ಬೆನಕ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ; ದಾದಿಯರು ದೇಹ ಕಾಯುವ ಸೈನಿಕರು – ಡಾ. ಗೋಪಾಲಕೃಷ್ಣ
ಅಂತರಾಷ್ಟ್ರೀಯ ದಾದಿಯರ ದಿವಸವನ್ನು ಪ್ರತಿ ವರ್ಷ ಮೇ 12 ನೇ ದಿನಾಂಕದಂದು ಜಗತ್ತು ಕಂಡ ಅತ್ಯುತ್ತಮ ದಾದಿ ಫ್ಲೋರೆನ್ಸ್ ನೈಟಿಂಗೇಲ್ ಸ್ಮರಣಾರ್ಥ ಆಚರಿಸಿ ಅವರನ್ನು ನೆನಪಿಸಿಕೊಳ್ಳುವುದು ವೈದ್ಯಕೀಯ ಕ್ಷೇತ್ರದ ಪರಂಪರೆ . ಅದೇ ರೀತಿ ಪ್ರತಿ ವರ್ಷ ಉಜಿರೆ ಬೆನಕ ಸೆಂಟರ್ (NABH ಪುರಸ್ಕೃತ ) ನಲ್ಲಿ ದಾದಿಯರ ದಿನಾಚರಣೆ ನಡೆಸಿಕೊಂಡು ಬರುತ್ತಿದ್ದು, ಈ ವರ್ಷ ನಡೆದ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ರವರು ದೇಶ ಕಾಯುವ ಸೈನಿಕರು ಹೇಗೆ ಕಾರ್ಯನಿರ್ವಹಿಸುತ್ತಾರೋ ಹಾಗೆಯೇ ದೇಹ ಕಾಯುವವರು...
ಉಜಿರೆ; ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಬೆಳ್ತಂಗಡಿ; ಉಜಿರೆ ಗ್ರಮದ ಬಸ್ ನಿಲ್ದಾಣದ ಸಮೀಪ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ.ಸುಮಾರು 45ವರ್ಷ ಪ್ರಾಯದ ಗಂಡಸಿನ ಮೃತದೇಹ ಇದಾಗಿದ್ದು ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತವ್ಯಕ್ತಿಯ ಬಗ್ಗೆ ಯಾವುದೇ ಗುರುತುಗಳು ಪತ್ತೆಯಾಗಿಲ್ಲ. ಮೃತದೆಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.
ನಿದ್ದೆ ಮಾತ್ರೆ ಸೇವಿಸಿ ಆಸ್ಪತ್ರೆ ಸೇರಿದ್ದ ತಾಯಿ ಸಾವು; ಮಗನ ಸ್ಥಿತಿ ಗಂಭೀರ
ಬೆಳ್ತಂಗಡಿ; ತೀರಾ ಆರ್ಥಿಕ ಸಮಸ್ಯೆ ಮತ್ತು ಅನಾರೋಗ್ಯದ ಕಾರಣದಿಂದ ಜೀವನದಲ್ಲಿ ಜಿಗಿಪ್ಸೆ ಹೊಂದಿ ಅತಿಯಾದ ನಿದ್ದೆ ಮಾತ್ರೆ ಸೇವಿಸಿದ್ದ ವೃದ್ದೆ ತಾಯಿ ಕೊನೆಯುಸಿರೆಳೆದು ಮಗನ ಸ್ಥಿತಿ ಗಂಭೀರವಾಗಿದೆ.ಮೃತರು ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ದಿ. ಕುಂಞಿರಾಮನ್ ನಾಯರ್ ಅವರ ಪುತ್ನಿ ಕಲ್ಯಾಣಿ(96) ಎಂಬವರಾಗಿದ್ದಾರೆ. ಅವರ ಪುತ್ರ, ಖ್ಯಾತ ಜನಪದ ಕಲಾವಿದ, ಶಿಕ್ಷಕ ಜಯರಾಂ ಕೆ (58) ಅವರು ಗಂಭೀರಾವಸ್ಥೆಯಲ್ಲಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.ಕಲ್ಯಾಣಿ ಮತ್ತು ಜಯರಾಂ ಕೆ ಅವರು ಕೂಳೂರು ಮನೆಯಲ್ಲಿ ಮೇ. 10 ರಂದು...
ಉಜಿರೆಯಲ್ಲಿ ಅಂತಾರಾಷ್ಟ್ರೀಯ ಯೋಗ& ಪ್ರಕೃತಿ ಚಿಕಿತ್ಸಾ ಸಮ್ಮೇಳನ; ಪ್ರಕೃತಿ ಚಿಕಿತ್ಸೆ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿದೆ; ಡಾ. ಹೆಗ್ಗಡೆ
ಬೆಳ್ತಂಗಡಿ: ನಮ್ಮ ದೇಶದ ಪ್ರಾಚೀನ ಪಾರಂಪರಿಕ ಚಿಕಿತ್ಸಾ ವಿಧಾನವಾದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿ ಬಗ್ಯೆ ಈಗ ಜನರಿಗೆ ನಂಬಿಕೆ ಮತ್ತು ವಿಶ್ವಾಸ ಮೂಡಿ ಬಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಸೋಮವಾರ ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿ ಬಗ್ಯೆ ಮೂರನೆ ಅಂತಾರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ದೇಶದಲ್ಲೆ ಪ್ರಥಮವಾಗಿ ಉಜಿರೆಯಲ್ಲಿ ಎಸ್.ಡಿ.ಎಂ. ಮತ್ತು ಯೋಗ ವಿಜ್ಞಾನದಲ್ಲಿ ಪದವಿ ಕಾಲೇಜನ್ನು ಹಾಗೂ ಧರ್ಮಸ್ಥಳದಲ್ಲಿ...
ಧರ್ಮಸ್ಥಳ, ಕನ್ಯಾಡಿ ಸಮೀಪ ಬಸ್ ಕಾರು ನಡುವೆ ಅಪಘಾತ, ವಿದ್ಯುತ್ ಕಂಬ ಪುಡಿಪುಡಿ
ಬೆಳ್ತಂಗಡಿ: ಉಜಿರೆ ಧರ್ಮಸ್ಥಳ ಹೆದ್ದಾರಿಯ ಕನ್ಯಾಡಿ ಬಳಿ ಬಸ್ ಕಾರು ನಡುವೆ ಅಪಘಾತ ನಡೆದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಕನ್ಯಾಡಿ ಶಾಲಾ ಬಳಿ ಬಸ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಹಾನಿ ಉಂಟಾಗಿದೆ. ಅಪಘಾತದ ರಭಸಕ್ಕೆ ವಿದ್ಯುತ್ ಕಂಬ ಪುಡಿ ಪುಡಿಯಾಗಿ ಉರಳಿ ಬಿದ್ದಿದೆ. ನೂರಾರು ಸಾರ್ವಜನಿಕರು ಓಡಾಡುವ ಜಾಗ ಇದಾಗಿದೆಯಲ್ಲದೇ ಪಕ್ಕದಲ್ಲೇ ಹೋಟೆಲು ಕೂಡ ಇದ್ದು ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.ಇಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿದೆ ಕಳೆದ ಮೂರು...
ಗೇರುಕಟ್ಟೆ; ಬೈಕ್ ಗೆ ಪಿಕಪ್ ಡಿಕ್ಕಿ ಬೈಕ್ ಸವಾರ ಸಾವು
ಬೆಳ್ತಂಗಡಿ; ತಾಲೂಕಿನ ಗೇರುಕಟ್ಟೆ ರೇಷ್ಮೆ ರೋಡ್ ಸಮೀಪ ಬೈಕಿಗೆ ಪಿಕಪ್ ಡಿಕ್ಕಿಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಮೇ 10 ರಂದು ನಡೆದಿದೆ.ಮೃತ ವ್ಯಕ್ತಿ ಖಾಸಗಿ ಬಸ್ ನಲ್ಲಿ ಚಾಲಕನಾಗಿರುವ ಸುಕೇಶ್ ಎಂದು ತಿಳಿದು ಬಂದಿದೆ.ಅಪಘಾತ ನಡೆಸಿದ ಪಿಕಪ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ, ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ
ಭಾರತ ಪಾಕ್ ನಡುವೆ ಕದನ ವಿರಾಮ; ಅಮೇರಿಕಾ ಮಧ್ಯಸ್ಥಿಕೆಯಲ್ಲಿ ಶಾಂತಿ ಮಾತುಕತೆ
ನವದೆಹಲಿ: ಕ್ಷಿಪ್ರ ರಾಜತಾಂತ್ರಿಕ ಬೆಳವಣಿಗೆಯೊಂದರಲ್ಲಿ ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಓ) ಇಂದು ನಡೆಸಿದ ಮಾತುಕತೆಯ ಫಲವಾಗಿ. ಉಭಯ ದೇಶಗಳ ಗಡಿಯಲ್ಲಿ ಭೂ. ವಾಯು ಮತ್ತು ಸಮುದ್ರ ಮಾರ್ಗಗಳಲ್ಲಿ ಎಲ್ಲಾ ರೀತಿಯ ಗುಂಡಿನ ದಾಳಿ ಹಾಗೂ ಸೇನಾ ಕಾರ್ಯಾಚರಣೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಲು ಮಹತ್ವದ ಒಪ್ಪಂದಕ್ಕೆ ಬರಲಾಗಿದೆ. ಈ ಒಪ್ಪಂದವು ಭಾರತೀಯ ಕಾಲಮಾನ ಸಂಜೆ 5 ಗಂಟೆಯಿಂದ ಜಾರಿಗೆ ಬಂದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಅವರು ಪ್ರಕಟಿಸಿದ್ದಾರೆ.ದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿಕ್ರಮ್ ಮಿಸ್ತ್ರಿ ಅವರು,...
ಬೆಳ್ತಂಗಡಿ; ಆಪರೇಷನ್ ಸಿಂಧೂರ್ ಯಶಸ್ವಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸೈನಿಕರಿಗೆ ಅಭಿನಂದನೆ
ಬೆಳ್ತಂಗಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಚರಣೆ ಯಶಸ್ವಿಯಾಗಿಸಿದ ಸೈನಿಕರನ್ನು ಅಭಿನಂದಿಸಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು ದೇಶದ ಐಕ್ಯತೆ , ಸಮಗ್ರತೆ , ಸಾರ್ವಭೌಮತ್ವಗಾಗಿ ತ್ಯಾಗ , ಬಲಿದಾನ ಮಾಡಿದನ್ನು ಈ ದೇಶದ ಇತಿಹಾಸದಿಂದ ಅಳಿಸಲು ಅಸಾಧ್ಯ. ನಮ್ಮ ದೇಶದ ವಿರುದ್ಧ ಯಾವುದೇ ದೇಶ ಯುದ್ಧ ಸಾರಿದರೂ ನಮ್ಮ ಪಕ್ಷ ದೇಶದ ಪರವಾಗಿ ಸದಾಕಾಲವೂ ನಿಲ್ಲುತ್ತದೆ. ನಮ್ಮ ದೇಶದಲ್ಲಿ ಹಿಂದೂ , ಮುಸ್ಲಿಂ , ಕ್ರೈಸ್ತ...
ಬೆಳ್ತಂಗಡಿ; ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಕೆ.ವಸಂತ ಬಂಗೇರ ಅವರ ಪುಣ್ಯಸ್ಮರಣೆ
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಹಾಗೂ ಗ್ರಾಮೀಣ ವತಿಯಿಂದ ದಿ. ಕೆ. ವಸಂತ ಬಂಗೇರ ಅವರ ಪ್ರಥಮ ವರ್ಷದ ಪುಣ್ಯ ಸ್ಪರಣೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪುಷ್ಪರ್ಚನೆ ಮಾಡಿ ಬಂಗೇರ ವೆಕ್ತಿತ್ವದ ಹಾಗೂ ಬಂಗೇರ ಸಾಧನೆ. ಅಭಿವೃದ್ಧಿಯ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷರು ಸತೀಶ್ ಕಾಶೀಪಟ್ಣ. ಗ್ರಾಮೀಣ ಬ್ಲಾಕ್ ಅಧ್ಯಕ್ಷರು ನಾಗೇಶ್ ಕುಮಾರ್ ಗೌಡ. ಜಿಲ್ಲಾ ಕೆಡಿಪಿ ಸದಸ್ಯರು ಸಂತೋಷ್ ಕುಮಾರ್. ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷರು ಶೇಖರ್ ಕುಕ್ಕೇಡಿ. ಗ್ರಾಮೀಣ ಬ್ಲಾಕ್ ಕಾಂಗ್ರೆಸ್...
ಉಜಿರೆ; ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಕೇರಿಮಾರು ಬಾಲಕೃಷ್ಣ ಗೌಡ, ಉಪಾಧ್ಯಕ್ಷರಾಗಿ ಶ್ರೀಧರ ಪೂಜಾರಿ ಆಯ್ಕೆ
ಬೆಳ್ತಂಗಡಿ; ಉಜಿರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಕೇರಿಮಾರು ಬಾಲಕೃಷ್ಣ ಗೌಡ ಆಯ್ಕೆಯಾಗಿದ್ದಾರೆ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಬುಧವಾರ ನಡೆಯಿತು. ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೇರಿಮಾರ್ ಬಾಲಕೃಷ್ಣ ಗೌಡ, ಅವರು ಹಾಗೂ ಉಪಾಧ್ಯಕ್ಷರಾಗಿ ಶ್ರೀಧರ್ ಪೂಜಾರಿ ಉಜಿರೆ ಅವರು ಆಯ್ಕೆಯಾಗಿದ್ದಾರೆ.















