Home ಬ್ರೇಕಿಂಗ್‌ ನ್ಯೂಸ್ 31 ವರ್ಷಗಳ ಯಶಸ್ವಿ ಪಯಣ: ಗ್ರಾಹಕರ ವಿಶ್ವಾಸದ ಪ್ರತೀಕವಾಗಿ ಬೆಳೆದ ಸೋಜಾ ಎಲೆಕ್ಟ್ರಾನಿಕ್ಸ್ ನಲ್ಲಿ ಮಾನ್ಸೂನ್...

31 ವರ್ಷಗಳ ಯಶಸ್ವಿ ಪಯಣ: ಗ್ರಾಹಕರ ವಿಶ್ವಾಸದ ಪ್ರತೀಕವಾಗಿ ಬೆಳೆದ ಸೋಜಾ ಎಲೆಕ್ಟ್ರಾನಿಕ್ಸ್ ನಲ್ಲಿ ಮಾನ್ಸೂನ್ ಆಫ‌ರ್ ಪ್ರಾರಂಭ; ಶೇ.10-50ರವರೆಗೆ ವಿಶೇಷ ರಿಯಾಯಿತಿ

0

ಬೆಳ್ತಂಗಡಿ: ತಾಲೂಕಿನ ಅತ್ಯಂತ ಹಿರಿಯ ಹಾಗೂ ಜನಪ್ರಿಯ ಗೃಹಪಯೋಗಿ ಮಳಿಗೆಗಳಲ್ಲಿ ಒಂದಾದ ಸೋಜಾ ಎಲೆಕ್ಟ್ರಾನಿಕ್ಸ್, 1995ರ ಡಿಸೆಂಬ‌ರ್ 8ರಂದು ಬೆಳ್ತಂಗಡಿ ನಗರದ ಹೃದಯ ಭಾಗದಲ್ಲಿ ಮಾಜಿ ಶಾಸಕ ದಿವಂಗತ ವಸಂತ ಬಂಗೇರ, ಬೆಳ್ತಂಗಡಿ ಕ್ರೈಸ್ತ ಧರ್ಮಕ್ಷೇತ್ರದ ಧರ್ಮಗುರುಗಳು ಹಾಗೂ ನೂರಾರು ಗ್ರಾಹಕರ ಸಮ್ಮುಖದಲ್ಲಿ ಉದ್ಘಾಟನೆಗೊಂಡು ಇದೀಗ ಯಶಸ್ವಿಯಾಗಿ 31 ವರ್ಷಗಳ ಪಯಣವನ್ನು ಪೂರ್ಣಗೊಳಿಸಿದೆ.

ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದದಿಂದ ಬೆಳೆಯುತ್ತಾ ಬಂದ ಈ ಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವಿವಿಧ ಕೃಷಿ ಮೇಳಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತನ್ನ ಸಾಮಾಜಿಕ ಬದ್ಧತೆಯನ್ನೂ ಪ್ರದರ್ಶಿಸಿದೆ. ದಿವಂಗತ ಕಾಶ್ಮೀರ್ ಮೆನೆಜಸ್ ಅವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ, ಸಲಹೆ ಮತ್ತು ಸೂಚನೆಗಳನ್ನು ಪಾಲಿಸಿಕೊಂಡು ಬಂದಿರುವ ಈ ಪ್ರತಿಷ್ಠಿತ ಸಂಸ್ಥೆಯು ಪುತ್ತೂರಿನ ಸೋಜಾ ಎಲೆಕ್ಟ್ರಾನಿಕ್ಸ್‌ನ ಸಹ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.
ಯಶಸ್ವಿ ಅಧ್ಯಾಪಕ, ಸಮಾಜ ಸೇವಕ ಹಾಗೂ ಬಹುಮುಖ ಪ್ರತಿಭೆಗಳ ವ್ಯಕ್ತಿತ್ವ ಹೊಂದಿರುವ ಅಲ್ಲೋನ್ಸ್ ಫ್ರಾಂಕೋ ಸಂಸ್ಥೆಯ ಆಡಳಿತ ಪಾಲುದಾರರಾಗಿ ಕಳೆದ 31 ವರ್ಷಗಳಿಂದ ಸಂಸ್ಥೆಯನ್ನು ಯಶಸ್ಸಿನತ್ತ ಮುನ್ನಡೆಸಿದ್ದಾರೆ. ಅವರ ನಾಯಕತ್ವದಲ್ಲಿ ಸಂಸ್ಥೆ ಜಿಲ್ಲೆಯಷ್ಟೇ ಅಲ್ಲದೆ ಹೊರ ಜಿಲ್ಲೆಗಳಲ್ಲಿಯೂ ಲಕ್ಷಾಂತರ ಗ್ರಾಹಕರ ವಿಶ್ವಾಸಗಳಿಸಿ ತಾಲೂಕಿನ ಅತಿದೊಡ್ಡ ಹಾಗೂ ಹಿರಿಯ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ.

ಮಾನ್ಸೂನ್ ಆಫರ್ ದರಕಡಿತ ಮಾರಾಟಕ್ಕೆ ಚಾಲನೆ: ಅಕ್ಟೋನ್ಸ್ ಫ್ರಾಂಕೋ

ಸೋಜಾ ಎಲೆಕ್ಟ್ರಾನಿಕ್ಸ್‌ ವತಿಯಿಂದ ಜುಲೈ 2 ರಿಂದ ವಿಶೇಷ ಮಳೆಗಾಲದ ದರಕಡಿತ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮಾಲಕರಾದ ಅಲ್ಲೋನ್ಸ್ ಫ್ರಾಂಕೋ ತಿಳಿಸಿದ್ದಾರೆ. ಪ್ರಸಿದ್ಧ ಕಂಪನಿಗಳ ವಿವಿಧ ಉತ್ಪನ್ನಗಳ ಮೇಲೆ ಶೇ.10ರಿಂದ ಶೇ.50 ರವರೆಗೆ ವಿಶೇಷ ರಿಯಾಯಿತಿ ದರ ನೀಡಲಾಗುತ್ತಿದೆ. ಸೋಜಾ ಮಳಿಗೆಯಲ್ಲಿ ಬಟ್ಲರ್ ಸೋಡಾ ಮೇಕ‌ರ್ ಇದರ ಲೈವ್ ಡೆಮೋಸ್ಟೆಷನ್ ಕಂಪನಿಯವರಿಂದಲೇ ಮಾಡಲಾಗುತ್ತಿದೆ. ಸ್ಥಳದಲ್ಲಿಯೇ ಬಜಾಜ್ ಫೈನಾನ್ಸ್ ಮೂಲಕ ಸುಲಭಕಂತು ಸಾಲ ಸೌಲಭ್ಯವೂ ಲಭ್ಯವಿದ್ದು, ಉಚಿತ ಸಾಗಾಟ, ಪ್ರಾತ್ಯಕ್ಷಿಕೆ ಹಾಗೂ ನಗುಮುಖದ ಸಿಬ್ಬಂದಿಗಳ ಸೇವೆ ಗ್ರಾಹಕರಿಗೆ ಸದಾ ದೊರೆಯಲಿದೆ. ಕಳೆದ ಹಲವು ವರ್ಷಗಳಿಂದ ಸಂಸ್ಥೆಯನ್ನು ಬೆಂಬಲಿಸಿ ಪ್ರೋತ್ಸಾಹ ನೀಡಿದ ಎಲ್ಲ ಗ್ರಾಹಕರಿಗೂ ಸಂಸ್ಥೆಯ ವತಿಯಿಂದ ಹೃತ್ತೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version