Home ಬ್ರೇಕಿಂಗ್‌ ನ್ಯೂಸ್ ಉಜಿರೆ; ಕೊನೆಗೂ ಅರಣ್ಯ ಸೇರಿದ‌ ಕಾಡನೆ ಇಂಜಿನಿಯರಿಂಗ್ ಕಾಲೇಜ್ ಸಮೀಪ ಬೀಡು ಬಿಟ್ಟಿದ್ದ ಕಾಡಾನೆ

ಉಜಿರೆ; ಕೊನೆಗೂ ಅರಣ್ಯ ಸೇರಿದ‌ ಕಾಡನೆ ಇಂಜಿನಿಯರಿಂಗ್ ಕಾಲೇಜ್ ಸಮೀಪ ಬೀಡು ಬಿಟ್ಟಿದ್ದ ಕಾಡಾನೆ

2
0

ಬೆಳ್ತಂಗಡಿ; ಉಜಿರೆಯ ಇಂಜಿನಿಯರಿಂಗ್ ಕಾಲೇಜಿನ ಕಂಪೌಂಡ್‌ನೊಳಗೆ ಸೇರಿಕೊಂಡು ಆತಂಕ‌ಮೂಡಿಸಿದ ಕಾಡನೆಯನ್ನು ಕೊನೆಗೂ ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ‌ ಹಾಗೂ ಅನೆ ಕಾರ್ಯಪಡೆ ಯಶಸ್ವಿಯಾಗಿದೆ.
ಬೆಳಗ್ಗಿನಿಂದ ದಿನವಿಡೀ ಕಾರ್ಯಾಚರಣೆ ನಡೆಸಿದ ಬಳಿಕ ರಾತ್ರಿ 7.30 ರ ಸುಮಾರಿಗೆ ಕಾಡಾನೆ ಅಲ್ಲಿಂದ ಅರಣ್ಯದತ್ತ‌ ತೆರಳಿದೆ.
ಸಂಜೆಯ ವೇಳೆ ಕಾರ್ಯಾಚರಣೆ ನಡುವೆ ನೇರವಾಗಿ ಪೇಟೆಯತ್ತ ನುಗ್ಗಲು ಕಾಡಾನೆ ಪ್ರಯತ್ನಿಸಿದಾಗ ಆನೆ ಕಾರ್ಯಪಡೆ ಗುಂಡು ಹಾರಿಸಿ ಪಟಾಕಿ ಸಿಡಿಸಿ ಆನೆಯನ್ನು ಹಿಮ್ಮಟಿಸುವ ಕಾರ್ಯ ಮಾಡಿದರು.
ಧ್ವನಿವರ್ಧಕ ಮೂಲಕ ಉಜಿರೆ ಪೇಟೆಯಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ರಾತ್ರಿಯ ವೇಳೆ ಜನರು ಅನಗತ್ಯವಾಗಿ ಹೊರಗೆ ಸಂಚರಿಸದಂತೆ ಹಾಗೂ ಆನೆಯನ್ನು ನೋಡಿದರೆ ಓಡಿಸಲು ಪ್ರಯತ್ನಿಸದಂತೆ ಜನರಿಗೆ ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here