ಬೆಳ್ತಂಗಡಿ; ಜನರು ನಿತ್ಯ ಉಪಯೋಗಿಸುವ ಆಹಾರ ವಸ್ತುಗಳು, ಗ್ಯಾಸ್ ಮೊದಲಾದವುಗಳ ದರ ವಿಪರೀತ ಏರಿಸಿದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ನಡೆ ಅತ್ಯಂತ ಜನ ವಿರೋದಿಯೂ, ಮಹಿಳಾ ವಿರೋದಿಯೂ ಆಗಿದೆ ಎಂದು ಜೆ.ಎಂ.ಎಸ್ ದ.ಕ. ಜಿಲ್ಲಾಧ್ಯಕ್ಷರಾದ ಕಿರಣಪ್ರಭಾ ಅವರು ಹೇಳಿದರು.
ಅವರು ಇಂದು ಬೆಳ್ತಂಗಡಿ ಮಿನಿ ವಿಧಾನ ಸೌಧ ಎದುರು ಜನವಾದಿ ಮಹಿಳಾ ಸಂಘಟನೆ (ಜೆ.ಎಂಎಸ್) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಬೆಲೆ ಏರಿಕೆ ವಿರೋದಿಸಿ ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಸರಕಾರವು ತೈಲ ಬೆಲೆಗಳ ವಿಪರೀತ ಏರಿಸಿ ತೈಲ ಕಂಪೆನಿಗಳಿಗೆ ಲಾಭ ಮಾಡಿಕೊಡುವ ದುರುದ್ದೇಶ ಮಾತವಲ್ಲ ಸರಕಾರವೂ ಜನರಿಂದ ಲೂಟಿ ಮಾಡಲು ಅವಕಾಶವಾಗುವಂತೆ ವಿಪರೀತ ತೆರಿಗೆ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದರು. ಕಚ್ಚಾ ತೈಲ ಬೆಲೆ ಬ್ಯಾರಲಿಗೆ 138 ಡಾಲರು ಇರುವಾಗ ಪೆಟ್ರೋಲ್ ಲೀಟರಿಗೆ ರೂ.101 ಇದ್ದರೆ, ಈಗ ಕಚ್ಚಾ ತೈಲ ಬೆಲೆ ಬ್ಯಾರಲಿಗೆ 69 ಡಾಲರು ಇಳಿದಿದ್ದರೂ ಪೆಟ್ರೋಲ್ ದರವನ್ನು ರೂ.112 ಕ್ಕೆ ಏರಿಸಿದ ಬಿಜೆಪಿ ಸರಕಾರ ಅದೆಷ್ಟು ಜನದ್ರೋಹಿ ಸರಕಾರವಾಗಿದೆ ಎಂಬುದನ್ನು ಅರಿಯಬಹುದು ಎಂದರು.

ಜೆ.ಎಂ.ಎಸ್ ನಾಯಕಿ ಜಯಶ್ರೀ ಕಳೆಂಜ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತಡಿದರು. ಪುಷ್ಪ ವಂದಿಸಿದರು. ಪ್ರತಿಭಟನೆಕಾರರು ತಾಲೂಕು ಕಚೇರಿ ಎದುರು ಒಲೆ ಹಾಕಿ ಕಟ್ಟಿಗೆಯಲ್ಲಿ ಚಹಾ ತಯಾರಿಸಿ ಅಲ್ಲಿ ಸೇರಿದವರಿಗೆಲ್ಲ ಉಚಿತ ಚಹಾ ಹಂಚಿ ಪ್ರತಿಭಟನೆ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಡಿ.ವೈ.ಎಫ್.ಐ. ತಾಲೂಕು ಕಾರ್ಯದರ್ಶಿ ಅಭಿಷೇಕ್, ಮುಖಂಡರಾದ ನಜೀರ್, ಅಶವಿತ,ಅಪ್ಸರಾಲಿಯ ಮೊದಲಾದವರುಇದ್ದರು.