Home ಸ್ಥಳೀಯ ಸಮಾಚಾರ ಕ್ರಿಶ್ಚಿಯನ್ ಬ್ರದರ್ಸ್  ಕಳೆಂಜ ವತಿಯಿಂದ ಪಿಶರೀಸ್ ಡೆವಲೆಪ್ ಮೆಂಟ್ ಬೋರ್ಡ್ ನಿರ್ದೇಶಕ ಪಿ.ಟಿ‌ ಸೆಬಾಸ್ಟಿಯನ್ ಅವರಿಗೆ...

ಕ್ರಿಶ್ಚಿಯನ್ ಬ್ರದರ್ಸ್  ಕಳೆಂಜ ವತಿಯಿಂದ ಪಿಶರೀಸ್ ಡೆವಲೆಪ್ ಮೆಂಟ್ ಬೋರ್ಡ್ ನಿರ್ದೇಶಕ ಪಿ.ಟಿ‌ ಸೆಬಾಸ್ಟಿಯನ್ ಅವರಿಗೆ ಸನ್ಮಾನ

0

ಬೆಳ್ತಂಗಡಿ; ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ಫಿಶರೀಸ್ ಡೆವಲಪ್‌ಮೆಂಟ್ ಬೋರ್ಡ್‌ ನಿರ್ದೇಶಕರಾಗಿ ನೇಮಕಾತಿ ನೀಡಿರುವ ಪಿ.ಟಿ‌ಸೆಬಾಸ್ಟಿಯನ್ ಕಳೆಂಜ ಅವರನ್ನು ಕ್ರಿಸ್ಟಿಯಾನ್ ಬ್ರದರ್ಸ್ ಕಳೆಂಜ ಇವರ ವತಿಯಿಂದ ಸನ್ಮಾನಿಸಲಾಯಿತು.

ಕಾಂಗ್ರೆಸ್ ಪಕ್ಷದ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಪಿಟಿ ಸೆಬಾಸ್ಟಿಯನ್ ಅವರು ವಿವಿಧ ಸಂಘ-ಸಂಸ್ಥೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ಸಾಮಾಜಿಕ, ಧಾರ್ಮಿಕ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಇವರು ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ (ರಿ.) ಸಂಸ್ಥೆಯ ಗೌರವಾಧ್ಯಕ್ಷರಾಗಿಯೂ ಇದ್ದಾರೆ.
ವಿಶೇಷವಾಗಿ ಮೀನುಗಾರ ಸಮುದಾಯದ ಅಭಿವೃದ್ಧಿ, ಮೀನುಗಾರರ ಕಲ್ಯಾಣ ಹಾಗೂ ಮೀನುಗಾರಿಕಾ ಕ್ಷೇತ್ರದ ಪ್ರಗತಿಗೆ ತಮ್ಮ ಅಧಿಕಾರಾವಧಿಯಲ್ಲಿ ಅಮೂಲ್ಯ ಕೊಡುಗೆ ನೀಡುವಂತಾಗಲಿ ಎಂದು ಸಮಿತಿ ಶುಭ ಹಾರೈಸಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಅಗಸ್ಟೀನ್ .ಟಿ.ಎ,‌ ಕಾರ್ಯದರ್ಶಿ ಶಿಜೋ ಜೋಸೆಫ್, ಕೋಶಾಧಿಕಾರಿ ರಂಜಿತ್ ಪಿ.ಎಸ್. ಉಪಾಧ್ಯಕ್ಷ ಮ್ಯಾಥ್ಯೂ ವಿ.ಟಿ ಹಾಗೂ ಸಂಘಟನೆಯ
ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version