ಬೆಳ್ತಂಗಡಿ: ಅನ್ಯಾಯ, ಅಸತ್ಯವನ್ನು ಸಹಿಸದೆ ನೊಂದವರ ದ್ವನಿಯಾಗಿ ಬದುಕಿನ ಉದ್ದಕ್ಕೂ ಸಮಾಜಕ್ಕಾಗಿ ಜೀವನವನ್ನು ಮುಡುಪಾಗಿಟ್ಟ ಅಪರೂಪದ ರಾಜಕಾರಣಿ ವಸಂತ ಬಂಗೇರರಾಗಿದ್ದರು ಎಂದು ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅದ್ಯಯನ ಪೀಠದ ಮುಖ್ಯಸ್ಥ ಡಾ ತುಕರಾಮ ಪೂಜಾರಿ ಹೇಳಿದರು. ಅವರು ಬುದವಾರ ಬೆಳ್ತಂಗಡಿ ಶ್ರಿ ಗುರುನಾರಾಯಣ ಸಭಾಭವನದಲ್ಲಿ ಮಾಜಿ ಶಾಸಕ ಕೀರ್ತಿ ಶೇಷ ವಸಂತ ಬಂಗೇರರ 79 ನೇ ಹುಟ್ಟುಹಬ್ವದ ಪ್ರಯುಕ್ತ ಕೆ ವಸಂತ ಬಂಗೇರರ ಅಬಿಮಾನ ಬಳಗ ಸಮಿತಿ ವತಿಯಿಂದ ನಡೆದ ಬ್ರಹತ್ ರಕ್ತದಾನ ಶಿಬಿರದಲ್ಲಿ ಕೆ ವಸಂತ ಬಂಗೇರರ ಸಾದನೆ ಬದುಕಿನ ಬಗ್ಗೆ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಜಾತಿ,ಮತದರ್ಮ ಶ್ರಿಮಂತ ಬಡವ ಎನ್ನದೆ ಸೇವೆ ಮಾಡುತ್ತಿದ್ದವರು ವಸಂತ ಬಂಗೇರರು. ಕೆಲವರು ಬದುಕಿ ಸತ್ತಹಾಗೆ ಇರುತ್ತಾರೆ ಕೆಲವರು ಸತ್ತ ಬಳಿಕ ಯಾರು ಎಂದು ತಿಳಿಯದವರಿದ್ದಾರೆ. ಆದರೆ ಬದುಕಿನಲ್ಲಿ ಸಮಾಜಕ್ಕೆ ಬೆಳಕಾಗಿ ಸತ್ತ ಮೇಲೂ ಸಮಾಜದಲ್ಲಿ ಬೆಳಗುತ್ತಿರುವ ನಾಯಕ ವಸಂತ ಬಂಗೇರರು.
ಇವರ ನೆನಪಿನಲ್ಲಿ ಇವರ ಹುಟ್ಟುಹಬ್ಬದ ದಿನ ಸಾವಿರಾರು ಜೀವ ಉಳಿಸುವ ಹಣ ಕೊಟ್ಟು ಖರೀದಿಸಲು ಸಾದ್ಯವಾಗದ , ಕೃತಕ ತಯಾರಿಸಲಾಗದ ರಕ್ತದಾನ ಮಾಡುವ ಮೂಲಕ ಹುಟ್ಟು ಹಬ್ಬ ಆಚರಿಸುತ್ತಿರುವುದು ನಿಜ ಅರ್ಥದಲ್ಲಿ ವಸಂತ ಬಂಗೇರರ ಬದುಕಿಗೆ ಮೌಲ್ಯ ತಂದಂತಾಗಿದೆ ಎಂದು ಹೇಳಿದರು. ಕಪಟ ನಾಟಕ ತಿಳಿಯದ ಇವರು ಹಣದ ಬೆನ್ನತ್ತಿ ಹೋದವರಲ್ಲ. ಐದು ಬಾರಿ ಶಾಸಕರಾದರು ಆಸ್ತಿ ಅಂತಸ್ತು ಮಾಡಿದವರಲ್ಲ.ಜನರ ಪ್ರೀತಿ ಗಳಿಸಿಯೇ ಶಾಸಕರಾದವರು. ಬಡ ಮಕ್ಕಳಿಗೆ, ಕಡಿಮೆ ಅಂಕ ಪಡೆದ ಮಕ್ಕಳು ಶಿಕ್ಷಣವಂಚಿತರಾಗಬಾರದು ಎಂದು ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ಸಾವಿರಾರು ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುತ್ತಿದ್ದ ಇವರ ಬದುಕೇ ಮಕ್ಕಳಿಗೆ ಆದರ್ಶರಾಗಿದ್ದಾರೆ ಎಂದರು.

ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅದ್ಯಕ್ಷ ಜಯರಾಮ ಶೆಟ್ಟಿ ಮಾತನಾಡಿ ದೀಮಂತ ರಾಜಕಾರಣಿ, ಮಹಾನ್ ಪುರುಷ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ವಸಂತ ಬಂಗೇರರು. ಭ್ರಷ್ಟಾಚಾರದ ಬಗ್ಗೆ ಉಗ್ರರೂಪವಾಗುತ್ತಿದ್ದ ಇವರು ಬಡವರ ಕಣ್ಣೀರು ಒರೆಸುವುದೆಂದರೆ ಇವರಿಗೆ ಪಂಚಪ್ರಾಣ, ಬೆಳ್ತಂಗಡಿ ತಾಲೂಕಿನ ಹೆಸರನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿದ ಕೀರ್ತಿ ಇವರಿಗೆ ಸಲ್ಲ ಬೇಕು. ಐದು ಭಾರಿ ಶಾಸಕರಾದರು ಕೊನೆ ಗಳಿಗೆಯಲ್ಲು ಸಾಲಗಾರರಾಗಿಯೇ ಇದ್ದರು ಎಂದರೆ ಅವರ ರಾಜಕೀಯ ಏನು ಎಂದು ತಿಳಿಯಲು ಸಾಧ್ಯ, ಈಗಿನ ರಾಜಕಾರಣಿಗಳು ಇವರ ಅದರ್ಶವನ್ನು ಅನುಸರಿಸಿ ಜನಸೇವೆ ಮಾಡಲಿ ಎಂದರು. ವಸಂತ ಬಂಗೇರ ಅಬಿಮಾನಿ ಸಮಿತಿಯ ಪ್ರದಾನ ಕಾರ್ಯದರ್ಶಿ ಮನೋಹರ್ ಕುಮಾರ್ ಇಳಂತಿಳ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶ್ರಿ ಗುರುನಾರಾಯಣ ಸ್ವಾಮಿ ಸೇವಾಸಂಘದ ಅದ್ಯಕ್ಷ ಜಯವಿಕ್ರಮ ಕಲ್ಲಾಪು, ವೆನ್ಲಾಕ್ ಆಸ್ಪತ್ರೆಯ ರಕ್ತಸಂಗ್ರಹಣಾ ವಿಭಾಗದ ಮುಖ್ಯಸ್ಥ ಅ್ಯಂಟನಿ ಡಿಸೋಜ, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ , ಜಿ ಪಂ ನಿವೃತ್ತ ಸಹಾಯಕ ಕಾರ್ಯಪಾಲಕ ಅಬಿಯಂತರ ಸಿ ಅರ್ ನರೇಂದ್ರ ಉಪಸ್ಥಿತರಿದ್ದರು. ಬಂಗೇರ ಅಬಿಮಾನಬಳಗದ ಅದ್ಯಕ್ಷ ಈಶ್ವರಭಟ್ ಅದ್ಯಕ್ಷತೆ ವಹಿಸಿದ್ದರು. ಪ್ರಜ್ನಾಒಡಿಳ್ಳಾಳ ಕಾರ್ಯಕ್ರಮ ನಿರೂಪಿಸಿದರು. 101 ಯನಿಟ್ ರಕ್ತ ಸಂಗ್ರಹಿಸಲಾಯಿತು.
