ಬೆಳ್ತಂಗಡಿ: ಅನಂತ ಹುದೆಂಗಜೆ ಅವರು ಬರೆದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪ್ರಕಾಶನ ಮಾಡಿರುವ ‘ಸಿರಿಧಾನ್ಯ: ಸಿರಿ – ಸರಿ’ ಕೃತಿಯನ್ನು ಜು. 8ರಂದು ಧರ್ಮಸ್ಥಳದ ಅಮೃತವರ್ಷಿಣಿಯಲ್ಲಿ ಉದ್ಘಾಟನೆಗೊಂಡ ಶ್ರೀ. ಕ್ಷೇ. ಧ.ಗ್ರಾ ಯೋ. ಯೋಜನಾಧಿಕಾರಿಗಳು, ನಿರ್ದೇಶಕರು, ಪ್ರಾದೇಶಿಕ ನಿರ್ದೇಶಕರ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಹೇಮಾವತಿ ವಿ. ಹೆಗ್ಗಡೆಯವರು ಬಿಡುಗಡೆ ಮಾಡಿದರು. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಸ್. ಅನಿಲ್ ಕುಮಾರ್, ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ ಪೈ, ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಸಿರಿ ಮಿಲೆಟ್ಸ್ ಹಿರಿಯ ನಿರ್ದೇಶಕ ದಿನೇಶ್ ಎಂ., ಲೇಖಕ ಅನಂತ ಹುದೆಂಗಜೆ, ಯೋಜನೆಯ ಸಾಮಾಜಿಕ ಜಾಲತಾಣ ಅಧಿಕಾರಿ ಅಭಿನಂದನ್ ಜೈನ್ ಉಪಸ್ಥಿತರಿದ್ದರು.
