Home ಸ್ಥಳೀಯ ಸಮಾಚಾರ ಮೊಗ್ರು ಕಲ್ಲಮಾಡ, ಗುತ್ತಿಲಾರು ದಿ.ಭಾರತಿಯಮ್ಮ ಸ್ಮರಣಾರ್ಥ ನೂತನ ಬಸ್ ತಂಗುದಾಣ ಶಾಸಕ ಹರೀಶ್ ಪೂಂಜಾ ರವರಿಂದ...

ಮೊಗ್ರು ಕಲ್ಲಮಾಡ, ಗುತ್ತಿಲಾರು ದಿ.ಭಾರತಿಯಮ್ಮ ಸ್ಮರಣಾರ್ಥ ನೂತನ ಬಸ್ ತಂಗುದಾಣ ಶಾಸಕ ಹರೀಶ್ ಪೂಂಜಾ ರವರಿಂದ ಲೋಕಾರ್ಪಣೆ

3
0

ಬೆಳ್ತಂಗಡಿ :ಬಂದಾರು ಗ್ರಾಮಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ ಕಲ್ಲಮಾಡ ಎಂಬಲ್ಲಿ ಗುತ್ತಿಲಾರು ಡಿ. ಭಾರತಿ ಅಮ್ಮನವರ ಸ್ಮರಣಾರ್ಥವಾಗಿ ಅವರ ಮಕ್ಕಳು ಮತ್ತು ಮೊಮ್ಮಕ್ಕಳ ಕೊಡುಗೆಯಾಗಿ ನಿರ್ಮಾಣಗೊಂಡಿರುವ ನೂತನ ಬಸ್ ತಂಗುದಾಣವನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಅವರು ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಬಂದಾರು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ,ಮಾಜಿ ಉಪಾಧ್ಯಕ್ಷರಾದ ಗಂಗಾಧರ ಪೂಜಾರಿ,ಪದ್ಮುಂಜ ಸಿ.ಎ. ಬ್ಯಾಂಕ್ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ರಘುಪತಿ ಭಟ್ ಅನಾಬೆ, ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ,ನಿರ್ದೇಶಕರಾದ ಪ್ರಭಾಕರ ಗೌಡ ಗುತ್ಯೋಡಿ,
ಸ್ಥಳೀಯರಾದ ರಾಮಚಂದ್ರಭಟ್, ಶಂಕರನಾರಾಯಣ ಭಟ್ ಬಾಂಗೇರು,ರಾಕೇಶ್ ಆಚಾರ್ಯ, ಬಾಲಪ್ಪ ಗೌಡ ದಂಡುಗ,ಗುರುಪ್ರಸಾದ್ ಎಂ.ಮೈರೊಳ್ತಡ್ಕ, ಅಶೋಕ್ ಭಟ್ ಕಾನಿಷ್ಕ, ಪದ್ಮನಾಭ ಮುಚ್ಚಿನ್ನಾಯ (ಗುತ್ತಿಲಾರು ಭಾರತೀಯಮ್ಮನವರ ಹಿರಿಯ ಪುತ್ರ), ತುಂಗಪ್ಪ ಗೌಡ ದಂಡುಗ, ಶಶಿರಾಜ್ ದಂಡುಗ, ಸಚಿನ್ ಶೆಟ್ಟಿ ಬಾಂಗೇರು, ರಮೇಶ್ ನೆಕ್ಕರಾಜೆ, ದಾಮೋದರ ಶ್ರೀ ದುರ್ಗಾ ವೆಲ್ಡಿಂಗ್ ಪದ್ಮುಂಜ, ಗಿರಿಯಪ್ಪ ದಂಡುಗ, ರುಕ್ಮಯ ಗೌಡ ದಂಡುಗ ಹಾಗೂ ಗುತ್ತಿಲಾರು ಸಹೋದರ ಸಹೋದರಿಯರು ಮತ್ತು ಕುಟುಂಬ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here