ಬೆಳ್ತಂಗಡಿ; ಉಪ್ಪಿನಂಗಡಿ ಯಲ್ಲಿ ತಲವಾರು ಹಿಡಿದು ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಮಂಜುನಾಥ್ ಹಾಗೂ ವಿಶ್ವನಾಥ್ ಎಂಬವರಾಗಿದ್ದಾರೆ.
ಇವರು ಭಾನುವಾರ ರಾತ್ರಿ ವೇಳೆ ಉಪ್ಪಿನಂಗಡಿಯ ಬಾರಿನ ಮುಂಭಾಗದಲ್ಲಿ ತಲವಾರು ಹಿಡಿದು ಹಲ್ಲೆಗೆ ಮುಂದಾಗಿದ್ದರು.
ಮುನ್ನ ಎಂಬಾತ ಕುಡಿದ ಮತ್ತಿನಲ್ಲಿ ಮಂಜುನಾಥ್ ಎಂಬತನ ಮನೆಯವರಿಗೆ ಬೈದಿದ್ದು ಈ ವಿಚಾರವಾಗಿ ಇವರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ ಇದೇ ಗಲಾಟೆಯ ವೇಳೆ ಸಾರ್ವಜನಿಕವಾಗಿ ತಲವಾರು ಹಿಡಿದು ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.










