Home ಅಪರಾಧ ಲೋಕ ಷೇರು ಮಾರುಕಟ್ಟೆ ಹೆಸರಿನಲ್ಲಿ ಬೆಳ್ತಂಗಡಿಯ ವ್ಯಕ್ತಿಗೆ 3ಲಕ್ಷ ವಂಚನೆ; ಪ್ರಕರಣ ದಾಖಲು

ಷೇರು ಮಾರುಕಟ್ಟೆ ಹೆಸರಿನಲ್ಲಿ ಬೆಳ್ತಂಗಡಿಯ ವ್ಯಕ್ತಿಗೆ 3ಲಕ್ಷ ವಂಚನೆ; ಪ್ರಕರಣ ದಾಖಲು

369
0

ಬೆಳ್ತಂಗಡಿ; ಷೇರು ಮಾರುಕಟ್ಟೆಯಲ್ಲಿ ಹೂಡಿಕೆಮಾಡುವುದೆಂದು ನಂಬಿಸಿ ಬೆಳ್ತಂಗಡಿಯ ವ್ಯಕ್ತಿಯೊಬ್ಬರಿಂದ ವಂಚಕರು 3,30,000 ಹಣ ವಂಚಿಸಿದ ಘಟನೆ ನಡೆದಿದ್ದು ಈ ಬಗ್ಗೆ ಮಂಗಳೂರಿನ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇನ್ಸ್ತಗ್ರಮ್ ನಲ್ಲಿ ಬಂದ ಲಿಂಕ್ ಮೂಲಕ ವಾಟ್ಸಪ್ ಗ್ರೂಪಿಗೆ ಸೇರಿದ ವ್ಯಕ್ತಿಗೆ ಅಲ್ಲಿ ಷೇರು ಮಾರುಕಟ್ಟೆಯ ಬಗೆಗೆ ಮಾಹಿತಿ ನೀಡಿದ್ದಾರೆ ಬಳಿಕ ಅವರು ಕಳುಹಿಸಿದ ಲಿಂಕ್ ಮುಖಾಂತರ ಎ.ಸಿ ಮಾಕ್ಸ್, JOHCM ಎಂಬ ಎರಡು ಆಪ್ ಗಳನ್ನು ಡೌನ್ ಲೋಡ್ ಮಾಡಿದ್ದಾರೆ ಬಳಿಕ ಈ ಆಪ್ ಗಳ ಮೂಲಕ ದೂರುದಾರರ ಖಾತೆಯಿಂದ ಅವರು ಹೇಳಿದ ವಿವಿಧ ಖಾತೆಗಳಿಗೆ ರೂಬ3,30,000ಹಣ ವರ್ಗಾಯಿಸಿದ್ದಾರೆ. ಇದಾದ ಬಳಿಕ ಅವರು ಸಂಪರ್ಕಕ್ಕೆ ಸಿಗದಿದ್ದಾಗ ಮೋಸ ಹೋಗಿರುವುದು ತಿಳಿದು ಬಂದ ಕಾರಣ ಪೊಲೀಸರಿಗೆ ದೂರು ನೀಡುದ್ದಾರೆ. ಮಂಗಳೂರಿನ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

LEAVE A REPLY

Please enter your comment!
Please enter your name here