
ಬೆಳ್ತಂಗಡಿ; ನಡ ಗ್ರಾಮದ ಕೋಡ್ಲೆ ನಿವಾಸಿ , ಚಾಲಕ ಅಶ್ರಫ್ (44) ಗುರುವಾರ ಸಂಜೆ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾದರು.
ಸಂಜೆ ಸಮಯ ಮನೆಯಲ್ಲಿದ್ದಾಗ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು , ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಜನಸಾಮನ್ಯರ ಜೊತೆಗೆ ಕೋಡ್ಲೆ ಎಂದೇ ಚಿರಪರಚಿತರಾಗಿದ್ದ ಅಶ್ರಫ್ ರವರು ಅಟೋ ಚಾಲಕ ಮಾಲಕನಾಗಿದ್ದರು. ಎಲ್ಲರೊಂದಿಗೂ ಆತ್ಮೀಯನಾಗಿದ್ದ ಅವರು ಬೆಳ್ತಂಗಡಿ ಬಸ್ ನಿಲ್ದಾಣ ಅಟೋ ರಿಕ್ಷಾ ಚಾಲಕ- ಮಾಲಕರ ಸಂಘದ ಸದಸ್ಯರಾಗಿದ್ದರು.
ಮೃತರು ಪತ್ನಿ , ಓರ್ವ ಮಗ ಹಾಗೂ ಅಪಾರ ಬಂಧುಬಳಗವನ್ನು , ಸ್ನೇಹಿತ ವರ್ಗವನ್ನು ಅಗಲಿದ್ದಾರೆ.