Home ರಾಜಕೀಯ ಸಮಾಚಾರ ಕಸ್ತೂರಿ ರಂಗನ್ ವರದಿ ಅನುಷ್ಠನವನ್ನು ಕೇಂದ್ರ ಸರಕಾರ ಕೈಬಿಡಲಿ  ರಕ್ಷಿತ್‌ಶಿವರಾಂ ಒತ್ತಾಯ; ಹೋರಾಟ ಸಮಿತಿಯಿಂದ ಪತ್ರಿಕಾಗೋಷ್ಠಿ

ಕಸ್ತೂರಿ ರಂಗನ್ ವರದಿ ಅನುಷ್ಠನವನ್ನು ಕೇಂದ್ರ ಸರಕಾರ ಕೈಬಿಡಲಿ  ರಕ್ಷಿತ್‌ಶಿವರಾಂ ಒತ್ತಾಯ; ಹೋರಾಟ ಸಮಿತಿಯಿಂದ ಪತ್ರಿಕಾಗೋಷ್ಠಿ

0

ಬೆಳ್ತಂಗಡಿ; ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಬಗ್ಗೆ ರಾಜ್ಯದ‌ ಮಲೆನಾಡಿನ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಕೇಂದ್ರ ಸರಕಾರ ವರದಿ ಜಾರಿಗೆ ತರುವ ಪ್ರಯತ್ನವನ್ನು ಕೂಡಲೇ ಕೈಬಿಡಬೇಕು, ರಾಜ್ಯದ ಸಂಸದರು ಕೇಂದ್ರ‌ರಕಾರದ ಮೇಲೆ ಒತ್ತಡ ಹೇರಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಸ್ತೂರಿ ರಂಗನ್ ವರದಿ ವಿರೋಧೀ ಹೋರಾಟ ಸಮಿತಿಯ ಸಂಚಾಲಕ ರಕ್ಷಿತ್ ಶಿವರಾಂ ಒತ್ತಾಯಿಸಿದ್ದಾರೆ.
ಬೆಳ್ತಂಗಡಿ ಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಕಸ್ತೂರಿರಂಗನ್ ವರದಿ ವಿರುದ್ದ ಹೋರಾಟ ಸಮಿತಿಯನ್ನು ರಚಿಸಲಾಗಿದ್ದು ತಾಲೂಕಿನಲ್ಲಿ ಇದರಿಂದ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ತೆರಳಿ ಜನಜಾಗೃತಿ ಮೂಡಿಸುವ ಹೋರಾಟಗಳನ್ನು ರೂಒಇಸಲಾಗುವುದು ಈ ಆಂದೋಲನಕ್ಕೆ ಆ 26 ರಂದು ನೆರಿಯದಲ್ಲಿ ಚಾಲನೆ ಸಿಗಲಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮಗಳಲ್ಲಿ ಸಭೆ ನಡೆಯಲಿದೆ ಎಂದರು.
ಕೇಂದ್ರ ಸರ್ಕಾರವು ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ ಪ್ರದೇಶವೆಂದು ಘೋಷಿಸುವ ಪ್ರಕ್ರಿಯೆಯನ್ನು ತಕ್ಷಣ ತಡೆಹಿಡಿಯಬೇಕು ತಲತಲಾಂತರದಿಂದ ಅರಣ್ಯವನ್ನು ಸಂರಕ್ಷಿಸುತ್ತದೆ ಬಂದವರು ನಮ್ಮ ಜನರಾಗಿದ್ದಾರೆ ಇದೀಗ ಅವರ ನದುಕುವ ಹಕ್ಕುಗಳನ್ನೆ ಕಸಿದುಕೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದರು.

ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಸಹ ಸಂಚಾಲಕ ಶೇಖ‌ರ್ ಲಾಯಿಲ ಮಾತನಾಡಿ ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಒಳಪಡುವ ಬೆಳ್ತಂಗಡಿ ತಾಲೂಕಿನ ಗ್ರಾಮಗಳ ಬಗ್ಗೆ ಮಾಹಿತಿ ನೀಡಿ ಸಮಿತಿಯ ಬೇಡಿಕೆಗಳನ್ನು ತಿಳಿಸಿದರು.ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಸಹ ಸಂಚಾಲಕ ಬಿ. ಎಂ. ಭಟ್ ಮಾತನಾಡಿ ಕಸ್ತೂರಿ ರಂಗನ್‌ ವರದಿಯಲ್ಲಿ ಸೂಚಿಸಲಾಗಿರುವ ಶಿಫಾರಸ್ಸುಗಳು ಕೃಷಿಕರ ಎಲ್ಲ ಹಕ್ಕುಗಳನ್ನು ಕಸಿದುಕೊಳ್ಳುವುದಾಗಿದೆ ಈಗಿನ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಸಹ ಸಂಚಾಲಕರುಗಳಾದ ಜಯಾನಂದ ಪಿಲಿಕಲ, ಅಶ್ರಫ್ ನೆರಿಯ, ಪಿ ಟಿ ಸಬಾಸ್ಟಿನ್ ಕಳೆಂಜ, ಗಣೇಶ್ ಕಣಾಲು, ಎಂ.ಕೆ. ಪ್ರಸಾದ್, ಪ್ರಶಾಂತ್ ವೇಗಸ್, ರಮಾನಂದ ಸಾಲಿಯಾನ್, ಲೋಕೇಶ್ವರಿ ವಿನಯಚಂದ್ರ, ಲಕ್ಷ್ಮಣ ಗೌಡ, ನೇಮಿರಾಜ್ ಕಿಲ್ಲೂರ್, ದೀಪಕ್ ಎಚ್ ಡಿ ನಾಲ್ಕೂರು, ಸುಕುಮಾರ್ ಹಾಗೂ ಲಕ್ಷ್ಮಣ ನೆರಿಯ ಉಪಸ್ಥಿತರಿದ್ದರು. ಸಹ ಸಂಚಾಲಕರಾದ ಎಂ.ಕೆ. ಪ್ರಸಾದ್ ಸ್ವಾಗತಿಸಿ, ಶೇಖ‌ರ್ ಲಾಯಿಲ ವಂದಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version