ಬೆಳ್ತಂಗಡಿ; ಖಾಸಗೀ ಆಸ್ಪತ್ರೆ ನಿಯಂತ್ರಣ ಮಾಡಿ, ಸರಕಾರಿ ಆಸ್ಪತ್ರೆ ಬಲಬಡಿಸಿ ಎನ್ನುವುದೇ ನಮ್ಮ ಹೋರಾಟವಾಗಿದೆ ಸರಕಾರಿ ಆಸ್ಪತ್ರೆಗಳನ್ನು ಖಾಸಗಿಯವರಿಗೆ ನೀಡುವ ಸರಕಾರದ ನೀತಿಯ ಬಗ್ಗೆ ಶಾಸಕರು ಯಾರ ಪರ ಇದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದರು.
ಅವರು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವವದಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಎದುರು ಸರಕಾರಿ ಆಸ್ಪತ್ರೆ ಉಳಿಸಿ, ಎಲ್ಲಾ ಸೌಲಭ್ಯ ಒದಗಿಸಿರಿ ಎಂದು ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ದ್ದೇಶಿಸಿ ಅವರು ಮಾತಾಡುತ್ತಿದ್ದರು. ಬೆಳ್ತಂಗಡಿಯ ಶಾಸಕರು ಕೂಡಾ ಈ ವಿಚಾರದಲ್ಲಿ ಕಾಂಗ್ರೇಸ್ ಸರಕಾರವನ್ನು ಬೆಂಬಲಿಸಿ ಮೌನವಾಗಿದ್ದಾರೆ ಎಂದರು. ನೀವು ಜನರ ಪರವೋ ಅಲ್ಲಾ ಕಾಂಗ್ರೇಸ್ ಯುಟಿ ಖಾದರ್ ಪರವೋ ಎಂದು ಜನತೆಗೆ ಉತ್ತರ ಹೇಳಿ ಬೆಳ್ತಂಗಡಿ ಶಾಸಕರೇ ಎಂದು ಅವರು ಪ್ರಶ್ನಿಸಿದರು. ಲಾಭವೇ ಬಂಡವಾಳದ ಮುಖ್ಯ ಗುರಿ ಆಗಿರುವಾಗ ಖಾಸಗೀಯವರು ಜನರಿಗೆ ಲಾಭ ಇಲ್ಲದೆ ಸೇವೆ ನೀಡಲು ಸಾದ್ಯವೇ ಎಂಬುದನ್ನು ಯು.ಟಿ. ಖಾದರ್ ಉತ್ತರಿಸಬೇಕು ಎಂದರು. ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳಿಗೆ ಪೇಶೆಂಟ್ ಮತ್ತು ಆಸ್ಪತ್ರೆ ಬೇಕೆಂದು ಸರಕಾರಿ ಆಸ್ಪತ್ರೆಯ್ನನು ಕೊಂಡುಕೊಳ್ಳುವ ಶಿಕ್ಷಣ, ಆರೋಗ್ಯ ವ್ಯಾಪಾರಿಗಳನ್ನು ಉದ್ದಾರ ಮಾಡಲು ಜನರು ನಿಮ್ಮನ್ನು ಅಧಿಕಾರಕ್ಕೆ ತಂದಿದ್ದಲ್ಲ ಎಂದರು. ನಿಮಗೆ ಸರಕಾರಿ ಆಸ್ಪತ್ರೆಯ ಮೂಲಕ ಜನತೆಗೆ ಆರೋಗ್ಯ ಸೇವೆ ನೀಡಲು ಆಗುವುದಿಲ್ಲ ಎಂದಾದರೆ ರಾಜಿನಾಮೆ ನೀಡಿ ಹೊರ ಬನ್ನಿ ಮತ್ತು ಒಳ್ಳೆಯ ಸೇವೆ ಸಲ್ಲಿಸಲು ಸಾದ್ಯವಿರುವ ಸರಕಾರ ಅಧಿಕಾರಕ್ಕೆ ಬರಲು ಅವಕಾಶ ಕೊಡಿ ಎಂದರು.

ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯನ್ನು ಖಾಸಗೀಯವರ ಕೈಗೆ ನೀಡಲು ಮುಂದಾದ ರಾಜ್ಯದ ಕಾಂಗ್ರೇಸ್ ಸರಕಾರವನ್ನು ಬೆಂಬಲಿಸುವ ಶಾಸಕ ಹರೀಶ್ ಪೂಂಜರು ಈ ಬಗ್ಗೆ ಮಾತಾಡ್ತಿಲ್ಲ ಎಂದು ಟೀಕಿಸಿದರು. ಕಾಂಗ್ರೇಸಿನ ತಪ್ಪು ನಿರ್ಧಾರವನ್ನು ವಿರೋದಿಸಿ ತಾಲೂಕು ಸರಕಾರಿ ಆಸ್ಪತ್ರೆಯನ್ನು ಉಳಿಸಿ ನೀವು ಜನ ಮೆಚ್ಚಿದ ಶಾಸಕರಾಗಿ ಪೂಂಜರೇ, ಅದು ಬಿಟ್ಟು ನೀವು ತಾಲೂಕಿನ ಸರಕಾರಿ ಆಸ್ಪತ್ರೆಯ ಮಾರಾಟವನ್ನು ಬೆಂಬಲಿಸಬೇಡಿ ಎಂದರು ಸರಕಾರಿ ಆಸ್ಪತ್ರೆಗಳು ಲಾಭಕೋರ ಖಾಸಗೀ ಆಸ್ಪತ್ರೆಗಳಿಗಿಂತಲೂ ಶ್ರೇಷ್ಟ ಸೌಲಬ್ಯ ಒದಗಿಸುವ ಕೇಂದ್ರ ಎಂಬುದನ್ನು ಕೇರಳದಲ್ಲಿ ಕಮ್ಯೂನಿಸ್ಟ್ ಸರಕಾರ ತೋರಿಸಿ ಕೊಟ್ಟಿದೆ. ನಮ್ಮ ಜಿಲ್ಲೆಯ ಶಾಸಕರು, ಮಂತ್ರಿಗಳು ಕೇರಳಕ್ಕೆ ಹೋಗಿ ಅಲ್ಲಿಯ ಸರಕಾರಿ ಆಸ್ಪತ್ರೆಗಳಿಗೆ ಬೇಟಿ ನೀಡಿ ತರಬೇತಿ ಪಡೆದುಕೊಂಡು ಬರುವುದು ಸೂಕ್ತ ಎಂದು ಹೇಳಿದರು.
ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಸದಸ್ಯರಾದ ಶ್ಯಾಮರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಎದುರು ಮಾನವ ಸರಪಳಿ ನಡೆಸಿ ಆಸ್ಪತ್ರೆಯ ಮಾರಾಟವನ್ನು ವಿರೋದಿಸಲಾಯಿತು. ಈಶ್ವರಿ ವಂದಿಸಿದರು. ಹೋರಾಟದ ನಾಯಕತ್ವದಲ್ಲಿ ಸಿಪಿಐಎಂ ಮುಖಂಡರಾದ ಲಕ್ಷö್ಮಣ ಗೌಡ ಪಾಂಗಳ, ಸುಕುಮಾರ್ ದಿಡುಪೆ, ಜಯಶ್ರೀ ಕಳೆಂಜ, ಹಾಗೂ ಸಂಘಟನೆಗಳ ಮುಖಂಡರುಗಳಾದ ಅಭಿಷೇಕ್, ಕಿರಣಪ್ರಭ, ಕುಮಾರಿ ಅಶ್ವಿತ, ಪುಷ್ಪ, ಶಂಕರ, ಜನಾರ್ಧನ ಆಚಾರ್ಯ, ಜಯಂತ ಪಾದೆಜಾಲು, ಸಲಿಮೋನ್, ಅಪ್ಸರಾಲಿಯ, ವಿನುಶರಮಣ, ದೇವಕಿ ಕಳೆಂಜ ಮೊದಲಾದವರು ಇದ್ದರು.












