ಬೆಳ್ತಂಗಡಿ : ನಾವೂರು ಗ್ರಾಮದ ಪೇಟೆಯಲ್ಲಿರುವ ಆರೋಗ್ಯ ಕ್ಲಿನಿಕ್ ಗೆ ಅ.6 ರಂದು ತಡರಾತ್ರಿ ಬೆಂಕಿ ಬಿದ್ದು ಅಪಾರ ವಸ್ತುಗಳು ಸುಟ್ಟು ಕರಕಲಾದ ಘಟನೆ ಅ. 7 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಅನಾಹುತದದ ಹಿಂದೆ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದ್ದು,ಯಾರೋ ಕಿಡಿಗೇಡಿಗಳು ಕ್ಲಿನಿಕ್ ಹಿಂಭಾಗ ಕಿಟಕಿ ಮೂಲಕ ಒಳಗಡೆ ಡಿಸೇಲ್ ಸುರಿದು
ಬೆಂಕಿ ಹಚ್ಚಿದ್ದಾರೆ ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದ್ದು ಈಹಿನ್ನಲೆಯಲ್ಲಿ ತನಿಖೆ ಮುಂದುವರಿದಿದೆ.
ನಾವೂರು ಗ್ರಾಮದ ಶೇಖರ್ ಪೂಜಾರಿ ಎಂಬವರ ಮಾಲೀಕತ್ವದ ಸ್ವಾತಿ ಕಟ್ಟಡದಲ್ಲಿ ಡಾ. ಪ್ರದೀಪ ಎ ಅವರಿಗೆ ಸೇರಿದ ಆರೋಗ್ಯ ಕಿನ್ಲಿಕ್ ಕಾರ್ಯಚರಿಸುತ್ತಿತ್ತು.
ಆರೋಗ್ಯ ಕಿನ್ಲಿಕ್ ನ ಕನ್ಸಲ್ಟೆಂಟ್ ಕೊಠಡಿ ಸೇರಿ ಮೂರು ಕೊಠಡಿಗಳು ಸುಟ್ಟು ಹಾನಿಯಾಗಿದೆ. ಹಾಸಿಗೆ,ಮದ್ದುಗಳು, ಇಲೆಕ್ಟ್ರಾನಿಕ್ ಸೊತ್ತುಗಳು ಬೆಂಕಿ ಅಹುತಿಯಾಗಿ ಅಪಾರ ಹಾನಿ ಸಂಭವಿಸಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ನೂರಾರು ಸಂಖ್ಯೆಯಲ್ಲಿ ಜನರು ಇಲ್ಲಿ ಜಮಾಯಿಸಿದ್ದರು
ಘಟನ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸರು, ಅಗ್ನಿಶಾಮಕ ದಳ, ಸೋಕೋ ತಂಡ
ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.




