Home ಅಪರಾಧ ಲೋಕ ಬೆಳಾಲು; ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿ ಪೊಲೀಸ್ ವಶಕ್ಕೆ

ಬೆಳಾಲು; ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿ ಪೊಲೀಸ್ ವಶಕ್ಕೆ

25
0

ಬೆಳ್ತಂಗಡಿ; ಬೆಳ್ತಂಗಡಿ: ಬೆಳಾಲು ಎಂಬಲ್ಲಿ ಪಿಯುಸಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಶಂಕರ ಗೌಡ ಎಂಬವನ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪೋಕೋ ಪ್ರಕರಣ ದಾಖಲಾಗಿದೆ.

ತಂದೆ ತಾಯಿ ತರಗೆಲೆ ತರಲು ಹೋಗಿದ್ದ ಸಂದರ್ಭಮನೆಯಲ್ಲಿ ಯಾರು ಇಲ್ಲದ ವೇಳೆ ನೀರು ಕೇಳುವ ನೆಪದಲ್ಲಿ ಬಂದ ವ್ಯಕ್ತಿ ಪಿಯುಸಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ
ಈ ವೇಳೆ ಆತನ ಕೈಗೆ ಕಚ್ಚಿ ಯುವತಿ ತಪ್ಪಿಸಿಕೊಂಡು ಹತ್ತಿರದ ಚಿಕ್ಕಪ್ಪನ ಮನೆಗೆ ಓಡಿ ಬಂದು ವಿಷಯ ತಿಳಿಸಿದ್ದಾಳೆ ಕೂಡಲೇ ಅಲ್ಲಿಗೆ ಬಂದು ನೋಡಿದಾಗ ಆತ ಪರಾರಿಯಾಗಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಪೊಲೀಸ್ ವಶಕ್ಕೆ ; ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿದ್ಯಾರ್ಥಿ ನಿಯ ಮೇಲೆ‌ದೌರ್ಜನ್ಯ ನಡೆಸಿದ‌ ಆರೋಪಿ ಬೆಳಾಲು ನಿವಾಸಿ ಶಂಕರ ಗೌಡ ಎಂಬಾತನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here