ಬೆಳ್ತಂಗಡಿ; ತಾಲೂಕಿನಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದೆ. ಮಂಗಳವಾರ ರಾತ್ರಿಯ ವೇಳೆ ನಿಡ್ಲೆ ಗ್ರಾಮದ ಬೂಡುಜಾಲು ಸಮೀಪ ಹರಿಕೃಷ್ಣರಾವ್ ಎಂಬವರ ತೋಟಕ್ಕೆ ಕಾಡಾನೆ ನುಗ್ಗಿದ್ದು ವ್ಯಾಪಕವಾಗಿ ಕೃಷಿಗೆ ಹಾನಿಯುಂಟು ಮಾಡಿದೆ. ತೋಟದಲ್ಲಿ ತೆಂಗಿನ ಮರ, ಅಡಿಕೆ ಹಾಗೂ ಬಾಳೆಯನ್ನು ಕಾಡಾನೆಗಳು ನಾಶಪಡಿಸಿದೆ. ನೀರಿನ ಪೈಪ್ ಗಳನ್ನು ಕಿತ್ತು ಹಾಕಿದ್ದು ವ್ಯಾಪಕ ನಷ್ಟ ಸಂಭವಿಸಿದೆ.
