರಕ್ರಿಯೆ ಮಾತುಕತೆ ನಡೆಯುತ್ತಿದೆ’ ಎಂದರು.

ಗುರು ಸಂದೇಶ ನೀಡಿದ ನಿತೇಶ್ ಪೂಜಾರಿ ಮಾರ್ನಾಡ್ ಮಾತನಾಡಿ,
ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಅವಕಾಶ ಮಾಡಿಕೊಡಬೇಕು. ಸಮುದಾಯವನ್ನು ಗಟ್ಟಿ ಮಾಡಿದಾಗ ಪ್ರತಿಯೊಬ್ಬರ ಭವಿಷ್ಯ ಗಟ್ಟಿಯಾಗಲು ಸಾಧ್ಯ. ಅಧಿಕಾರವಿದ್ದಾಗ ಮಾತ್ರ ಬದಲಾವಣೆ ಕಾಣುವುದು. ಹೆತ್ತವರನ್ನು ಚೆನ್ನಾಗಿ ನೋಡಿಕೊಂಡು ದೇಶವನ್ನು ವ್ರದ್ದಾಶ್ರಮ ಮುಕ್ತವಾಗಿಸುವುದು ಪ್ರತಿಯೊಬ್ಬ ಮಕ್ಕಳ ಕಾಳಜಿಯಾಗಿರಬೇಕು’ ಎಂದರು.

ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ದೀಕ್ಷಿತಾ ಸಂಘದ ಮಾಜಿ ಅಧ್ಯಕ್ಷ ಪೀತಾಂಬರ ಹೇರಾಜೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಹುಬ್ಬಳ್ಳಿ ಉದ್ಯಮಿ ವಿಜಯ್ ಪಿ. ಪೂಜಾರಿ, ಸಂಘದ ಮಾಜಿ ಅಧ್ಯಕ್ಷರಾದ ಗಂಗಾಧರ ಮಿತ್ತಮಾರ್, ಪಿ.ಕೆ ರಾಜು ಪೂಜಾರಿ, ಜಯರಾಂ ಬಂಗೇರ ಹೇರಾಜೆ, ಪೀತಾಂಬರ ಹೇರಾಜೆ, ಭಗೀರಥ ಜಿ, ಚಿದಾನಂದ ಪೂಜಾರಿ ಎಲ್ದಕ್ಕ, ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೆಳ್ತಂಗಡಿ, ಕೋಶಾಧಿಕಾರಿ ಪ್ರಶಾಂತ್ ಕುಮಾರ್ ಕೊಕ್ರಾಡಿ, ಜೊತೆ ಕಾರ್ಯದರ್ಶಿ ಸಂತೋಷ್ ಉಪ್ಪಾರ್, ಮಹಿಳಾ ಬಿಲ್ಲವ ವೇದಿಕೆ ಸ್ಥಾಪಕಾಧ್ಯಕ್ಷೆ ಸುಜಿತಾ ವಿ ಬಂಗೇರ, ಅಧ್ಯಕ್ಷೆ ಸುಮತಿ ಪ್ರಮೋದ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ. ಪ್ರಸಾದ್‌ ಇದ್ದರು.

ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ ನಿಷ್ಮಾ ಪೂಜಾರಿ, ಮಂಗಳೂರು ವಿಶ್ವವಿದ್ಯಾಲಯದ ಬಿ.ಎಡ್. ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ಮಾನಸ, ವಿಶ್ಲೇಷಣಾತ್ಮಕ ರಸಾಯನ ಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ನಿರೀಕ್ಷಾ ಎಸ್ ಪೂಜಾರಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ದಿಶಾ ಪೂಜಾರಿ, ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಶೇ.99 ಅಂಕ ಪಡೆದ ಸ್ವೀಕೃತಿ ಮತ್ತು ರಕ್ಷಾ, ಸ್ಯಾಕ್ಸೋಫೋನ್ ವಾದಕಿ ಸ್ನೇಹ ಬುಡೆಂಗೊಟ್ಟು, ಗಿರೀಶ್ ಪೂಜಾರಿ ಸೌದಿ ಸೇರಿದಂತೆ ವಿವಿಧ ಸಾಧಕರನ್ನು ಗೌರವಿಸಲಾಯಿತು.

ಕೊರಗಪ್ಪ ಇವರಿಗೆ ಸಾಂತ್ವನ ನಿಧಿ ವಿತರಿಸಲಾಯಿತು. ಬಿಲ್ಲವ ಮಹಿಳಾ ವೇದಿಕೆ ಮಾಜಿ ಅಧ್ಯಕ್ಷೆ ವಿನೋದಿನಿ ರಾಮಪ್ಪ ಇವರು ಇಬ್ಬರು ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಪ್ರೋತ್ಸಾಹ ಧನ ನೀಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್ ಹೆಚ್ ಕೋಟ್ಯಾನ್ ಸ್ವಾಗತಿಸಿದರು. ಪ್ರಜ್ನಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಪ್ರಸಾದ್ ಎಂ.ಕೆ. ವಂದಿಸಿದರು.

NO COMMENTS

LEAVE A REPLY

Please enter your comment!
Please enter your name here