Home ಬ್ರೇಕಿಂಗ್‌ ನ್ಯೂಸ್ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮಾರುತನಿಖೆ; ಸಾವಿನ ರಹಸ್ಯ ಬಯಲಿಗೆ ಳೆಯಲು ವೆಜಿನಲ್ ಸ್ವಾಬ್...

ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮಾರುತನಿಖೆ; ಸಾವಿನ ರಹಸ್ಯ ಬಯಲಿಗೆ ಳೆಯಲು ವೆಜಿನಲ್ ಸ್ವಾಬ್ DNA ಪರೀಕ್ಷೆ!

0

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, 14 ವರ್ಷಗಳ ಹಿಂದೆ ಸಂಗ್ರಹಿಸಲಾಗಿದ್ದ ವೆಜಿನಲ್ ಸ್ವಾಬ್ ಮಾದರಿಯ DNA ಪರೀಕ್ಷೆಗೆ ವಿಶೇಷ ತನಿಖಾ ತಂಡ (SIT) ಮುಂದಾಗಿದೆ.

ಸೌಜನ್ಯ ಸಾವಿನ ಹಿಂದಿನ ಸತ್ಯಾಂಶ ಪತ್ತೆಹಚ್ಚುವ ನಿಟ್ಟಿನಲ್ಲಿ SIT ಈ ಮಾದರಿಯ ಪರೀಕ್ಷೆಗೆ ವಿಶೇಷ ಆಸಕ್ತಿ ವಹಿಸಿದೆ. 2012ರ ಅಕ್ಟೋಬರ್ 10ರಂದು ಸೌಜನ್ಯ ಅವರ ವೆಜಿನಲ್ ಸ್ವಾಬ್ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಬಳಿಕ ಅಕ್ಟೋಬರ್ 20ರಂದು ಬೆಳ್ತಂಗಡಿ ಪೊಲೀಸರು ಅದನ್ನು ಪ್ರಯೋಗಾಲಯಕ್ಕೆ ರವಾನಿಸಿದ್ದರು. ಆದರೆ ಅಂದಿನ ಪರೀಕ್ಷೆಯಲ್ಲಿ ಮಾದರಿಯಲ್ಲಿ ಫಂಗಸ್ ಇರುವುದಾಗಿ ವರದಿಯಾಗಿತ್ತು.

ಇದೀಗ ಅದೇ ಮಾದರಿಯನ್ನು ಮರುಪರೀಕ್ಷೆಗೆ ಒಳಪಡಿಸಲು SIT ನಿರ್ಧರಿಸಿದ್ದು, ಹೈದರಾಬಾದ್‌ನ ಅತ್ಯಾಧುನಿಕ ಪ್ರಯೋಗಾಲಯಕ್ಕೆ ರವಾನಿಸಿದೆ. ಫಂಗಸ್‌ನಂತಹ ಅಂಶಗಳಿದ್ದರೂ DNA ಪರೀಕ್ಷೆ ನಡೆಸಿ ವರದಿ ನೀಡುವ ಸಾಮರ್ಥ್ಯ ಹೊಂದಿರುವ ಪ್ರಯೋಗಾಲಯಕ್ಕೆ ಮಾದರಿಯನ್ನು ಕಳುಹಿಸಲಾಗಿದೆ ಎನ್ನಲಾಗಿದೆ.

ಕಳೆದ 7ರಿಂದ 8 ದಿನಗಳ ಹಿಂದೆಯೇ SIT ಈ ಮಾದರಿಯನ್ನು ಹೈದರಾಬಾದ್‌ಗೆ ಕಳುಹಿಸಿದ್ದು, ಅಲ್ಲಿಂದ DNA ಪರೀಕ್ಷಾ ವರದಿಗಾಗಿ ಕಾಯುತ್ತಿದೆ. ವರದಿಯಲ್ಲಿ DNA ಮಾದರಿಗಳು ಪತ್ತೆಯಾದಲ್ಲಿ, ಅವುಗಳನ್ನು ಪ್ರಕರಣದ ಆರೋಪಿಗಳ DNA ಮಾದರಿಗಳೊಂದಿಗೆ ಹೋಲಿಕೆ ಮಾಡಿ ಮುಂದಿನ ತನಿಖೆ ನಡೆಸುವ ಸಾಧ್ಯತೆಯಿದೆ.

14 ವರ್ಷಗಳ ಹಿಂದಿನ ಈ ಮಾದರಿಯ ಪರೀಕ್ಷಾ ವರದಿ ಸೌಜನ್ಯ ಪ್ರಕರಣದ ತನಿಖೆಯಲ್ಲಿ ಯಾವ ರೀತಿಯ ಮಹತ್ವ ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version