Home ರಾಜಕೀಯ ಸಮಾಚಾರ ಭಾರೀ ಮಳೆಗೆ ಮನೆ ಕಳೆದುಕೊಂಡ ಚೋಮು ಅಜ್ಜಿಗೆ ಮನೆ ದುರಸ್ತಿ ಮಾಡಿಕೊಟ್ಟು ಆಸರೆಯಾದ ಶಾಸಕ‌ ಹರೀಶ್...

ಭಾರೀ ಮಳೆಗೆ ಮನೆ ಕಳೆದುಕೊಂಡ ಚೋಮು ಅಜ್ಜಿಗೆ ಮನೆ ದುರಸ್ತಿ ಮಾಡಿಕೊಟ್ಟು ಆಸರೆಯಾದ ಶಾಸಕ‌ ಹರೀಶ್ ಪೂಂಜ

0

ಬೆಳ್ತಂಗಡಿ : ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಕಲ್ಮಂಜ ಗ್ರಾಮದ ದಲಿತ ಸಮುದಾಯದ ಚೋಮು ನಲಿಕೆ ಎಂಬವರ ಮನೆಯ ಹಿಂಬದಿ ಗೋಡೆ ಸಂಪೂರ್ಣವಾಗಿ ಧರಾಶಾಹಿಯಾಗಿತ್ತು ಮೇಲ್ಛಾವಣಿಗೂ ಹಾನಿಯಾಗಿತ್ತು . ಈ ನಡುವೆ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದ ಸಂದರ್ಭ ಶಾಸಕ ಹರೀಶ್ ಪೂಂಜಾರವರು ಚೋಮು ನಲಿಕೆಯವರ ಮನೆಗೂ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ತಾನೇ ಮುಂದೆ ನಿಂತು ಮನೆಯ ಸಂಪೂರ್ಣ ದುರಸ್ಥಿಗೊಳಿಸಿ ವಾಸಯೋಗ್ಯ ಹೊಸ ಮನೆಯಂತೆ ನಿರ್ಮಾಸಿ ಕೊಡಲಾಗಿದ್ದು ಚೋಮು ಅಜ್ಜಿಯ ಮುಖದಲ್ಲಿ ಸಂತಸ ಮೂಡುವಂತೆ ಮಾಡಿದ್ದಾರೆ.

ಚೋಮು ನಲಿಕೆಯವರ ಮನೆಗೆ ಆ. 03ರಂದು ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಮನೆಯ ಪರಿಸ್ಥಿತಿ ಕಂಡು ಮರುಗಿದ್ದರು. ತಕ್ಷಣವೇ ಸ್ಥಳೀಯ ಯುವಕರನ್ನು ಕರೆಸಿ, ಈ ಮನೆಯನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಿ ಅದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ತಾನೇ ಭರಿಸುತ್ತೇನೆ ಎಂದಿದ್ದರು. ಶಾಸಕರು ಮಾನವೀಯ ಸೇವೆಗೆ ಜೊತೆಯಾದ ಕಲ್ಮಂಜ ಬಿಜೆಪಿ ಗ್ರಾಮ ಸಮಿತಿಯ ಯುವಕರು ಆ. 09ರಂದು ಶ್ರಮದಾನದ ಮೂಲಕ ಸುಸಜ್ಜಿತವಾದ ಮನೆ ನಿರ್ಮಾಣ ಮಾಡಿಕೊಟ್ಟರು. ಕಬ್ಬಿಣದ ರಾಡ್ ಬಳಸಿ, ಉತ್ತಮ ಶೀಟ್ ಅಳವಡಿಸಿ, ಮನೆಗೆ ಪೈಂಟ್ ಹಚ್ಚಿ, ಮನೆಯ ಸುತ್ತಮುತ್ತ ಜೆಸಿಬಿ ಮೂಲಕ ಸ್ವಚ್ಛತೆ ನಡೆಸಿದ್ದಾರೆ. ಅಲ್ಲದೆ, ಮನೆಯೊಳಗೂ ಸ್ವಚ್ಛಗೊಳಿಸಿ, ಚೋಮು ಅಜ್ಜಿಗೆ ವಾಸಯೋಗ್ಯ ಮನೆಯನ್ನಾಗಿ ಪರಿವರ್ತಿಸಿದ್ದಾರೆ.

ಕೇವಲ ಒಂದೇ ದಿನದಲ್ಲಿ ಹೊಸಮನೆಯಂತೆ ಕಾಣುವ ಈ ಮನೆ ನಿರ್ಮಾಣವಾಗಿದ್ದು ಶಾಸಕ ಹರೀಶ್ ಪೂಂಜಾರವರ ಕರೆಗೆ ಓಗೊಟ್ಟ ಕಲ್ಮಂಜ ಗ್ರಾಮ ಸಮಿತಿಯ ಬಿಜೆಪಿ ಕಾರ್ಯಕರ್ತರು ಅವಿರತ ಶ್ರಮದಿಂದ ಈ ಮನೆ ನಿರ್ಮಾಣಗೊಂಡಿದೆ.

ದಿಕ್ಕು ತೋಚದಂತಿದ್ದ ಈ ಅಜ್ಜಿಗೆ ಆಸರೆಯಾಗಿ ನಿಂತು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ’ರವರು. ಮನೆಯನ್ನು ನಿರ್ಮಿಸಿ ಕೊಟ್ಟಿದ್ದು ಶಾಸಕರ ಮಾನವೀಯ ಸೇವೆ ಅಜ್ಜಿಯ ಬದುಕಿನಲ್ಲಿ ಹೊಸ‌ಭರವಸೆ ಮೂಡಿಸಿದೆ.
ಕಲ್ಮಂಜ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ನಡೆದ ಈ ಮನೆ ನಿರ್ಮಾಣ ಕಾರ್ಯದಲ್ಲಿ ಸಮಾಜ ಸೇವಕ ಬಾಲಕೃಷ್ಣ ನೈಮಿಷ ಮಾಣಿಂಜೆ, ನೋಣಯ್ಯ ಗೌಡ, ಗಣೇಶ್ ಬಂಗೇರ ಮುಂಡಾಜೆ, ಶ್ರೀನಿವಾಸ್ ರಾವ್, ಪ್ರವೀಣ್ ಕರಿಯನೆಲ, ಕಲ್ಮಂಜ ಬೂತ್ ಅಧಕ್ಷರಾದ ಅನಿಲ್ ಕುಮಾರ್ ಮದಿಮಲ್ ಕಟ್ಟೆ, ಕಾರ್ಯದರ್ಶಿ ಗುರುರಾಜ್ ಕರಿಯನೆಲ, ಸಂದೀಪ್ ಪರಾರಿಮಜಲು, ಧನಂಜಯ ಮದಿಮಲ್ ಕಟ್ಟೆ, ಮೋಹನ್ ಮೂಡಾಯಿಬೆಟ್ಟು, ಜಗದೀಶ್ ಸತ್ಯನಪಲ್ಕೆ, ಪುರಕ್ಷಿತ್ ಬನದಬೈಲು, ಭರತೇಶ್ ಮದಿಮಲ್ ಕಟ್ಟೆ, ದೀಕ್ಷಿತ್ ಬನದಬೈಲು, ಹರೀಶ್ ಕಟ್ಟದಬೈಲು, ಶೃತೇಶ್ ಸತ್ಯನಪಲ್ಕೆ, ಜನಿತ್ ಸೋಮಂತ್ತಡ್ಕ, ಮುರಳಿ ಮೂಡಾಯಿಬೆಟ್ಟು, ಸಾಂತಪ್ಪ ಮದಿಮಲ್ ಕಟ್ಟೆ ಹಾಗೂ ಮತ್ತಿತ್ತರರು ಶ್ರಮದಾನದಲ್ಲಿ ಭಾಗವಹಿಸಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version