ಬೆಳ್ತಂಗಡಿ:ಸೆ 28.ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘ, ಭಂಡಾರಿ ಯುವವೇದಿಕೆ ಜಂಟಿಯಾಗಿ ಸೆ. 28ರಂದು ಬೆಳ್ತಂಗಡಿಯ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರನ್ನು ಭೇಟಿ ಮಾಡಿ ಇತ್ತೀಚೆಗೆ ಅವರು ಉತ್ತಮ ಶಾಸಕ ಎಂಬ ಪುರಸ್ಕಾರ ಪಡೆದಿರುವ ಸಲುವಾಗಿ ಶಾಸಕರನ್ನು ಗೌರವಿಸಲಾಯಿತು. ಹಾಗೂ ಅಕ್ಟೋಬರ್ 20 ರಂದು ಉಜಿರೆಯಲ್ಲಿ ನಡೆಯುವ ಭಂಡಾರಿ ಸಮಾಜದ ಕ್ರೀಡಾಕೂಟದ ಆಮಂತ್ರಣ ಪತ್ರಿಕೆಯನ್ನು ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು
ಈ ಸಂದರ್ಭದಲ್ಲಿ ಬೆಳ್ತಂಗಡಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಶ್ರೀ ಪೂವಪ್ಪ ಭಂಡಾರಿ ಮದ್ದಡ್ಕ, ಯುವವೇದಿಕೆ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಭಂಡಾರಿ ಅಂಡಿಂಜೆ, ಸಮಾಜದ ಹಿರಿಯರಾದ ಏ. ಪೂವಪ್ಪ ಭಂಡಾರಿ ಪಣೆಜಾಲು, ಸಂಘದ ಸಮಾಜದ ಪದಾಧಿಕಾರಿಗಳು, ಸದಸ್ಯರು,ಭಂಡಾರಿ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.










