


ಬೆಳ್ತಂಗಡಿ; ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯು ಎಸ್ ಡಿ ಎಂ ಸಮಗ್ರ ಶಾಲೆ ವಾಮಂಜೂರು ಇಲ್ಲಿ ನಡೆದಿದ್ದು ವಿವಿಧ ವಿಭಾಗಗಳಲ್ಲಿ 44 ವಿದ್ಯಾರ್ಥಿಗಳು ಜಿಲ್ಲೆಯಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಅದರಲ್ಲಿ ಯಮತೋ ಶೋಟೋಕಾನ್ ಕರಾಟೆ ಎಸೋಸಿಯೇಷನ್ ಬೆಳ್ತಂಗಡಿ ಇದರ 9 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಇವರು ಕರಾಟೆ ಶಿಕ್ಷಕ ಅಶೋಕ ಆಚಾರ್ಯ ಹಾಗೂ ಕೋಚ್ ಮಿಥುನ್ ರಾಜ್ ಇವರಿಂದ ತರಬೇತಿ ನೀಡಿದರು
