Home ಅಪಘಾತ ಬೆಳ್ತಂಗಡಿ; ಹೆದ್ದಾರಿ ಕಾಮಗಾರಿ ವಾಹನಕ್ಕೆ ಬೈಕ್ ಡಿಕ್ಕಿ: ಸವಾರನಿಗೆ ಗಾಯ

ಬೆಳ್ತಂಗಡಿ; ಹೆದ್ದಾರಿ ಕಾಮಗಾರಿ ವಾಹನಕ್ಕೆ ಬೈಕ್ ಡಿಕ್ಕಿ: ಸವಾರನಿಗೆ ಗಾಯ

0


ಬೆಳ್ತಂಗಡಿ; ಹೆದ್ದಾರಿ ಕಾಮಗಾರಿಯ
ಫೇವರ್ ಮೆಷೀನ್ ವಾಹನಕ್ಕೆ ಹಿಂಬದಿಯಿಂದ ಬುಲೆಟ್ ಬೈಕ್ ಡಿಕ್ಕಿ ಹೊಡೆದ
ಘಟನೆ ರಾಷ್ಟ್ರೀಯ ಹೆದ್ದಾರಿಯ ಕಲ್ಮಂಜದ ಗುರಿಪಳ್ಳ ಕ್ರಾಸ್ ಸಮೀಪ ಸೋಮವಾರ ರಾತ್ರಿ ನಡೆದಿದೆ.
ಘಟನೆಯಲ್ಲಿ ಬೈಕ್ ಸವಾರ ಕಡಿರುದ್ಯಾವರ ಗ್ರಾಮದ ಪರಬೆಟ್ಟು ನಿವಾಸಿ ಎಲೆಕ್ಟ್ರಿಷಿಯನ್ ವೃತ್ತಿಯ ಹರೀಶ್ (28) ಗಂಭೀರ ಗಾಯ ಗೊಂಡಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆದ್ದಾರಿ ಕಾಮಗಾರಿಯ
ವಾಹನಕ್ಕೆ ಹಿಂಬದಿಯ ದೀಪಗಳು ಇಲ್ಲದ ಕಾರಣ ವಾಹನ ಸಂಚರಿಸುತ್ತಿದ್ದುದು ಗಮನಕ್ಕೆ ಬಾರದೆ ಅಪಘಾತ ನಡೆದಿದೆ
ಎಂದು ಸ್ಥಳೀಯರು ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವಾಹನಗಳು ಅಲ್ಲಲ್ಲಿ ರಸ್ತೆ ಬದಿ ರಾತ್ರಿ ಹೊತ್ತು ನಿಲ್ಲುತ್ತಿದ್ದು, ಇವುಗಳಲ್ಲಿ ಸರಿಯಾದ ರಿಫ್ಲೆಕ್ಟರ್, ದೀಪಗಳು ಇಲ್ಲದಿರುವುದು ವಾಹನ ಸವಾರರಿಗೆ ಅಪಾಯಕಾರಿಯಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version