Home ಸ್ಥಳೀಯ ಸಮಾಚಾರ ಶ್ರೀ ಗೆಜ್ಜೆಗಿರಿ ಮೇಳದ ಐದನೇ ವರ್ಷದ ತಿರುಗಾಟದ ಪ್ರಯುಕ್ತ ಡಿ. ಹರ್ಷೇಂದ್ರ ಕುಮಾರ್ ಧರ್ಮಸ್ಥಳ ಅವರ...

ಶ್ರೀ ಗೆಜ್ಜೆಗಿರಿ ಮೇಳದ ಐದನೇ ವರ್ಷದ ತಿರುಗಾಟದ ಪ್ರಯುಕ್ತ ಡಿ. ಹರ್ಷೇಂದ್ರ ಕುಮಾರ್ ಧರ್ಮಸ್ಥಳ ಅವರ ಭೇಟಿ

0

ಬೆಳ್ತಂಗಡಿ;  ಶ್ರೀ ಆದಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಗೆಜ್ಜೆಗಿರಿ ವತಿಯಿಂ ನಡೆಯುತ್ತಿರುವ ಶ್ರೀ ಗೆಜ್ಜೆಗಿರಿ ಮೇಳದ ಐದನೇ ವರ್ಷದ ತಿರುಗಾಟದ ಅಂಗವಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ (ಶ್ರೀ ಧರ್ಮಸ್ಥಳ ಮೇಳ)ಯ ಮೇಲ್ವಿಚಾರಕರೂ, ಯಕ್ಷಗಾನದ ವಿವಿಧ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಶ್ರೀ ಡಿ. ಹರ್ಷೇಂದ್ರ ಕುಮಾರ್ ಧರ್ಮಸ್ಥಳ ಅವರನ್ನು ಭೇಟಿ ಮಾಡಿ, ಮೇಳದ ಯಶಸ್ವಿ ತಿರುಗಾಟಕ್ಕಾಗಿ ಅವರ ಮಾರ್ಗದರ್ಶನ, ಅಮೂಲ್ಯ ಸಲಹೆ ಹಾಗೂ ಆಶೀರ್ವಾದವನ್ನು ಕೋರಲಾಯಿತು.

ಈ ಸಂದರ್ಭದಲ್ಲಿ ಶ್ರೀ ಡಿ. ಹರ್ಷೇಂದ್ರ ಕುಮಾರ್ ಅವರು ಮೇಳದ ಕಾರ್ಯಚಟುವಟಿಕೆಗಳ ಕುರಿತು ಆತ್ಮೀಯವಾಗಿ ವಿಚಾರಿಸಿ, ಕಲಾ ಸೇವೆ ನಿರಂತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿ ತಮ್ಮ ಆಶೀರ್ವಾದವನ್ನು ನೀಡಿದರು.

ಈ ಭೇಟಿಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗೌರವಾಧ್ಯಕ್ಷರಾದ ಶ್ರೀ ಪೀತಾಂಬರ ಹೇರಾಜೆ, ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ರವಿ ಪೂಜಾರಿ ಚಿಲಿಂಬಿ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಇಲ್ಲಿನ ಕಾನೂನು ಸಲಹೆಗಾರರೂ, ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ಅಧ್ಯಕ್ಷರೂ ಆಗಿರುವ ಶ್ರೀ ರಕ್ಷಿತ್ ಶಿವರಾಂ, ಶ್ರೀ ಗೆಜ್ಜೆಗಿರಿ ಮೇಳದ ಪ್ರಧಾನ ಸಂಚಾಲಕರಾದ ಶ್ರೀ ನಿತ್ಯಾನಂದ ನಾವರ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ಸಂಜೀವ ಪೂಜಾರಿ ಬಿರುವ, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಪ್ರಮಲ್ ಕುಮಾರ್ ಕಾರ್ಕಳ, ಶ್ರೀ ಗುರು ನಾರಾಯಣ ಸೇವಾ ಸಂಘ, ಬೆಳ್ತಂಗಡಿ ಅಧ್ಯಕ್ಷರಾದ ಶ್ರೀ ಜಯ ವಿಕ್ರಂ ಕಲ್ಲಾಪು, ಶ್ರೀ ಕ್ಷೇತ್ರದ ಆಡಳಿತ ಸಮಿತಿ ಸದಸ್ಯರಾದ ಶ್ರೀ ನಾರಾಯಣ ಮೆಚ್ಚಿನ, ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ವಸಂತ ಸುವರ್ಣ, ಕೋಶಾಧಿಕಾರಿ ಶ್ರೀ ಶ್ರವಣ್ ರಾಜ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version