ಮಂಗಳೂರು ಗುಂಪು ಹತ್ಯೆಗೆ ಬಲಿಯಾದ ಕೇರಳದ ಯುವಕ
ಬೆಳ್ತಂಗಡಿ; ಮಂಗಳೂರಿನಲ್ಲಿ ನಡೆದ ಗುಂಪು ಹತ್ಯೆ ಪ್ರಕರಣದಲ್ಲಿ ಕೊಲೆಯಾದ ಯುವಕ ಕೇರಳದ ವಯನಾಡ್ ನಿವಾಸಿ ಎಂದು ಗುರುತಿಸಲಾಗಿದೆ.ಮೃತ ವ್ಯಕ್ತಿ ವಯನಾಡ್ ಪುಲ್ಪಲ್ಲಿ ನಿವಾಸಿ ಅಶ್ರಫ್ (38) ಎಂಬಾತನಾಗಿದ್ದಾನೆ.ಈತನ ಮನರಯವರು ಆಶ್ರಫ್ ನನ್ನು ಗುರುತಿಸಿರುವುದಾಗಿ ತಿಳಿದು ಬಂದಿದೆ. ಈತ ಕಳೆದ ಕೆಲ ಸಮಯದಿಂದ ಮನೆಯವರೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ ಎನ್ನಲಾಗಿದೆ. ಈತ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದ ಎಂದು ಮನರಯವರು ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.ಘಟನೆಗೆ ಸಂಭಂದಿಸಿದಂತೆ ಮಂಗಳೂರು ಪೊಲೀಸರು ಈವರೆಗೆ 20ಮಂದಿಯನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದೇ ಕೆಲೆಗೆ ಕಾರಣ ಎಂದು ಗೃಹ...
ದಯಾ ವಿಶೇಷ ಶಾಲೆಯಲ್ಲಿ ಮಾನಸಿಕ ತಜ್ಞರಿಂದ ಮಾಹಿತಿ ಕಾರ್ಯಕ್ರಮ
ಬೆಳ್ತಂಗಡಿ; ದಯಾ ವಿಶೇಷ ಶಾಲೆಯಲ್ಲಿ ವಿಶೇಷ ಮಕ್ಕಳ ಪೋಷಕರಿಗಾಗಿ ಮಾಹಿತಿ ಕಾರ್ಯಕ್ರಮ ಹಾಗೂ ಪೋಷಕರ ಸಭೆಯನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಡಾ.ಅಶ್ವಿತಾ ಮೆಲ್ರಿನ್ ಕಾರ್ಲ್, ಅಸಿಸ್ಟೆಂಟ್ ಪ್ರೊಫೆಸರ್, ಫಾ.ಮುಲ್ಲರ್ಸ್ ಆಸ್ಪತ್ರೆ, ಮಂಗಳೂರು, ಶಾಲೆಯ ಆಪ್ತಸಮಾಲೋಚಕರಾದ ಮಿಸ್. ಮೆರಿನ್ ಹಾಗೂ ಪೋಷಕ ಪ್ರತಿನಿಧಿಯಾಗಿ ಮಿಸ್.ಸುಮಲತಾ ರವರು ಉಪಸ್ಥಿತರಿದ್ದರು. ಡಾ.ಅಶ್ವಿತಾ ಮೆಲ್ರಿನ್ ಕಾರ್ಲ್ ರವರು ವಿಶೇಷ ಮಕ್ಕಳು ತಮ್ಮ ಜೀವನದಲ್ಲಿ ಎದುರಿಸಬಹುದಾದ ವಿವಿಧ ಶಾರೀರಿಕ ಹಾಗೂ ಮಾನಸಿಕ ಸಮಸ್ಯೆಗಳು, ಅವುಗಳ ಚಿಕಿತ್ಸೆ, ತಮ್ಮ ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ಪೋಷಕರು ಅನುಸರಿಸಲೇಬೇಕಾದ...
ಕಲ್ಮಂಜ: ಅಕ್ರಮ ಮಧ್ಯ ಮಾರಾಟ ಅಡ್ಡೆಗೆ ಅಬಕಾರಿ ದಳ ದಾಳಿ ಮಧ್ಯ ವಶಕ್ಕೆ : ಆರೋಪಿ ಬಂಧನ
ಬೆಳ್ತಂಗಡಿ : ಅಕ್ರಮವಾಗಿ ಮಾರಾಟ ಮಾಡಲು ಕೋಳಿ ಅಂಗಡಿಯಲ್ಲಿ ಮಧ್ಯವನ್ನು ಶೇಖರಿಸಿಟ್ಟಿರುವ ಬಗ್ಗೆ ಅಬಕಾರಿ ಡಿಸಿ ತಂಡಕ್ಕೆ ಬಂದ ಖಚಿತ ಮಾಹಿತಿ ಮೇರೆಗೆ ಮಂಗಳೂರು, ಬಂಟ್ವಾಳ ,ಬೆಳ್ತಂಗಡಿ ಅಬಕಾರಿ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮ ಮಧ್ಯ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕೊಂಬುಗುರಿ ನಿವಾಸಿ ಲೋಕೇಶ್(36) ಎಂಬಾತನಿಗೆ ಸೇರಿದ ತುಳುನಾಡ ಚಿಕನ್ ಸೆಂಟರ್ ಹೆಸರಿನ ಕೋಳಿ ಅಂಗಡಿಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಮಧ್ಯವನ್ನು ಶೇಖರಿಸಿಟ್ಟ ಬಗ್ಗೆ ಮಂಗಳೂರು ಅಬಕಾರಿ ಡಿಸಿ ತಂಡಕ್ಕೆ ಮಾಹಿತಿ ಬಂದಿದ್ದು ಅದರಂತೆ ಮಂಗಳೂರು...
ಚಾರ್ಮಾಡಿ; ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ
ಬೆಳ್ತಂಗಡಿ; ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಬೀಟಿಗೆ ಬಳಿ ಕಾರೊಂದು ವಿದ್ಯುತ್ ಕಂಬಕ್ಕೆ ಬಡಿದ ಘಟನೆ ಮಂಗಳವಾರ ನಡೆದಿದೆ.ಚಾರ್ಮಾಡಿ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.ಕಾರಿನಲ್ಲಿದ್ದವರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಸಮಾಜಘಾತುಕರ ಮೇಲೆ ಕ್ರಮಕ್ಕೆ ಹಿಂದೇಟು; ಬೆಳ್ತಂಗಡಿ ಮುಸ್ಲಿಂ ಮುಖಂಡರಿಂದ ದ.ಕ ಎಸ್‌ಪಿ ಗೆ ದೂರು
ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಮುಸ್ಲಿಮ್ ಸಮುದಾಯವನ್ನು ಅವಹೇಳನಕಾರಿಯಾಗಿ ಚಿತ್ರಿಸಿ ತಾಲೂಕಿನಾದ್ಯಂತ ಶಾಂತಿ ಕದಡಿ ಕೋಮು ಗಲಬೆ ನಡೆಸಲು ಹುನ್ನಾರ ನಡೆಸುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಮಾನ್ಯ ದ.ಕ.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯನ್ನು ಬೆಳ್ತಂಗಡಿ ತಾಲೂಕು ಮುಸ್ಲಿಮ್ ಮುಖಂಡರ ನಿಯೋಗ ಬೇಟಿ ಮಾಡಿ ಮನವಿ ಸಲ್ಲಿಸಿತು. ವೇಣೂರು ಠಾಣಾ ವ್ಯಾಪ್ತಿಯ ಪೆರಾಡಿ ಪುರುಷ ಕಟ್ಟುವ ಸಂಪ್ರದಾಯದಲ್ಲಿ ಸಮುದಾಯವನ್ನು ಅವಹೇಳನಕಾರಿಯಾಗಿ ನಟನೆ ಮಾಡಿ ಪ್ರವಾದಿಯವರನ್ನು ನಿಂದಿಸಿ ಸಾಮಾಜಿಕ ಜಾಲ ತಾಣದಲ್ಲಿ ಹರಿಯ ಬಿಟ್ಟ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದ್ದು ಆದರೆ ಪೋಲಿಸರು ಗಂಭೀರ ಸೆಕ್ಸನ್ ಗಳಡಿ...
ಹತ್ಯಡ್ಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಿಗೆ ಸನ್ಮಾನ
ಬೆಳ್ತಂಗಡಿ; ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ರಾಘವೇಂದ್ರ ನಾಯಕ್, ಉಪಾಧ್ಯಕ್ಷರಾದ ರಾಜು ಕೆ ಇವರನ್ನು ಮಂಗಳವಾರ ಶಾಸಕರ ಕಚೇರಿಯಲ್ಲಿ ಶಾಸಕ ಹರೀಶ್ ಪೂಂಜ ಅವರು ಸನ್ಮಾನಿಸಿದರು.
ಬೆಳ್ತಂಗಡಿ; ದಲಿತ ಚಳವಳಿಯ 50ರ ಸಂಭ್ರಮಾಚರಣೆ, ಸಾಂಸ್ಕೃತಿಕ ವೈಭವ
ಬೆಳ್ತಂಗಡಿ; ದಲಿತ ಸಂಘರ್ಷ ಸಮಿತಿ ಹುಟ್ಟಿಕೊಂಡದ್ದು ಕೇವಲ ಒಂದು ಸಮುದಾಯಕ್ಕಾಗಿ ಅಲ್ಲ ಅದು ಸಮಸ್ತ ಶೋಷಿತರ ಸಂಘಟನೆಯಾಗಿದೆ. ದಲಿತ ಚಳವಳಿ ಇಂದು ತಮ್ಮೊಳಗಿನ ಒಡಕುಗಳನ್ನು ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಸಂಘಟನೆಯನ್ನು ಕಟ್ಟಿದವರು ಕಂಡಿದ್ದ ಕನಸು ಈಡೇರಲು ಸಾಧ್ಯವಿದೆ ಎಂದು ವಿಶ್ವ ಮೈತ್ರಿ ಬೌದ್ದವಿಹಾರ ಮೈಸೂರಿನ ಡಾ. ಕಲ್ಯಾಣಸಿರಿ ಭಂತೇಜಿ ಹೇಳಿದರು.ಅವರು ಬೆಳ್ತಂಗಡಿ ಯಲ್ಲಿ ಸೋಮವಾರ ಕರ್ನಾಟಕದ ದಲಿತ ಚಳವಳಿ 50ರ ಸಂಭ್ರಮ ಸಮಾವೇಶದ ಉದ್ಘಾಟನೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು.ದಲಿತ ಚಳವಳಿ ಬೆಳೆದು ಬಂದ ಇತಿಹಾಸವನ್ನು ವಿವರಿಸಿದ ಅವರು ಚಳವಳಿ ಕರ್ನಾಟಕದಲ್ಲಿ...
ಲಾಯಿಲ; ಮನೆಯಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವು
ಬೆಳ್ತಂಗಡಿ; ಲಾಯಿಲ ಟಿ.ಬಿ ಕ್ರಾಸ್ ಬಳಿ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳರು ಅಪಹರಿಸಿದ ಘಟನೆ ನಡೆದಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಲಾಯಿಲ ಟಿ.ಬಿ ಕ್ರಾಸ್ ಹಳೆಪೇಟೆ ನಿವಾಸಿ ವರದರಾಜ ಹೆಗ್ಡೆ ಎಂಬರ ಮನೆಯ ಅಂಗಳದಿಂದಲೇ ಬೈಕ್ ಕಳ್ಳತನವಾಗಿದೆ.ವರದರಾಜ ಹೆಗ್ಡೆ ಅವರು ಸೇಲ್ಸ್ ಮನ್ ಕೆಲಸ ಮಾಡಿಕೊಂಡಿದ್ದು ಎ.25ರಂದು ಕೆಲಸ ಮುಗಿಸಿ ಬಂದು ರಾತ್ರಿಯ ವೇಳೆ ಮನೆಯ ಹೊರಗೆ ಶೆಡ್ ನಲ್ಲಿ ತನ್ನ ಕೆ.ಎ 70 E 1651ನಂಬರಿನ ಸುಜುಕಿ ಕಂಪೆನಿಯ ಮೋಟಾರ್ ಸೈಕಲ್ ಅನ್ನು ನಿಲ್ಲಿಸಿದ್ದರು. ಎ26ರಂದು...
ಬೆಳ್ತಂಗಡಿ; ಬಿಹಾರದ ಯುವಕ ಲಾಯಿಲದಲ್ಲಿ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ; ಬಿಹಾರದಿಂದ ಕೆಲಸಕ್ಕೆಂದು ಬಂದಿದ್ದ ಯುವಕನೋರ್ವ ಲಾಯಿಲದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಬಿಹಾರದ ನಿವಾಸಿಯಾದ ನಂದಕುಮಾರ್(20) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.ಈತ ತನ್ನ ಸಹೋದರನೊಂದಿಗೆ ಕೆಲಸಕ್ಕೆಂದು ಬಂದಿದ್ದ ಎ.27ರಂದು ಮದ್ಯಾಹ್ನದ ವೇಳೆ ಉಜಿರೆ ಕಾಶಿಬೆಟ್ಟುವಿನಲ್ಲಿರುವ ಸಹೋದರನ ಬಾಡಿಗೆ ರೂಮಿನ ಕೀತೆಗೆದುಕೊಂಡು ಹೋದ ನಂದಕುಮಾರ್ ಮರಳಿ ಬರದಿದ್ದಾಗೆ ರೂಮಿಗೆ ಹೋಗಿ ಪರಿಶೀಲಿಸಿದಾಗ ಕೊಠಡಿಯ ಒಳಗಿನ ಫ್ಯಾನಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಕಡಿಕೊಂಡಿರುವುದು ಕಂಡು ಬಂದಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದ್ದು ಬೆಳ್ತಂಗಡಿ ಪೊಲೀಸರು ಪ್ರಕರಣದಾಖಲಿಸಿಕೊಂಡಿದ್ದಾರೆ.
ಉಜಿರೆಯಲ್ಲಿ ಯುವಕನ ಮೇಲೆ ಹಲ್ಲೆ ಪ್ರಕರಣ; ಹತ್ತಕ್ಕೂ ಹೆಚ್ವು ಮಂದಿಯ ವಿರುದ್ದ ಪ್ರಕರಣ ದಾಖಲು
ಬೆಳ್ತಂಗಡಿ : ಖಾಸಗಿ ಕಾಲೇಜ್ ವಿದ್ಯಾರ್ಥಿನಿಯೊಬ್ಬಳಿಗೆ ಮೆಸೇಜ್ ಮಾಡಿ ಅಸಭ್ಯವಾಗಿ ವರ್ತಿಸಿರುವುದಾಗಿ ಆರೋಪಿಸಿ ಉಜಿರೆಯಲ್ಲಿಏ.26 ರಂದು ವಾಲಿಬಾಲ್ ಆಟಗಾರ ಸಯ್ಯದ್(24) ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಉಜಿರೆಯ ಪ್ರಜ್ವಲ್ ಹಾಗೂ ಇತರರ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣದಾಖಲಿಸಲಾಗಿದೆ.ಉಜಿರೆಯ ಹಿಂದೂ ಸಂಘಟನೆ ಕಾರ್ಯಕರ್ತರು ಏ.26 ರಂದು ಸೈಯ್ಯದ್ ಮೇಲೆ ಹಿಗ್ಗಮುಗ್ಗ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದರು.ಬೆಳ್ತಂಗಡಿ ಠಾಣೆಯಲ್ಕಿ ಸೈಯ್ಯದ್ ವಿರುದ್ದ ಪೋಸ್ಕೋ ಪ್ರಕರಣ ದಾಖಲಿಸಿದ್ದರು.ಇದೀಗ ಹಲ್ಲೆಗೆ ಒಳಗಾಗಿರುವ ಸೈಯ್ಯದ್ ನೀಡಿದ ದೂರಿನಂತೆ ಪೊಲೀಸರು ಉಜಿರೆಯ ಪ್ರಜ್ವಲ್ ಹಾಗೂ ಇತರ ಹತ್ತಕ್ಕೂ ಹೆಚ್ಚು ಮಂದಿಯ...















