ಬೆಳ್ತಂಗಡಿ; ಭಾರೀ ಮಳೆಗೆ ಕಾಜೂರು ನೆಲ್ಲಿಗುಡ್ಡೆಯಲ್ಲಿ ವಾಸದ ಮನೆಯ ಗೋಡೆ ಕುಸಿದು ಬಿದ್ದು ಹಾನಿ ಸಂಭವಿಸಿದೆ.
ಇಲ್ಲಿನ ನಿವಾಸಿ ಎ.ಬಿ ಫಾರೂಕ್ ಎಂಬವರ ಮನೆಯ ಹಿಂಬದಿಯ ಗೋಡೆ ಗುರುವಾರ ಸಂಜೆಯ ವೇಳೆ ಕುಸಿದು ಬಿದ್ದಿದೆ. ಗೋಡೆ ಕುಸಿದಾಗ ಮನೆಯವರೆಲ್ಲರೂ ಮನೆಯಿಂದ ಹೊರಗಡೆ ಹೋಗಿದ್ದರು ಇದರಿಂದಾಗಿ ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ.
ರಾತ್ರಿಯೇ ಇವರು ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
