Home ಸ್ಥಳೀಯ ಸಮಾಚಾರ ಬೆಳ್ತಂಗಡಿ; ಗೃಹಲಕ್ಷ್ಮೀ ಯೋಜನೆಯ ಮರು ಪರಿಶೀಲನೆ ಗಣತಿ ದಾರರಿಗೆ ತರಬೇತಿ ಶಿಬಿರ

ಬೆಳ್ತಂಗಡಿ; ಗೃಹಲಕ್ಷ್ಮೀ ಯೋಜನೆಯ ಮರು ಪರಿಶೀಲನೆ ಗಣತಿ ದಾರರಿಗೆ ತರಬೇತಿ ಶಿಬಿರ

0

ಬೆಳ್ತಂಗಡಿ: ಗೃಹಲಕ್ಷ್ಮೀ ಯೋಜನೆಯ ಅರ್ಜಿಗಳ ಮರು ಪರಿಶೀಲನೆಗಾಗಿ ಗಣತಿದಾರರಾದ ಅಂಗನವಾಡಿ ಕಾರ್ಯಕರ್ತೆಯರಿಗೆ ನ.11 ತಾಲೂಕು ಪಂಚಾಯತ್ ಬೆಳ್ತಂಗಡಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮವನ್ನು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಇವರು
ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಕ್ಷಿತ್ ಶಿವರಾಂ ರವರು ಗೃಹಲಕ್ಷ್ಮೀ ಮರು ಪರಿಶೀಲನೆಯ ಕಾರ್ಯವನ್ನು ಉತ್ತಮವಾಗಿ ನಡೆಸಲು ತಿಳಿಸುತ್ತಾ, ಗ್ಯಾರಂಟಿ ಸಮಿತಿ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ಇತ್ತರು.
ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಭವಾನಿ ಶಂಕರ್ ವಹಿಸಿ ಮಾತನಾಡಿ
ಗೃಹಲಕ್ಷ್ಮೀ ಯೋಜನೆಯ ಮರುಪರಿಶೀಲನೆಯ ಉದ್ದೇಶವನ್ನು ಸಭೆಗೆ ತಿಳಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಪ್ರಿಯ ಆಗ್ನೆಸ್ ರವರು ಗೃಹಲಕ್ಷ್ಮೀ ಯೋಜನೆಯ ಮರು ಪರಿಶೀಲನೆ ಗಣತಿಯ ರೂಪು ರೇಷೆಗಳ ಬಗ್ಗೆ ತಿಳಿಸುತ್ತಾ ತರಬೇತಿಯನ್ನು ಪಡೆದು ನಿಗದಿತ ಅವಧಿಯೊಳಗೆ ಮರು ಪರಿಶೀಲನೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ನೂತನ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಎಲ್ಲಾ ಸದಸ್ಯರು, ತರಬೇತುದಾರರಾದ ವಾಣಿ ಶ್ರೀ ಹಾಗೂ ಕಾತ್ಯಾಯಿನಿ, ಇಲಾಖೆಯ ಸಿಬ್ಬಂದಿಗಳು ಮತ್ತು ಗಣತಿದಾರರಾದ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.
ಕಾರ್ಯಕ್ರಮವನ್ನು ಕಾತ್ಯಾಯಿನಿ ನಿರೂಪಿಸಿ ಸ್ವಾಗತಿಸಿದರು. ವಾಣಿಶ್ರೀ ವಂದಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version